
ಸಕಲಕಲವಲ್ಲಭ ಕಮಲ್ ಹಾಸನ್(kamal haasan) ನಟನೆಯ ಬಹುನಿರೀಕ್ಷೆಯ ವಿಕ್ರಮ್(Vikram) ಸಿನಿಮಾ ಇಂದು (ಜೂನ್ 3) ದೇಶವಿದೇಶಗಳಲ್ಲಿ ತೆರೆಗೆ ಬಂದಿದೆ. ಟ್ರೈಲರ್ ಮತ್ತು ಹಾಡುಗಳ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದ್ದ ವಿಕ್ರಮ್ ಸಿನಿಮಾವನ್ನು ಅಭಿಮಾನಿಗಳು ಚಿತ್ರಮಂದಿರಗಳಲ್ಲಿ ನೋಡಿ ಎಂಜಾಯ್ ಮಾಡಿದ್ದಾರೆ. ಮೊದಲ ದಿನ ಮೊದಲ ಶೋ ವೀಕ್ಷಿಸಿದ ಅಭಿಮಾನಿಗಳು ಫುಷ್ ಖುಷ್ ಆಗಿದ್ದಾರೆ. ದೊಡ್ಡ ಪರದೆಮೇಲೆ ಅಬ್ಬರಿಸಿರುವ ಕಮಲ್ ಹಾಸನ್ ನೋಡಿ ಅಭಿಮಾನಿಗಳು ಸಂತಸ ವ್ಯಕತಪಡಿಸುತ್ತಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಶೋ ಪ್ರಾರಂಭವಾಗಿದ್ದು ಅಭಿಮಾನಿಗಳು ಸಿನಿಮಾ ನೋಡಿ ಕುಣಿದು ಕುಪ್ಪಳಿಸಿದ್ದಾರೆ.
ವಿಕ್ರಮ್ ಸಿನಿಮಾದಲ್ಲಿ ಕಮಲ್ ಹಾಸನ್ ಜೊತೆ ಖ್ಯಾತ ನಟರಾಟ ಫಹಾದ್ ಫಾಸಿಲ್(Fahadh Faasil), ವಿಜಯ್ ಸೇತುಪತಿ(Vijay Sethupathi) ನಟಿಸಿದ್ದಾರೆ. ಇನ್ನು ತಮಿಳಿನ ಮತ್ತೋರ್ವ ಖ್ಯಾತ ನಟ ಸೂರ್ಯ(Surya) ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಮಲ್ ಹಾಸನ್ ಅಭಿಮಾನಿಗಳು ಸಿನಿಮಾವನ್ನು ಅತ್ಯುತ್ತಮ ಆಕ್ಷನ್ ಸಿನಿಮಾ ಎಂದು ಕರೆಯುತ್ತಿದ್ದಾರೆ. ನಟ ಸೂರ್ಯ ನೋಡಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಸಿನಿಮಾ ನೋಡಿದ ಅಭಿಮಾನಿಗಳು ಟ್ವಿಟ್ಟರ್ ಮೂಲಕ ತಮ್ಮ ಅಭಿಪ್ರಾಯ ಹೊರಹಾಕುತ್ತಿದ್ದಾರೆ. ಮೊದಲ ವಿಮರ್ಶೆ ತಿಳಿಸಿದ್ದಾರೆ. ಅಭಿಮಾನಿಗಳ ಮೊದಲ ಟ್ವಿಟ್ಟರ್ ವಿಮರ್ಶೆ ಹೀಗಿದೆ.
ಅಭಿಮಾನಿಯೊಬ್ಬ ಟ್ವಿಟ್ಟರ್‌ನಲ್ಲಿ ಕಿಂಗ್ ಕಮರ್ಶಿಯಲ್ ಸಿನಿಮಾ ಮೂಲಕ ಮತ್ತೆ ವಾಪಾಸ್ ಆಗಿದ್ದಾರೆ. ಮೊದಲ ಭಾಗ ಅದ್ಭುತವಾಗಿದೆ. ಸ್ಕ್ರೀನ್‌ಪ್ಲೇ ಎಂಗೇಜಿಂಗ್ ಆಗಿದೆ. ಇತ್ತೀಚಿನ ದಿನಗಳಲ್ಲಿ ತಮಿಳಿನಲ್ಲಿ ಬಂದ ಅತ್ಯಂತ ಅಧ್ಬುತ ಸಿನಿಮಾವಾಗಿದೆ ಎಂದು ಹೇಳಿದ್ದಾರೆ.
ತಲೈವಾ ರಜನಿಕಾಂತ್ ಭೇಟಿಯಾದ ನಟ ಕಮಲ್ ಹಾಸನ್; ಫೋಟೋ ವೈರಲ್
ಮತ್ತೋರ್ವ ಅಭಿಮಾನಿ ಕಾಮೆಂಟ್ ಮಾಡಿ, ವಿಕ್ರಮ್ ಸಿನಿಮಾ ನೋಡಿ ಆಯ್ತು. ಖಂಡಿತವಾಗಿಯೂ ಬ್ಲಾಕ್ ಬಸ್ಟರ್. ನಿರ್ದೇಶಕ ಲೋಕೇಶ್ ಕನಗರಾಜ್, ಸಂಗೀತ ನಿರ್ದೇಶಕ ಅನಿರುದ್ಧ್, ಕಮಲ್ ಹಾಸನ್, ವಿಜಯ್ ಸೇತುಪತಿ ಮತ್ತು ಫಹಾದ್ ಅದ್ಭುತವಾಗಿ ನಟಿಸಿದ್ದಾರೆ. ದೊಡ್ಡ ಪರದೆ ಮೇಲೆ ಈ ಸಿನಿಮಾದ ಆಕ್ಷನ್ ದೃ್ಯ ಮತ್ತು ಸೂರ್ಯ ನಟನೆ ನೋಡದೆ ಮಿಸ್ ಮಾಡಿಕೊಳ್ಳಬೇಡಿ ಎಂದು ಹೇಳಿದ್ದಾರೆ.
ಪ್ಯಾನ್ ಇಂಡಿಯಾ ಏನು ಹೊಸದಲ್ಲ; KGF, RRRಗೂ ಮೊದಲೇ ಇತ್ತು- ಕಮಲ್ ಹಾಸನ್
ಮತ್ತೋರ್ವ ಅಭಿಮಾನಿ ತಮ್ಮ ವಿಮರ್ಶೆ ಮಾಡಿ 3.5 ಸ್ಟಾರ್ ನೀಡಿದ್ದಾರೆ. ನಿರ್ದೇಶಕ ಲೋಕೇಶ್ ಕನಗರಾಜ್ ಅವರ ಆಕ್ಷನ್ ಪ್ಯಾಕ್ಡ್ ಸಿನಿಮಾ. ಕಮಲ್ ಹಾಸನ್, ವಿಜಯ್ ಸೇತುಪತಿ, ಫಹಾದ್ ಫಾಸಿಲ್ ಮತ್ತು ಸೂರ್ಯ ಪರ್ಫಾಮೆನ್ಸ್ ಅದ್ಭುತ. ಅನಿರುದ್ಧ್ ಅವರ ಬಿಜಿಎಂ ಸಿನಿಮಾದ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಿದ್ದಾರೆ.
ಸ್ಟ್ರಾಂಗ್ ಸ್ಕ್ರೀನ್ ಪ್ಲೇ, ಪ್ರತಿಯೊಬ್ಬರ ಪಾತ್ರಗಳು ಸಹ ಆಕರ್ಷಕವಾಗಿದೆ. ಬಿಜಿಎಂ ಸ್ಕೋರ್ ಮತ್ತು ಕಮಲ್ ಹಾಸನ್ ಅವರ ದೆಹಲಿ ಮತ್ತು ವಿಕ್ರಮ್-3 ಬಗ್ಗೆ ಕನೆಕ್ಷನ್ ಇದೆ ಎಂದು ಹೇಳಿದ್ದಾರೆ. ವಿಜಯ್ ಸೇತುಪತಿ ಅಬ್ಬರಿಸಿದ್ದಾರೆ ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.