'ಸೂರ್ಯವಂಶ' ಬೆಡಗಿ ಇಶಾ ಕೊಪ್ಪಿಕರ್​ ಬಿಗ್​ಬಾಸ್​ಗೆ ಎಂಟ್ರಿ ಕನ್​ಫರ್ಮ್​! ನಟಿ ಹೇಳಿದ್ದೇನು?

By Suchethana D  |  First Published Aug 17, 2024, 11:31 AM IST

ಕನ್ನಡದ ಸೂರ್ಯವಂಶ, ಓ ನನ್ನ ನಲ್ಲೆ ಮತ್ತು ಕವಚ ಸಿನಿಮಾಗಳಲ್ಲಿ ನಟಿಸಿರುವ ಬಾಲಿವುಡ್​ ಬೆಡಗಿ ಇಶಾ ಕೊಪ್ಪಿಕರ್​ ಬಿಗ್​ಬಾಸ್​ಗೆ ಎಂಟ್ರಿ ಕೊಡುವುದು ಕನ್​ಫರ್ಮ್​ ಆಗಿದೆ. ನಟಿ ಹೇಳಿದ್ದೇನು? 
 


ಈಗ ಎಲ್ಲೆಲ್ಲೂ ಬಿಗ್​ಬಾಸ್​ದ್ದೇ ಹವಾ. ಯಾರ್ಯಾರು  ಬಿಗ್​ಬಾಸ್​ಗೆ ಎಂಟ್ರಿ ಕೊಡಬಹುದು ಎಂಬ ಬಗ್ಗೆ ಇದಾಗಲೇ ಹಲವಾರು ಗಾಳಿಸುದ್ದಿಗಳು ಹರಿದಾಡುತ್ತಿವೆ. ಹಲವರ ಹೆಸರುಗಳು ಕೇಳಿಬರುತ್ತಿವೆ. ಇದೇನೂ ಹೊಸ ವಿಷಯವಲ್ಲ. ಪ್ರತಿಬಾರಿಯೂ ಇದೇ ರೀತಿ ಆಗುತ್ತದೆ. ಬಿಗ್​ಬಾಸ್​ ಅನೌನ್ಸ್​ ಆಗುತ್ತಿದ್ದಂತೆಯೇ ವಿವಿಧ ಕ್ಷೇತ್ರಗಳ ಜನರ ಅದರಲ್ಲಿಯೂ ವಿವಾದಿತರ ಹೆಸರು ಹೆಚ್ಚಾಗಿ ಹರಿದಾಡುತ್ತಿರುತ್ತದೆ. ಬಿಗ್​ಬಾಸ್​ ಎಂದರೇನೇ ಹೆಚ್ಚಿನ ಪಕ್ಷ ವಿವಾದಿತರಿಗೆ ಮಣೆಹಾಕುವ ಷೋ ಎನ್ನುವ ಮಾತು ಮೊದಲಿನಿಂದಲೂ ಇದೆ. ಕೆಲವರು ಮಾತ್ರ ನಾಮ್​ಕೇ ವಾಸ್ತೆ ಎನ್ನುವಂತೆ ಯಾವುದೇ ವಿವಾದ ಇಲ್ಲದವರು ಎಂಟ್ರಿ ಕೊಡುತ್ತಾರೆ, ಅವರು ಬೇಗನೇ ಎಲಿಮಿನೇಟ್​ ಆಗಿ ಮನೆಯಿಂದ ಬರುತ್ತಾರೆ ಎಂಬ ಆರೋಪವೂ ಇದೆ. ಅದೇನೇ ಇದ್ದರೂ, ಎಲ್ಲಾ ಆರೋಪಗಳ ಮಧ್ಯೆಯೂ ಬಿಗ್​ಬಾಸ್​​ ನೋಡುವ ದೊಡ್ಡ ವೀಕ್ಷಕ ವರ್ಗವೇ ಇದೆ.  ಅಂದಹಾಗೆ, ಇತ್ತ ಕನ್ನಡದ ಬಿಗ್​ಬಾಸ್​ ಷೋ ಹವಾ ಜೋರಾಗಿದ್ದರೆ, ಅತ್ತ ಹಿಂದಿಯ ಬಿಗ್​ಬಾಸ್​ ಷೋ ಸುದ್ದಿಯೂ ಸಕತ್​ ಸೌಂಡ್​ ಮಾಡುತ್ತಿದೆ.

ಹೌದು! ಬಾಲಿವುಡ್​ ನಟ ಸಲ್ಮಾನ್​ ಖಾನ್​ ನಡೆಸಿಕೊಡುವ ಬಿಗ್​ಬಾಸ್​ ಷೋ 18ನೇ ಸೀಸನ್​ ಬರುವ ಅಕ್ಟೋಬರ್​ 5ರಿಂದ ಶುರುವಾಗಲಿದೆ. ಇದಕ್ಕೆ ಯಾರ್ಯಾರು ಸ್ಪರ್ಧಿಗಳು ಎಂಬ ಬಗ್ಗೆ ಸಾಕಷ್ಟು ಗಾಸಿಪ್​ಗಳು ನಡೆದಿವೆ. ಕುತೂಹಲದ ವಿಷಯ ಏನೆಂದರೆ, ತೆಲಗುವಿನ ಬಿಗ್​ಬಾಸ್​ ಮುಂದಿನ ತಿಂಗಳು ಶುರುವಾಗಲಿದೆ. ಆದರೆ ಹಿಂದಿಯ ಬಿಗ್​ಬಾಸ್​ ಕುರಿತು ಸಹಜವಾಗಿ ಕುತೂಹಲ ಹೆಚ್ಚೇ.  ಹಿಂದಿಯ ಬಿಗ್​ಬಾಸ್​ಗೆ ಮೊದಲ ಎಂಟ್ರಿಯಾಗಿ ಬಹುಭಾಷಾ ನಟಿ, ಕನ್ನಡದ 'ಸೂರ್ಯವಂಶ' ಬೆಡಗಿ ಇಶಾ ಕೊಪ್ಪಿಕರ್​ ಹೆಸರು ಕನ್​ಫರ್ಮ್​ ಆಗಿದೆ. ಈ ಕುರಿತು ಖುದ್ದು ನಟಿ ಹೇಳಿದ್ದಾರೆ ಎನ್ನಲಾಗಿದೆ. 

Tap to resize

Latest Videos

ರೇಖಾ ಫೋಟೋ ವಿವಾದದ ಬೆನ್ನಲ್ಲೇ ಲೆಹಂಗಾದೊಳಗೆ ಕೈಹಾಕಿದ 'ಮಿಸ್ಟರ್​ ಬಚ್ಚನ್'​! ಏನಿದು ಗಲಾಟೆ?
 
ಅಂದಹಾಗೆ ಇಶಾ ಬಾಲಿವುಡ್​ ನಟಿ ಆಗಿದ್ದರೂ, ಕನ್ನಡ, ತಮಿಳು ಮತ್ತು ತೆಲಗು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಇವರಿಗೆ ಹೆಸರು ತಂದುಕೊಟ್ಟಿದ್ದು ಕನ್ನಡದ ವಿ‍ಷ್ಣುವರ್ಧನ್ ಅಭಿನಯದ `ಸೂರ್ಯವಂಶ' ಚಿತ್ರ. ಇಷ್ಟೇ ಅಲ್ಲದೇ ನಟಿ,  ರವಿಚಂದ್ರನ್ ರವರ `ಓ ನನ್ನ ನಲ್ಲೆ' ಮತ್ತು ಶಿವರಾಜಕುಮಾರ್ ರವರ `ಕವಚ' ಸಿನಿಮಾಗಳಲ್ಲಿಯೂ  ನಟಿಸಿದ್ದಾರೆ. ಇದೀಗ ಅವರು ಹಿಂದಿಯ ಬಿಗ್​ಬಾಸ್​ಗೆ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಡಲಿದ್ದಾರೆ. ಅಂದಹಾಗೆ, ಇಶಾ ಅವರು ಬೆಳ್ಳಿ ಪರದೆಗೆ ಎಂಟ್ರಿ ಕೊಟ್ಟಿದ್ದು  1998ರಲ್ಲಿ. ‘ಚಂದ್ರಲೇಖಾ’ ಅವರ ನಟನೆಯ ಮೊದಲ ಸಿನಿಮಾ. ತೆಲುಗಿನ ಈ ಸಿನಿಮಾದಲ್ಲಿ ಲೇಖಾ ಹೆಸರಿನ ಪಾತ್ರ ಮಾಡಿದ್ದರು.  ಶಿವ ಕಾರ್ತಿಕೇಯನ್, ರಾಕುಲ್ ಪ್ರೀತ್ ಸಿಂಗ್ ಅವರ ತಮಿಳು ಚಿತ್ರ ಅಯಾಲನ್ ನಲ್ಲಿ ಇಶಾ ನಟಿಸಿದ್ದಾರೆ. 
 
ಈಕೆ ಇತ್ತೀಚಿಗೆ ಸುದ್ದಿ ಮಾಡಿದ್ದದು, ಕಾಸ್ಟಿಂಗ್ ಕೌಚ್​ ಕುರಿತು. ಬಾಲಿವುಡ್​​ನ ಕರಾಳ ಮುಖವನ್ನು ಇವರು ಬಹಿರಂಗಗೊಳಿಸಿದ್ದರು.  ಅನೇಕ ಬಾರಿ ನಿರ್ಮಾಪಕರು, ನಿರ್ದೇಶಕರು ಮೀಟಿಂಗ್ ಗೆ ಕರೆದು ಅನುಚಿತವಾಗಿ ಮುಟ್ಟಿದ್ದಲ್ಲದೇ, ನಾಯಕನ ಜೊತೆ ಸ್ನೇಹ ಬೆಳೆಸಬೇಕು ಎಂದು ಕೈ ಒತ್ತಿ ಹೇಳುತ್ತಿದ್ದರು. ಅಷ್ಟೇ ಅಲ್ಲ, ಒಮ್ಮೆ ಒಬ್ಬ ದೊಡ್ಡ ಹೀರೋ ನನ್ನನ್ನು ಒಬ್ಬನೇ ಭೇಟಿಯಾಗಲು ಬರುವಂತೆ ಹೇಳಿದ್ದ. ಆ ಸಮಯದಲ್ಲಿ ಬೇರೆ ನಟಿಯ ಜೊತೆ ನಂಟು ಇದ್ದ ಕಾರಣ ತನ್ನ ಡ್ರೈವರ್ ನನ್ನು ಕೂಡ ಕರೆದುಕೊಂಡು ಬಂದಿರಲಿಲ್ಲ. ನೀವು ಬಾಲಿವುಡ್‌ನಲ್ಲಿ ಉಳಿಯಬೇಕಾದರೆ, ಸ್ನೇಹಪರವಾಗಿರಬೇಕೆಂದು ಸಲಹೆ ನೀಡಿದ್ದ ಎಂದು ಇಶಾ ಹೇಳಿದ್ದರು.

ದೀಪಿಕಾ ಪಡುಕೋಣೆ ಮಗುವಿನ ಹೆಸರು ರಿವೀಲ್​? ಹೆಸರಿಗೆ ಪರ್ಮಿಷನ್​ ಪಡೆದಿದ್ದಾರೆ ರಣವೀರ್​ ಸಿಂಗ್!
 

click me!