ನಟಿ ಐಶ್ವರ್ಯ ರೈ ಕ್ಷಮೆ ಕೋರಿದ ಕಿಸ್ಸಿಂಗ್​ ಸ್ಟಾರ್​ ಇಮ್ರಾನ್​ ಹಶ್ಮಿ: ಏನಿದು ವಿವಾದ?

By Suchethana D  |  First Published Jul 14, 2024, 2:11 PM IST

ನಟಿ ಐಶ್ವರ್ಯ ರೈ ಅವರ ಕ್ಷಮೆ ಕೋರಿದ್ದಾರೆ ಕಿಸ್ಸಿಂಗ್​ ಸ್ಟಾರ್​ ಇಮ್ರಾನ್​ ಹಶ್ಮಿ: ಏನಿದು ವಿವಾದ? 
 


ಕಿಸ್ಸಿಂಗ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ಬಾಲಿವುಡ್​ ನಟ ಇಮ್ರಾನ್​ ಹಶ್ಮಿ, ಬಾಲಿವುಡ್​​ ನಟಿ ಐಶ್ವರ್ಯ ರೈ ಅವರ ಕ್ಷಮೆ ಕೋರಿದ್ದಾರೆ. ಇದಕ್ಕೆ ಕಾರಣ ಏನೆಂದರೆ, ಕೆಲ ತಿಂಗಳುಗಳ ಹಿಂದೆ ಐಶ್ವರ್ಯ ಅವರನ್ನು ಇಮ್ರಾನ್​ ಅವರು ಪ್ಲಾಸ್ಟಿಕ್​ ಎಂದು ಕರೆದಿದ್ದರು!  ಅಷ್ಟಕ್ಕೂ ಇಮ್ರಾನ್ ಸುಮಾರು 20 ವರ್ಷಗಳ ಕಾಲ ತಮ್ಮ ವೃತ್ತಿಜೀವನದಲ್ಲಿ ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಅವರು ಚಲನಚಿತ್ರಗಳಿಗಿಂತ ಹೆಚ್ಚಾಗಿ ಕಿಸ್ಸಿಂಗ್​ ದೃಶ್ಯಗಳಿಗೆ ಫೇಮಸ್​.  ಬಹಳ ದಿನಗಳಿಂದ ಸಿನಿಮಾಗಳಿಂದ ದೂರ ಉಳಿದಿದ್ದ ಇಮ್ರಾನ್ ಶೀಘ್ರದಲ್ಲೇ ಅಕ್ಷಯ್ ಕುಮಾರ್ (Akshay Kumar) ಜೊತೆಗಿನ ಸೆಲ್ಫಿ ಚಿತ್ರದ ಮೂಲಕ ಮತ್ತೆ ಬಂದರು.  ಇದಲ್ಲದೆ, ಅವರು ಸಲ್ಮಾನ್ ಖಾನ್ (Salman Khan) ಜೊತೆ ಟೈಗರ್ 3 ಚಿತ್ರದಲ್ಲೂ ಕಾಣಿಸಿಕೊಂಡರು. ಇವೆಲ್ಲವುಗಳಿಗಿಂತಲೂ ಮಿಗಿಲಾಗಿ ಐಶ್ವರ್ಯ ರೈ ಅವರನ್ನು ಪ್ಲಾಸ್ಟಿಕ್​ ಎಂದು ಕರೆಯುವ ಮೂಲಕ ಭಾರಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು.


 
ಬಹು ವಿವಾದಿತ ರಿಯಾಲಿಟಿ ಷೋ ಎಂದೇ ಫೇಮಸ್​ ಆಗಿರೋ ಕಾಫಿ ವಿತ್​ ಕರಣ್​ ಷೋದಲ್ಲಿ ಅವರು ಈ ಹೇಳಿಕೆ ನೀಡಿದ್ದರು. ಈ ರಿಯಾಲಿಟಿ ಷೋನ ರ್ಯಾಪಿಡ್​ ಫೈರ್​ ಸುತ್ತಿನಲ್ಲಿ,  ಈ ಮಾತನ್ನು ಹೇಳಿದ್ದರು. 2014 ರಲ್ಲಿ ನಡೆದ ಘಟನೆ ಇದು.  ಕಾಫಿ ವಿತ್ ಕರಣ್‌ಗೆ ಬಂದಿದ್ದ ಇಮ್ರಾನ್​ ಅವರಿಗೆ ಕರಣ್​ ಅವರು,  ಕೆಲವು ನಿರ್ದಿಷ್ಟ ಪದಗಳನ್ನು ಕೇಳಿದಾಗ ಅವರ ಮನಸ್ಸಿಗೆ ಬರುವ ನಟ, ನಟಿಯನ್ನು ಹೆಸರಿಸಲು ಇಮ್ರಾನ್ ಅವರನ್ನು ಕೇಳಿದ್ದರು. ಕರಣ್ ‘ಪ್ಲಾಸ್ಟಿಕ್’ ಎಂದು ಹೇಳಿದಾಗ ಇಮ್ರಾನ್ ಹಶ್ಮಿ ಐಶ್ವರ್ಯ ರೈ ಎಂದು ಹಿಂದೆ ಮುಂದೆ ಯೋಚಿಸದೇ ಹೇಳಿದರು. ಇದು ಭಾರಿ ವಿವಾದಕ್ಕೆ ಗುರಿಯಾಗಿತ್ತು.  

Tap to resize

Latest Videos

ಅಮಿತಾಭ್​ರ 55 ವರ್ಷಗಳ ದಾಖಲೆ ಮುರಿತು ಕಲ್ಕಿ 2898 AD: 81ನೇ ವಯಸ್ಸಿನಲ್ಲಿ ಏನಿದು ಅಚ್ಚರಿ?

ಇದೀಗ ನಟ ಕ್ಷಮೆ ಕೋರಿದ್ದಾರೆ. ದಿ ಲಾಲನ್‌ಟಾಪ್‌ಗೆ ನೀಡಿದ ಸಂದರ್ಶನದಲ್ಲಿ, ಇಮ್ರಾನ್ ಹಶ್ಮಿ ಅವರಿಗೆ ಇದೇ ವಿಷಯವನ್ನು ಕೇಳಲಾಗಿತ್ತು. ಹೀಗೆ  ಕರೆದಿದ್ದಕ್ಕಾಗಿ ಪಶ್ಚಾತ್ತಾಪ ಇದೆಯಾ  ಎಂದು ಪ್ರಶ್ನಿಸಲಾಗಿತ್ತು. ಆಗ ಇಮ್ರಾನ್​ ಅವರು, ಹೌದು. ನನಗೆ ಪಶ್ಚಾತ್ತಾಪವಿದೆ.   ಪ್ರತಿಯೊಬ್ಬರ ಬಗ್ಗೆ ನನಗೆ ಅತ್ಯಂತ ಗೌರವವಿದೆ. ಆದರೆ ಆಗ ಹಾಗೆ ಕರೆದಿದ್ದು ನಾನು ಮಾಡಿರುವ ತಪ್ಪು.  ಇದು ಅಸಹ್ಯಕರವಾಗಿತ್ತು. ಅದಕ್ಕಾಗಿ ನಾನು ವಿಷಾದಿಸುತ್ತೇನೆ. ಇತ್ತೀಚೆಗೆ, ಜನರು ತುಂಬಾ ಸೂಕ್ಷ್ಮವಾಗಿದ್ದಾರೆ. ಜನರು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಯೊಂದಕ್ಕೂ ಹುಚ್ಚರಾಗುತ್ತಾರೆ. ಆ ಷೋನಲ್ಲಿ ಇರುವಾಗ ಇದು ತಮಾಷೆಯ ವಿಷಯವಾಗಿತ್ತು. ತಮಾಷೆ ಎಂದೇ ತಿಳಿದುಕೊಂಡು ಹೇಳಿಬಿಟ್ಟಿದ್ದೆ. ಇದಕ್ಕಾಗಿ ವಿಷಾದವಿದೆ ಎಂದಿದ್ದಾರೆ.
 
ಇದೇ ವೇಳೆ, ಐಶ್ವರ್ಯ ಅವರನ್ನು ನೋಡಲು ಸುಮಾರು ಮೂರು ಗಂಟೆಗಳ ಕಾಲ ಅವರ ವ್ಯಾನ್‌ನ ಹೊರಗೆ ಕಾಯುತ್ತಿದ್ದ ವಿಷಯವನ್ನೂ ಇಮ್ರಾನ್​ ಹಶ್ಮಿ ಹಂಚಿಕೊಂಡಿದ್ದಾರೆ.  ಹಮ್ ದಿಲ್ ದೇ ಚುಕೇ ಸನಮ್ ಬಿಡುಗಡೆಯ ನಂತರ,  ಐಶ್ವರ್ಯಾ ರೈ ಅವರನ್ನು ನೋಡಲು ನಾನು ಬಯಸಿದ್ದೆ. ನಾನು ಅವರ ದೊಡ್ಡ ಅಭಿಮಾನಿಯಾಗಿದ್ದೆ. ಆದರೆ ಅವರನ್ನು ನೋಡಲು ನಾನು ಸುಮಾರು ಮೂರು ಗಂಟೆಗಳ ಕಾಲ ಅವರ ವ್ಯಾನ್‌ನ ಹೊರಗೆ ಕಾಯಬೇಕಾಯಿತು ಎಂದು ಹೇಳಿದ್ದಾರೆ.  ಪ್ಲಾಸ್ಟಿಕ್​ ಎಂದು ಹೇಳಿದ ಮೇಲೆ ಐಶ್ವರ್ಯ ಅವರನ್ನು  ಎಂದಿಗೂ ಭೇಟಿ ಮಾಡಿಲ್ಲ.  ಎಂದಿಗೂ ಮಾತುಕತೆ ನಡೆಸಿಲ್ಲ. ನಾನು ಅವರನ್ನು ಭೇಟಿಯಾಗಲು ಇಷ್ಟಪಡುತ್ತೇನೆ. ಅವರು ಅದರ ಬಗ್ಗೆ ಕೆಟ್ಟದಾಗಿ ಭಾವಿಸಿದರೆ ನಾನು ಕ್ಷಮೆಯಾಚಿಸಲು ಇಷ್ಟಪಡುತ್ತೇನೆ ಎಂದಿದ್ದಾರೆ. 

ಆಧಾರ್​ ಕಾರ್ಡ್​ ಕಾಂಟ್ರವರ್ಸಿಗೆ ಸಿಲುಕಿದ ಕಂಗನಾ ರಣಾವತ್​! ಸಂಸದೆಯಾದ್ರೂ ಹಿಂಬಾಲಿಸ್ತಿದೆ ವಿವಾದ
 

click me!