131 ಕೋಟಿಯ ಈ ಸಿನಿಮಾ ಆಯ್ತು ಬಾಕ್ಸ್‌ ಆಫಿಸ್‌ನ ಮಹಾಫ್ಲಾಪ್; 29 ಹಾಡುಗಳಿದ್ರೂ ಸೋಲು

ರಣ್‌ಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ನಟನೆಯ ಸಿನಿಮಾ 131 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿ ಬಾಕ್ಸ್ ಆಫೀಸ್‌ನಲ್ಲಿ ಸೋತಿದೆ. 29 ಹಾಡುಗಳಿದ್ದರೂ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಯಿತು.


2025ರ ಆರಂಭದಿಂದ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗುತ್ತಿವೆ. ಬಾಲಿವುಡ್‌ನ ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ 'ಛಾವಾ' ಅದ್ಭುತವಾಗಿ ಪ್ರದರ್ಶನ ಕಾಣುತ್ತಿದೆ.  ಮತ್ತೊಂದೆಡೆ ಸಲ್ಮಾನ್ ಖಾನ್ ನಟನೆಯ ಅಡ್ವೆಂಚರ್ ಸಿನಿಮಾ ಸಿಕಂದರ್ ಬಿಡುಗಡೆಯಾಗಲು ಸಿದ್ಧವಾಗಿದೆ. ಈ ನಡುವೆ ಬಹುಕೋಟಿ ಸಿನಿಮಾಗಳು ಬಾಕ್ಸ್‌ಆಫಿಸ್‌ನಲ್ಲಿ ಸೋಲು ಕಾಣುತ್ತಿವೆ. ರಾಮ್ ಚರಣ್ ನಟನೆಯ ಗೇಮ್ ಚೇಂಜರ್ ಈ ವರ್ಷದ ಮೊದಲ ಫ್ಲಾಪ್ ಸಿನಿಮಾ ಎಂಬ ಅಪಕೀರ್ತಿಗೆ ಒಳಗಾಗಿದೆ. ಇಂದು ನಾವು ಹೇಳುತ್ತಿರುವ ಸಿನಿಮಾ ಬರೋಬ್ಬರಿ 131 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ಚಿತ್ರದಲ್ಲಿ ಇಬ್ಬರು ಸ್ಟಾರ್ ಕಲಾವಿದರಿದ್ರೂ ಸಿನಿಮಾಗೆ ಸೋಲಾಯ್ತು. 

2017ರಲ್ಲಿ ಬಿಡುಗಡೆಯಾದ "ಜಗ್ಗಾ ಜಾಸೂಸ್" ಸಿನಿಮಾ ಬಾಕ್ಸ್ ಆಫಿಸ್‌ನಲ್ಲಿ ಸೋಲು ಕಂಡಿತ್ತು. ರಣ್‌ಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಶಾಸ್ವತ್ ಚಟರ್ಜಿ ಸಹ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ನೋಡುಗರ ಗಮನ ಸೆಳೆದಿದ್ದರು. ಅನುರಾಗ್ ಬಸು ನಿರ್ದೇಶನದ  "ಜಗ್ಗಾ ಜಾಸೂಸ್" ಸಿನಿಮಾದಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 29 ಹಾಡುಗಳಿದ್ದವು. ಆದರೆ 'ಗಲತಿ  ಸೇ ಮಿಸ್ಟೇಕ್' ಹೊರತುಪಡಿಸಿ ಯಾವ ಹಾಡು ಸಹ ಕೇಳುಗರಿಗೆ ಇಷ್ಟವಾಗಲಿಲ್ಲ.

Latest Videos

'ಜಗ್ಗಾ ಜಾಸೂಸ್' ಚಿತ್ರಕ್ಕೂ ಮೊದಲು ರಣಬೀರ್ ಕಪೂರ್ 'ಬರ್ಫಿ' ನಂತಹ ಸೂಪರ್‌ಹಿಟ್ ಚಿತ್ರವನ್ನು ನೀಡಿದ್ದರು. ಸ್ಟಾರ್ ನಟನ ಪಟ್ಟ ಸಿಕ್ಕ ಖುಷಿಯಲ್ಲಿದ್ದ ರಣ್‌ಬೀರ್ ಕಪೂರ್‌ಗೆ ಜಗ್ಗಾ ಜಾಸೂಸ್ ತೀವ್ರ ನಿರಾಸೆಯನ್ನುಂಟು ಮಾಡಿತ್ತು. ಬಿಡುಗಡೆಯಾದ ಮೊದಲ ದಿನದಿಂದಲೇ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿತ್ತು. ಬಾಕ್ಸ್ ಆಫೀಸ್ ಇಂಡಿಯಾ ವರದಿ ಪ್ರಕಾರ, ಈ ಚಿತ್ರವನ್ನು 131 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಿಸಲಾಗಿತ್ತು ಆದರೆ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಕೇವಲ 69 ಕೋಟಿ ರೂಪಾಯಿಗಳನ್ನು ಗಳಿಸಿತು. ಇದಲ್ಲದೆ, ಚಿತ್ರದ ವಿಶ್ವಾದ್ಯಂತ ಸಂಗ್ರಹ ಕೇವಲ 89 ಕೋಟಿ ರೂ. ಆಗಿತ್ತು.

ಚಿತ್ರದ ಕಥೆ ಏನು?
ಅನುರಾಗ್ ಬಸು ಅವರ 'ಜಗ್ಗಾ ಜಾಸೂಸ್' ಚಿತ್ರದಲ್ಲಿ ಜಗ್ಗಾ ಆಗಿ ರಣ್‌ಬೀರ್ ಕಪೂರ್ ನಟಿಸಿದ್ದರು. ತಂದೆ ಬಾಗಚಿ ಬಿಟ್ಟು ಹೋದ ಬಳಿಕ ಜಗ್ಗಾ ಅನಾಥನಾಗಿರುತ್ತಾನೆ. ಆದ್ರೆ  ಜಗ್ಗಾ ಹುಟ್ಟುಹಬ್ಬಕ್ಕೆ ತಪ್ಪದೇ ಸಂದೇಶ ಮತ್ತು ಹಣವನ್ನು ಬಾಗಚಿ ಕಳುಹಿಸುತ್ತಿರುತ್ತಾನೆ. ತನ್ನನ್ನು ಬಿಟ್ಟು ಹೋಗಿರುವ ತಂದೆಯನ್ನು ಹುಡುಕಲು ಜಗ್ಗಾ ಮುಂದಾಗುತ್ತಾನೆ. ಈ ವೇಳೆ ಜಗ್ಗಾಗೆ ಪತ್ರಕರ್ತೆ ಸೇನಾ ಗುಪ್ತಾ (ಕತ್ರಿನಾ ಕೈಫ್) ಸಿಗುತ್ತಾಳೆ. ಜಗ್ಗಾ ಮತ್ತು ಸೇನಾ ಗುಪ್ತಾ ಸ್ನೇಹಿತರಾಗುತ್ತಾರೆ. ಆದ್ರೆ ಒಂದು ವರ್ಷ ಜಗ್ಗಾನಿಗೆ ಹುಟ್ಟುಹಬ್ಬದಂದು ತಂದೆಯ ಮೆಸೇಜ್ ಮತ್ತು ಹಣ ಸಿಗೋದಿಲ್ಲ.  ಇದಾದ ನಂತರ, ಜಗ್ಗಾ ತನ್ನ ತಂದೆಯನ್ನು ಹುಡುಕುವ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತಾನೆ. ಇದುವೇ ಚಿತ್ರದ ಕಥೆ.

ಇದನ್ನೂ ಓದಿ: 

'ಜಗ್ಗಾ ಜಾಸೂಸ್' ಚಿತ್ರದ ಬಗ್ಗೆ ನಿರ್ಮಾಪಕರು ಮತ್ತು ರಣಬೀರ್ ಕಪೂರ್ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದರು. ಆದರೂ, ಬಿಡುಗಡೆಯಾದ ನಂತರ ಚಿತ್ರವು ಭಾರಿ ಸೋಲನ್ನು ಅನುಭವಿಸಿದ್ದರಿಂದ ನಿರ್ಮಾಪಕರು ದೊಡ್ಡ ಹಿನ್ನಡೆಯನ್ನು ಅನುಭವಿಸಿದರು. ಸಂದರ್ಶನವೊಂದರಲ್ಲಿ ರಣಬೀರ್ ಕಪೂರ್ ಕೂಡ ಚಿತ್ರದ ವೈಫಲ್ಯದಿಂದ ತುಂಬಾ ದುಃಖಿತನಾಗಿದ್ದೇನೆ ಎಂದು ಹೇಳಿಕೊಂಡಿದ್ದರು. ಜಗ್ಗಾ ಜಾಸೂಸ್ ಕಥೆ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿತ್ತು. ಆದ್ರೆ ಸೋಲಿನಿಂದ ಬೇಸರವಾಗಿದೆ ಎಂದಿದ್ದರು.

ಇದನ್ನೂ ಓದಿ: 

click me!