ಕನ್ನಡದ ಕೆಜಿಎಫ್ -2 ಸಿನಿಮಾವನ್ನು ಕೆಟ್ಟ ಪದಗಳಿಂದ ಹೀಯಾಳಿಸಿದ ತೆಲುಗು ನಿರ್ದೇಶಕ ವೆಂಕಟೇಶ್ ಮಹಾ ವಿರುದ್ಧ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಕ್ಷಮೆ ಕೇಳುವಂತೆ ಪಟ್ಟು ಹಿಡಿದಿದ್ದಾರೆ.
ಇಡೀ ವಿಶ್ವವೇ ಕನ್ನಡ ಸಿನಿಮಾರಂಗದ ಕಡೆ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಕೆಜಿಎಫ್ 1 ಮತ್ತು 2. ಕನ್ನಡ ಸಿನಿಮಾ ಹೆಮ್ಮೆ ಕೆಜಿಎಫ್ ಸಿನಿಮಾ ಮಾಡಿದ ಮೋಡಿ ಅಷ್ಟಿದೊಡ್ಡ. ರಾಕಿಂಗ್ ಸ್ಟಾರ್ ಯಶ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ಅಭಿಮಾನಿಗಳ ಹೃದಯ ಗೆದ್ದಿತ್ತು. ನಿರ್ದೇಶಕ, ಕಥೆ, ನಟನೆ, ಹಾಡುಗಳು ಪ್ರತಿಯೊಂದು ವಿಚಾರದಲ್ಲೂ ಕೆಜಿಎಫ್ ಅಭಿಮಾನಿಗಳ ಮನ ಮುಟ್ಟಿತ್ತು. ಬಾಕ್ಸ್ ಆಫೀಸ್ ನಲ್ಲೂ ಕೆಜಿಎಫ್ ದಾಖಲೆ ಬರೆದಿತ್ತು. ಭಾರತದ್ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳಲ್ಲಿ ಕೆಜಿಎಫ್ 2 ಕೂಡ ಒಂದು. ಇದು ಕನ್ನಡಿಗರಿಗೆ ಮತ್ತಷ್ಟು ಹೆಮ್ಮೆಯ ವಿಚಾರವಾಗಿದೆ. ಚಿತ್ರದ ಬಗ್ಗೆ ತೆಲುಗಿನ ನಿರ್ದೇಶಕ ವೆಂಕಟೇಶ್ ಮಹಾ ಕೆಟ್ಟದಾಗಿ ಮಾತನಾಡಿದ್ದಾರೆ. ಕೆಟ್ಟ ಪದಗಳಿಂದ ಕನ್ನಡದ ಸಿನಿಮಾವನ್ನು ಹೀಯಾಳಿಸಿದ್ದಾರೆ. ಈ ಬಗ್ಗೆ ಕನ್ನಡಿಗರು ಮಾತ್ರವಲ್ಲದೇ ಸ್ವತಃ ತೆಲುಗು ಮಂದಿ ಕೂಡ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಅವರು ಈ ರೀತಿ ಮಾತನಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಂದರ್ಶನವೊಂದರಲ್ಲಿ ಮಾತನಾಡಿದ ವೆಂಕಟೇಶ್ ಮಹಾ ಮತ್ತು ನಟ ಕೆಜಿಎಫ್-2 ಸಿನಿಮಾದ ಕ್ಲೈಮ್ಯಾಕ್ಸ್ ಬಗ್ಗೆ ಆಡಿಕೊಂಡಿದ್ದಾರೆ. ತಾಯಿ ಆಸೆಯಂತೆ ಚಿನ್ನವನ್ನೆಲ್ಲಾ ಪಡೆಯಬೇಕಂದು ಕೆಜಿಎಫ್ ಜನರಿಗೆ ಏನನ್ನೂ ಕೊಡದೆ ಶ್ರೀವಮಂತನಾಗಿರುವುದು ಅಸಂಬದ್ದವಾಗಿದೆ ಎಂದು ಹೇಳಿದ್ದಾರೆ. ಅಷ್ಟೆಯಲ್ಲದೇ ಒಂದಿಷ್ಟು ಕೆಟ್ಟ ಪದಗಳಿಂದ ಹೀಯಾಳಿಸಿದ್ದಾರೆ. ಜೋರಾಗಿ ನಗುತ್ತಾ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಯಶ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಕನ್ನಡದ ಹೆಮ್ಮೆಯ ಸಿನಿಮಾದ ಬಗ್ಗೆ ಕೆಟ್ಟ ಪದಗಳಿಂದ ನಿಂದಿಸಿದ್ದಾರೆ, ಅವಹೇಳನ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.
Yash: ತಮಿಳು ಡೈರೆಕ್ಟರ್ ಜೊತೆ ರಾಕಿಂಗ್ ಸ್ಟಾರ್?: ಯಶ್ ಫ್ಯಾನ್ಸ್ ಅನೌನ್ಸ್
ನಿರ್ದೇಶಕ ವೆಂಕಟೇಶ್ ಮಹಾ ಬಹಿರಂಗವಾಗಿ ಕ್ಷಮೆ ಕೇಳಬೇಕು, ಇಲ್ಲವಾದರೇ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೋಡುತ್ತಿದ್ದಾರೆ. ಈ ಸಂದರ್ಶನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇಡೀ ಕರ್ನಾಟಕದಲ್ಲಿ ಯಶ್ ಅಭಿಮಾನಿಗಳಿದ್ದಾರೆ ಕ್ಷಮೆ ಕೇಳಲೇ ಬೇಕು ಎಂದು ಹೇಳಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ ಇದು ಆರಂಭ ಅಷ್ಟೆ ಮುಂದೆ ಅಂತ್ಯ ಭೀಕರವಾಗಿರುತ್ತದೆ ಎಂದು ಹೇಳಿದ್ದಾರೆ.
ಯಶ್ ಮತ್ತು ಪ್ರಶಾಂತ್ ನೀಲ್ ಇಬ್ಬರೂ ಕೆಜಿಎಫ್ ಮೂಲಕ ವಿಶ್ವ ಮಟ್ಟದಲ್ಲಿ ಸದ್ದು ಮಾಡಿದ್ದಾರೆ. ಅನೇಕ ರೆಕಾರ್ಡ್ ಗಳನ್ನು ಮಾಡಿದೆ. ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ ಹಿಂದಿ ಬೆಲ್ಟ್ ನಲ್ಲೂ ದಾಖಲೆ ಬರೆದಿದೆ ಎಂದು ಹೇಳುತ್ತಿದ್ದಾರೆ. ನಿರ್ದೇಶಕ ವೆಂಕಟೇಶ್ ಅವರ ಸಾಧನೆ ಬಗ್ಗೆಯೂ ಪ್ರಶ್ನೆ ಮಾಡುತ್ತಿದ್ದಾರೆ. ಎರಡು ಸಿನಿಮಾ ಮಾಡಿದ ನೀವು ಕೆಜಿಎಫ್ ಬಗ್ಗೆ ಮಾತನಾಡಬೇಡಿ ಎಂದು ಹೇಳುತ್ತಿದ್ದಾರೆ.
C/o ಕಂಚರಪಾಲೆಂ ಮತ್ತು ಮಾಡರ್ನ್ ಲವ್ ಹೈದರಾಬಾದ್ ಸಿನಿಮಾಗಳನ್ನು ಮಾಡಿದ್ದಾರೆ. ಈ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸಕ್ಸಸ್ ಕಂಡಿಲ್ಲ.