ಅನಂತ್​-ರಾಧಿಕಾ ಮದುವೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಎಂಟ್ರಿಯ ಝಲಕ್​ ಹೀಗಿತ್ತು... ವಿಡಿಯೋ ವೈರಲ್

By Suchethana D  |  First Published Jul 14, 2024, 11:12 AM IST

ಅನಂತ್​ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​ ಮದುವೆ ವೇಳೆ ಪ್ರಧಾನಿ ನರೇಂದ್ರ  ಮೋದಿ ಭಾಗವಹಿಸಿ ನೂತನ ವಧು-ವರರಿಗೆ ಶುಭ ಆಶೀರ್ವಾದ ನೀಡಿದ್ದು, ಅದರ ವಿಡಿಯೋ ವೈರಲ್​ ಆಗಿದೆ. 
 


ಅನಂತ್​ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​ ಮದುವೆ ಬಹಳ ದಿನಗಳ ಸೆಲೆಬ್ರೇಷನ್​ ಬಳಿ ನಿನ್ನೆ ಅದ್ಧೂರಿಯಾಗಿ ನಡೆದಿದೆ. ಚಿತ್ರರಂಗದ ಘಟಾನುಘಟಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಬಂದು ಶುಭಾಶಯ ಕೋರಿದ್ದಾರೆ. ಸಹಸ್ರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಡೆದ ಪ್ರೀ-ವೆಡ್ಡಿಂಗ್​ ಮತ್ತು ಮದುವೆ ಸಂಭ್ರಮಕ್ಕೆ ದೇಶ-ವಿದೇಶಗಳಿಂದ ಗಣ್ಯಾತಿಗಣ್ಯರ ದಂಡೇ ಆಗಮಿಸಿತ್ತು. ಈ ಮೂಲಕ ಭಾರತ ಅತ್ಯಂತ ವೈಭವೋಪೇತ ಮದುವೆಯೊಂದಕ್ಕೆ ಸಾಕ್ಷಿಯಾಯಿತು. ಮದುವೆಯ ಬೆನ್ನಲ್ಲೇ ಮದುವೆಗೆ ಸಂಬಂಧಿಸಿದಂತೆ ಒಂದೊಂದೇ ವಿಶೇಷ ಹಾಗೂ ಅಚ್ಚರಿಯ ಮಾಹಿತಿಗಳು ಬಹಿರಂಗಗೊಳ್ಳುತ್ತಿವೆ. ಮದುವೆಗೆ ಸಂಬಂಧಿಸಿದಂತೆ ಇದಾಗಲೇ ಸಾಕಷ್ಟು ವಿಡಿಯೋಗಳು ಸೋಷಿಯಲ್​ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದ್ದು, ಔಚಿತ್ಯಪೂರ್ಣ ಮದುವೆಯ ಕುರಿತು ಇಂಟರೆಸ್ಟಿಂಗ್​ ವಿಷಯಗಳು ಹೊರಬರುತ್ತಿವೆ.

ಇದೀಗ ಪ್ರಧಾನಿ ನರೇಂದ್ರ  ಮೋದಿಯವರು ಮದುವೆಯಲ್ಲಿ ಪಾಲ್ಗೊಂಡು ಆಶೀರ್ವದಿಸಿದ ಬಳಿಕ ಅವರ ಝಲಕ್​ಗಳ ಕೆಲವು ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ. ಮದುವೆಗೆ ಆಗಮಿಸಿ ನೂತನ ವಧು-ವರರನ್ನು ಪ್ರಧಾನಿ ಆಶೀರ್ವದಿಸಿದರು. ಬಳಿಕ ಅವರು ಅಲ್ಲಿಂದ ನಿರ್ಗಮಿಸುವಾಗ ತಮ್ಮ ಎಂದಿನ ಸಿಗ್ನೇಚರ್​ ಪೋಸ್​ ನೀಡುತ್ತಾ ಕೈಬೀಸಿ ಸಾಗಿದರು. ಇದರ ವಿಡಿಯೋ ಸಕತ್​ ವೈರಲ್​ ಆಗುತ್ತಿದೆ. ಇವರ ಹಿಂದೆ ಮುಖೇಶ್​ ಅಂಬಾನಿ, ನೂತನ ವಧು-ವರರು ಮತ್ತು ಇತರರನ್ನು ನೋಡಬಹುದು. ಇಡೀ ದೇಶ ಅಂಬಾನಿಯ ಹಿಂದೆ, ಅಂಬಾನಿ ಪ್ರಧಾನಿಯ ಹಿಂದೆ ಎಂದು ಕಮೆಂಟಿಗರು ಹೇಳುತ್ತಿದ್ದಾರೆ. 

Tap to resize

Latest Videos

ಅಂಬಾನಿ ಪುತ್ರನ ಮದ್ವೆಯಲ್ಲಿ ಬಯಲಾಗೋಯ್ತು ಅಮಿತಾಭ್​ ಫ್ಯಾಮಿಲಿ ಬಿಗ್​ ಸೀಕ್ರೆಟ್​: ಫ್ಯಾನ್ಸ್​ ಶಾಕ್​!

ರಿಲಯನ್ಸ್ ಇಂಡಸ್ಟ್ರಿ ಮಾಲೀಕರಾದ ಮುಕೇಶ್ ಅಂಬಾನಿ, ಮಗನ ಮದುವೆ ಖುಷಿಯಲ್ಲಿ ಭಾರತೀಯರಿಗೆ ಬಂಪರ್ ಗಿಫ್ಟ್ ಘೋಷಿಸಿದ್ದಾರೆ. ಜಗತ್ತಿನ ಅತಿದೊಡ್ಡ ಕ್ರೀಡಾ ಹಬ್ಬ ಎಂದೇ ಕರೆಸಿಕೊಳ್ಳುವ ಒಲಿಂಪಿಕ್ಸ್ ಕ್ರೀಡಾಕೂಟ ಈ ಬಾರಿ ಜುಲೈ 26ರಿಂದ ಪ್ಯಾರಿಸ್‌ನಲ್ಲಿ ಜರುಗಲಿದೆ. 2024ರ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದ ಅಧಿಕೃತ ಪ್ರಸಾರ ಹಾಗೂ ಡಿಜಿಟಲ್ ಹಕ್ಕನ್ನು ಮುಕೇಶ್ ಅಂಬಾನಿ ಒಡೆಯನದ ವೈಕಾಮ್18 ಸಂಸ್ಥೆ ಪಡೆದುಕೊಂಡಿದೆ. ಒಲಿಂಪಿಕ್ಸ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತದ ಕ್ರೀಡಾಪಟುಗಳ ಒಟ್ಟು 20 ಫೀಡ್‌ಗಳ ಮೂಲಕ ಸ್ಪರ್ಧೆಗಳನ್ನು ವೀಕ್ಷಿಸಲು ಅನುವು ಮಾಡಿ ಕೊಡಲಾಗಿದೆ. 

ಅದೇ ಇನ್ನೊಂದೆಡೆ, ಮದುವೆಯ ಸಂದರ್ಭದಲ್ಲಿ ಹಲವಾರು ಜೋಡಿಗಳ ಮದುವೆಯನ್ನು ಅಂಬಾನಿ ಕುಟುಂಬ ನಡೆಸಿದ್ದು, ಜೊತೆಗೆ,  ಮನೆ ಮುಂದೆ ಅಂಬಾನಿ ಕುಟುಂಬ ಅನ್ನದಾನ ಏರ್ಪಡಿಸುತ್ತಿದೆ.  40 ದಿನಗಳ ಕಾಲ ನಡೆದ ಈ ಅನ್ನದಾನದಲ್ಲಿ ಪ್ರತಿ ದಿನ 9 ಸಾವಿರ ಜನರಿಗೆ ಉಚಿತವಾಗಿ ಊಟ ನೀಡಲಾಗುತ್ತಿದೆ. ಜೂನ್​ 5ರಿಂದ ಈ ಕಾರ್ಯ ಆರಂಭವಾಗಿದ್ದು, ಜುಲೈ. 15ರವರೆಗೆ ಅದು ಮುಂದುವರಿಯಲಿದೆ. ಒಂದು ಹೊತ್ತಿಗೆ, 3ರಿಂದ 4 ಸಾವಿರ ಜನರಿಗೆ ಅನ್ನದಾ ನೆರವೇರಿಸುವಷ್ಟು ವಿಶಾಲವಾದ ಶಾಮಿಯಾನಾ ವ್ಯವಸ್ಥೆ ಮಾಡಲಾಗಿದೆ.

ಅನಂತ್​ ಅಂಬಾನಿ ಮದ್ವೆಯಲ್ಲಿ ರೇಷ್ಮೆಯಲ್ಲಿ ಮಿಂಚಿದ ಶ್ವಾನ 'ಹ್ಯಾಪ್ಪಿ': ಯಾರಿದು ವಿಶೇಷ ಅತಿಥಿ?

click me!