2016ರ ‘ಪನಾಮಾ ಪೇಪರ್ಸ್’ ಕೇಸ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್(Aishwarya Rai Bachchan) ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ದೆಹಲಿಯಲ್ಲಿರುವ(Delhi) ತನ್ನ ಪ್ರಧಾನ ಕಚೇರಿಯಲ್ಲಿ ಪ್ರಶ್ನಿಸಿ ವಿಚಾರಣೆ ಮಾಡಿದೆ. ಅವರು ಆಫ್ ಶೋರ್ ಘಟಕ/ಟ್ರಸ್ಟ್‌ನಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಹಣ ವರ್ಗಾವಣೆ ಆರೋಪಗಳನ್ನು ಎದುರಿಸುತ್ತಿದ್ದಾರೆ. ಮೂಲಗಳ ಪ್ರಕಾರ ಐಶ್ವರ್ಯಾ ರೈ ಅವರು ತೆರಿಗೆ ವಂಚಿಸಿದ ಆದಾಯದ ಅಕ್ರಮ ಹಣ ವರ್ಗಾವಣೆ ಮಾಡಿ ವಿಚಾರಣೆ ಎದುರಿಸುತ್ತಿರುವ ಘಟಕ/ಟ್ರಸ್ಟ್‌ನ ನಿರ್ದೇಶಕರಲ್ಲಿ ಒಬ್ಬರು. ಘಟಕದೊಂದಿಗೆ ತೊಡಗಿಸಿಕೊಂಡಿದ್ದಕ್ಕಾಗಿ ಆಕೆಯ ತಾಯಿ ಮತ್ತು ಇತರ ಕುಟುಂಬ ಸದಸ್ಯರನ್ನು ಸಹ ಅದೇ ಪ್ರಕರಣದಲ್ಲಿ ಇಡಿ ಪ್ರಶ್ನಿಸುವ ಸಾಧ್ಯತೆಯಿದೆ.
ನಟಿಯ ಪತಿ ಅಭಿಷೇಕ್ ಬಚ್ಚನ್ ಮತ್ತು ಮಾವ ಅಮಿತಾಭ್ ಬಚ್ಚನ್ ಈಗಾಗಲೇ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಮತ್ತು ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಇಡಿ ತನಿಖೆ ನಡೆಸುತ್ತಿರುವ ಪ್ರತ್ಯೇಕ ಪ್ರಕರಣಗಳಲ್ಲಿ ತನಿಖೆಯನ್ನು ಎದುರಿಸುತ್ತಿದ್ದಾರೆ.
ಐಶ್ವರ್ಯಾ ರೈ ಸೇರಿದಂತೆ ಬಚ್ಚನ್‌ಗಳು 2004-05 ರ ಹಿಂದೆಯೇ ತೆರಿಗೆಇಲ್ಲದ ನೋಂದಾಯಿಸಲ್ಪಟ್ಟ ಪ್ರತ್ಯೇಕ ಘಟಕಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಪ್ರಶ್ನಿಸಲಾಗಿದೆ. 2016 ರಲ್ಲಿ ಪನಾಮ ಪೇಪರ್ಸ್ ಮತ್ತು ಪ್ಯಾರಡೈಸ್ ಪೇಪರ್ಸ್ ಸೋರಿಕೆಯಾದಾಗಿನಿಂದ ಸಾಮಾನ್ಯವಾಗಿ ತೆರಿಗೆ ವಂಚನೆ ಮತ್ತು ಲೆಕ್ಕಕ್ಕೆ ಸಿಗದ ಆಸ್ತಿಗಳ ಹಿಡುವಳಿಗಾಗಿ ರಚಿಸಲಾದ ಈ ಹಲವು ಘಟಕಗಳನ್ನು ಮುಚ್ಚಲಾಗಿದೆ.
ಸರ್ವರ್ ಆದ ಐಶ್ವರ್ಯಾ ರೈ, 30 ಜನಕ್ಕೆ ಊಟ ಬಡಿಸಿದ ಬಿಗ್‌ಬಿ ಸೊಸೆ
undefined
ಇಲ್ಲಿಯವರೆಗೆ ಎರಡು ಪೇಪರ್-ಸೋರಿಕೆ ಪ್ರಕರಣಗಳಲ್ಲಿ ಕನಿಷ್ಠ 970 ಘಟಕಗಳು/ವ್ಯಕ್ತಿಗಳಿಂದ 20,000 ಕೋಟಿ ರೂ.ಗೂ ಹೆಚ್ಚು ಲೆಕ್ಕವಿಲ್ಲದ ಆದಾಯವನ್ನು ತನಿಖೆ ಬಹಿರಂಗಪಡಿಸಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಈ ಪೈಕಿ ಹಲವು ಪ್ರಕರಣಗಳನ್ನು ಕಪ್ಪುಹಣ ಕಾಯ್ದೆ ಮತ್ತು ಪಿಎಂಎಲ್‌ಎ ಅಡಿಯಲ್ಲಿ ದಾಖಲಿಸಲಾಗಿದೆ. ಕೆಲವು ಪ್ರಕರಣಗಳಲ್ಲಿ ಕೆಲವು ಘಟಕಗಳು/ವ್ಯಕ್ತಿಗಳಿಂದ 154 ಕೋಟಿ ರೂಪಾಯಿಗಳ ತೆರಿಗೆಯನ್ನು ಸಂಗ್ರಹಿಸಲಾಗಿದೆ.
Delhi | Aishwarya Rai Bachchan leaves from Enforcement Directorate office. She was summoned by ED in connection with the Panama Papers case. pic.twitter.com/zqxJlR7iPT
— ANI (@ANI)ಸಚಿವಾಲಯದ ಪ್ರಕಾರ, ಪನಾಮ ಪೇಪರ್ಸ್ ಮತ್ತು ಪ್ಯಾರಡೈಸ್ ಪೇಪರ್ಸ್ ಸೋರಿಕೆಯ 52 ಪ್ರಕರಣಗಳಲ್ಲಿ, ಕಪ್ಪುಹಣ ಬಹಿರಂಗಪಡಿಸದ ವಿದೇಶಿ ಆದಾಯ ಮತ್ತು ಆಸ್ತಿ ಕಾಯ್ದೆಯಡಿಯಲ್ಲಿ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಲಾಗಿದೆ. ಇದಲ್ಲದೆ, 130 ಪ್ರಕರಣಗಳಲ್ಲಿ ಕಪ್ಪುಹಣ ಕಾಯ್ದೆಯಡಿ ವಿಚಾರಣೆಯನ್ನು ಪ್ರಾರಂಭಿಸಲಾಗಿದೆ.
ಬಚ್ಚನ್ ಸೊಸೆ ನಟಿ ಐಶ್ವರ್ಯಾ ರೈಗೆ ಸಂಕಷ್ಟ, ED ಸಮನ್ಸ್!
ಇದಲ್ಲದೆ, ಇತ್ತೀಚಿನ ಪಂಡೋರಾ ಪೇಪರ್ಸ್ ಸೋರಿಕೆಯಲ್ಲಿ, ಪ್ರಕರಣಗಳ ತನಿಖೆಗಾಗಿ ಸರ್ಕಾರವು ಬಹು-ಏಜೆನ್ಸಿ ಗುಂಪನ್ನು (MAG) ರಚಿಸಿದೆ. ಇದು ED, RBI, ಆದಾಯ ತೆರಿಗೆ ಇಲಾಖೆ ಮತ್ತು ಫೈನಾನ್ಶಿಯಲ್ ಇಂಟೆಲಿಜೆನ್ಸ್ ಯುನಿಟ್ ಇಂಡಿಯಾದ ಸದಸ್ಯರನ್ನು ಹೊಂದಿದೆ.
ಏನಿದು ಪನಾಮಾ ಪೇಪರ್ಸ್ ಸೋರಿಕೆ ಪ್ರಕರಣ?
2016ರಲ್ಲಿ ಯುಕೆಯಲ್ಲಿ ಪನಾಮಾ ಕಾನೂನು ಸಂಸ್ಥೆಯೊಂದರ 11.5 ಕೋಟಿ ತೆರಿಗೆ ದಾಖಲೆಗಳು ಸೋರಿಕೆಯಾಗಿದ್ದವು. ಇದರಲ್ಲಿ ಪ್ರಪಂಚದಾದ್ಯಂತದ ದೊಡ್ಡ ನಾಯಕರು, ಉದ್ಯಮಿಗಳು ಮತ್ತು ದೊಡ್ಡ ವ್ಯಕ್ತಿಗಳ ಹೆಸರುಗಳನ್ನು ಬಹಿರಂಗಪಡಿಸಲಾಯಿತು. ಈ ಸಂದರ್ಭದಲ್ಲಿ ಭಾರತದ ಸುಮಾರು 500 ಜನರ ಹೆಸರುಗಳು ಈ ಪಟ್ಟಿಯಲ್ಲಿ ಇರುವುದು ಬಹಿರಂಗವಾಗಿದೆ. ಇದರಲ್ಲಿ ಬಚ್ಚನ್ ಕುಟುಂಬದ ಹೆಸರೂ ಸೇರಿತ್ತು.
ವರದಿಯೊಂದರ ಪ್ರಕಾರ, ಪನಾಮಾ ಲೀಕ್ಸ್ ಪಟ್ಟಿಯಲ್ಲಿ ಹೆಸರಿರುವ ವ್ಯಕ್ತಿಗಳು ತೆರಿಗೆ ವಂಚನೆ ಆರೋಪ ಎದುರಿಸುತ್ತಿದ್ದಾರೆ. ಇದಕ್ಕಾಗಿ ತೆರಿಗೆ ಅಧಿಕಾರಿಗಳು ತನಿಖೆಯಲ್ಲಿ ತೊಡಗಿದ್ದಾರೆ. ಈ ವೇಳೆ ಐಶ್ವರ್ಯಾ ರೈ ಅವರನ್ನು ಮೊದಲು ಕಂಪನಿಯೊಂದರ ನಿರ್ದೇಶಕಿಯನ್ನಾಗಿ ಮಾಡಲಾಗಿತ್ತು. ನಂತರ ಅವರನ್ನು ಕಂಪನಿಯ ಷೇರುದಾರ ಎಂದು ಘೋಷಿಸಲಾಯಿತು.
ಗಮನಾರ್ಹವೆಂದರೆ, ಈ ವಿಷಯ ಬಹಿರಂಗಗೊಂಡ ನಂತರ, ಇಡೀ ದೇಶದಲ್ಲಿ ಸಂಚಲನ ಉಂಟಾಗಿದೆ. ಪ್ರಭಾವಿಗಳ ಹೆಸರು ಹೊರಬಿದ್ದ ಮೇಲೆ ಜನ ನಾನಾ ರೀತಿಯ ಊಹಾಪೋಹಗಳನ್ನು ಮಾಡುತ್ತಿದ್ದಾರೆ.