ಈ ದೇಶದಿಂದ ದ್ವೇಷ ಬಿಟ್ಟು ಏನೂ ಸಿಕ್ಕಿಲ್ಲ... ಇಂದಿರಾ ಕಣ್ಣೀರು... ಕಂಗನಾ 'ಎಮರ್ಜೆನ್ಸಿ' ಟ್ರೇಲರ್​ನಲ್ಲಿ ಏನಿದೆ?

By Suchethana D  |  First Published Aug 17, 2024, 12:20 PM IST

ನಟಿ, ಸಂಸದೆ ಕಂಗನಾ ರಣಾವತ್​ ಅವರ ಬಹು ನಿರೀಕ್ಷಿತ ಎಮರ್ಜೆನ್ಸಿ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದೆ. ದೇಶದಲ್ಲಿ  ತುರ್ತು ಪರಿಸ್ಥಿತಿ ಹೇರಿದ್ದ ಸಂದರ್ಭದಲ್ಲಿ ಆದ ಅಲ್ಲೋಲ,ಕಲ್ಲೋಲಗಳ ನಡುವೆಯೇ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಕಣ್ಣೀರಿನ ಕುರಿತು ಟ್ರೇಲರ್​ನಲ್ಲಿ ತೋರಿಸಿರೋದೇನು? 


  ಈ ದೇಶದಿಂದ ದ್ವೇಷ ಬಿಟ್ಟು ಏನೂ ಸಿಕ್ಕಿಲ್ಲ... ಎನ್ನುತ್ತಲೇ ಪ್ರಧಾನಿ ಇಂದಿರಾ ಗಾಂಧಿ ಕಣ್ಣೀರು ಹಾಕಿದ್ದಾರೆ. ಎಲ್ಲೆಡೆ ದ್ವೇಷ. ನನ್ನನ್ನು ದ್ವೇಷಿಸುತ್ತಿದ್ದಾರೆ ಎಂದು ಅವರು ದುಃಖ ತೋಡಿಕೊಳ್ಳುತ್ತಿದ್ದಾರೆ. ಆದರೂ ಇಂಡಿಯಾ ಅಂದ್ರೆ ಇಂದಿರಾ, ಇಂದಿರಾ ಅಂದ್ರೆ ಇಂಡಿಯಾ ಎನ್ನುತ್ತಿದ್ದಾರೆ... ಅದೇ ಇನ್ನೊಂದೆಡೆ ದೇಶಾದ್ಯಂತ ತುರ್ತು ಪರಿಸ್ಥಿತಿ ಹೇರಲಾಗಿದೆ. ಎಲ್ಲೆಡೆ ಜನರು ಕಂಗಾಲಾಗಿ ಹೋಗಿದ್ದಾರೆ. ವಾಸ್ತವವನ್ನು ಪ್ರಕಟ ಮಾಡುವುದನ್ನು ತಡೆಯುವುದಕ್ಕಾಗಿ ಮಾಧ್ಯಮಗಳನ್ನು ಬಂದ್​ ಮಾಡಲಾಗಿದೆ. ತುರ್ತು ಪರಿಸ್ಥಿತಿಯನ್ನು ವಿರೋಧಿಸುವವರಿಗೆ ಚಿತ್ರಹಿಂಸೆ ಕೊಡಲಾಗುತ್ತಿದೆ. ಜೈಲಿನಲ್ಲಿ ಅವರನ್ನು ಅಮಾನವೀಯವಾಗಿ ನೋಡಿಕೊಳ್ಳಲಾಗುತ್ತಿದೆ. ದೇಶದಲ್ಲಿ ನಡೆಯುತ್ತಿರುವ ಈ ಭಯಾನಕತೆಯನ್ನು ಕಂಡೂ ಕಂಡೂ ಜನ ಆವೇಷಭರಿತರಾಗಿದ್ದಾರೆ. ಪ್ರಧಾನಿ ಇಂದಿರಾಗಾಂಧಿ ವಿರುದ್ಧ ಭುಗಿಲೆದ್ದಿದ್ದಾರೆ. ಎಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನಾಕಾರರನ್ನು ಹತ್ತಿಕ್ಕಲು ಪೊಲೀಸರು ಲಾಠಿ ಚಾರ್ಜ್ ಮಾಡುತ್ತಿದ್ದಾರೆ. ಮತ್ತೊಂದಿಷ್ಟು ಮಂದಿಯನ್ನು ಬಂಧಿಸಿ ಚಿತ್ರಹಿಂಸೆ ನೀಡಲಾಗುತ್ತಿದೆ...

ಇದು ನಟಿ, ಸಂಸದೆ ಕಂಗನಾ ರಣಾವತ್​ ಅವರ ಬಹುನಿರೀಕ್ಷಿತ ಎಮರ್ಜೆನ್ಸಿ ಚಿತ್ರದ ಟ್ರೇಲರ್​. ಬರುವ ಸೆಪ್ಟೆಂಬರ್​ 6ರಂದು ಕೊನೆಗೂ ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್​ ಆಗಿದೆ.  ಝೀ ಸ್ಟುಡಿಯೋಸ್ ಮತ್ತು ಮಣಿಕರ್ಣಿಕಾ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಬರುತ್ತಿರುವ 'ಎಮರ್ಜೆನ್ಸಿ' ಚಿತ್ರವು ಮೊದಲ ಮಹಿಳಾ ಪ್ರಧಾನಿ  ಇಂದಿರಾಗಾಂಧಿಯನ್ನು ಆಧರಿಸಿದ ಮೆಗಾ-ಬಜೆಟ್ ಚಲನಚಿತ್ರವಾಗಿದೆ. ಜೂನ್ 25, 1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಹೇರಿದ್ದ ರಾಷ್ಟ್ರೀಯ ತುರ್ತು ಪರಿಸ್ಥಿತಿ ( National Emergency) ಕರಾಳ ಮುಖವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ ಎಂದು ನಟಿ ಹೇಳಿದ್ದಾರೆ.  21 ತಿಂಗಳು ಕಾಲ ತುರ್ತು ಪರಿಸ್ಥಿತಿ ಅಸ್ತಿತ್ವದಲ್ಲಿ ಇತ್ತು. 1975, ಜೂನ್ 25ರಂದು ಭಾರತದ ಇತಿಹಾಸದಲ್ಲಿ ಕರಾಳ ದಿನವಾಗಿತ್ತು.  ಸಂವಿಧಾನವನ್ನು ತಿರಸ್ಕರಿಸಿ ತುರ್ತು ಪರಿಸ್ಥಿತಿ ಹೇರಲಾಯ್ತು. ಭಾರತದ ಯುವ ಪೀಳಿಗೆ ಇದನ್ನ ಎಂದು ಮರೆಯೋದಿಲ್ಲ ಎಂದಿರುವ ನಟಿ, ತಮ್ಮ ಈ ಚಿತ್ರವನ್ನು ವೀಕ್ಷಿಸಿ, ನಮ್ಮ ಇತಿಹಾಸವನ್ನು ತಿಳಿದುಕೊಳ್ಳಿ ಎಂದಿದ್ದಾರೆ. 

Tap to resize

Latest Videos

ಮುಸ್ಲಿಂ ಟೋಪಿ, ಕ್ರೈಸ್ತರ ಕ್ರಾಸ್​, ಹಿಂದೂಗಳ ತಿಲಕ... ಬೇಕಿತ್ತಾ ಕಂಗನಾಗೆ ಇದೆಲ್ಲಾ! ಈಗೇನಾಯ್ತು ನೋಡಿ...

  ಈ ಕುರಿತು ಹೇಳಿಕೆ ನೀಡಿರುವ ನಟಿ, ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದ ಕರಾಳ ಘಟ್ಟವನ್ನು ನೋಡಿ ಮತ್ತು ಅಧಿಕಾರದ ಲಾಲಸೆಯನ್ನು ನೋಡಿ ಎಂದಿದ್ದಾರೆ. ಚಿತ್ರದಲ್ಲಿ ಅನುಪಮ್ ಖೇರ್, ಮಿಲಿಂದ್ ಸೋಮನ್, ಶ್ರೇಯಸ್ ತಲ್ಪಾಡೆ ಮತ್ತು ದಿವಂಗತ ಸತೀಶ್ ಕೌಶಿಕ್ ಅವರ ಸಂಗೀತವನ್ನು ಸಂಚಿತ್ ಬಲ್ಹಾರಾ ಅವರು ಸಂಯೋಜಿಸಿದ್ದಾರೆ. ಕಥೆ ಮತ್ತು ಸಂಭಾಷಣೆಗಳನ್ನು ರಿತೇಶ್ ಷಾ ಬರೆದಿದ್ದಾರೆ. ಚಿತ್ರದ ಬಿಡುಗಡೆ ಪದೇ ಪದೇ ಮುಂದೂಡುತ್ತಲೇ ಹೋಗುತ್ತಿತ್ತು.  ನವೆಂಬರ್ 24, 2023 ರಂದು ಬಿಡುಗಡೆಯಾಗಬೇಕಿತ್ತು. ನಂತರ ಜೂನ್‌ 14ರಂದು ಚಿತ್ರ ರಿಲೀಸ್‌ ಆಗಲಿದೆ ಎನ್ನಲಾಗಿತ್ತು.  ಕಂಗನಾ ಥೇಟ್​ ಇಂದಿರಾ ಗಾಂಧಿಯವರಂತೆ ಮೇಕಪ್​ ಮಾಡಿಕೊಂಡು, ಅವರಂತೆಯೇ   ಟ್ರೇಲರ್​ ಕಳೆದ ವರ್ಷವೇ ಬಿಡುಗಡೆಯಾಗಿತ್ತು. ಕಂಗನಾ ಅವರ ಈ ನಟನೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಆದರೆ ಯಾಕೋ ಈ ಚಿತ್ರಕ್ಕೆ ಇನ್ನೂ ಮುಹೂರ್ತ ಕೂಡಿ ಬರುತ್ತಲೇ ಇರಲಿಲ್ಲ. ಇದೀಗ ಬಿಜೆಪಿಯ ಸಂಸದೆ ಆದ ಮೇಲೆ ನಟಿಯ ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಮನೆ ಮಾಡಿದೆ. ಇದೀಗ ನಟಿ ಸೆಪ್ಟೆಂಬರ್​ 6ರಂದು ಚಿತ್ರ ಬಿಡುಗಡೆಯಾಗಲಿದೆ ಎಂದಿದ್ದಾರೆ. ಈ ಚಿತ್ರವನ್ನು ಸುಮಾರು 25 ಕೋಟಿ ರೂಪಾಯಿಗಳ ಬಜೆಟ್​ನಲ್ಲಿ ರೆಡಿ ಮಾಡಲಾಗಿದೆ ಎನ್ನಲಾಗುತ್ತಿದೆ. 


ಅಷ್ಟಕ್ಕೂ,  ಕಾಂಟ್ರವರ್ಸಿ ಕ್ವೀನ್​ ಎಂದೇ ಹೆಸರು ಪಡೆದಿರುವವರು  ಕಂಗನಾ ರಣಾವತ್​ ಅವರ ಇತ್ತೀಚಿನ ಅವರ ಚಿತ್ರಗಳು ಹಿಟ್​ ಆಗುತ್ತಲೇ ಇಲ್ಲ.  ಅವರ ನಸೀಬು ಸದ್ಯ ಸರಿ ಇದ್ದಂತಿಲ್ಲ. ಒಂದರ ಮೇಲೊಂದು ಫ್ಲಾಪ್‌ ಚಿತ್ರಗಳನ್ನು ನೀಡುತ್ತಿದ್ದಾರೆ. ಎಷ್ಟೇ ಕಷ್ಟಪಟ್ಟು, ಶ್ರಮವಹಿಸಿ, ಉತ್ತಮ ನಟನೆ ಮಾಡಿದ್ದರೂ ಇವರ ಚಿತ್ರಗಳು ಶಾಕ್‌ ಮೇಲೆ ಶಾಕ್‌ ನೀಡುತ್ತಿವೆ. ಆದರೆ ಮೊದಲ ಬಾರಿಗೇ ಸಂಸದೆಯಾಗಿ ಲೋಕಸಭೆಗೆ ಎಂಟ್ರಿ ಕೊಟ್ಟಿದ್ದಾರೆ ನಟಿ. ಇಲ್ಲಿ ಅದೃಷ್ಟ ಖುಲಾಯಿಸಿದೆ. ಎಮರ್ಜೆನ್ಸಿ ಚಿತ್ರ ನಟಿಗೆ ಅದೃಷ್ಟ ತಂದುಕೊಡುತ್ತಾ ನೋಡಬೇಕಿದೆ. 

ತಮ್ಮವರ ಮೇಲೆಯೇ ಈ ಪರಿ ಹಿಂಸಾಚಾರ, ಇನ್ನು... ಎನ್ನುತ್ತಲೇ ಸನಾತನ ಧರ್ಮದ ಮಹತ್ವ ತಿಳಿಸಿದ ಕಂಗನಾ

click me!