
ಬಹುಭಾಷಾ ಗಾಯಕ ಕೃಷ್ಣಕುಮಾರ್ ಕುನ್ನತ್ ಉರ್ಫ್ ಕೆಕೆ ಮೇ 31ರಂದು ಕೋಲ್ಕತ್ತಾದಲ್ಲಿ ನಡೆದ ಸಂಗೀತ ಕಾರ್ಯಕ್ರಮದ ವೇಳೆ ಹೃದಯಾಘಾತದಿಂದ ಅಗಲಿದ್ದಾರೆ. 53 ವರ್ಷದ ಕೆಕೆ ಕಾರ್ಯಕ್ರಮದಲ್ಲಿ ತಮ್ಮ ಪ್ರದರ್ಶನ ನೀಡುತ್ತಿದ್ದಾಗ, ಹಾಡುತ್ತಿರುವಾಗ ಅವರ ಆರೋಗ್ಯ ಹದಗೆಟ್ಟಿತ್ತು, ಹೀಗಿದ್ದರೂ ಅವರು ಇನ್ನೂ ಸ್ವಲ್ಪ ಸಮಯ ಹಾಡಲು ಪ್ರಯತ್ನಿಸಿದರು ಆದರೆ ಅದು ಸಾಧ್ಯವಾಗಲಿಲ್ಲ. ಇದ್ದಕ್ಕಿದ್ದಂತೆ ಮೈಕ್ ಕೆಳಗಿಟ್ಟು ತಮ್ಮ ತಂಡದೊಂದಿಗೆ ಕಾರ್ಯಕ್ರಮವನ್ನು ತೊರೆದರು.
ಜಾವೇದ್ ಅಲಿ ಹೇಳಿಕೆ:
'ನನಗೆ ಬೇರೆ ಯಾವ ಕೆಲಸಗಳ ಮೇಲೆ ಗಮನ ಕೊಡಲು ಆಗುತ್ತಿಲ್ಲ. ಪ್ರತಿ ಕ್ಷಣವೂ ಕೆಕೆ ನೆನಪಾಗುತ್ತಿದ್ದಾನೆ. ಕೆಕೆ ಮರೆಯಲಾಗುತ್ತಿಲ್ಲ. ಸಂಗೀತ ಲೋಕಕ್ಕೆ ದುಖಃಕರವಾದ ದಿನ ಇದಾಗಿರುತ್ತದೆ. ಅಸಲಿ ಧ್ವನಿಯನ್ನು ಚಿತ್ರರಂಗ ಕಳೆದುಕೊಂಡಿದೆ, ಒಳ್ಳೆಯ ವ್ಯಕ್ತಿಯನ್ನು ಕಳೆದುಕೊಂಡಿದೆ. ಒಂದು ದಿನವೂ ಒಬ್ಬರ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿಲ್ಲ' ಎಂದು ಜಾವೇದ್ ಅಲಿ ಇಟೈಮ್ಸ್ ಜೊತೆ ಮಾತನಾಡಿದ್ದಾರೆ.
'ಕೆಕೆ ಪತ್ನಿ ಮತ್ತು ಮಕ್ಕಳನ್ನು ನಾನು ಅಂತ್ಯಸಂಸ್ಕಾರದ ದಿನ ಮುಖ ಕೊಟ್ಟ ಮಾತನಾಡಲು ಶಕ್ತಿ ಇರಲಿಲ್ಲ. ಅವರನ್ನು ನೋಡಿ ನನಗೆ ಕತ್ತು ಎತ್ತಲು ಶಕ್ತಿ ಕೂಡ ಇರಲಿಲ್ಲ. ಅವರ ಜೊತೆ ಮಾತನಾಡಬೇಕು ಎಂದು ಸಣ್ಣ ಪ್ರಯತ್ನ ಕೂಡ ಮಾಡಲಿಲ್ಲ. ಸ್ವಲ್ಪ ದಿನಗಳ ನಂತರ ನಾನು ಕೆಕೆ ಕುಟುಂಬಕ್ಕೆ ಭೇಟಿ ಕೊಡುವೆ' ಎಂದು ಜಾವೇದ್ ಹೇಳಿದ್ದಾರೆ.
ಕೆಕೆ ಕೇವಲ ಒಂದು ತಾಸು ಕಾರ್ಯಕ್ರಮ ನೀಡಲು ಸಾಧ್ಯವಾಯಿತು
ವರದಿಗಳ ಪ್ರಕಾರ, ಈವೆಂಟ್‌ನಲ್ಲಿ ಕೆಕೆ ಕೇವಲ ಒಂದು ಗಂಟೆಯ ಅವಧಿಯ ಪ್ರದರ್ಶನವನ್ನು ನೀಡಲು ಸಾಧ್ಯವಾಯಿತು. ಆದರೆ ಅಷ್ಟರಲ್ಲಾಗಲೇ ಅವರ ಆರೋಗ್ಯವು ಕ್ಷೀಣಿಸಲು ಪ್ರಾರಂಭಿಸಿತು. ಅವರು ಈವೆಂಟ್‌ನಲ್ಲಿ ನೀರಿನ ಸ್ಪಾಟ್‌ಲೈಟ್‌ನಿಂದಲೂ ತೊಂದರೆ ಅನುಭವಿಸುತ್ತಿದ್ದರು ಮತ್ತು ಅದನ್ನು ಆಫ್ ಮಾಡಲು ಕೇಳಿದರು. ಹೀಗಿದ್ದರೂ ಅವರ ಆರೋಗ್ಯವು ಹದಗೆಡುತ್ತಲೇ ಇತ್ತು , ಹೀಗಾಗಿ ಅವರು ತಮ್ಮ ಹೋಟೆಲ್‌ಗೆ ಹೋದನು. ಆದರೆ, ಹೋಟೆಲ್ ತಲುಪಿದ ನಂತರವೂ ಅವರಿಗೆ ಹುಷಾರಿರಲಿಲ್ಲ. ಅಲ್ಲಿಯೇ ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು. ಅವರ ಸಾವಿನ ಸುದ್ದಿ ಹೊರಬೀಳುತ್ತಿದ್ದಂತೆ ಭಾರೀ ಸಂಚಲನ ಉಂಟಾಯಿತು. ಅವರು ನಮ್ಮೊಂದಿಗಿಲ್ಲ ಎಂದು ಯಾರೂ ನಂಬಲು ಸಿದ್ಧರಿರಲಿಲ್ಲ.
Singer KK ಸಂಗೀತ ಕಾರ್ಯಕ್ರಮ ನೀಡಿದ ಬೆನ್ನಲ್ಲೇ ಖ್ಯಾತ ಬಾಲಿವುಡ್ ಗಾಯಕ ಕೆಕೆ ನಿಧನ
ಖ್ಯಾತ ಗಾಯಕ ಸೋನು ನಿಗಂ ಇನ್ಸ್ಟಾಗ್ರಾಮ್ ಸ್ಟೇಟಸ್‌ನಲ್ಲಿ ಕೆಕೆ ಬಗ್ಗೆ ವಿಡಿಯೋ ಶೇರ್ ಮಾಡಿದ್ದಾರೆ. ಕೆಕೆ ಭಾಯ್ ಎಂದು ಬರೆದು ವಿಡಿಯೋ ಹಂಚಿಕೊಂಡಿದ್ದಾರೆ. ಇನ್ನು ಖ್ಯಾತ ಕನ್ನಡದ ಗಾಯಕ ವಿಜಯ್ ಪ್ರಕಾಶ್(Vjay Prakash) ಕೂಡ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ. 'ಕೆಕೆ ನನಗೆ ನನ್ನ ಜಾಹೀರಾತು ದಿನಗಳಿಂದನೂ ಗೊತ್ತು. ಅವರು ಹಾಡಿದ ಪ್ರತಿ ಹಾಡಿನಲ್ಲೂ ಪ್ರತಿಧ್ವನಿಸುವ ಧ್ವನಿ. ಕೆಕೆ ಇನ್ನಿಲ್ಲ ಎನ್ನುವುದು ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ. ಆತ್ಮಕ್ಕೆ ಶಾಂತಿ ಸಿಗಲಿ ಸಹೋದರ' ಎಂದು ಹೇಳಿದ್ದಾರೆ.
ಭಾರತದ ಮತ್ತೋರ್ವ ಖ್ಯಾತ ಗಾಯಕ ವಿಶಾಲ್ ದದ್ಲಾನಿ(Vishal Dadlani) ಕೂಡ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. 'ಈ ಸುದ್ದಿ ಕೇಳಿ ನನಗೆ ಕಣ್ಣೀರು ನಿಲ್ಲುತ್ತಿಲ್ಲ. ಎಂಥ ಅದ್ಭುತವಾದ ವ್ಯಕ್ತಿ, ಎಂಥ ಅದ್ಭುತವಾದ ಧ್ವನಿ, ಹೃದಯವಂತ, ಉತ್ತಮ ವ್ಯಕ್ತಿತ್ವ. ಕೆಕೆ ಯಾವಾಗಲು ಜೀವಂತ' ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.