ಪುತ್ರನ ಬಳಿಕ ಶಾರುಖ್‌ಗೆ ಪತ್ನಿ ಚಿಂತೆ, 30 ಕೋಟಿ ವಂಚನೆ ಪ್ರಕರಣದಲ್ಲಿ ಗೌರಿಗೆ ಇಡಿ ನೋಟಿಸ್!

By Suvarna NewsFirst Published Dec 19, 2023, 5:39 PM IST
Highlights

ಪುತ್ರ ಅರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ತೀವ್ರ ತಲೆನೋವು ಎದುರಿಸಿದ ಬಾಲಿವುಡ್ ನಟ ಶಾರುಖ್ ಖಾನ್‌ಗೆ ಇದೀಗ ಪತ್ನಿ ಗೌರಿ ಖಾನ್ ಚಿಂತೆ ಶುರುವಾಗಿದೆ. 30 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಗೌರಿ ಖಾನ್‌ಗೆ ಇಡಿ ನೋಟಿಸ್ ನೀಡಿದೆ.

ಮುಂಬೈ(ಡಿ.19) ಬಾಲಿವುಡ್ ನಟ ಶಾರುಖ್ ಖಾನ್‌ಗೆ ಇದೀಗ ಹೊಸ ತಲೆನೋವು ಶುರುವಾಗಿದೆ. ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಿಂದ ಸುಧಾರಿಸಿಕೊಂಡು ಮತ್ತೆ ಬೆಳ್ಳಿ ಪರದೆ ಮೇಲೆ ಅಬ್ಬರಿಸುತ್ತಿರುವಾಗಲೇ ಇದೀಗ ಪತ್ನಿ ಗೌರಿ ಖಾನ್ ಪ್ರಕರಣ ತಲೆನೋವಾಗಿ ಪರಿಣಮಿಸಿದೆ. 30 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಗೌರಿ ಖಾನ್‌ಗೆ ಇಡಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ರಿಯಲ್ ಎಸ್ಟೇಟ್ ಕಂಪನಿಯ ರಾಯಭಾರಿಯಾಗಿರುವ ಗೌರಿ ಖಾನ್ ವಿರುದ್ಧವೂ ವಂಚನೆ ಪ್ರಕರಣ ದಾಖಲಾಗಿದೆ.ಈ ಸಂಬಂಧ ಇಡಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದೆ.

ಲಖನೌ ಮೂಲದ ರಿಯಲ್ ಎಸ್ಟೇಟ್ ಕಂಪನಿ ತುಲ್ಸನಿ ಗ್ರೂಪ್‌ಗೆ ಗೌರಿ ಖಾನ್ ರಾಯಭಾರಿಯಾಗಿದ್ದಾರೆ. ತುಲ್ಸೈನಿ ಗ್ರೂಪ್‌ನಲ್ಲಿ ಹೂಡಿಕೆ ಮಾಡಿದವರು ಹಾಗೂ ಬ್ಯಾಂಕ್‌ಗೆ ಒಟ್ಟು 30 ಕೋಟಿ ರೂಪಾಯಿ ವಂಚಿಸಿದೆ ಅನ್ನೋ ಆರೋಪ ಕೇಳಿಬಂದಿದೆ. ತುಲ್ಸೈನಿ ಗ್ರೂಪ್ ಎಂಡಿ ಸೇರಿದಂತೆ ಹಲವರ ವಿರುದ್ದ ಪ್ರಕರಣ ದಾಖಲಾಗಿದೆ. ಇದರ ಜೊತೆಗೆ ರಾಯಭಾರಿಯಾಗಿರುವ ಗೌರಿ ಖಾನ್‌ಗೂ ಸಂಕಷ್ಟ ಎದುರಾಗಿದೆ.

Latest Videos

ಬರೋಬ್ಬರಿ 700 ಕೋಟಿ ಗಳಿಸಿದ ಜವಾನ್‌; ಅತಿ ಹೆಚ್ಚು ಪಡೆದಿದ್ದು ಶಾರೂಕ್‌, ನಯನತಾರಾ, ವಿಜಯ್ ಸೇತುಪತಿ ಅಲ್ಲ!

ಇಡಿ ನೋಟಿಸ್ ಕುರಿತು ಗೌರಿ ಖಾನ್ ಅಥವಾ ಶಾರುಖ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೀಗ ಇಡಿ ಅಧಿಕಾರಿಗಳು ಗೌರಿ ಖಾನ್ ಹಣಕಾಸು ವ್ಯವಹಾರ ಕುರಿತು ತನಿಖೆ ನಡೆಸಲು ಮುಂದಾಗಿದೆ. ತುಲ್ಸೈನಿ ಗ್ರೂಪ್‌ನಿಂದ ರಾಯಭಾರಿ ಆಗಲು ಪಡೆದಿರುವ ಸಂಭಾವನೆ, ಪಾಲುದಾರಿಕೆ ಕುರಿತು ಇಡಿ ತನಿಖೆ ನಡೆಸಲಿದೆ. 

2015ರಲ್ಲಿ ತುಲ್ಸೈನಿ ಗ್ರೂಪ್ ಲಖನೌದಲ್ಲಿನ ಪ್ರಾಜೆಕ್ಟ್‌ನಲ್ಲಿ ಮನೆ ಖರೀದಿಸಲು ಮುಂಬೈ ಮೂಲಕ ಜಸ್ವಂತ್ ಶಾ ಒಪ್ಪಂದ ಮಾಡಿದ್ದರು. ನಿರ್ಮಾಣದ ಆರಂಭಿಕ ಹಂತದಲ್ಲೇ  85 ಲಕ್ಷ ರೂಪಾಯಿ ಪಾವತಿಸಿದ್ದರು. 2 ವರ್ಷಗಳಲ್ಲಿ ನಿರ್ಮಾಣ ಪೂರ್ಣಗೊಳಿಸಿ ಫ್ಲ್ಯಾಟ್ ನೀಡುವ ಭರವಸೆಯನ್ನು ತುಲ್ಸೈನಿ ಗ್ರೂಪ್ ನೀಡಿತ್ತು. ಆದರೆ ತುಲ್ಸೈನಿ ಗ್ರೂಪ್ ಅಪಾರ್ಟ್‌ಮೆಂಟ್ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲೇ ಇಲ್ಲ. ಇದರ ನಡುವೆ ನಷ್ಟಕ್ಕೆ ಬಿದ್ದ ರಿಯಲ್ ಎಸ್ಟೇಟ್ ಗ್ರೂಪ್ ಹೂಡಿಕೆ ಮಾಡಿದವರಿಗೆ ಅತ್ತ ಮನೆಯೂ ನೀಡಲಿಲ್ಲ, ಇತ್ತ ಹಣವೂ ವಾಪಸ್ ಕೊಡಲಿಲ್ಲ.

22 ವರ್ಷದ Shah Rukh ಪುತ್ರಿ ಬೋಲ್ಡ್‌ನೆಸ್‌ನಲ್ಲಿ ಯಾರಿಗೂ ಕಡಿಮೆ ಇಲ್ಲ!

ಹಲವು ಬಾರಿ ಮಾತುಕತೆ ನಡೆಸಿ ಎಚ್ಚರಿಕೆ ನೀಡಿದರೂ ಪ್ರಯೋಜನವಾಗಲಿಲ್ಲ. ಹೀಗಾಗಿ ಜಸ್ವಂತ್ ಶಾ ತುಲ್ಸೈನಿ ಗ್ರೂಪ್ ನಿರ್ದೇಶಕರಾದ ಅನಿಲ್ ತುಲ್ಸೈನಿ, ಮಹೇಶ್ ತುಲ್ಸೈನಿ ಹಾಗೂ ಬ್ರಾಂಡ್ ಅಂಬಾಸಿಡರ್ ಗೌರಿ ಖಾನ್ ವಿರುದ್ಧ ದೂರು ದಾಖಲಿಸಿದ್ದರು. 2023ರ ಮಾರ್ಚ್ ತಿಂಗಳಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣದ ಕುರಿತು ಈಗಾಗಲಿ ತುಲ್ಸೈನಿ ಗ್ರೂಪ್ ನಿರ್ದೇಶಕರ ವಿಚಾರಣೆ ನಡೆಸಿದ ಇಡಿ, ಇದೀಗ ಗೌರಿ ಖಾನ್ ವಿಚಾರಣೆಗೆ ಮುಂದಾಗಿದೆ.
 

click me!