Thug Life: ಮಣಿರತ್ನಂ ʼಥಗ್‌ ಲೈಫ್‌ʼ ಸಿನಿಮಾದಲ್ಲಿದೆಯಾ ಶುಗರ್‌ ಡ್ಯಾಡಿ ಕತೆ?

Published : May 27, 2025, 08:33 PM ISTUpdated : May 28, 2025, 10:14 AM IST
Thug Life

ಸಾರಾಂಶ

ಲೆಜೆಂಡರಿ ಫಿಲಂ ಮೇಕರ್ ಮಣಿರತ್ನಂ 'ಥಗ್ ಲೈಫ್' ಚಿತ್ರದ ಮೂಲಕ ಮತ್ತೆ ಬಂದಿದ್ದಾರೆ. ಕಮಲ್ ಹಾಸನ್, ತ್ರಿಶಾ, ಅಭಿರಾಮಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್‌ನಲ್ಲಿ 'ಶುಗರ್ ಡ್ಯಾಡಿ' ಸಂಬಂಧದ ಸುಳಿವು ಸಿಗ್ತಿದೆ. ಮಣಿ ಇಂಥ ವಿಷಯ ತರೋದರಲ್ಲಿ ಪರಿಣಿತ. 

ಲೆಜೆಂಡರಿ ಫಿಲಂ ಮೇಕರ್‌ ಮಣಿರತ್ನಂ ಮತ್ತೊಂದು ಫಿಲಂ ಜೊತೆಗೆ ಬಂದಿದ್ದಾರೆ. ಅದು ಥಗ್‌ ಲೈಫ್.‌ ಕಮಲ ಹಾಸನ್‌, ತ್ರಿಶಾ, ಅಭಿರಾಮಿ ಲೀಡ್‌ ರೋಲ್‌ಗಳಲ್ಲಿದ್ದಾರೆ. ಕಮಲ್ ಹಾಸನ್ ಅಭಿನಯದ 'ಥಗ್ ಲೈಫ್' ಸಿನಿಮಾದ ಟ್ರೇಲರ್ ನೋಡಿದ ಅಭಿಮಾನಿಗಳು ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಒಂದು ಕಾರಣ ಈ ಚಿತ್ರವನ್ನು ನಿರ್ದೇಶನ ಮಾಡಿರುವ ಮಣಿರತ್ನಂ. ಇನ್ನೊಂದು ಹೀರೋ ಕಮಲ್.‌ ಮತ್ತೊಂದು ಕಾರಣ, 'ನಾಯಗನ್' ಬಳಿಕ ನಟ ಕಮಲ್ ಹಾಸನ್ ಮತ್ತು ಮಣಿರತ್ನಂ ಮತ್ತೊಮ್ಮೆ 'ಥಗ್ ಲೈಫ್' ಸಿನಿಮಾಗಾಗಿ ಒಂದಾಗಿರುವುದು.

ಈದರ ಜೊತೆಗೆ ಮಣಿರತ್ನ ಎಂಥ ವಿಷನರಿ ಎಂಬುದು ಕೂಡ ಮುನ್ನಲೆಗೆ ಬಂದಿದೆ. ಮಣಿರತ್ನಂ ತಮ್ಮ ಕಾಲಕ್ಕಿಂತ ಯಾವಾಗಲೂ ಸ್ವಲ್ಪ ಮುಂದೆಯೇ ಇರುತ್ತಾರೆ, ನಾವು ನೋಡುತ್ತಿರುವ ಸಮಾಜದಲ್ಲಿ ಇರುವುದನ್ನು ಚಿತ್ರಿಸುವುದರ ಜೊತೆಗೆ, ಮುಂದೇನು ಆಗಲಿದೆ ಎಂಬುದನ್ನೂ ಮೊದಲೇ ಕಾಣ್ಕೆಯಂತೆ ಚಿತ್ರಿಸುತ್ತಾರೆ ಎಂದು ಕೂಡ ಅವರ ಅಭಿಮಾನಿಗಳು ಹೇಳುತ್ತಾರೆ. ಅದಕ್ಕೆ ಉದಾಹರಣೆ ಥಗ್‌ ಲೈಫ್‌ ಚಿತ್ರದ ಕಥೆ. ಇದರಲ್ಲಿ ಕಮಲ್ ಹಾಸನ್ ರಂಗರಾಯ ಶಕ್ತಿವೇಲ್ ನಾಯ್ಕರ್ ಎಂಬ ಪಾತ್ರ ಮಾಡಿದ್ದಾರೆ. ರಕ್ತ ಕಣ್ಣೀರು, ಲಾಲಿ ಹಾಡು ಖ್ಯಾತಿಯ ನಟಿ ಅಭಿರಾಮಿ ಅವರು ಕಮಲ್‌ಗೆ ಪತ್ನಿಯಾಗಿ ಕಾಣಿಸಿಕೊಂಡಿದ್ದಾರೆ. ಒಂದು ದೃಶ್ಯದಲ್ಲಿ ಕಮಲ್ ಜೊತೆ ಅಭಿರಾಮಿ ಲಿಪ್‌ಲಾಕ್ ಮಾಡಿರುವುದು ಟ್ರೇಲರ್‌ನಲ್ಲಿ ಕಂಡಿದೆ. ಹಾಗೆಯೇ, ತ್ರಿಷಾ ಈ ಸಿನಿಮಾದಲ್ಲಿ ಕಮಲ್‌ಗೆ ಪ್ರೇಯಸಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಜೊತೆಗೂ ಕಮಲ್ ಹಾಸನ್ ಅವರು ರೊಮ್ಯಾನ್ಸ್ ಮಾಡಿರುವುದು 'ಥಗ್ ಲೈಫ್‌' ಸಿನಿಮಾ ಟ್ರೇಲರ್‌ನಲ್ಲಿ ಕಂಡಿದೆ.

70 ವರ್ಷದ ಕಮಲ್ ಹಾಸನ್ ಅವರು ತಮಗಿಂತಲೂ ಸುಮಾರು 30 ವರ್ಷ ಚಿಕ್ಕ ನಟಿಯರ ಜೊತೆ ಹೀಗೆ ಕಾಣಿಸಿಕೊಳ್ಳುವುದು ಬೇಕಿತ್ತಾ ಎಂದು ಕೆಲವರು ಪ್ರಶ್ನೆ ಮಾಡಿದ್ದುಂಟು. ಕಾರಣ ನಟಿ ಅಭಿರಾಮಿಗೆ ಈಗ 41 ವರ್ಷ ವಯಸ್ಸು, ತ್ರಿಷಾಗೆ ಈಗ 42 ವರ್ಷ ವಯಸ್ಸು. ಹೀಗೆ ತಮಗಿಂತಲೂ ತುಂಬಾ ಚಿಕ್ಕ ವಯಸ್ಸಿನ ನಟಿಯರ ಜೊತೆ ಹೀಗೆ ಕಮಲ್ ಕಾಣಿಸಿಕೊಳ್ಳಬೇಕಿತ್ತಾ ಎಂದು ಕಾಮೆಂಟ್. ಆದರೆ ಇದು ಸಮಾಜದಲ್ಲಿ ನಡೆಯುತ್ತಿರುವುದೇ. ಇದೊಂದು ʼಶುಗರ್‌ ಡ್ಯಾಡಿʼ ಬೆಳವಣಿಗೆ. ಅಂದ್ರೆ ಹಣವಂತರಾದ ಪುರುಷರು ಎಷ್ಟು ವಯಸ್ಸಿನವರಾದರೂ ಸರಿ, ಅವರು ತಮ್ಮ ಪ್ರಭಾವ, ಅಧಿಕಾರದಿಂದಾಗಿ ಹರೆಯದ ಹುಡುಗಿಯರನ್ನು ಸಾಕಿಕೊಳ್ಳಬಲ್ಲರು. ಈಗ ಕೆಲವು ರಾಜಕಾರಣಿಗಳ ಉದಾಹರಣೆ ನೋಡಿದರೆ ಸಾಲದೆ? ತಮ್ಮ ಮಕ್ಕಳ, ಮೊಮ್ಮಕ್ಕಳ ಪ್ರಾಯದ ಹುಡುಗಿಯರನ್ನು ಇವರು ಖರ್ಚು ವೆಚ್ಚ ಎಲ್ಲ ನೋಡಿಕೊಂಡು ಸುಖ ಪಡೆಯುವ ರೂಢಿ ಹೊಸತೇನಲ್ಲ ತಾನೆ! ಇವರನ್ನು ಶುಗರ್‌ ಡ್ಯಾಡಿ ಅಂತಲೂ ಈ ಹುಡುಗಿಯರನ್ನು ಶುಗರ್‌ ಬೇಬಿ ಅಂತಲೂ ಹೇಳುತ್ತಾರೆ. ಲಾಭಕೋರ ಹುಡುಗಿಯರನ್ನು ಗೋಲ್ಡ್‌ ಡಿಗ್ಗರ್‌ ಅಂತ್ಲೂ ಹೇಳುವುದುಂಟು.

ಹಾಗೆ ಮಣಿರತ್ನ ಸಮಾಜದ ಇಂಥ ಹೊಸ ರೂಢಿಗಳನ್ನು ಮೊದಲಿನಿಂದಲೂ ಚಿತ್ರಿಸುತ್ತ ಬಂದಿದ್ದಾರೆ ಎಂದು ಹೇಳುವವರಿದ್ದಾರೆ. ಉದಾಹರಣೆಗೆ, 2015ರಲ್ಲಿ ಅವರ ಓ ಕಾದಲ್‌ ಕಣ್ಮಣಿ ಬಂತು. ಅದರಲ್ಲಿ ಇಬ್ಬರು ಯುವ ಜೋಡಿ, ಮದುವೆಯ ಹಂಗಿಲ್ಲದೆ, ಲಿವ್‌ ಇನ್ ರಿಲೇಶನ್‌ಶಿಪ್‌ನಲ್ಲಿ‌ ಇರುತ್ತಾರೆ. ಮುಂದೆ ಘಟನೆಗಳಯ ಬೆಳೆದಂತೆ, ಮದುವೆಯಾಗುತ್ತಾರೆ, ಆ ಮಾತು ಬೇರೆ. ಹಾಗೇ 2000ನೇ ಇಸವಿಯಲ್ಲಿ ಬಂದ ಮಣಿ ನಿರ್ದೇಶನದ ಅಲೈಪಾಯುದೆ ಸಿನಿಮಾದಲ್ಲಿ, ಪೋಷಕರು ಒಪ್ಪದ್ದರಿಂದ ಓಡಿ ಹೋಗಿ ಮದುವೆಯಾಗುವ ಯುವಜೋಡಿ ಇದೆ. 1986ರಲ್ಲಿಯೇ ಅವರು ಚಿತ್ರಿಸಿದ ಮೌನ ರಾಗಂ ಸಿನಿಮಾದಲ್ಲಿ ಡೈವೋರ್ಸ್‌ ಸಹ ವಿಷಯ ಎಂಬಂತೆಯೇ ಬಂದಿದೆ. ಇಂದು ಕೂಡ ಕೆಲವರು ಡೈವೋರ್ಸನ್ನು ಸಹಜ ಎಂದು ಒಪ್ಪಿಕೊಳ್ಳಲು ತಯಾರಿಲ್ಲವಲ್ಲ.

30 ಲಕ್ಷದ ಕನ್ನಡ ಸಿನಿಮಾ ಗಳಿಸಿದ್ದು 5 ಕೋಟಿ: ಕ್ಷಣ ಕ್ಷಣಕ್ಕೂ ಭಯ ಬೀಳಿಸೋ ಹಾರರ್‌ ಕಥೆ!

ಹಾಗೇ ಅವರ ಇನ್ನೂ ಹಳೆಯ ಚಿತ್ರಗಳನ್ನೂ ಗಮನಿಸಬಹುದು. 1987ರಲ್ಲಿ ಅವರು ಮಾಡಿದ ನಾಯಕನ್‌ ಚಿತ್ರದಲ್ಲಿ ತಮಿಳಿನ ಯುವಕನೊಬ್ಬ ಮುಂಬಯಿಗೆ ಹೋಗಿ ದೊಡ್ಡ ಗ್ಯಾಂಗ್‌ಸ್ಟರ್‌ ಆಗುತ್ತಾನೆ. ಆಗ ಇನ್ನೂ ದಾವೂದ್‌ ಇಬ್ರಾಹಿಂ ಮೊದಲಾದವರ ಕಾಲ. 1992ರಲ್ಲಿ ಅವರು ಮಾಡಿದ ರೋಜಾ ಫಿಲಂನಲ್ಲಿ ಇಬ್ಬರು ಪ್ರೇಮಿಗಳು, ಕಾಶ್ಮೀರದ ಭಯೋತ್ಪಾದಕರು, ಭಯೋತ್ಪಾದನೆ ಇತ್ಯಾದಿಗಳೆಲ್ಲಾ ಬರುತ್ತವೆ. 2007ರಲ್ಲಿ ಹೊರತಂದ ಗುರು ಫಿಲಂ, ಧೀರುಭಾಯ್‌ ಅಂಬಾನಿ ಬದುಕನ್ನು ಆಧರಿಸಿದ್ದು ಎನ್ನಲಾಗುತ್ತದೆ. ಹೀಗೆ ಮಣಿಯ ಪ್ರತಿಯೊಂದು ಫಿಲಂನ ಹಿಂದೆಯೂ ಆಯಾ ಕಾಲಘಟ್ಟದ ಒಂದಲ್ಲ ಒಂದು ಪ್ರಮುಖ ವಿಷಯವನ್ನು ತರುವುದನ್ನು ರೂಢಿಯಾಗಿಸಿಕೊಂಡಿದ್ದಾರೆ ಎನ್ನಬಹುದು.

ಸನಾತನ ಧರ್ಮವನ್ನು ಸ್ವೀಕರಿಸಿದ ಜನಪ್ರಿಯ ಹಾಲಿವುಡ್ ಸೆಲೆಬ್ರಿಟಿಗಳಿವರು‌

ಇಷ್ಟಕ್ಕೂ ಥಗ್‌ ಲೈಫ್‌ನಲ್ಲಿ ನಿಜಕ್ಕೂ ಏನಿದೆ ಎಂಬುದು ಇನ್ನೂ ನಮ್ಮ ಅರಿವಿಗೆ ಬಂದಿಲ್ಲ. ಜೂನ್‌ 5ರಂದು ರಿಲೀಸ್‌ ಆಗಲಿರುವ ಈ ಫಿಲಂ ನೋಡಿದ ಮೇಲೆಯೇ ಅದರಲ್ಲಿ ಏನಿದೆ ಎಂದು ಹೇಳಬಹುದಷ್ಟೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?