ಸಾಯಿ ಪಲ್ಲವಿ V/s ಜಾಹ್ನವಿ ಕಪೂರ್: ನಿತೇಶ್ ತಿವಾರಿಯವರ ರಾಮಾಯಣದಲ್ಲಿ ಯಾರಿಗೆ ಒಲಿಯಲಿದ್ದಾಳೆ ಸೀತಾಮಾತೆ?
ರಾಮಾಯಣವನ್ನು ಆಧರಿಸಿ ಇದಾಗಲೇ ಕೆಲವು ಚಿತ್ರಗಳು ಬಂದಿದ್ದು, ಇದೀಗ ಮತ್ತೊಂದು ರಾಮಾಯಣ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಕೆಲವು ತಿಂಗಳುಗಳಿಂದ ಭಾರಿ ಸದ್ದು ಮಾಡುತ್ತಿರುವ ರಾಮಾಯಣ ಚಿತ್ರದ ಬಿಗ್ ಅಪ್ಡೇಟ್ ಒಂದು ಹೊರಬಿದ್ದಿದೆ. ನಿತೇಶ್ ತಿವಾರಿ ಮಹಾಗ್ರಂಥವನ್ನು ತೆರೆಮೇಲೆ ತರುವುದಕ್ಕೆ ಹೊರಟಿರುವುದು ಅನೇಕ ತಿಂಗಳುಗಳಿಂದ ಸದ್ದು ಮಾಡುತ್ತಲೇ ಇತ್ತು. ರಣ್‌ಬೀರ್ ಕಪೂರ್ ರಾಮನಾಗಿ ನಟಿಸುತ್ತಿದ್ದರೆ, ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದೂ ಸುದ್ದಿಯಾಗಿತ್ತು. ಈ ಚಿತ್ರದ ಬಿಡುಗಡೆ ಕನ್ನಡಿಗರ ಪಾಲಿಗೆ ಬಹುನಿರೀಕ್ಷಿತವಾಗಿದೆ. ಇದಕ್ಕೆ ಕಾರಣ, ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಯಶ್ ಅವರು ನಟಿಸುತ್ತಿದ್ದಾರೆ ಎನ್ನುವ ಸುದ್ದಿ. ಇವರು ನಟಿಸುತ್ತಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿತ್ತು. ಆದರೆ ರಾಮಾಯಣದಲ್ಲಿ ರಾವಣನಾಗಿ ತೆರೆ ಮೇಲೆ ಯಶ್ ಬರುತ್ತಿರುವುದು ಬಹುತೇಕ ಖಚಿತವಾಗಿದೆ ಎಂಬ ಸುದ್ದಿಯೂ ಇದೆ.
ಈ ಚಿತ್ರದ ಕುರಿತು ನಿರ್ದೇಶಕ ನಿತೇಶ್ ತಿವಾರಿ ಇದುವರೆಗೂ ಸೀಕ್ರೇಟ್ ಮೆಂಟೇನ್ ಮಾಡುತ್ತಲೇ ಬಂದಿದ್ದಾರೆ. ಚಿತ್ರದ ಶೂಟಿಂಗ್ ಬಗ್ಗೆಯೂ ಅವರು ಯಾವುದೇ ಮಾಹಿತಿ ಕೊಡಲಿಲ್ಲ. ಆದರೆ ರಾಮನಾಗಿ ಕಾಣಿಸಿಕೊಳ್ಳುತ್ತಿರುವ ರಣ್‌ಬೀರ್ ಕಪೂರ್ ಫ್ಯಾನ್ ಅಕ್ಷಯ್ ಚತುರ್ವೇದಿ ಎನ್ನುವವರು ಮಾಡಿರುವ ಟ್ವೀಟ್ನಿಂದ ಕೆಲ ದಿನಗಳಿಂದ ಇದು ಮತ್ತೆ ಸದ್ದು ಮಾಡುತ್ತಿದೆ. 'ರಾಮಾಯಣ' 2024ರ ಬೇಸಿಗೆಯಲ್ಲಿ ಶುರುವಾಗಲಿದೆ ಎಂದು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದರು. ವಿಮಾನ ನಿಲ್ದಾಣದಲ್ಲಿ ಇಮಿಗ್ರೇಷನ್ ವೇಳೆ ನಿಂತಿದ್ದ ಸಂದರ್ಭದಲ್ಲಿ ರಣ್‌ಬೀರ್ ಕಪೂರ್ ಜೊತೆ ಮಾತನಾಡುತ್ತಿದ್ದೆ. ಆ ಸಮಯದಲ್ಲಿ ಈ ವಿಷಯ ತಿಳಿದಿದೆ. ರಾಮಾಯಣ 2024 ಬೇಸಿಗೆಯಿಂದ ಶುರುವಾಗುತ್ತೆ ಎಂದು ಅವರೇ ಹೇಳಿದರು ಎಂದು ಅಕ್ಷಯ್ ಅವರು ಬರೆದುಕೊಂಡಿದ್ದರು.
ಅಪ್ಪಂಗೂ ಇಬ್ಬರು, ಅಣ್ಣಂಗೂ ಇಬ್ಬರು... ಸಲ್ಮಾನ್ ಖಾನ್ ಮದ್ವೆ ಯಾವಾಗ? ಕೊನೆಗೂ ಮೌನ ಮುರಿದ ನಟ!
ಆದರೆ ಇದೀಗ ಮತ್ತೊಂದು ಅಪ್ಡೇಟ್ ಬಂದಿದೆ. ಅದೇನೆಂದರೆ, ಸೀತೆಯ ಪಾತ್ರಕ್ಕೆ ಸಾಯಿ ಪಲ್ಲವಿ (Sai Pallavi) ಜಾಗದಲ್ಲಿ ಜಾಹ್ನವಿ ಕಪೂರ್ ಅವರನ್ನು ಆಯ್ಕೆ ಮಾಡಲಾಗುತ್ತಿದೆ ಎನ್ನುವುದು. ಇಲ್ಲಿಯರೆಗೆ ಸೀತೆಯಾಗಿ ಸಾಯಿ ಪಲ್ಲವಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಆ ಜಾಗವನ್ನು ಜಾಹ್ನವಿ ತುಂಬಲಿದ್ದಾರೆ ಎನ್ನಲಾಗುತ್ತಿದೆ. ಸಾಯಿ ಪಲ್ಲವಿ ಬದಲಿಗೆ ಜಾಹ್ನವಿ ಈ ಪಾತ್ರಕ್ಕೆ ಸೂಕ್ತರು ಎಂದು ನಿರ್ದೇಶಕ ನಿತೇಶ್ ತಿವಾರಿ ನಿರ್ಧರಿಸಿರುವುದಾಗಿ ಹೇಳಲಾಗುತ್ತಿದೆ. ಅಂದಹಾಗೆ ಇವರಿಬ್ಬರೂ ಇದಾಗಲೇ ‘ಬವಾಲ್’ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇದರಿಂದ ಹೊಂದಾಣಿಕೆ ಚೆನ್ನಾಗಿದೆ ಎಂದು ‘ಪಿಂಕ್ ವಿಲ್ಲಾ’ ವರದಿ ಮಾಡಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬರಬೇಕಿದೆ.
ಇನ್ನುಳಿದಂತೆ, ವಿಭೀಷಣನ ಪಾತ್ರದಲ್ಲಿ ವಿಜಯ್ ಸೇತುಪತಿ, ಆಂಜನೇಯನಾಗಿ ಸನ್ನಿ ಡಿಯೋಲ್, ಕೈಕೇಯಿ ಪಾತ್ರದಲ್ಲಿ ಲಾರಾ ದತ್ತ ನಟಿಸುತ್ತಾರೆ ಎಂದು ಸುದ್ದಿ ಹಬ್ಬಿದೆ. ತಾವು ರಾಮನಾಗಿ ಮಿಂಚುತ್ತಿರುವ ಕಾರಣ, ಮದ್ಯ, ಮಾಂಸಾಹಾರ ಸೇವನೆಯನ್ನು ಬಿಟ್ಟಿರುವುದಾಗಿ ರಣಬೀರ್ ತಿಳಿಸಿದ್ದರು. ಇವರು ರಾಮನ ಪಾತ್ರ ಮಾಡುತ್ತಿರುವ ಬಗ್ಗೆ ಸಾಕಷ್ಟು ಅಪಸ್ವರ ಕೇಳಿ ಬಂದ ಬೆನ್ನಲ್ಲೇ ಇದನ್ನು ಅವರು ಘೋಷಿಸಿದ್ದರು. ನಟಿ ಕಂಗನಾ ರಣಾವತ್ ಕೂಡ ರಣಬೀರ್ ಅವರ ಈ ಪಾತ್ರದ ಬಗ್ಗೆ ಟೀಕಿಸಿದ್ದರು. ಇದೀಗ ರಣಬೀರ್ ಅವರು, ರಾಮಾಯಣದ ಶೂಟಿಂಗ್ ಮುಗಿಯುವವರೆಗೂ ತಾವು ಮದ್ಯ ಮತ್ತು ಮಾಂಸ ಸೇವನೆ ಮಾಡುವುದಿಲ್ಲ ಎಂದಿದ್ದರು.
ಕಂಗನಾ ರಣಾವತ್ ಬ್ರೇಕಪ್ಗೆ ಕಾರಣವಾಯ್ತಾ ಕಪ್ಪೆ? ಮಾಜಿ ಲವರ್ ಬಗ್ಗೆ ನಟಿ ಹೇಳಿದ್ದೇನು?