ಕೊನೆಗೂ ರಿವೀಲ್ ಆಯ್ತು ಶಾರುಖ್ - ಅಟ್ಲೀ ಸಿನಿಮಾದ ಟೈಟಲ್; ಶೀಘ್ರದಲ್ಲೇ ಟೀಸರ್ ಬಿಡುಗಡೆ

Published : Jun 03, 2022, 11:18 AM IST
ಕೊನೆಗೂ ರಿವೀಲ್ ಆಯ್ತು ಶಾರುಖ್ - ಅಟ್ಲೀ ಸಿನಿಮಾದ ಟೈಟಲ್; ಶೀಘ್ರದಲ್ಲೇ ಟೀಸರ್ ಬಿಡುಗಡೆ

ಸಾರಾಂಶ

ಶಾರುಖ್ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ಸಿನಿಮಾತಂಡ ಅಧಿಕೃತವಾಗಿ ಟೈಟಲ್ ಬಹಿರಂಗ ಪಡಿಸುವ ಮೊದಲೇ ಸಿನಿಮಾದ ಟೈಟಲ್ ಬಹಿರಂಗವಾಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂದಹಾಗೆ ಸಿನಿಮಾಗೆ 'ಜವಾನ್' ಎಂದು ಟೈಟಲ್ ಇಡಲಾಗಿದೆ. ಶೀಘ್ರದಲ್ಲೇ ಟೀಸರ್ ರಿಲೀಸ್ ಮಾಡುವ ಮೂಲಕ ಟೈಟಲ್ ರಿವೀಲ್ ಮಾಡಲಿದೆ ಸಿನಿಮಾತಂಡ.

ಬಾಲಿವುಡ್ ಕಿಂಗ್ ಖಾನ್ ಶಾರುಖ್(Shah Rukh Khan) ತಮಿಳು ನಿರ್ದೇಶಕ ಅಟ್ಲೀ(Atlee) ಜೊತೆ ಸಿನಿಮಾ ಮಾಡುತ್ತಿರುವುದು ಹಳೆಯ ವಿಚಾರ. ಈಗಾಗಲೇ ಸಿನಿಮಾದ ಚಿತ್ರೀಕರಣ ಸಹ ಪ್ರಾರಂಭವಾಗಿದ್ದು ಭರ್ಜರಿಯಾಗಿ ನಡೆಯುತ್ತಿದೆ. ಅಂದಹಾಗೆ ಶಾರುಖ್ ಮತ್ತು ಅಟ್ಲೀ ಸಿನಿಮಾ ಸಾಕಷ್ಟು ವಿಚಾರಕ್ಕೆ ಸುದ್ದಿಯಾಗಿತ್ತು. ಮೊದಲ ಬಾರಿಗೆ ತಮಿಳಿನ ಯಂಗ್ ನಿರ್ದೇಶಕನ ಜೊತೆ ಶಾರುಖ್ ಕೆಲಸ ಮಾಡುತ್ತಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತ್ತು. ಅಲ್ಲದೇ ಸಿನಿಮಾದಲ್ಲಿ ನಾಯಕಿಯಾಗಿ ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷ. ಸಾಕಷ್ಟು ವಿಚಾರಗಳಿಗೆ ಸದ್ದು ಮಾಡುತ್ತಿದ್ದ ಶಾರುಖ್ ಸಿನಿಮಾದ ಟೈಟಲ್ ಭಾರಿ ಕುತೂಹಲ ಮೂಡಿಸಿತ್ತು. ಶಾರುಖ್ ಮತ್ತು ನಟನತಾರಾ(Nayanthara) ಸಿನಿಮಾದ ಟೈಟಲ್ ಏನಾಗಿರಬಹುದು ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದರು.

ಇದೀಗ ಶಾರುಖ್ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ಸಿನಿಮಾತಂಡ ಅಧಿಕೃತವಾಗಿ ಟೈಟಲ್ ಬಹಿರಂಗ ಪಡಿಸುವ ಮೊದಲೇ ಸಿನಿಮಾದ ಟೈಟಲ್ ಬಹಿರಂಗವಾಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂದಹಾಗೆ ಸಿನಿಮಾಗೆ 'ಜವಾನ್'(Jawan) ಎಂದು ಟೈಟಲ್ ಇಡಲಾಗಿದೆ. ಶೀಘ್ರದಲ್ಲೇ ಟೀಸರ್ ರಿಲೀಸ್ ಮಾಡುವ ಮೂಲಕ ಟೈಟಲ್ ರಿವೀಲ್ ಮಾಡಲಿದೆ ಸಿನಿಮಾತಂಡ. 1 ನಿಮಿಷದ 34 ಸೆಕೆಂಡ್ ಟೀಸರ್ ಈಗಾಗಲೇ ಬಿಡುಗಡೆಗೆ ಸಿದ್ಧವಾಗಿದೆ ಎಂದು ಪಿಂಕ್‌ವಿಲ್ಲಾ ವರದಿ ಮಾಡಿದೆ.

25 ಲಕ್ಷ ರೂ. ಬೆಲೆಬಾಳುವ ಶಾರುಖ್ ಮನೆಯ ಹೊಸ ನಾಮಫಲಕ ನಾಪತ್ತೆ

ಈ ಸಿನಿಮಾದಲ್ಲಿ ಶಾರುಖ್ ಖಾನ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. ನಯನತಾರಾ ಇನ್ವೆಸ್ಟಿಗೇಟಿವ್ ಆಫೀಸ್ ಪಾತ್ರದಲ್ಲಿ ನಟಿಸಿದ್ದಾರಂತೆ. ಶಾರುಖ್ ಖಾನ್ ಒಂದು ಪಾತ್ರದಲ್ಲಿ ಗ್ಯಾಂಗ್‌ಸ್ಟರ್ ಮಗನ ಪಾತ್ರದಲ್ಲಿ ಕಾಣಿಸಿಕೊಂಡರೆ ಮತ್ತೊಂದು ಪಾತ್ರದಲ್ಲಿ ಶಾರುಖ್ ತಂದೆಯ ಪಾತ್ರ ಎಂದು ಹೇಳಲಾಗುತ್ತಿದೆ. ಇನ್ನು ನಟಿ ಸಾನ್ಯ ಮಲ್ಹೋತ್ರ ಕೂಡ ಪ್ರಮುಕ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಇದ್ಯಾವುದರ ಬಗ್ಗೆಯೂ ಸಿನಿಮಾತಂಡ ಇನ್ನು ಅಧಿಕೃತವಾಗಿ ಎಲ್ಲಿಯೂ ಬಹಿರಂಗ ಪಡಿಸಿಲ್ಲ.

Kangna ಸೇರಿದಂತೆ ಈ ಬಾಲಿವುಡ್‌ ನಟಿಯರು ಚೈನ್ ಸ್ಮೋಕರ್ಸ್‌!

ಅಂದಹಾಗೆ ಶಾರುಖ್ ಖಾನ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಶಾರುಖ್ ಸಿನಿಮಾ ತೆರೆಗೆ ಬರದೆ ನಾಲ್ಕು ವರ್ಷಗಳಾಗಿದೆ. ಝೀರೋ ಸಿನಿಮಾದ ಸೋಲಿನ ಬಳಿಕ ಶಾರುಖ್ ಮತ್ತೆ ತೆರೆಮೇಲೆ ಬಂದಿಲ್ಲ. ಸಾಲು ಸಾಲು ಸೋಲಿನಿಂದ ಕಂಗೆಟ್ಟಿದ್ದ ಶಾರುಖ್ ಖಾನ್‌ ಮತ್ತೆ ಸಿನಿಮಾ ಮಾಡುವುದನ್ನೇ ಬಿಟ್ಟಿದ್ದರು. ಇದೀಗ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈಗಾಗಲೇ ಶಾರುಖ್ ಪಠಾಣ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್ ಜೊತೆ ದೀಪಿಕಾ ಪಡುಕೋಣೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಬಳಿಕ ರಾಜ್ ಕುಮಾರ್ ಹಿರಾನಿ ಮತ್ತು ಅಟ್ಲೀ ಜೊತೆ ಸಿನಿಮಾ ಮಾಡುತ್ತಿದ್ದಾರೆ. ರಾಜ್ ಕುಮಾರ್ ಹಿರಾನಿ ಸಿನಿಮಾದಲ್ಲಿ ಶಾರುಖ್‌ಗೆ ನಾಯಕಿಯಾಗಿ ತಾಪ್ಸಿ ಪನ್ನು ಕೊಣಿಸಿಕೊಳ್ಳುತ್ತಿದ್ದಾರೆ. ಸದ್ಯ ಶಾರುಖ್ ಈ ಎರಡು ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಮುಂದಿನ ವರ್ಷ ಪಠಾಣ್ ಸಿನಿಮಾ ಮೂಲಕ ಮೊದಲು ಅಭಿಮಾನಿಗಳ ಮುಂದೆ ಬರಲಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮದುವೆಯಾಗುತ್ತಿದ್ದಂತೆಯೇ ರಶ್ಮಿಕಾ ಜತೆ ಹುಟ್ಟೂರಿಗೆ ಭೇಟಿಕೊಟ್ಟ ವಿಜಯ್ ದೇವರಕೊಂಡ! ಭರ್ಜರಿ ಮಟನ್ ಊಟ ಹಾಕಿಸಿದ ಸೆಲಿಬ್ರಿಟಿ ಜೋಡಿ
ವಿಜ್ಜು ತೆಕ್ಕೆಯೊಳಗೆ ನಾನು, ಆ ರಾತ್ರಿಯ ಗುಂಗಿನಿಂದ ಇನ್ನೂ ಹೊರ ಬರಲಾಗಿಲ್ಲ: Rashmika Mandanna