
ಕ್ಯೂಬೆಕ್(ಮೇ.27) ಪಾಪ್ ಸಿಂಗ್ ಶಕೀರಾ ವಿಶ್ವದ ಹಲವು ವೇದಿಕೆಗಳಲ್ಲಿ ಮ್ಯೂಸಿಕ್ ಕಾನ್ಸರ್ಟ್ ನಡೆಸಿಕೊಡುತ್ತಾರೆ. ಕಿಕ್ಕಿರಿದು ಅಭಿಮಾನಿಗಳು ಸೇರುತ್ತಾರೆ. ಶಕೀರಾ ಸಂಗೀತ ರಸ ಸಂಜೆಗೆ ಟಿಕೆಟ್ ಸೋಲ್ಡ್ ಔಟ್ ಆಗುತ್ತವೆ. ಇದೀಗ ಕ್ಯೂಬೆಕ್‌ನ ಮಾಂಟ್ರಿಯಲ್ ಬೆಲ್ ಸೆಂಟರ್‌ನಲ್ಲಿ ಆಯೋಜಿಸಿದ್ದ ಅದ್ಧೂರಿ ಮ್ಯೂಸಿಕ್ ಕಾನ್ಸರ್ಟ್ ನಡುವೆ ಪಾಪ್ ಸಿಂಗ್ ಶಕೀರಾ ವೇದಿಕೆಯಲ್ಲಿ ಜಾರಿ ಬಿದ್ದಿದ್ದಾರೆ. ಮ್ಯೂಸಿಕ್ ಕಾನ್ಸರ್ಟ್ ನಡುವೆ ಡ್ಯಾನ್ಸ್ ಮಾಡುತ್ತಾ ಶಕೀರಾ ಜಾರಿ ಬಿದ್ದಿದ್ದಾರೆ. ಆದರೆ ಜಾರಿ ಬಿದ್ದು ಬಳಿಕ ಶಕೀರಾ ತಡ ಮಾಡಿಲ್ಲ. ತಕ್ಷಣವೇ ಎದ್ದು ಹಾಡು ಮುಂದುವರಿಸಿದ ಘಟನೆ ನಡೆದಿದೆ.
ಜಾರಿ ಬಿದ್ದ ಶಕೀರಾ
48ರ ಹರೆಯದ ಶಕೀರಾ ವೇದಿಕೆಯಲ್ಲಿ ಪರ್ಫಾಮೆನ್ಸ್ ಮಾಡುತ್ತಾ ಜಾರಿ ಬಿದ್ದಿದ್ದಾರೆ. ಶಕೀರಾ ಜಾರಿ ಬೀಳುತ್ತಿದ್ದಂತೆ ಮ್ಯೂಸಿಕ್ ಕಾನ್ಸರ್ಟ್‌ಗ ಪಾಲ್ಗೊಂಡ ಬಹುತೇಕರು ಓಹ್ ಎಂದು ಉದ್ಘಾರ ತೆಗೆದಿದ್ದಾರೆ. ಆದರೆ ಶಕೀರ್ ಮಾತ್ರ ತನಗೇನು ಆಗಿಲ್ಲ ಎಂಬಂತೆ ಜಾರಿ ಬಿದ್ದಲ್ಲಿಂದಲೇ ಎದ್ದು ತಕ್ಷಣವೇ ಹಾಡು ಮುಂದುವರಿಸಿದ್ದಾರೆ. ಹೈ ಎನರ್ಜಿ ಮೂಲಕ ಶಕೀರಾ ಮತ್ತೆ ಪರ್ಫಾಮೆನ್ಸ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಅಭಿಮಾನಿ ಸೆರೆ ಹಿಡಿದ ವಿಡಿಯೋ
ಅಭಿಮಾನಿಯೊಬ್ಬ ಶಕೀರಾ ಜಾರಿ ಬೀಳುತ್ತಿರುವ ವಿಡಿಯೋ ಸೆರೆ ಹಿಡಿದ್ದಾನೆ. ಮ್ಯೂಸಿಕ್ ಕಾನ್ಸರ್ಟ್‌ನಲ್ಲಿ ಪಾಲ್ಗೊಂಡ ಅಭಿಮಾನಿ ಈ ವಿಡಿಯೋ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ವಿಡಿಯೋ ಭಾರಿ ವೈರಲ್ ಆಗಿದೆ.
ಶಕೀರಾ ಎನರ್ಜಿಗೆ ಅಭಿಮಾನಿಗಳ ಮೆಚ್ಚುಗೆ
ಸಾಮಾನ್ಯವಾಗಿ ವೇದಿಕೆ ಮೇಲೆ ಲಕ್ಷಾಂತರ ಅಭಿಮಾನಿಗಳ ಮುಂದೆ ಜಾರಿ ಬಿದ್ದಾಗ ಎನರ್ಜಿ ಲೆವಲ್ ಕಡಿಮೆಯಾಗುತ್ತದೆ. ಪರಿಸ್ಥಿತಿ ಸಾವರಿಸಿಕೊಂಡು ಪರ್ಫಾಮೆನ್ಸ್ ಮುಂದುವರಿಸಲು ಹಲವರುು ತಡವರಿಸುತ್ತಾರೆ. ಆದರೆ ಶಕೀರಾ ಎನರ್ಜಿ ಕಡಿಮೆಯಾಗಿಲ್ಲ. ಬಿದ್ದ ಬೆನ್ನಲ್ಲೇ ಅಲ್ಲಿಂದಲೇ ಪರ್ಫಾಮೆನ್ಸ್ ಮಾಡುತ್ತಲೇ ಶಕೀರಾ ಎದ್ದು ಕುಳಿತಿದ್ದಾಳೆ. ಛಂಗನೆ ಎದ್ದು ಮತ್ತೆ ಹಾಡು ಮುದುವರಿಸಿದ ಶಕೀರಾ ನಡೆಗೆ ಭಾರಿ ಮಚ್ಚುಗೆ ವ್ಯಕ್ತವಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಶಕೀರಾ ಪರ ಹಲವರು ಪ್ರತಿಕ್ರಿಯೆ ನೀಡಿದ್ದಾರೆ.
ವೃತ್ತಿಪರ ಮಹಿಳೆಯರು ಅಳುವುದಿಲ್ಲ
ಜಾರಿ ಬಿದ್ದ ಬಳಿಕ ಪರ್ಫಾಮೆನ್ಸ್ ಮುಂದುವರಿಸಿದ ಶಕೀರಾ ನಡೆಗೆ ಅಭಿಮಾನಿಯೊೊಬ್ಬ ವೃತ್ತಿಪರ ಮಹಿಳೆಯರು ಅಳುತ್ತಾ ಕೂರುವುದಿಲ್ಲ ಎಂದಿದ್ದಾರೆ. ಪರಿಸ್ಥಿತಿಯನ್ನು ಎದುರಿಸುತ್ತಾರೆ. ಶಕೀರಾ ಪರಿಸ್ಥಿತಿಯನ್ನು ಅಷ್ಟೇ ನಾಜೂಕಾಗಿ ಎದುರಿಸಿದ್ದಾರೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.