Latest Videos

ಹಳ್ಳಿ ಹಕ್ಕಿಯಾದ 'ಬಿಗ್ ಬಾಸ್' ವೈಷ್ಣವಿ ಗೌಡ ; ವಿಭಿನ್ನ ಸಿನಿಮಾದಲ್ಲಿ 'ಅಗ್ನಿಸಾಕ್ಷಿ' ನಟಿ

By Shruiti G KrishnaFirst Published Apr 4, 2022, 1:29 PM IST
Highlights

ಬಿಗ್ ಬಾಸ್ ಖ್ಯಾತಿಯ ವೈಷ್ಣವಿ ಗೌಡ ಹೊಸ ಸಿನಿಮಾಗೆ ಸಹಿ ಮಾಡಿದ್ದಾರೆ. ಚಿತ್ರಕ್ಕೆ ಬಿಳಿ ಚುಕ್ಕಿ ಹಳ್ಳಿ ಹಕ್ಕಿ ಎನ್ನುವ ಟೈಟಲ್ ಇಡಲಾಗಿದ್ದು ಈಗಾಗಲೇ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಮಹೇಶ್ ಗೌಡ ನಿರ್ದೇಶನ ಮಾಡಿ ನಟಿಸುತ್ತಿರುವ ಸಿನಿಮಾ ಇದಾಗಿದೆ.

ಕನ್ನಡ ಕಿರುತೆರೆಯ ಖ್ಯಾತ ನಟಿ ವೈಷ್ಣವಿ ಗೌಡ ಏನ್ಮಾಡ್ತಿದ್ದಾರೆ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿತ್ತು. ಬಿಗ್ ಬಾಸ್ ಬಳಿಕ ವೈಷ್ಣವಿ ಯಾವುದೇ ಸಿನಿಮಾ ಅಥವಾ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರೀಯರಾಗಿರುವ ವೈಷ್ಣವಿ ಆಗಾಗ ಸುಂದರ ಫೋಟೋಶೂಟ್ ಮೂಲಕ ಅಭಿಮಾನಿಗಳಿಗೆ ದರ್ಶನ ನೀಡುತ್ತಿದ್ದರು. ಆದರೆ ತೆರೆಮೇಲೆ ಕಾಣಿಸಿಕೊಂಡಿರಲಿಲ್ಲ. ಇದೀಗ ವೈಷ್ಣವಿ ಸಿನಿಮಾದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಒಂದು ವಿಭಿನ್ನ ಸಿನಿಮಾ ಮೂಲಕ ವೈಷ್ಣವಿ ಸಿನಿ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.

ನಿರ್ದೇಶಕ ಮಹೇಶ್ ಗೌಡ ಸಾರಥ್ಯದಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾದಲ್ಲಿ ವೈಷ್ಣವಿ ಗೌಡ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಹೇಶ್ ಗೌಡ ಈ ಹಿಂದೆ ಮಹಿರ ಎನ್ನುವ ಸಿನಿಮಾ ಮಾಡಿದ್ದರು. ರಾಜ್ ಬಿ ಶೆಟ್ಟಿ, ಚೈತ್ರಾ ಆಚಾರ್ ಸೇರಿದಂತೆ ಅನೇಕ ಪ್ರತಿಭಾನ್ವಿತ ಕಲಾವಿದರು ನಟಿಸಿದ್ದರು. ತಾಯಿ ಮಗಳ ಹೋರಾಟದ ಕಥೆಯನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದ ನಿರ್ದೇಶಕ ಮಹೇಶ್ ಗೌಡ ಈ ಬಾರಿ ಕೂಡ ವಿಭಿನ್ನ ಸಿನಿಮಾ ಮೂಲಕ ಸಿನಿ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.

ಅಂದಹಾಗೆ ಈ ಸಿನಿಮಾದ ಟೈಟಲ್ ಮತ್ತು ಫಸ್ಟ ಲುಕ್ ಈಗಾಗಲೇ ಬಿಡುಗಡೆಯಾಗಿದ್ದು, ಯುಗಾದಿ ಹಬ್ಬದ ಪ್ರಯುಕ್ತ ಬಿಡುಗಡೆ ಮಾಡಲಾಗಿದೆ. ಚಿತ್ರಕ್ಕೆ ಬಿಳಿ ಚುಕ್ಕಿ ಹಳ್ಳಿ ಹಕ್ಕಿ ಎಂದು ಹೆಸರಿಡಲಾಗಿದೆ. ಫಸ್ಟ್ ಲಕ್ ನಲ್ಲಿ ವೈಷ್ಣವಿ ಮತ್ತು ಮಹೇಶ್ ಇಬ್ಬರು ಚಾಪೆ ಮತ್ತು ದಿಂಬು ಹಿಡಿದು ತಿರುಗಿ ನಿಂತಿದ್ದಾರೆ. ಫಸ್ಟ್ ನೋಡುತ್ತಿದ್ರೆ ಇದು ಮದುವೆಯಾಗಿ ಮೊದಲ ರಾತ್ರಿಯ ಫೋಟೋ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಇನ್ನು ಈ ಬಿಳಿ ಚುಕ್ಕಿ ಹಳ್ಳಿ ಹಕ್ಕಿ ಸಿನಿಮಾದ ಶೀರ್ಷಿಕೆ ಜೊತೆ ಇರುವ Untouched Romance Unspoken Concept ಎಂಬ ಟ್ಯಾಗ್​ ಲೈನ್​ ಕೂಡ ಗಮನ ಸೆಳೆಯುತ್ತಿದೆ. ಅಂದಹಾಗೆ ವಿಟಿಲಿಗೋ ಸಮಸ್ಯೆ ಕುರಿತು ಭಾರತದಲ್ಲಿ ತಯಾರಾಗಲಿರುವ ಮೊಟ್ಟ ಮೊದಲ ಸಿನಿಮಾ ಎಂದು ಕೂಡ ಈ ಚಿತ್ರದ ಪೋಸ್ಟರ್ ​ನಲ್ಲಿ ಬರೆಯಲಾಗಿದೆ. ಈ ಎಲ್ಲ ಕಾರಣಗಳಿಂದ ಬಿಳಿ ಚುಕ್ಕಿ ಹಳ್ಳಿ ಹಕ್ಕಿ ಚಿತ್ರ ನಿರೀಕ್ಷೆ ಮೂಡಿಸಿದೆ.

Bahukrita Vesham: ವೈಷ್ಣವಿ ಗೌಡ ನಟನೆಯ ಚಿತ್ರಕ್ಕೆ ಸಿನಿಮಂದಿಯ ಅಭಿಪ್ರಾಯವೇನು?

ವಿಶೇಷ ಎಂದರೆ ಚಿತ್ರಕ್ಕೆ ನಿರ್ದೇಶನ ಮಾಡುವ ಜೊತೆಗೆ ನಟನೆ ಮತ್ತು ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಚಿತ್ರದಲ್ಲಿ ಮಹೇಶ್ ಗೌಡ ದಿನೇಶ್ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಇನ್ನು ವೈಷ್ಣವಿ ಗೌಡ ಹಳ್ಳಿ ಹುಡ್ಗಿ ಕವಿತಾ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಾಯಕ ದಿನೇಶ್ ತೊನ್ನು(ವಿಟಿಲಿಗೋ) ಸಮಸ್ಯೆ ಇರುತ್ತೇ. ಆತ ಪಕ್ಕದ ಊರಿನ ಚೆಂದದ ಮುದ್ದು ಮುದ್ದಾದ ಹುಡ್ಗಿ ಕವಿತಾಳನ್ನು ವರಿಸ್ತಾರೆ. ಸಮಸ್ಯೆ ಗೊತ್ತಿದ್ರೂ ಕವಿತಾ ತನ್ನನ್ನ ಮದ್ವೆಯಾಗೋದೇಕೆ ಅನ್ನೋ ಗೊಂದಲ ದಿನೇಶ್ ಗೆ ಕಾಡ್ತಿರುತ್ತದೆ. ಇದನ್ನ ಕಾಮಿಡಿ ಮೂಲಕ ಹೇಳುವುದು ದೊಡ್ಡ ಚಾಲೆಂಜ್ ಆಗಿದೆ ಎಂದು ಚಿತ್ರದ ಒನ್ ಲೈನ್ ಸ್ಟೋರಿ ವಿವರಿಸಿದರು ಮಹೇಶ್.

Tarot Card: ಬಿಗ್ ಬಾಸ್ ವೈಷ್ಣವಿ ಗೌಡ ಮದುವೆ ದಿನಾಂಕ ರಿವೀಲ್?

ಅಂದಹಾಗೆ ‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ ಸಿನಿಮಾ ರೋಮ್ಯಾಂಟಿಕ್ ಕಾಮಿಡಿ ಜಾನರ್ ಚಿತ್ರ. ಸಿನಿ ಪ್ರೇಕ್ಷಕರಿಗೆ ಪಕ್ಕಾ ಮನರಂಜನೆ ಸಿಗಲಿದೆ ಎನ್ನುವುದು ನಿರ್ದೇಶಕರ ಮಾತು. ಮಹೇಶ್ ಗೌಡ ತಮ್ಮದೇ ತೊನ್ನಿನ ಸಮಸ್ಯೆಯನ್ನು ಇಲ್ಲಿ ಕಥೆಯಾಗಿ ಪರಿವರ್ತಿಸಿದ್ದಾರೆ. ಇಂತಹ ಸಿನಿಮಾಗಳನ್ನು ತೆರೆಮೇಲೆ ಮಾಡೋದು ಕಷ್ಟ. ಅಂತಹ ಸಾಹಸಕ್ಕೆ ಮುಂದಾಗಿದ್ದಾರೆ ಮಹೇಶ್ ಗೌಡ. ಈ ಸಿನಿಮಾ ಹೇಗೆ ಮೂಡಿಬರಲಿದೆ, ಪ್ರೇಕ್ಷಕರ ಹೃದಯ ಗೆಲ್ತಾರಾ ಎನ್ನುವುದನ್ನು ಕಾದು ನೋಡಬೇಕು.

 

click me!