ಶಾರುಖ್​ ಖಾನ್​ ಇಲ್ಲವೇ ಸೆಕ್ಸ್​ ಬೇಕು: ನಟಿ ನೇಹಾ ಧೂಪಿಯಾ ಹೇಳಿದ್ದೇನು?

By Suvarna News  |  First Published Jan 30, 2023, 12:05 PM IST

ಪಠಾಣ್​ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ 20 ವರ್ಷಗಳ ಹಿಂದೆ ನಟಿ ನೇಹಾ ಧೂಪಿಯಾ ಹೇಳಿರುವ ಮಾತು ವೈರಲ್​ ಆಗಿದೆ. ಏನೆಂದಿದ್ದರು ನಟಿ?
 


2004ರಲ್ಲಿ ಭಾರಿ ಚರ್ಚೆಗೆ ಒಳಗಾಗಿದ್ದ ಬಾಲಿವುಡ್​ನ 'ಜೂಲಿ' (Julie) ಚಿತ್ರ ನೆನಪಿದೆಯಾ? ಶ್ರೀಮಂತ ಉದ್ಯಮಿಯೊಬ್ಬ ವೇಶ್ಯೆಯ ಜೊತೆಗೆ ಪ್ರೀತಿಗೆ ಬಿದ್ದು ಆಕೆಯನ್ನು ಮದುವೆಯಾಗಲು ಹಂಬಲಿಸುವ ಕಥೆಯುಳ್ಳ ಚಿತ್ರವಿದು. ಈ ಚಿತ್ರದಲ್ಲಿ ವೇಶ್ಯೆ ಜೂಲಿಯ ಪಾತ್ರದಲ್ಲಿ ನಟಿಸಿದ್ದಾಕೆ ನೇಹಾ ಧೂಪಿಯಾ. ಬಹುತೇಕ ನಗ್ನ ರೀತಿಯಲ್ಲಿ ಈಕೆಯನ್ನು ಈ ಚಿತ್ರದಲ್ಲಿ ಚಿತ್ರೀಕರಿಸಲಾಗಿದೆ. ಬ್ಯಾಕ್​ಲೆಸ್​ ಡ್ರೆಸ್​ನಲ್ಲಿ ಈಕೆ ಕಾಣಿಸಿಕೊಂಡಿದ್ದರಿಂದ ಹಾಗೂ ಹಸಿಬಿಸಿ ದೃಶ್ಯಗಳು ಇದ್ದುದರಿಂದ ಆಗಿನ ಸಂದರ್ಭದಲ್ಲಿ ನೇಹಾ ಬಹಳ ಚರ್ಚೆಗೆ ಕೂಡ ಒಳಗಾಗಿದ್ದರು. ಈ ಬಗ್ಗೆ ನೇಹಾ ಸ್ವಲ್ಪವೂ ಬೇಸರ ಪಟ್ಟುಕೊಂಡಿರಲಿಲ್ಲ. 'ಜೂಲಿ ಚಿತ್ರದಲ್ಲಿ ಪ್ರಣಯದ ದೃಶ್ಯಗಳಿವೆ, ನನ್ನ ನಗ್ನ ಬೆನ್ನು ತೋರಿಸಲಾಗಿದೆ. ನನಗೆ ಲೈಂಗಿಕತೆಯ ಟ್ಯಾಗ್ ಕೊಡಲಾಗಿದೆ. ಇದಕ್ಕೆ ನನಗೆ ಸ್ವಲ್ಪವೂ  ಬೇಜಾರಿಲ್ಲ. (ಸೆಕ್ಸ್​ ಬಾಂಬ್​ಗಳೆಂದೇ ಹೇಳಲಾಗುವ) ನಟಿಯರಾದ ಮಲ್ಲಿಕಾ ಶೆರಾವತ್, ಬಿಪಾಶಾ ಬಸು (Bipasha Basu) ಅವರನ್ನು ನಾವು ಹಿಂದೆ ಹಾಕಿರುವುದಾಗಿ ಹೇಳಿಕೊಂಡರೂ  ಅಂತ ಜನರು ಹೇಳಿದರೂ ನನಗೆ ಬೇಸರ ಆಗೋದಿಲ್ಲ' ಎಂದು ಹೇಳಿದ್ದ ನೇಹಾ ಆ ವೇಳೆ ಹೇಳಿದ್ದ ಒಂದು ಡೈಲಾಗ್​ ಪಠಾಣ್​ (Pathaan) ಬಿಡುಗಡೆಯ ನಂತರ ಭಾರಿ ವೈರಲ್​ ಆಗ್ತಿದೆ.

ನಿಜ. 20 ವರ್ಷಗಳ ಹಿಂದೆ ಅಂದರೆ ಜೂಲಿ ಬಿಡುಗಡೆಯಾದ 2004ರಲ್ಲಿ ನೇಹಾ ಧೂಪಿಯಾ (Neha Dhupia) ಜೂಲಿ ಚಿತ್ರದ ಬಗ್ಗೆ ಮಾಧ್ಯಮವೊಂದರಲ್ಲಿ ಸಂದರ್ಶನ ನೀಡುವಾಗ  ನಟ ಶಾರುಖ್​ ಖಾನ್​ ಅವರ ಬಗ್ಗೆಯೂ ಹೇಳಿಕೆ ನೀಡಿದ್ದರು. ಅದೇನೆಂದರೆ, 'ಈಗಿನ ಕಾಲದ ಸಿನಿಮಾಗಳಲ್ಲಿ ಶಾರುಖ್​ ಖಾನ್​ ಇರಬೇಕು ಇಲ್ಲವೇ ಚಿತ್ರದಲ್ಲಿ ಲೈಂಗಿಕತೆ (Sex) ಇರಬೇಕು. ಶಾರುಖ್​ ಖಾನ್​ ಇಲ್ಲವೆಂದರೆ ಸೆಕ್ಸ್​ ಇರಬೇಕು. ಅದಕ್ಕಾಗಿ ನಾನು ಬೇಕಾದರೆ ಮುಂದಿನ 5 ಸಿನಿಮಾಗಳಲ್ಲಿ ನಾನು ಗ್ಲಾಮರ್ ಪಾತ್ರಗಳಿಗೆ ಸೀಮಿತ ಆಗಬಹುದು' ಎಂದು ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆಯನ್ನು ಅವರ ಅಭಿಮಾನಿಯೊಬ್ಬ ಪಠಾಣ್​ ಬಿಡುಗಡೆಯ ನಂತರ ಟ್ವಿಟರ್​ ಮೂಲಕ ಶೇರ್​ ಮಾಡಿಕೊಂಡಿದ್ದಾರೆ. 

Tap to resize

Latest Videos

Rachel Ann Mullins: ಶಾರುಖ್ ಖಾನ್ ಅಂದ್ರೆ ಯಾರು ಎಂದು ಕೇಳಿದ್ದ 'ಪಠಾಣ್'​ ನಟಿ!

ಪಠಾಣ್​ನಲ್ಲಿ ಶಾರುಖ್​ ಟಾಪ್​ಲೆಸ್​ (Topless) ಆಗಿ ಕಾಣಿಸಿಕೊಂಡಿರುವುದೂ ಅಲ್ಲದೇ, ದೀಪಿಕಾ ಪಡುಕೋಣೆಯ ಡ್ರೆಸ್​ ನೋಡಿದ ನೆಟ್ಟಿಗರೊಬ್ಬರು, ನೇಹಾ ಅವರು ಈ ಮಾತನ್ನು ಟ್ವಿಟರ್​ನಲ್ಲಿ ನೆನಪು ಮಾಡಿಕೊಂಡಿದ್ದಾರೆ. ಪಠಾಣ್​ ಚಿತ್ರದ ದೃಶ್ಯದ ಜೊತೆಗೆ ನೇಹಾ ಅವರ ಮಾತನ್ನು ಟ್ವೀಟ್​ನಲ್ಲಿ ಹೇಳಿರುವ ಅವರು, 'ಸಿನಿಮಾದಲ್ಲಿ ಶಾರುಖ್ ಇರಬೇಕು ಇಲ್ಲವೇ ಲೈಂಗಿಕತೆ ಇರಬೇಕು ಎನ್ನುವ ಮಾತು  ಇವತ್ತಿಗೂ ನಿಜ" ಎಂದಿದ್ದಾರೆ.  ಈ ಟ್ವಿಟ್​ ಗಮನಿಸಿದ ನೇಹಾ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು,  'ನಾನು ಆ ಹೇಳಿಕೆ ನೀಡಿ  20 ವರ್ಷವಾಗಿದೆ. ಇಂದಿಗೂ ನನ್ನ ಹೇಳಿಕೆ ಸತ್ಯವಾಗಿಯೇ ಉಳಿದುಕೊಂಡಿದೆ. ಇದು ಕಲಾವಿದನ ವೃತ್ತಿ ಅಲ್ಲ, ಈಗೇನಿದ್ದರೂ ಕಿಂಗ್ ಆಳ್ವಿಕೆ' ಎಂದಿದ್ದಾರೆ.

ಪಠಾಣ್ ಸಿನಿಮಾದ  ಶಾರುಖ್ ಖಾನ್ ಅವರ ಅರೆನಗ್ನ ದೇಹದ ಫೋಟೋ ಹಂಚಿಕೊಂಡ ನೇಹಾ ಧೂಪಿಯಾ ಅವರು, 'ಶಾರುಖ್ ಖಾನ್ ಅವರೇ, ನಾವು ನಿಮ್ಮ ಮೇಲೆ ಇಟ್ಟಿರುವ ಪ್ರೀತಿಯನ್ನು ಬರಿಯ ಮಾತಿನಲ್ಲಿ ಹೇಳುವುದು ತೀರಾ  ಕಷ್ಟ. ದೀಪಿಕಾ ಪಡುಕೋಣೆ (Deepika Padukone) ಅವರೇ...  ನಿಮ್ಮ ತಂತ್ರ ಮತ್ತು ಕಾಂತಿಯಿಂದ ನೀವು ಪಠಾಣ್​ ಚಿತ್ರಕ್ಕೆ  ಕಿಚ್ಚು ಹಚ್ಚಿದ್ದೀರಿ. ಜಾನ್ ಅಬ್ರಹಾಂ ಅವರೇ ಕೆಟ್ಟ ಲುಕ್‌ನಲ್ಲಿಯೂ ಸೂಪರ್​ ಕಾಣಿಸುತ್ತಿದ್ದೀರಿ. ಚಿತ್ರರಂಗದ ಇತಿಹಾಸದಲ್ಲಿಯೇ ಅದ್ಭುತವಾದ ಅತಿಥಿ ಪಾತ್ರ ಮಾಡಿದ್ದಾರೆ ಸಲ್ಮಾನ್ ಖಾನ್ (Salman Khan).  ಅವರನ್ನು ನೋಡಲು ಥಿಯೇಟರಿಗೆ ಹೋಗಬೇಕು' ಎಂದು ನೇಹಾ ಹೇಳಿದ್ದಾರೆ. 

Kangana Ranaut: ಖಾನ್​ ಮತ್ತು ಮುಸ್ಲಿಮರ ಮೇಲೆ ಲವ್​: ಕಂಗನಾಗೆ ನೆಟ್ಟಿಗರಿಂದ ಭರ್ಜರಿ ಕ್ಲಾಸ್​

ಪಠಾಣ್​ ಚಿತ್ರದ ಬಗ್ಗೆ ಬರೆದಿರುವ ಅವರು,  'ನಾನು ಪಠಾಣ್ ನೋಡಲು ಹೋದಾಗ ಷೋ ತುಂಬಿಹೋಗಿತ್ತು. ಚಪ್ಪಾಳೆ, ಶಿಳ್ಳೆ ಸಕತ್​ ಇತ್ತು, ಇದನ್ನು ನೋಡಿ  ಹೃದಯ ತುಂಬಿ ಬಂತು. ಪ್ರತಿಯೊಂದು ಬೀಟ್‌ ಅನ್ನೂ ಜನರು ಮೆಟ್ಟಿದ್ದಾರೆ.  ಪಠಾಣ್ ಹೊಡೆಯುವ ದೃಶ್ಯ ಬಂದಾಗ ಸೀಟ್‌ನಿಂದ ಜಂಪ್ ಮಾಡಿದ್ದೇವೆ. ಶಾರುಖ್ ಖಾನ್ ಅವರೇ ಥ್ಯಾಂಕ್ಯೂ  ಇದೇ ಸಿನಿಮೀಯ ಜಯ" ಎಂದು ಟ್ವೀಟ್​ನಲ್ಲಿ (Tweet) ಹೇಳಿದ್ದಾರೆ. ಅಂದಹಾಗೆ, 250 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಪಠಾಣ್​ ಮೂರನೆಯ ದಿನಕ್ಕೆ  313 ಕೋಟಿ ರೂಪಾಯಿ ಕಲೆಕ್ಷನ್ (Collection) ಮಾಡಿದೆ.  
 

20 years on, my statement rings true.
This is not an "actor's career" but a "King's reign"! 🙌 https://t.co/TMgPzpJed4

— Neha Dhupia (@NehaDhupia)
click me!