ಪಠಾಣ್ ಸಕ್ಸಸ್: ಭಾರತ ಕೇವಲ ಖಾನ್‌ಗಳನ್ನು ಮಾತ್ರ ಇಷ್ಟಪಡೋದು; ಕಂಗನಾ ಅಚ್ಚರಿ ಹೇಳಿಕೆ

Published : Jan 30, 2023, 11:45 AM IST
ಪಠಾಣ್ ಸಕ್ಸಸ್: ಭಾರತ ಕೇವಲ ಖಾನ್‌ಗಳನ್ನು ಮಾತ್ರ ಇಷ್ಟಪಡೋದು; ಕಂಗನಾ ಅಚ್ಚರಿ ಹೇಳಿಕೆ

ಸಾರಾಂಶ

ಪಠಾಣ್ ಸಕ್ಸಸ್ ಬೆನ್ನಲ್ಲೇ ಕಂಗನಾ ಹೇಳಿರುವ ಮಾತು ಅಚ್ಚರಿ ಮೂಡಿಸಿದೆ. ಭಾರತ ಕೇವಲ ಖಾನ್‌ಗಳನ್ನು ಮಾತ್ರ ಇಷ್ಟ ಪಡುವುದು ಎಂದು ಕಂಗನಾ ಹೇಳಿದ್ದಾರೆ. 

ಬಾಲಿವುಡ್ ನಟಿ ಕಂಗನಾ ರಣಾವತ್ ಸದಾ ಸುದ್ದಿಯಲ್ಲಿರುತ್ತಾರೆ. ಒಂದಲ್ಲೊಂದು ಹೇಳಿಕೆಗಳನ್ನು ನೀಡುತ್ತಾ ಸದ್ದು ಮಾಡುವ ನಟಿ ಕಂಗನಾ ಇದೀಗ ಪಠಾಣ್ ಮತ್ತು ಶಾರುಖ್ ಬಗ್ಗೆ ಸಾಲು ಸಾಲು ಟ್ವೀಟ್‌ಗಳನ್ನು ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಕಂಗನಾ ಟ್ವಿಟ್ಟರ್‌ಗೆ ವಾಪಾಸ್ ಆಗಿದ್ದಾರೆ. ಟ್ವಿಟ್ಟರ್ ಲೋಕಕ್ಕೆ ರೀ ಎಂಟ್ರಿ ಪಡೆಯುತ್ತಿದ್ದಂತೆ ಸರಣಿ ಟ್ವೀಟ್ ಗಳನ್ನು ಮಾಡುತ್ತಿದ್ದಾರೆ. ಶಾರುಖ್ ಪಠಾಣ್ ವಿರುದ್ಧ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಪಠಾಣ್ ಸಕ್ಸಸ್ ಬೆನ್ನಲ್ಲೇ ಕಂಗನಾ ಹೇಳಿರುವ ಮಾತು ಅಚ್ಚರಿ ಮೂಡಿಸಿದೆ. ಭಾರತ ಕೇವಲ ಖಾನ್‌ಗಳನ್ನು ಮಾತ್ರ ಇಷ್ಟ ಪಡುವುದು ಎಂದು ಹೇಳಿದ್ದಾರೆ. ಈ ಮಾತು ಚರ್ಚೆಗೆ ಕಾರಣವಾಗಿದೆ. 

ಶಾರುಖ್ ಮತ್ತು ದೀಪಿಕಾಗೆ ಅಭಿನಂದನೆ ಸಲ್ಲಿಸಿ ನಿರ್ಮಾಪಕಿ ಪ್ರಿಯಾ ಗುಪ್ತಾ ಟ್ವೀಟ್ ಮಾಡಿದ್ದರು. 'ಪಠಾಣ್ ಸಕ್ಸಸ್‌ಗೆ ಶಾರುಖ್ ಮತ್ತು ದೀಪಿಕಾಗೆ ಅಭಿಮಾನಿಗಳು. ಹಿಂದೂ ಮತ್ತು ಮುಸ್ಲಿಂ ಇಬ್ಬರೂ ಶಾರುಖ್ ಅವರನ್ನು ಸಮಾನವಾಗಿ ಪ್ರೀತಿಸುತ್ತಾರೆ. ಬೈಕಾಟ್ ವಿವಾದ ಸಿನಿಮಾಗಳಿಗೆ ತೊಂದರೆ ಆಗಲ್ಲ ಆದರೆ ಸಹಾಯವಾಗುತ್ತಿದೆ. ಸಂಗೀತ ವರ್ಕ್ ಆಗಿದೆ. ಭಾರತ ಜಾತ್ಯತೀತವಾಗಿದೆ' ಎಂದು ಹೇಳಿದ್ದರು. 

ಪ್ರಿಯಾ ಗುಪ್ತಾ ಮಾತಿಗೆ ತಿರುಗೇಟು ನೀಡಿರುವ ಕಂಗನಾ, ಉತ್ತಮವಾದ ವಿಶ್ಲೇಷಣೆ ಎಂದು ವ್ಯಂಗ್ಯವಾಡಿದ್ದಾರೆ. ಉತ್ತಮವಾದ ವಿಶ್ಲೇಷಣೆಯಾಗಿದೆ. ಈ ದೇಶ ಎಲ್ಲಾ ಖಾನ್‌ಗಳನ್ನು ಮಾತ್ರ ಪ್ರೀತಿಸುತ್ತದೆ. ಮತ್ತು ಮುಸ್ಲಿಂ ನಟಿಯರ ಮೇಲೆ ಮಾತ್ರ ಗೀಳನ್ನು ಹೊಂದಿದೆ. ಭಾರತವನ್ನು ದ್ವೇಷ ಮತ್ತು ಫ್ಯಾಸಿಸಂ ಎಂದು ಆರೋಪಿಸುವುದು ತುಂಬಾ ಅನ್ಯಾಯವಾಗಿದೆ. ಇಡೀ ಪ್ರಪಂಚದಲ್ಲಿ ಭಾರತದಂತಹ ದೇಶವಿಲ್ಲ' ಎಂದು ಹೇಳಿದ್ದಾರೆ. 

Pathaan: ಶಾರುಖ್‌ ಸಿನಿಮಾ ಸಕ್ಸಸ್​ ಹಿಂದೆ ಪಾಕಿಸ್ತಾನ​ದ ISI ನಂಟು: ಕಂಗನಾ ರಣಾವತ್‌

ಕಂಗನಾ, ಪಠಾಣ್ ಬಗ್ಗೆ ಸಾಲು ಸಾಲು ಟ್ವೀಟ್‌ಗಳನ್ನು ಮಾಡುತ್ತಿರುವುದನ್ನು ನೋಡಿ ತನ್ನ ಸಿನಿಮಾ ಸೋಲಿನಿಂದ ಬೇಸತ್ತು ಕಂಗನಾ ಹೀಗೆಲ್ಲ ಹೇಳುತ್ತಿದ್ದಾರೆ ಎಂದು ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ. ಕಂಗನಾ ಕೊನೆಯದಾಗಿ ದಾಕಢ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿತ್ತು. ದೊಡ್ಡ ನಷ್ಟ ಅನುಭವಿಸಿತ್ತು. ಹಾಗಾಗಿ ಕಂಗನಾಗೆ ಪಠಾಣ್ ಸಕ್ಸಸ್ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ. ಯಾರು ಏನೇ ಹೇಳಿದರು. ಕಂಗನಾ ಹೇಳಿಕೆಗಳನ್ನು ನೀಡುವುದನ್ನು  ಮಾತ್ರ ನಿಲ್ಲಿಸುವುದಿಲ್ಲ. ಆದರೆ ಕಂಗನಾ ಮಾತಿಗೆ ಬಾಲಿವುಡ್ ಮಂದಿ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ.

ಪಠಾಣ್ ಬಗ್ಗೆ 

ಶಾರುಖ್ ಮತ್ತು ದೀಪಿಕಾ ನಟನೆಯ ಪಠಾಣ್ ಸಿನಿಮಾ ಕೋಟಿ ಕೋಟಿ ಕಲೆಕ್ಷನ್ ಮಾಡಿದೆ. ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸುತ್ತಿರುವ ಪಠಾಣ್ ನೋಡಿ ಅನೇಕರು ಮೆಚ್ಚಿಕೊಂಡಿದ್ದಾರೆ. ಹಿಂದಿ ಬಾಕ್ಸ್ ಆಫೀಸ್ ನಲ್ಲಿ ಪಠಾಣ್ ದಾಖಲೆ ಬರೆದಿದೆ. ಶಾರುಖ್ ಖಾನ್ ಅನೇಕ ವರ್ಷಗಳ ಬಳಿಕ ತೆರೆಮೇಲೆ ಅಬ್ಬರಿಸಿದ್ದು ಅಭಿಮಾನಿಗಳು ಕಿಂಗ್ ಖಾನ್ ನೋಡಿ ಫುಲ್ ಖುಷ್ ಆಗಿದ್ದಾರೆ. ಸಿದ್ಧಾರ್ಥ್ ಆನಂದ್ ಸಾರಥ್ಯದಲ್ಲಿ ಈ ಸಿನಿಮಾ ಮೂಡಿಬಂದಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?