
ಬಾಲಿವುಡ್ ನಟಿ ರೂಪದರ್ಶಿ ಊರ್ವಶಿ ರೌಟೇಲ ನಿಸ್ಸಂಶಯವಾಗಿ ಸಿನಿ ಇಂಡಸ್ಟ್ರಿಯ ಅತ್ಯಂತ ಸುಂದರಿ ಹಾಗೂ ಸ್ಟೈಲಿಷ್ ತಾರೆ. ರ್ಯಾಂಪ್ ಇರಲಿ ಏರ್ಪೋರ್ಟ್ ಇರಲಿ ನಟಿಯ ಫ್ಯಾಷನ್ ಬಗ್ಗೆ ಎರಡು ಮಾತಿಲ್ಲ. ಅದ್ಭುತ ಔಟ್‌ಫಿಟ್ ಧರಿಸಿ ಮಿಂಚುವ ನಟಿ ಇತ್ತೀಚೆಗೆ ಮಿಸ್ ಯುನಿವರ್ಸ್ 2021ಕ್ಕೆ ತೀರ್ಪುಗಾರರಾಗಿ ಭಾಗವಹಿಸಿದಾಗ ಅತ್ಯಂತ ಸುಂದರ ಉಡುಗೆ ಧರಿಸಿದ್ದರು. ನಟಿ ಚಂದದ ಡ್ರೆಸ್ ಎಲ್ಲರ ಗಮನಸೆಳೆದಿತ್ತು. ಮಿಸ್ ಯುನಿವರ್ಸ್ 2021ರಲ್ಲಿ(Miss Universe 2021) ಭಾಗವಹಿಸಿದ ಊರ್ವಶಿ ರೌಟೇಲಾ ಜೂರಿ ಮೆಂಬರ್ ಆಗಿ ಭಾಗವಹಿಸಿದ್ದರು. ಬ್ಲಾಕ್ ನೆಟ್ ಡ್ರೆಸ್‌ನಲ್ಲಿ ಮಿಂಚಿದ್ದ ನಟಿಯ ಫ್ಯಾಷನ್ ಉಡುಗೆಯ ಬೆಲೆ ಬರೋಬ್ಬರಿ 40 ಲಕ್ಷ. ಅಂದ ಹಾಗೆ ಈ ನೆಟ್ ಡ್ರೆಸ್‌ನಲ್ಲಿ ಅಷ್ಟು ದುಬಾರಿ ಏನಿದೆ ? ಯಾವುದಕ್ಕೆ ಖರ್ಚು ಎಂದು ನಿಮಗೆ ಅನಿಸಬಹುದು. ಏನಿದೆ ನೋಡೋಣ.
ಈ ಹಾಲ್ಟರ್ ನೆಕ್ ಬ್ಲ್ಯಾಕ್ ನೆಟ್ ಡ್ರೆಸ್ ಅದರ ಹಿಂಭಾಗದಲ್ಲಿ ಸುಂದರವಾದ ಗೋಲ್ಡನ್ ಥ್ರೆಡ್ ವರ್ಕ್ ಹೊಂದಿದೆ. ಇದು ಮಿನುಗುವ, ಡ್ರೀಮಿ ಪರಿಣಾಮವನ್ನು ಉಂಟುಮಾಡುತ್ತದೆ. ಊರ್ವಶಿಯ ಉಡುಪಿನ ಪ್ರಮುಖ ಲಕ್ಷಣವೆಂದರೆ ಅವಳ ಉಡುಗೆಗೆ ಜೋಡಿಸಲಾದ ಮ್ಯಾಚಿಂಗ್ ನೆಟ್ ಮುಸುಕು, ಅದರ ತುದಿಗಳನ್ನು ಅವಳ ಎರಡೂ ಮಣಿಕಟ್ಟುಗಳಿಗೆ ಕಟ್ಟಲಾಗಿದೆ. ಉಳಿದವುಗಳನ್ನು ತಲೆಯ ಮೇಲೆ ಚೆನ್ನಾಗಿ ಹೊದಿಸಲಾಗಿದೆ.
38 ಕೋಟಿಯ ಕಿರೀಟ ಮಾತ್ರವಲ್ಲ, ನ್ಯೂಯಾರ್ಕ್ ಲಕ್ಷುರಿ ಬಂಗಲೆ ಸೇರಿ ಇನ್ನು ಬಹಳಷ್ಟು
ಊರ್ವಶಿ ರೌಟೇಲಾ(Urvashi Rautela) ಉಡುಗೆ ವಿನ್ಯಾಸ ಅತ್ಯಂತ ವಿಶಿಷ್ಟವಾಗಿದೆ. ವಿಶೇಷವಾದ ಮೇಕಪ್ ನೊಂದಿಗೆ ಜೋಡಿಯಾಗಿ, ಉಡುಗೆ ಇನ್ನಷ್ಟು ಗ್ಲಾಮರಸ್ ಆಗಿ ಕಾಣುತ್ತದೆ. ಡ್ರೆಸ್ ಜೊತೆಗೆ ಸ್ಮೋಕಿ ಐಸ್ ಲುಕ್, ಗ್ಲೋಸಿ ಬೇಸ್ ಜೊತೆಗೆ ಗ್ಲಾಸಿ ಪಿಂಕ್ ಲಿಪ್ ಸ್ಟಿಕ್ ಗಾಗಿ ಹೋಗಿದ್ದಳು. ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಊರ್ವಶಿ ನಿಜವಾದ ಅದ್ಭುತ ಸುಂದರಿಯಾಗಿ ಕಾಣಿಸಿಕೊಂಡಿದ್ದಾರೆ.
ಊರ್ವಶಿ ಈ ಉಡುಗೆಯೊಂದಿಗೆ ವಜ್ರದ ಉಂಗುರಗಳು(Diamond Ring) ಮತ್ತು ಕಿವಿಯೋಲೆಗಳನ್ನು ಧರಿಸಿದ್ದರು. ಈ ಲುಕ್‌ನಲ್ಲಿರುವ ಅನೇಕ ಫೋಟೋಗಳನ್ನು ಮತ್ತು ಅದೇ ರಾತ್ರಿ ಸೆರೆಹಿಡಿಯಲಾದ ವೀಡಿಯೊಗಳನ್ನು ಸಹ ನಟಿ ಹಂಚಿಕೊಂಡಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಅದಕ್ಕೆ ಅವರು 'ನಾನು' ಎಂಬ ಪದ ಶಕ್ತಿಯುತವಾಗಿವೆ. ನಾವು ಯಾರೆಂದು ವಿಶ್ವಕ್ಕೆ ಘೋಷಿಸುತ್ತಿದ್ದೇವೆ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.
Miss Universe 2021 ಜಡ್ಜ್ ಆಗಿ ಭಾರತದ ಸುಂದರಿ..!
ವೀಡಿಯೊದಲ್ಲಿ(Video) ಊರ್ವಶಿ ನಿಜವಾಗಿಯೂ ಕಾಂತಿಯುತವಾಗಿ ಮತ್ತು ಆತ್ಮವಿಶ್ವಾಸದಿಂದ ಕಾಣುತ್ತಾರೆ. ಆಕೆಯ ದೇಹದ ಮೇಲೆ ಸಾವಿರ ನಕ್ಷತ್ರಗಳು ಮಿನುಗುತ್ತಿರುವಂತೆ ತೋರುವ ಉಡುಗೆಯೊಂದಿಗೆ ಡ್ರೀಮಿ ಲುಕ್ ಕೊಟ್ಟಿದ್ದಾರೆ ನಟಿ. ಈ ಲುಕ್‌ಗೆ ಜನರು ಫಿದಾ ಆಗಿದ್ದು ವೀಡಿಯೊ 1.4 ಲಕ್ಷಕ್ಕೂ ಹೆಚ್ಚು ಲೈಕ್ಸ್‌ಗಳನ್ನು ಪಡೆದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.