ಸುಶಾಂತ್ ಸಿಂಗ್ ಜೊತೆ ಮಾತನಾಡಲು ನಾನು ನಿರಾಕರಿಸಿದ್ದೆ; ನಿರ್ದೇಶಕ ಅನುರಾಗ್ ಕಶ್ಯಪ್ ಶಾಕಿಂಗ್ ಹೇಳಿಕೆ

By Shruthi Krishna  |  First Published Jan 30, 2023, 11:26 AM IST

ಸುಶಾಂತ್ ಸಿಂಗ್ ಸಾಯುವ ಸ್ವಲ್ಪ ದಿನಗಳ ಮುಂಚೆ ಅವರ ಜೊತೆ ಮಾತನಾಡಲು ನಿರಾಕರಿಸಿದ್ದೆ ಎಂದು ನಿರ್ದೇಶಕ ಅನುರಾಗ್ ಕಶ್ಯಪ್ ಬಹಿರಂಗ ಪಡಿಸಿದ್ದಾರೆ. 


ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಸದ್ಯ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಇದೀಗ ಅನುರಾಗ್  'ಆಲ್ಮೋಸ್ಟ್ ಪ್ಯಾರ್ ವಿತ್ ಡಿಜೆ ಮೊಹಬ್ಬತ್' ಸಿನಿಮಾದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಅಲಯಾ ಪ್ರಮುಖ ಪಾತ್ರದಲ್ಲಿ ನಟಿಸಿರುವ  'ಆಲ್ಮೋಸ್ಟ್ ಪ್ಯಾರ್ ವಿತ್ ಡಿಜೆ ಮೊಹಬ್ಬತ್' ಬಾಲಿವುಡ್ ನಲ್ಲಿ ನಿರೀಕ್ಷೆ ಮೂಡಿಸಿದೆ.ಅನುರಾಗ್ ಸದ್ಯ ಅನೇಕ ವಾಹಿನಿಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ನೇರ ನುಡಿ ಹೆಸರುವಾಸಿಯಾಗಿರುವ ಅನುರಾಗ್ ಕಶ್ಯಪ್ ಸದ್ಯ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಬಗ್ಗೆ ಮಾತನಾಡಿದ್ದಾರೆ. 2020ರಲ್ಲಿ ಜೂನ್ 14ರಂದು ಸುಶಾಂತ್ ಸಿಂಗ್ ರಜಪೂತ್ ಶವವಾಗಿ ಪತ್ತೆಯಾಗಿದ್ದರು. ಸುಶಾಂತ್ ಸಿಂಗ್ ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ. ಈ ನಡುವೆ ಅನುರಾಗ್ ಕಶ್ಯಪ್, ಸುಶಾಂತ್ ನಿಧನಕ್ಕೂ ಸ್ಲಲ್ಪ ದಿನಗಳ ಮುಂಚೆ ಅವರ ಜೊತೆ ಮಾತನಾಡಲು ನಿರಾಕರಿಸಿದ್ದ ಸತ್ಯವನ್ನು ಬಹಿರಂಗ ಪಡಿಸಿದರು.   

ಸುಶಾಂತ್ ಸಿಂಗ್ ರಜಪೂತ್ ಅವರನ್ನು ಸಿನಿಮಾಗೆ ಕಾಸ್ಟ್ ಮಾಡುವ ವಿಚಾರವಾಗಿ 2020ರಲ್ಲಿ ವ್ಯಕ್ತಿಯೊಬ್ಬರ ಜೊತೆ ನಿರ್ದೇಶಕ ಅನುರಾಗ್ ಕಶ್ಯಪ್ ಚಾಕ್ ಮಾಡಿದ್ದರು. ಆದರೆ ಅದೇ ವರ್ಷ ದೊಡ್ಡ ಸಿನಿಮಾಗಳಿಗೆ  ಸುಶಾಂತ್ ಸಿಂಗ್, ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಸಿನಿಮಾದಿಂದ ಹಿಂದೆ ಸರಿದಿದ್ದರು. ಹಾಗಾಗಿ ಸುಶಾಂತ್ ಬಗ್ಗೆ ಅಸಮಾಧಾನಗೊಂಡಿದ್ದೆ ಎಂದು ಅನುರಾಗ್ ಕಶ್ಯಪ್ ಬಹಿರಂಗ ಪಡಿಸಿದ್ದಾರೆ. 

Tap to resize

Latest Videos

ಈ ಬಗ್ಗೆ ನಿರ್ದೇಶಕ ಅನುರಾಗ್ ಕಶ್ಯಪ್ ಇತ್ತೀಚಿನ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ. ಸುಶಾಂತ್ ಸಿಂಗ್ ಪರವಾಗಿ ವ್ಯಕ್ತಿಯೊಬ್ಬರು ತನ್ನನ್ನು ಸಂಪರ್ಕಿಸಿದ್ದರು ಆದರೆ ತಾನು ನಿರಾಕರಿಸಿದ್ದೆ ಎಂದು ಅನುರಾಗ್ ಹೇಳಿದರು. ಆ ಬಗ್ಗೆ ಯೋಚಿಸಿದ್ರೆ ತುಂಬಾ ನೋವಾಗುತ್ತದೆ ಎಂದು ಹೇಳಿದರು.

RRR ನಿರ್ದೇಶಕ ರಾಜಮೌಳಿಯನ್ನು ಕದಿಯಬಹುದು; ಕಳವಳ ವ್ಯಕ್ತಪಡಿಸಿದ ಅನುರಾಗ್ ಕಶ್ಯಪ್

 'ಈಗ ಬಹಳಷ್ಟು ಬದಲಾಗಿದೆ, ಆದರೆ ನನಗೆ ಫಿಲ್ಟರ್ ಇಲ್ಲ ಎಂದು ನನಗೆ ತಿಳಿದಿದೆ. ಆದರೆ ನಾನು ಎಲ್ಲವನ್ನೂ ಹೇಳುವ ಅಗತ್ಯವಿಲ್ಲ ಎಂದು ನನಗೆ ಅರ್ಥವಾಯಿತು. ಉದಾಹರಣೆಗೆ, ನನ್ನ ಮತ್ತು ಅಭಯ್ ನಡುವಿನ ಸಂಪೂರ್ಣ ಜಗಳ. ಅಭಯ್ ಅವರಂತಹ ಉತ್ತಮ ನಟ ಈಗ ಏಕೆ ಸಿನಿಮಾದಲ್ಲಿ ಇಲ್ಲ ಎಂದು ಯಾರೋ ಒಬ್ಬರು ಲೇಖನವನ್ನು ಬರೆಯುತ್ತಿದ್ದರು ಮತ್ತು ನಾನು 13 ವರ್ಷಗಳ ಹಿಂದೆ ನಡೆದ ನನ್ನ ಅನುಭವಗಳ ಬಗ್ಗೆ ಮಾತನಾಡಿದೆ. ನಾನು ಅದನ್ನು ಸಾರ್ವಜನಿಕವಾಗಿ ಹೇಳುವ ಅಗತ್ಯವಿರಲಿಲ್ಲ' ಎಂದರು. ಇದೇ ಸಮಯದಲ್ಲಿ ಸುಶಾಂತ್ ಸಿಂಗ್ ಬಗ್ಗೆ ಬಹಿರಂಗ ಪಡಿಸಿದರು. 

'SSR ನಿಧನ ಹೊಂದಿದ ಆ ದಿನ ನಿಜಕ್ಕೂ ಬೇಸರದ ದಿನವಾಗಿದೆ.  ಅದಕ್ಕೂ ಮೂರು ವಾರಗಳ ಮೊದಲು ಯಾರೋ ಮಾತನಾಡಲು ನನನ್ನು ಸಂಪರ್ಕಿಸಲು ಬಯಸಿದ್ದರು. ಆದರೆ ನಾನು ಇಲ್ಲ, ಅವರು ನನಗೆ ಅಸಮಾಧನ ಮೂಡಿಸಿದ್ದಾರೆ. ನಾನು ಮಾತನಾಡಲ್ಲ ಎಂದಿದ್ದೆ.  ನಿಜಕ್ಕೂ ಅದು ತುಂಬಾ ಸಂಕಟ ಪಡುವಂತೆ ಮಾಡಿತ್ತು. ಆದ್ದರಿಂದ ನಾನು ಅಭಯ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ ಮತ್ತು ನಾನು ಅವನಲ್ಲಿ ಕ್ಷಮೆಯಾಚಿಸಿದೆ. ಅವರ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ್ದರಿಂದ ನನ್ನ ಬಗ್ಗೆ ಅಸಮಾಧಾನಗೊಂಡಿದ್ದರು ಎಂದು ಯಾರೋ ಹೇಳಿದ್ದರು' ಎಂದು ಅನುರಾಗ್ ಹೇಳಿದರು.

4 ವರ್ಷದ ಹಿಂದೆಯೇ ಹೇಳಬೇಕಿತ್ತು, ಪರಿಸ್ಥಿತಿ ಈಗ ಕೈ ಮೀರಿದೆ; ಮೋದಿ ಸೂಚನೆಗೆ ಅನುರಾಗ್ ಕಶ್ಯಪ್ ಪ್ರತಿಕ್ರಿಯೆ

ಅನುರಾಗ್ ಕಶ್ಯಪ್ ಮಾತುಗಳು ಅಚ್ಚರಿ ಮೂಡಿಸಿವೆ. ಇತ್ತೀಚಿನ ಅನುರಾಗ್ ಕಶ್ಯಪ್ ಸಾಕಷ್ಟ ವಿಚಾರಗಳಿಗೆ ಸುದ್ದಿಯಯಲ್ಲಿದ್ದಾರೆ. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಜೊತೆ ಯಾವಾಗಲೂ ಮಾತಿನ ವಾಗ್ವಾದ ನಡೆಸುತ್ತಿರುತ್ತಾರೆ. 

click me!