'ಬೀಸ್ಟ್' ಹಾಲಿವುಡ್ ಸಿನಿಮಾದ ಕಾಪಿನಾ? ವಿಜಯ್ ಚಿತ್ರದ ಬಗ್ಗೆ ನೆಟ್ಟಿಗರ ಅನುಮಾನ

Published : Apr 04, 2022, 03:32 PM IST
'ಬೀಸ್ಟ್' ಹಾಲಿವುಡ್ ಸಿನಿಮಾದ ಕಾಪಿನಾ? ವಿಜಯ್ ಚಿತ್ರದ ಬಗ್ಗೆ ನೆಟ್ಟಿಗರ ಅನುಮಾನ

ಸಾರಾಂಶ

ಇಳಯದಳಪತಿ ವಿಜಯ್ ನಟನೆಯ ಬಹುನಿರೀಕ್ಷೆಯ ಬೀಸ್ಟ್ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಆದರೆ ಕೆಲವರು ಬೀಸ್ಟ್ ಸಿನಿಮಾ ಹಾಲಿವುಡ್ ನ ಪೌಲ್ ಬ್ಲಾಸ್ಟ್; ಮಾಲ್ ಕಾಪ್ ಸಿನಿಮಾದ ಕಾಪಿ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಇಳಯದಳಪತಿ ವಿಜಯ್(Vijay) ನಟನೆಯ ಬಹುನಿರೀಕ್ಷೆಯ ಬೀಸ್ಟ್(Beast) ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಯುಗಾದಿ ಹಬ್ಬದ ಪ್ರಯುಕ್ತ ಬಂದ ಟ್ರೈಲರ್ ಗೆ ವಿಜಯ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ಬೀಸ್ಟ್ ಸಿನಿಮಾ ಮೂಡಿಬಂದಿದೆ. ಚಿತ್ರದಲ್ಲಿ ವಿಜಯ್ ವೀರ ರಾಘವನ್ ಎನ್ನುವ ಸೈನಿಕನ ಪಾತ್ರದಲ್ಲಿ ನಟಿಸಿದ್ದಾರೆ. ಔಟ್ ಅಂಡ್ ಔಟ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಟ್ರೈಲರ್ ನಲ್ಲಿ ವಿಜಯ್ ಅಬ್ಬರಿಸಿದ್ದಾರೆ. ಕನ್ನಡದ ಕೆಜಿಎಫ್-2 ಮತ್ತು ಬೀಸ್ಟ್ ಸಿನಿಮಾ ಒಟ್ಟೊಟ್ಟಿಗೆ ಬಿಡುಗಡೆಯಾಗುತ್ತಿದೆ. ಎರಡು ಸಿನಿಮಾಗಳ ನಡುವೆ ಬಾಕ್ಸ್ ಆಫೀಸ್ ವಾರ್ ನಡೆಯಲಿದೆ ಎಂದು ಸಿನಿ ಪಂಡಿತರು ಲೆಕ್ಕಾಚಾರ ಹಾಕುತ್ತಿದ್ದಾರೆ. ಕೆಜಿಎಫ್-2 ಟ್ರೈಲರ್ ಬಿಡುಗಡೆಯಾದ ಬೆನ್ನಲ್ಲೇ ಬೀಸ್ಟ್ ಟ್ರೈಲರ್ ಕೂಡ ಬಿಡುಗಡೆಯಾಗಿದ್ದು ಧೂಳೆಬ್ಬಿಸುತ್ತಿದೆ.

ಇದರ ಬೆನ್ನಲ್ಲೇ ಈಗ ವಿಜಯ್ ಸಿನಿಮಾದ ಮೇಲೆ ಅನೇಕರು ಆರೋಪ ಮಾಡುತ್ತಿದ್ದಾರೆ. ಹಾಲಿವುಡ್ ಸಿನಿಮಾದ ಕೆಲವು ದೃಶ್ಯಗಳನ್ನು ಕದಿಯಲಾಗಿದೆ ಎನ್ನುತ್ತಿದ್ದಾರೆ. ಹೌದು, ವಿಜಯ್ ಬೀಸ್ಟ್ ಸಿನಿಮಾದ ಟ್ರೈಲರ್ ನೋಡಿದ ಅನೇಕ ಮಂದಿ ಹಾಲಿವುಡ್ ನ 'ಪೌಲ್ ಬ್ಲಾಸ್ಟ್;ಮಾಲ್ ಕಾಪ್'(paul blart mall cop) ಸಿನಿಮಾಗೆ ಹೋಲಿಕೆ ಮಾಡುತ್ತಿದ್ದಾರೆ. ಈ ಸಿನಿಮಾದಿಂದ ಸ್ಫೂರ್ತಿ ಪಡೆದು ಬೀಸ್ಟ್ ಮಾಡಲಾಗಿದೆ ಎಂದು ಆರೋಪಿಸುತ್ತಿದ್ದಾರೆ.

ಟ್ರೈಲರ್ ನಲ್ಲಿ ಕಥಾನಾಯಕ(ವಿಜಯ್) ಚೆನ್ನೈ ಮಾಲ್ ಅಪಹರಣ ಮಾಡಿದ ಭಯೋತ್ಪಾದಕರಿಂದ ಜನರನ್ನು ರಕ್ಷಣೆ ಮಾಡುತ್ತಾನೆ. ವಿಜಯ್ ಇಲ್ಲಿ ವೀರ ರಾಘವನ್ ಎನ್ನುವ ಸೈನಿಕ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನು 'ಪೌಲ್ ಬ್ಲಾಸ್ಟ್;ಮಾಲ್ ಕಾಪ್' ಸಿನಿಮಾ ಕೂಡ ಹೀಗೆ ಇದೆ. ಈ ಸಿನಿಮಾದಲ್ಲಿ ಕಥಾನಾಯಕ ಮಾಲ್ ನಲ್ಲಿ ಸೆಕ್ಯೂರಿಟಿ ಆಗಿ ಕೆಲಸ ಮಾಡುತ್ತಿರುತ್ತಾನೆ. ಆತ ಕೂಡ ಜನರನ್ನು ರಕ್ಷಿಸುವ ಕೆಲಸ ಮಾಡುತ್ತಾನೆ. ಎರಡು ಸಿನಿಮಾಗೂ ಹೋಲಿಕೆ ಇರುವುದರಿಂದ ನೆಟ್ಟಿಗರು ಕೆಲವು ದೃಶ್ಯಗಳನ್ನು ಕದಿಯಲಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Beast Trailer; ವಿಜಯ್ ಹೈ ಆ್ಯಕ್ಷನ್ ಟ್ರೈಲರ್ ಗೆ ಅಭಿಮಾನಿಗಳು ಫಿದಾ

ಇನ್ನು ಕೆಲವರು 'ಮನಿ ಹೈಸ್ಟ್' ಸರಣಿಗೆ ಹೋಲಿಕೆ ಮಾಡುತ್ತಿದ್ದಾರೆ. ಈ ಬಗ್ಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ ಆದರೆ ಸಿನಿಮಾತಂಡ ಇನ್ನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಿಜಕ್ಕೂ ಹಾಲಿವುಡ್ ಸಿನಿಮಾದಿಂದ ಸ್ಫೂರ್ತಿ ಪಡೆದು ಸಿನಿಮಾ ಮಾಡಿದ್ದಾರಾ ಎನ್ನುವುದು ಗೊತ್ತಾಗಬೇಕಾದರೆ ಏಪ್ರಿಲ್ 13ರ ವರೆಗೂ ಕಾಯಲೇ ಬೇಕು.

ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಟ್ರೈಲರ್ ನಲ್ಲಿ ಪೂಜಾ ಹೆಗ್ಡೆ ಒಂದು ದೃಶ್ಯದಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ವಿಜಯ್ ಆಕ್ಷನ್ ಕಂಡು ಭಯ ಪಡುವ ದೃಶ್ಯದಲ್ಲಿ ಪೂಜಾ ದರ್ಶನ ನೀಡಿದ್ದಾರೆ. ಅಂದಹಾಗೆ ಬೀಸ್ಟ್ ವಿಜಯ್ ನಟನೆಯ 65ನೇ ಸಿನಿಮಾವಾಗಿದೆ. ಕೊರೊನಾ ಲಾಕ್ ಡೌನ್ ಬಳಿಕ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದ್ದು, ಇದೀಗ ಬಿಡುಗಡೆಗೆ ಸಿದ್ಧವಾಗಿದೆ.

ಸನ್ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯಲ್ಲಿ ಸಿನಿಮಾ ಮೂಡಿಬಂದಿದೆ. ಚಿತ್ರಕ್ಕೆ ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದ್ರನ್ ಸಂಗೀತ ನೀಡಿದ್ದಾರೆ. ಈಗಾಗಲೇ ಸಿನಿಮಾದ ಹಾಡು ಬಿಡುಗಡೆಯಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇದೇನು ಎಲೆಕ್ಷನ್ ಅಲ್ಲ; ವಿಜಯ್ 'ಬೀಸ್ಟ್' ಸಿನಿಮಾ ಪೈಪೋಟಿ ಬಗ್ಗೆ ಯಶ್ ಪ್ರತಿಕ್ರಿಯೆ

ಇನ್ನು ವಿಜಯ್ ಕೊನೆಯದಾಗಿ ಮಾಸ್ಟರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಲೋಕೇಶ್ ಕನಗರಾಜ್ ಆಕ್ಷನ್ ಕಟ್ ಹೇಳಿದ್ದರು. ಕಳೆದ ವರ್ಷ ಬಂದ ಈ ಸಿನಿಮಾಗೆ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಪಾತ್ರವಾಗಿತ್ತು. ಬೀಸ್ಟ ಬಳಿಕ ವಿಜಯ್ ವಂಶಿ ಪಡಿಪಲ್ಲಿ ನಿರ್ದೇಶನದ ದಿಲ್ ರಾಜು ನಿರ್ಮಾಣದ ಇನ್ನು ಹೆಸರಿಡದ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬೀಸ್ಟ್ ಸಿನಿಮಾ ಬಿಡುಗಡೆಯಾದ ಬಳಿಕ ಹೊಸ ಸಿನಿಮಾದ ಮಾಹಿತಿ ಬಹಿರಂಗ ಪಡಿಸುವ ಸಾಧ್ಯತೆ ಇದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ದೇಶಮುದುರು ಹೊಡೆತಕ್ಕೆ ಅಡ್ರೆಸ್ ಇಲ್ಲದಂತಾದ ಪ್ರಭಾಸ್ ಸಿನಿಮಾ.. ಒಂದೇ ವರ್ಷ ಬ್ಯಾಕ್ ಟು ಬ್ಯಾಕ್ ಫ್ಲಾಪ್