ಪತಿ ಬದುಕು ನರಕ ಮಾಡಿದ್ದ ಎಂದಿದ್ದ ಪೂನಂ: ಸತ್ತಿರೋ ಹಾಗೂ ಬದುಕಿರೋ ಸುದ್ದಿ ಕೇಳಿ ಪತಿ ಹೇಳ್ತಿರೋದೇನು?

Published : Feb 04, 2024, 01:15 PM ISTUpdated : Feb 04, 2024, 01:18 PM IST
 ಪತಿ ಬದುಕು ನರಕ ಮಾಡಿದ್ದ ಎಂದಿದ್ದ ಪೂನಂ: ಸತ್ತಿರೋ ಹಾಗೂ ಬದುಕಿರೋ ಸುದ್ದಿ ಕೇಳಿ ಪತಿ ಹೇಳ್ತಿರೋದೇನು?

ಸಾರಾಂಶ

 ಪತಿ ಬದುಕು ನರಕ ಮಾಡಿದ್ದ ಎಂದಿದ್ದ ಹಿಂದೊಮ್ಮೆ ಪೂನಂ ಪಾಂಡೆ ಹೇಳಿದ್ದರು. ಇದೀಗ ಈಕೆ ಸತ್ತಿರೋ ಹಾಗೂ ಬದುಕಿರೋ ಸುದ್ದಿ ಕೇಳಿ ಪತಿ ಹೇಳ್ತಿರೋದೇನು?  

ಕಳೆದೆರಡು ದಿನಗಳಿಂದ ಸೋಷಿಯಲ್​ ಮೀಡಿಯಾದಲ್ಲಿ ನಟಿ ಪೂನಂ ಪಾಂಡೆ ಅವರದ್ದೇ ಸುದ್ದಿ. ತಾವು ಸತ್ತಿರುವುದಾಗಿ ಸುದ್ದಿ ಹರಡಿಸಿ ಪ್ರಚಾರ ಗಿಟ್ಟಿಸಿಕೊಂಡು ಎಲ್ಲರನ್ನೂ ಶಾಕ್​ಗೆ ತಳ್ಳಿರುವವರು ಪೂನಂ ಪಾಂಡೆ. ಗರ್ಭಕಂಠದ ಕ್ಯಾನ್ಸರ್​ನಿಂದ ನಟಿ ಸತ್ತಿರುವಂತೆ ಅವರ ಮ್ಯಾನೇಜರ್​ ಮೂಲಕ ಹೇಳಿಸಿದರು. ಇಡೀ ಇಂಡಸ್ಟ್ರಿ ಶಾಕ್​ ಆಗಿತ್ತು. ಇದಾದ ಬಳಿಕ, ತಾವು ಈ ಕ್ಯಾನ್ಸರ್​ ಕುರಿತು ಅರಿವು ಮೂಡಿಸಲು ಸತ್ತಂತೆ ಹೇಳಿದ್ದು, ಯಾರೂ ಈ ಕ್ಯಾನ್ಸರ್​ ಬಗ್ಗೆ ಯೋಚನೆ ಮಾಡಬೇಡಿ, ಇದು ಗುಣವಾಗುವ ಕ್ಯಾನ್ಸರ್​. ಇದರ ಬಗ್ಗೆ ಅರಿವು ಮೂಡಿಸುವುದು ನನ್ನ ಉದ್ದೇಶವಾಗಿತ್ತು ಎಂದರು.

ಇದೀಗ ನಟಿ ಎಲ್ಲರ ಬಾಯಲ್ಲಿಯೂ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ. ಪ್ರಚಾರಕ್ಕಾಗಿ ನಟ-ನಟಿಯರು ಏನೆಲ್ಲಾ ಗಿಮಿಕ್​ ಮಾಡುವುದು ಇದೆ. ಇದಾಗಲೇ ಪೂನಂ ಪಾಂಡೆ ವಿರುದ್ಧ ಬೇಕಾದಷ್ಟು ನೆಗೆಟಿವ್​ ಮಾತುಗಳಿಗೆ. ಅಶ್ಲೀಲತೆಗೆ ಇನ್ನೊಂದು ಹೆಸರೇ ಈಕೆ ಎನ್ನುವುದೂ ಇದೆ. ಕಾಮ ಪ್ರಚೋದಕ  ಆ್ಯಪ್​ ಕೂಡ ನಡೆಸುತ್ತಿದ್ದಾರೆ ನಟಿ. ಪ್ರಚಾರಕ್ಕಾಗಿ ಬೆತ್ತಲಾಗುವುದು ಎಂದರೆ ಈಕೆಗೆ ಇನ್ನಿಲ್ಲದ ಖುಷಿ. ಇದನ್ನೆಲ್ಲವನ್ನೂ ಸಹಿಸಿಕೊಂಡಿದ್ದ ಜನರು, ಈಗ ಸತ್ತಿರುವುದಾಗಿ ಹೇಳುವ ಮೂಲಕ ಎಲ್ಲರ ಭಾವನೆಗಳ ಜೊತೆ ಆಟವಾಡಿದರು ಎಂದು ಸಿಟ್ಟುಗೊಂಡಿದ್ದಾರೆ.

ಡ್ರಾಮಾ ಕ್ವೀನ್​ನನ್ನೇ ಮೀರಿಸಿದ ಪೂನಂ ಪಾಂಡೆ: ನಿನಗಾಗಿ ತ್ಯಾಗ ಮಾಡಿದೆ ಎನ್ನುತ್ತಲೇ ರಾಖಿ ಹೀಗೆ ಆಕ್ರೋಶ!

ಈ ಬಗ್ಗೆ ಪೂನಂ ಅವರ ಪತಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಪೂನಂ ಮತ್ತು ಅವರ ಪತಿಯ ಸಂಬಂಧ ಸರಿಯಿಲ್ಲ ಎಂದು ಖುದ್ದು ಪೂನಂ ಹೇಳಿಕೊಂಡಿದ್ದರು.  ತಮ್ಮ ಖಾಸಗಿ ಬದುಕಿನ ಕುರಿತು ಮಾತನಾಡಿದ್ದ ಅವರು,  ಸ್ಯಾಮ್ ಬಾಂಬೆ ಅವರನ್ನು ಮದುವೆಯಾದ ಬಳಿಕ ತಾವು ಅನುಭವಿಸಿದ್ದ ನೋವಿನ ಕುರಿತು  ಮಾತನಾಡಿದ್ದರು.  2020ರ ಮಾರ್ಚ್​ ತಿಂಗಳಿನಲ್ಲಿ ಸ್ಯಾಮ್​ ಬಾಂಬೆ (Sam Bombay) ಅವರ ಜೊತೆ ನಡೆದಿತ್ತು. ಇವರ ದಾಂಪತ್ಯ ಜೀವನ ಇದ್ದದ್ದು ಒಂದೇ ವರ್ಷ. 'ಮದುವೆಯಾದ ದಿನದಿಂದಲೂ ನನ್ನ ಮೇಲೆ ದೈಹಿಕ, ಲೈಂಗಿಕ ದೌರ್ಜನ್ಯ ನಡೆಯುತ್ತಲೇ ಇದೆ. ಹನಿಮೂನ್ ಅವಧಿಯಲ್ಲಿ ನನ್ನ ಮೇಲೆ ಹಲ್ಲೆ ಮತ್ತು ದೈಹಿಕ ಕಿರುಕುಳ ನಡೆದಿದೆ. ಮದುವೆಯನ್ನು ಮುಗಿಸುವ ವಿಚಾರದಲ್ಲಿ ಏನನ್ನೂ ಯೋಚಿಸದೆ ಪ್ರಾಣಿಗಳಂತೆ ಥಳಿಸಿದ್ದಾನೆ' ಎಂದಿದ್ದರು. ಸ್ಯಾಮ್ ಬಾಂಬೆಗೆ ನನ್ನನ್ನು ಕಂಡರೆ ಇಷ್ಟವಿರಲಿಲ್ಲ. ನನ್ನನ್ನು ಪ್ರಾಣಿಯಂತೆ ಹೊಡೆಯುತ್ತಿದ್ದ. ಒಮ್ಮೆ ಆತ ಹೊಡೆದಾಗ  ಮೆದುಳಿನಲ್ಲಿ ರಕ್ತಸ್ರಾವವಾಗಿತ್ತು. 4 ಮಹಡಿಗಳ ಮನೆ ಇತ್ತು, ಆದರೆ ನನ್ನ ಇಷ್ಟದಂತೆ ಉಳಿಯಲು ಅಥವಾ ಯಾವುದೇ ಕೋಣೆಗೆ ಹೋಗಲು ನನಗೆ ಅವಕಾಶವಿರಲಿಲ್ಲ' ಎಂದಿದ್ದರು.  

ಆದರೆ ಇದೀಗ ಸ್ಯಾಮ್​ ಅವರು, ತಮ್ಮಿಬ್ಬರ ವಿಚ್ಛೇದನ ಆಗಲಿಲ್ಲ. ಇಂದಿಗೂ ನಾವಿಬ್ಬರೂ ದಂಪತಿಯೇ ಎಂದಿದ್ದಾರೆ.  ಆಕೆಯ ಸಾವಿನ ಸುದ್ದಿ ಕೇಳಿದಾಗ  ನನ್ನ ಹೃದಯದಲ್ಲಿ ಏನೂ ಭಾವನೆ ಇರಲಿಲ್ಲ.  ನಷ್ಟ ಎನಿಸಲೇ ಇಲ್ಲ. ನಾನ್ಯಾಕೆ ಹೀಗಾದೆ ಎಂದು ನನಗೂ ಗೊತ್ತಿಲ್ಲ. ಆದರೂ ಅವಳ ಸಾವಿನ ಬಗ್ಗೆ ನನಗೆ ಏನೂ ಅನ್ನಿಸರಲಿಲ್ಲ.  ನಾನು ಪ್ರತಿದಿನ ಅವಳ  ಬಗ್ಗೆ ಯೋಚಿಸುತ್ತೇನೆ. ಮತ್ತು ನಾನು ಪ್ರತಿದಿನ ಅವಳಿಗಾಗಿ ಪ್ರಾರ್ಥಿಸುತ್ತೇನೆ. ಆದ್ದರಿಂದ ಆಕೆ ಸತ್ತಿಲ್ಲ ಎಂದು ಬಹುಶಃ ನನ್ನ ಮನಸ್ಸಿಗೆ ಅನ್ನಿಸಿರಬೇಕು. ಅದಕ್ಕೇ ಏನೂ ಅನ್ನಿಸಲಿಲ್ಲ  ಎಂದಿದ್ದಾರೆ.  ಇನ್ನು ನಟಿ ಸತ್ತಿಲ್ಲ, ಜೀವಂತವಾಗಿರುವುದಾಗಿ ಕೇಳಿದಾಗ,  ನನಗೆ ಸಂತೋಷವಾಯಿತು. ಅವಳು ಸಮಾಜಕ್ಕೆ ನೀಡುವುದು ಬಹಳಷ್ಟು ಇದೆ.   ಯಾರಾದರೂ ತಮ್ಮ ಖ್ಯಾತಿ ಅಥವಾ ಇಮೇಜ್ ಅನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸಿದರೆ, ಅದನ್ನು ಗೌರವಿಸೋಣ. ಪೂನಂ ಪಾಂಡೆ ಕಾಲಾತೀತ. ಆಕೆ ಅತ್ಯಂತ ದಿಟ್ಟ ಭಾರತೀಯ ಮಹಿಳೆ. ಈಗ ಹಲವಾರು ವರ್ಷಗಳ ನಂತರ, ಅವಳು ಆಚರಿಸಲ್ಪಡುತ್ತಾಳೆ ಎಂದಿದ್ದಾರೆ ಸ್ಯಾಮ್​. 

ನಾನು ಸತ್ತಿಲ್ಲ, ಹ್ಯಾಂಗ್​ ಓವರ್​ ಕುರಿತು ಅರಿವು ಮೂಡಿಸ್ತಿದ್ದೇನೆ.. ಪೂನಂಗೆ ತಿರುಗೇಟು ಕೊಟ್ಟ ಉರ್ಫಿ ಹೇಳಿದ್ದೇನು?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

HBD Rajinikanth: ಕಾಲಿವುಡ್‌ನ 'ಪವರ್‌ಹೌಸ್'.. ಭಾರತೀಯ ಸಿನಿಮಾದ ರಾಜಾಧಿರಾಜ ರಜನಿಕಾಂತ್ ಬಗ್ಗೆ ನಿಮಗೆಷ್ಟು ಗೊತ್ತು?
Abhishek Bachchan: ಮಗಳು ಆರಾಧ್ಯಾ ಗೂಗಲ್‌ನಲ್ಲಿ ಈ ಡಿವೋರ್ಸ್ ಸುದ್ದಿ ಓದಿದರೇ ಏನಾಗುವುದೋ ಏನೋ..!?