
ತೆಲುಗು ಚಿತ್ರರಂಗದ ನಟ ಜೂನಿಯರ್ ಎನ್‌ಟಿಆರ್ ಸಂದರ್ಶನವೊಂದರಲ್ಲಿ ಕೇಳಿದ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿದ್ದಾರೆ. ಸಂದರ್ಶಕರು 'ಸ್ಟಾರ್ ಕಿಡ್ ಆಗಿರುವ ನಿಮಗೆ ಯಾವತ್ತಾದರೂ ಅದು ಬರ್ಡನ್ ಎನಿಸಿದೆಯಾ' ಎಂದು ನಟ ಜೂನಿಯರ್ ಎನ್‌ಟಿಆರ್ ಅವರನ್ನು ಕೇಳಿದಾಗ ಅದಕ್ಕೆ ನಟ 'ಸಿನಿಮಾ ಬಿಡುಗಡೆಯಾದಾಗ, ಅದು ಚೆನ್ನಾಗಿ ಓಡುತ್ತಿರುವಾಗ ನಮಗೆ ಅದು ಖುಷಿ ಕೊಡುತ್ತದೆ. ಆದರೆ, ನಾವು ಸ್ಟಾರ್ ಕಿಡ್ ಆಗಿಯೇ ಇದ್ದರೂ, ಯಾವಾಗ ನಮ್ಮ ಸಿನಿಮಾ ಪ್ಲಾಪ್ ಆಗುತ್ತೋ, ಆಗ ನಮಗೆ ಇದಕ್ಕಿಂತಲೂ ಹೆಚ್ಚಿಗೆ ಇನ್ನೇನೋ ಇರಬೇಕು, ಇದೆ ಎಂಬ ಅರಿವು ಮೂಡುತ್ತದೆ.
ನನ್ನ ಮಟ್ಟಿಗೆ ಹೇಳುವುದಾದರೆ ನಾನು ಸ್ಟಾರ್ ಕಿಡ್ ಎಂಬುದು ಯಾವತ್ತೂ ಮೈನಸ್ ಎನಿಸಿಲ್ಲ. ಆದರೆ ಅದಕ್ಕಿಂತಲೂ ಹೆಚ್ಚಿನದಾದದ್ದು ನಮ್ಮಲ್ಲಿರಬೇಕು, ಜನರು ಅದೊಂದೇ ಸಂಗತಿಯನ್ನು ನೋಡುವುದಿಲ್ಲ ಮತ್ತು ಅದೊಂದೇ ನಮ್ಮ ಜೀವಿತಾವಧಿಯಲ್ಲಿ ಸಾಕಾಗುವದೂ ಇಲ್ಲ ಎಂದು ಅರಿವಾಗಿದೆ. ನಾನು ಸ್ಟಾರ್ ಕಿಡ್ ಎಂಬುದು ಶುರುವಿನಲ್ಲಿ ಖುಷಿ, ಹೆಮ್ಮೆ ಮೂಡಿಸುತ್ತಿತ್ತು. ಆದರೆ, ನಾನು ಸಿನಿಮಾ ನಟನಾಗಿ ವೃತ್ತಿಜೀವನದಲ್ಲಿ ಮುಂದುವರೆದಂತೆ ನನಗೆ ಸೋಲು-ಗೆಲವು ಎರಡನ್ನೂ ನೋಡಬೇಕಾಯಿತು. ಆಗಲೇ ನನಗೆ ಅರ್ಥವಾಗಿದ್ದು, ನನಗೆ ಜವಾಬ್ದಾರಿ ಕೂಡ ಇದೆ ಎಂಬಸಂಗತಿ.
ಅನುಶ್ರೀ ಎದುರು ತುಕಾಲಿ ಸಂತೋಷ್ ಹೆಂಡ್ತಿ ಮಾನಸ ಬಗ್ಗೆ ಹೀಗಾ ಹೇಳೋದು; ಶಾಕಿಂಗ್ ಅಂತಿದಾರೆ ನೋಡಿದವ್ರು!
ಸ್ಟಾರ್ ಕಿಡ್ ಎನ್ನುವುದು ಒಂಥರಾ ಜವಾಬ್ದಾರಿ ಬೆರೆತಿರುವ ಹೆಮ್ಮೆ ಪಡುವಂಥ ಸಂಗತಿ. ಸೋಲು ಅಥವಾ ಗೆಲುವಿಗೆ ನನ್ನ ಲೆಗ್ಗಸಿ ಕೊಡುಗೆ ಖಂಡಿತವಾಗಿಯೂ ಅಷ್ಟೊಂದು ಇರಲಾರದು. ಇರಲಾಗದು. ಆದರೆ, ಅದೊಂದು ಜವಾಬ್ದಾರಿಯ ಸಂಗತಿ ಎಂಬುದು ನನ್ನ ಅಭಿಪ್ರಾಯವಾಗಿದೆ' ಎಂದಿದ್ದಾರೆ ನಟ ಜೂನಿಯರ್ ಎನ್‌ಟಿಆರ್. ಆ ಸಮಯದಲ್ಲಿ ನಿರ್ದೇಶಕರಾದ ಎಸ್‌ಎಸ್ ರಾಜಮೌಳಿ ಕೂಡ ಇದ್ದರು. ಅದು ಆರ್‌ಆರ್‌ಆರ್ ಸಿನಿಮಾ ಸಂದರ್ಶನದ ವೇಳೆ ನಡೆದ ಮಾತುಕತೆ.
ಟಾಕ್ಸಿಕ್ ಸಿನಿಮಾ ಶೂಟಿಂಗ್ ಶುರುವಾಯ್ತು; ಯಶ್ ಫ್ಯಾನ್ಸ್ ಮನದಲ್ಲಿ ನೂರಾರು ಪ್ರಶ್ನೆಗಳು!
ಒಟ್ಟಿನಲ್ಲಿ, ಸ್ಟಾರ್ ಕಿಡ್‌ಗಳಿಗೆ ವೃತ್ತಿಜೀವನದ ಪ್ರಾರಂಭದಲ್ಲಿ ಸಿನಿಮಾ ಸಿಗಲು ಸ್ಟಾರ್ ಕಿಡ್ ಎಂಬುದು ಸಹಾಯಕವಾಗುತ್ತದೆ. ಆದರೆ, ಕೆರಿಯರ್ ಮುಂದುವರೆದಂತೆ ಅದರಿಂದ ಜವಾಬ್ದಾರಿ ಹೆಚ್ಚುತ್ತದೆಯೇ ಹೊರತೂ ಸೋಲು-ಗೆಲುವಿಗೆ ಅದು ಕಾರಣವಾಗುವುದು ಕಡಿಮೆ ಎನ್ನಬಹುದು. ಆದರೆ, ಒಬ್ಬೊಬ್ಬರ ಅಭಿಪ್ರಾಯವೂ ಭಿನ್ನವಾಗಿರಬಹುದು. ಸದ್ಯ ಜೂನಿಯರ್ ಎನ್‌ಟಿಆರ್ ತಮ್ಮ ಅಭಿಪ್ರಾಯವನ್ನು ಮನಸ್ಸು ಬಿಚ್ಚಿ ಹೇಳಿಕೊಂಡಿದ್ದಾರೆ. ಇದೇ ಪ್ರಶ್ನೆಗೆ ನಟ ರಾಮ್‌ಚರಣ್ ಅಭಿಪ್ರಾಯ ಬೇರೆಯದೇ ರೀತಿಯಲ್ಲಿತ್ತು.
ಕರಿಮಣಿ ಮಾಲೀಕ ನೀನಲ್ಲ ಸಾಂಗ್ ಸಂಯೋಜಕ ಗುರುಕಿರಣ್ ಏನ್ ಹೇಳ್ತಿದಾರೆ ನೋಡ್ರೀ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.