Kabza ಸಿನಿಮಾದಿಂದ ಸುದೀಪ್ ಔಟ್; ನಿರ್ದೇಶಕ R ಚಂದ್ರು ಸ್ಪಷ್ಟನೆ

Published : Apr 04, 2022, 04:43 PM IST
Kabza ಸಿನಿಮಾದಿಂದ ಸುದೀಪ್ ಔಟ್; ನಿರ್ದೇಶಕ R ಚಂದ್ರು ಸ್ಪಷ್ಟನೆ

ಸಾರಾಂಶ

ಉಪೇಂದ್ರ ನಟನೆಯ ಬಹುನಿರೀಕ್ಷೆಯ ಕಬ್ಜ ಸಿನಿಮಾದಿಂದ ಕಿಚ್ಚ ಸುದೀಪ್ ಹೊರನಡೆದಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೀಗ ನಿರ್ದೇಶಕ ಆರ್ ಚಂದ್ರು ಸ್ಪಷ್ಟನೆ ನೀಡಿದ್ದು ಇದು ವದಂತಿ ಅಷ್ಟೆ ಸುದೀಪ್ ಸಿನಿಮಾದಲ್ಲಿ ಇದ್ದಾರೆ ಎಂದು ಹೇಳಿದ್ದಾರೆ. 

ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಉಪೇಂದ್ರ(Upendar) ನಟನೆಯ ಕಬ್ಜ(Kabz) ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿರುವ ಕಬ್ಜ ಸಿನಿಮಾ ಪ್ಯಾನ್ ಇಂಡಿಯಾ ಬಿಡುಗಡೆ ಮಾಡಲು ತಯಾರಿ ನಡೆಯುತ್ತಿದೆ. ವಿಶೇಷ ಎಂದರೆ ಈ ಸಿನಿಮಾದಲ್ಲಿ ಕಿಚ್ಚ ಸುದೀಪ್(Sudeep) ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಸುದೀಪ್ ಲುಕ್ ಬಿಡುಗಡೆಯಾಗಿದ್ದು ಅಭಿಮಾನಿಗಳಿಂದ ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಕಬ್ಜ ಸಿನಿಮಾದಿಂದ ಕಿಚ್ಚ ಸುದೀಪ್ ಔಟ್ ಆಗಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಕೇಳಿಬರುತ್ತಿದ್ದು ಈ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಸಿನಿಮಾದಲ್ಲಿ ಸುದೀಪ್ ಭಾರ್ಗವ್ ಬಕ್ಷಿ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಿಚ್ಚನ ಎಂಟ್ರಿ ಸಿನಿಮಾ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿತ್ತು. ಆದರೀಗ ಸುದೀಪ್ ಸಿನಿಮಾದಿಂದ ಹೊರನಡೆದಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ನಿರ್ದೇಶಕ ಆರ್ ಚಂದ್ರು ವಿರುದ್ಧ ಮುನಿಸಿಕೊಂಡಿರುವ ಸುದೀಪ್ ಚಿತ್ರದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ ಮಾತು ಕೇಳಿಬಂದಿದೆ. ಆದರೀಗ ಈ ಬಗ್ಗೆ ನಿರ್ದೇಶಕ ಆರ್ ಚಂದ್ರು(R Chandru) ಸ್ಪಷ್ಟನೆ ನೀಡಿದ್ದಾರೆ.

Upendra: ಸಿನಿಮಾ ಕೆಲಸ ಬಿಟ್ಟು ಹೋಮ್ ಮಿನಿಸ್ಟರ್ ಆದ ರಿಯಲ್ ಸ್ಟಾರ್!

ಈ ಬಗ್ಗೆ ಸಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಚಂದ್ರು, ಇದೆಲ್ಲ ವದಂತಿ ಅಷ್ಟೆ, ಸುದೀಪ್ ಸಿನಿಮಾದಿಂದ ಹೊರನಡೆದಿಲ್ಲ ಎಂದು ಹೇಳಿದ್ದಾರೆ. 'ಎಲ್ಲರಿಗೂ ನಮಸ್ಕಾರ, ನಿನ್ನೆಯಿಂದ ಸುದೀಪ್ ಅವರು ಕಬ್ಜ ಚಿತ್ರತಂಡದಿಂದ ಹೊರಗೆ ನಡೆದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ, ಆ ಸುದ್ದಿ ಸತ್ಯಕ್ಕೆ ದೂರವಾದದ್ದು. ಶ್ರೀ ಕಿಚ್ಚ ಸುದೀಪ್ ಅವರು ಈಗಾಗಲೇ ಕಬ್ಜ ಚಿತ್ರೀಕರಣದಲ್ಲಿ ಪಾಲ್ಗೊಂಡು ನಟಿಸಿದ್ದಾರೆ. ಹಾಗಾಗಿ ದಯವಿಟ್ಟು ಈ ರೀತಿಯ ಸುಳ್ಳು ಸುದ್ದಿಗೆ ಯಾರು ಕಿವಿ ಕೊಡಬಾರದು' ಎಂದು ಹೇಳಿದ್ದಾರೆ. ಆರ್ ಚಂದ್ರು ಪ್ರತಿಕ್ರಿಯೆ ಅಭಿಮಾನಿಗಳಲ್ಲಿದ್ದ ಗೊಂದಲಕ್ಕೆ ತೆರೆಎಳೆದಿದೆ.

ವದಂತಿ ಏನು?

ದೊಡ್ಡ ಮಟ್ಟದಲ್ಲಿ ಬರ್ತಿರುವ ಕಬ್ಜ ಸಿನಿಮಾದಲ್ಲಿ ದೊಡ್ಡ ಸ್ಟಾರ್ ಕಾಸ್ಟ್ ಇದೆ. ಕೊರೊನಾದಿಂದ ಸಿನಿಮಾ ಚಿತ್ರೀಕರಣ ತಡವಾಗಿದ್ದಲ್ಲದೇ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಡೇಟ್‌ ಕ್ಲ್ಯಾಶ್ ಆಗಿದೆ. ಹಾಗಾಗಿ ಸಿನಿಮಾ ಬೇಗ ಮುಗಿಸಲು ಆರ್ ಚಂದ್ರುಗೆ ಸಮಸ್ಯೆಯಾಗಿದೆ. ಒತ್ತಡದಲ್ಲಿರುವ ಚಂದ್ರು ಸುದೀಪ್ ಅವರ ಕೆಲವು ಬಿಲ್ಡಪ್ ಶಾಟ್ ಗಳನ್ನು ಡೂಪ್ ಬಳಸಿ ಚಿತ್ರೀಕರಿಸಿದ್ದರಂತೆ. ಇದು ಸುದೀಪ್ ಗೆ ಗೊತ್ತಾಗುತ್ತಿದ್ದಂತೆ ಆರ್ ಚಂದ್ರು ವಿರುದ್ಧ ಗರಂ ಆಗಿದ್ದಾರೆ, ಅಲ್ಲದೆ ಸಿನಿಮಾದಿಂದನೇ ಹೊರನಡೆದಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು.

ಎಲ್ಲರಿಗೂ ನಮಸ್ಕಾರ,
ನಿನ್ನೆಯಿಂದ "ಸುದೀಪ್" ಅವರು "ಕಬ್ಜ" ಚಿತ್ರತಂಡದಿಂದ ಹೊರಗೆ ನಡೆದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ, ಆ ಸುದ್ದಿ ಸತ್ಯಕ್ಕೆ ದೂರವಾದದ್ದು.
ಶ್ರೀ "ಕಿಚ್ಚ ಸುದೀಪ್" ಅವರು ಈಗಾಗಲೇ "ಕಬ್ಜ" ಚಿತ್ರೀಕರಣದಲ್ಲಿ ಪಾಲ್ಗೊಂಡು ನಟಿಸಿದ್ದಾರೆ. ಹಾಗಾಗಿ ದಯವಿಟ್ಟು ಈ ರೀತಿಯ ಸುಳ್ಳು ಸುದ್ದಿಗೆ ಯಾರು ಕಿವಿ ಕೊಡಬಾರದು.

— R.Chandru (@rchandru_movies) April 4, 2022


ಮುತ್ತಪ್ಪ ರೈ ಆಗ್ತಿದ್ದಾರಾ ಉಪೇಂದ್ರ.? ಕುತೂಹಲ ಮೂಡಿಸಿದೆ ಆರ್‌ಜಿವಿ ಟ್ವೀಟ್..!

ಸುದೀಪ್ ಸದ್ಯ ವಿಕ್ರಾಂತ್ ರೋಣ(Vikrant Rona)ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಟೀಸರ್ ಬಿಡುಗಡೆ ಮಾಡಿರುವ ಸುದೀಪ್ ಸಿನಿಮಾ ಬಿಡುಗಡೆಗೆ ತಯಾರಿ ನಡೆಸುತ್ತಿದ್ದಾರೆ. ಈ ನಡುವೆ ಸುದೀಪ್ ಕಬ್ಜ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿವುದು ಅನುಮಾನ ಎನ್ನುವ ಮಾತು ಕೇಳಿಬಂದಿತ್ತು. ಆದರೀಗ ನಿರ್ದೇಶಕರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳುವ ಮೂಲಕ ಗಾಳಿ ಸುದ್ದಿಗೆ ಬ್ರೇಕ್ ಹಾಕಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಕಬ್ಜ ನಾಯಕಿಯ ಪಾತ್ರದ ಚಿತ್ರೀಕರಣ ಭಾಗಿ ಇದೆ ಎನ್ನಲಾಗಿದೆ. ಚಿತ್ರದಲ್ಲಿ ನಾಯಕಿಯಾಗಿ ಬಹುಭಾಷಾ ಟಿ ಶ್ರೀಯಾ ಶರಣ್ ಕಾಣಿಸಿಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?