ಫೈಟರ್‌ ಚಿತ್ರದಲ್ಲಿ ಹೃತಿಕ್‌, ದೀಪಿಕಾ ಲಿಪ್‌ಕಿಸ್‌ ವಿರುದ್ಧ ವಾಯುಪಡೆ ಯೋಧನಿಂದ ಕೇಸ್

By Kannadaprabha News  |  First Published Feb 7, 2024, 10:21 AM IST

ಇತ್ತೀಚೆಗೆ ಬಿಡುಗಡೆಯಾದ ಹೃತಿಕ್ ರೋಷನ್‌ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಬಾಲಾಕೋಟ್‌ ದಾಳಿಯ ಕಥಾಹಂದರ ಹೊಂದಿರುವ ‘ಫೈಟರ್‌’ ಚಿತ್ರದಲ್ಲಿ ಹೃತಿಕ್‌, ದೀಪಿಕಾ ತುಟಿಗೆ ಮುತ್ತಿಕ್ಕಿರುವ ದೃಶ್ಯ ಸೇರ್ಪಡೆ ಮಾಡಿರುವುದನ್ನು ವಿರೋಧಿಸಿ ವಾಯುಪಡೆ ವಿಂಗ್‌ ಕಮಾಂಡರ್‌ರೊಬ್ಬರು ನೋಟಿಸ್‌ ನೀಡಿದ್ದಾರೆ.


ನವದೆಹಲಿ: ಇತ್ತೀಚೆಗೆ ಬಿಡುಗಡೆಯಾದ ಹೃತಿಕ್ ರೋಷನ್‌ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಬಾಲಾಕೋಟ್‌ ದಾಳಿಯ ಕಥಾಹಂದರ ಹೊಂದಿರುವ ‘ಫೈಟರ್‌’ ಚಿತ್ರದ ಇದೀಗ ವಿವಾದಕ್ಕೆ ಸಿಕ್ಕಿಹಾಕಿಕೊಂಡಿದೆ. ಚಿತ್ರದಲ್ಲಿ ಹೃತಿಕ್‌, ದೀಪಿಕಾ ತುಟಿಗೆ ಮುತ್ತಿಕ್ಕಿರುವ ದೃಶ್ಯ ಸೇರ್ಪಡೆ ಮಾಡಿರುವುದನ್ನು ವಿರೋಧಿಸಿ ವಾಯುಪಡೆ ವಿಂಗ್‌ ಕಮಾಂಡರ್‌ರೊಬ್ಬರು ನೋಟಿಸ್‌ ನೀಡಿದ್ದಾರೆ. ಚಿತ್ರದಲ್ಲಿ ವಾಯುಪಡೆಯ ಸಮವಸ್ತ್ರವನ್ನು ಧರಿಸಿ ಲಿಪ್‌ಕಿಸ್‌ ಮಾಡುತ್ತಿರುವುದು ವಾಯುಪಡೆಗೆ ಅವಮಾನ ಮಾಡಿದೆ. ಜೊತೆಗೆ ವಾಯುಪಡೆಯ ಘನತೆಗೆ ಧಕ್ಕೆ ತಂದಿದೆ. ಪಡೆಯ ಅಸಂಖ್ಯಾತ ಅಧಿಕಾರಿಗಳಿಗೆ ಅವಮಾನವಾಗಿದೆ’ ಎಂದು ಲೀಗಲ್ ನೋಟಿಸ್‌ ನೀಡಿದ್ದಾರೆ.

ಹೃತಿಕ್​ ರೋಷನ್​ ಅಭಿನಯದ ಫೈಟರ್​ ಚಿತ್ರವೂ ಕಳೆದ ಜನವರಿ 25ರಂದು  ರಿಲೀಸ್​ ಆಗಿತ್ತು.  ಈ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಪಠಾಣ್​ಗಿಂತಲೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಬೋಲ್ಡ್​ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.  ಹೃತಿಕ್ ರೋಷನ್​ ಮತ್ತು ದೀಪಿಕಾ ಪಡುಕೋಣೆ ಇಬ್ಬರೂ ಏರ್‌ಫೋರ್ಸ್ ಆಫೀಸರ್‌ ಪಾತ್ರಗಳಲ್ಲಿ ನಟಿಸಿದ್ದಾರೆ. ಏರ್​ಫೋರ್ಸ್​ ಆಫೀಸರ್​ ಆಗಿರುವ ದೀಪಿಕಾಳ ಬಹುತೇಕ ಬೆತ್ತಲೆ ವೇಷಕ್ಕೆ ಹಲವರು ಛೀಮಾರಿ ಹಾಕುತ್ತಿದ್ದಾರೆ.   ಹೇಳಿ ಕೇಳಿ ಫೈಟರ್​ ದೇಶಭಕ್ತಿ ಮೆರೆಯುವ ಚಿತ್ರ. ಇದರಲ್ಲಿಯೂ ಈ ರೀತಿ ಮುಕ್ಕಾಲಂಶ ದೇಹ ಪ್ರದರ್ಶನ ಮಾಡುವುದು ಬೇಕಾ ಎಂದು ಸಕತ್​ ಟೀಕೆಗೆ ಒಳಗಾಗುತ್ತಿದೆ. ಇನ್ನೊಂದಿಷ್ಟು ಮಂದಿ ಇದೇ ವೇಳೆ ಬಾಯಿ ಚಪ್ಪರಿಸಿಕೊಂಡು ಬೆತ್ತಲಾದರೆ ಏನು ಎಂದೂ ಕೇಳುತ್ತಿದ್ದಾರೆ. 

Tap to resize

Latest Videos

ಬರ್ತ್ ಡೇ ದಿನವೂ ವರ್ಕ್ ಔಟ್ ಮಾಡಿಸಿ ಸಾಯಿಸಿದ್ದಕ್ಕೆ ಥ್ಯಾಂಕ್ಸ್! ಹೃತಿಕ್ ಹೀಗೆ ವಿಶ್ ಮಾಡಿದ ವಿಶೇಷ ವ್ಯಕ್ತಿ!

ಆದರೆ ಹೀಗೆ ಬೆತ್ತಲಾಗಿ ಬಿಟ್ಟರೆ ಚಿತ್ರ ಸಕ್ಸಸ್​ ಆಗಬಹುದು ಎಂದುಕೊಂಡ ನಿರ್ದೇಶಕರಿಗೆ ಭಾರಿ ನಿರಾಸೆಯಾಗಿದೆ. ಪಠಾಣ್​ ಚಿತ್ರದಲ್ಲಿ ಭರ್ಜರಿ ಯಶಸ್ಸು ಕಂಡಿದ್ದ ನಿರ್ದೇಶಕ ಸಿದ್ಧಾರ್ಥ್ ಆನಂದ್‌ (Siddharth Anand) ಈಗ ತಾವು ಅಂದುಕೊಂಡ ರೀತಿಯಲ್ಲಿ ಫೈಟರ್​ ಯಶಸ್ಸು ಕಾಣದೇ ಇರುವುದಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅನಿಮಲ್​ ಚಿತ್ರದಲ್ಲಿನ ಬೆತ್ತಲೆ ದೃಶ್ಯ ನೋಡಿ ಅದನ್ನು ಜನರು ಬ್ಲಾಕ್​ಬಸ್ಟರ್ ಮಾಡಿದಂತೆ ತಮ್ಮ ಚಿತ್ರವೂ ಆಗುತ್ತದೆ ಎಂದು ನಿರೀಕ್ಷೆಯಲ್ಲಿದ್ದ ಸಿದ್ಧಾರ್ಥ್​ ಆನಂದ್​ ಅವರಿಗೆ ಈಗ ನಿರಾಸೆ ಕಾಡಿದೆ. ಇಷ್ಟೆಲ್ಲಾ ಮಾಡಿದ ಮೇಲೂ ಯಾಕೆ ತಮ್ಮ ಚಿತ್ರ ಅಷ್ಟೊಂದು ಯಶಸ್ವಿಯಾಗಿಲ್ಲ ಎನ್ನುವುದಕ್ಕೆ ಇದೀಗ ತಮ್ಮದೇ ಆದ ಕಾರಣಗಳನ್ನು ನಿರ್ದೇಶಕರು ನೀಡಿದ್ದಾರೆ. ಭಾರತದಲ್ಲಿ ಚಿತ್ರದ ಕಲೆಕ್ಷನ್​ ಆಗುತ್ತಿಲ್ಲ.  ವಿದೇಶಗಳಲ್ಲಿ ತಕ್ಕ ಮಟ್ಟಿಗೆ ಚಿತ್ರ ಕಲೆಕ್ಷನ್​  ಮಾಡುತ್ತಿದೆ. 

ಬೆತ್ತಲಾಗಲು ಪೈಪೋಟಿಗೆ ಬಿದ್ದ ನಟಿ ದೀಪಿಕಾಗೆ 'ಫೈಟರ್'​ ಶಾಕ್- ದೇಶಭಕ್ತಿ ಚಿತ್ರಕ್ಕೆ UA ಪ್ರಮಾಣಪತ್ರ!

ಅಷ್ಟಕ್ಕೂ ಕೆಲವೊಂದು ಸಿನಿಮಾಗಳ ಹೋಲಿಕೆ ಮಾಡಿದ ಸಿದ್ಧಾರ್ಥ್​ ಆನಂದ್​, ತಮ್ಮ ಫೈಟರ್​ ಚಿತ್ರ ನಿರೀಕ್ಷಿತ ಮಟ್ಟದಲ್ಲಿಲ ಗೆಲ್ಲದೇ ಇರುವುದಕ್ಕೆ ಏನು ಕಾರಣ ಎಂದು ಹೇಳಿದ್ದಾರೆ. ಇದೇ ವೇಳೆ ಫೈಟರ್​ ಚಿತ್ರ ಸಕ್ಸಸ್​ ಆಗದೇ ಇರುವುದಕ್ಕೆ ಅವರು ಹೇಳಿದ್ದೇನೆಂದರೆ, ನಮ್ಮ ಅದೆಷ್ಟೋ ಜನ ವಿಮಾನದಲ್ಲಿಯೇ ಪ್ರಯಾಣ ಮಾಡಿಲ್ಲ. ವಿಮಾನ ನಿಲ್ದಾಣವನ್ನೂ ಕಂಡಿಲ್ಲ. ಹಾಗಾಗಿಯೇ ನಮ್ಮ ಫೈಟರ್ ಚಿತ್ರದಲ್ಲಿ ಏನಿದೆ? ಹೇಗೆಲ್ಲ ಇದು ಸಾಧ್ಯ ಆಗುತ್ತದೆ ಅನ್ನೋ ಕಲ್ಪನೆ ಕೂಡ ಇಲ್ವೇ ಇಲ್ಲ. ಈ ಕಾರಣಕ್ಕೇನೆ ನಮ್ಮ ಫೈಟರ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಚೆನ್ನಾಗಿ ಮಾಡಿಲ್ಲ ಎಂದಿದ್ದಾರೆ. ಆದರೆ ದೇಶಭಕ್ತಿ ಮೆರೆವ ಚಿತ್ರದಲ್ಲಿ ನಗ್ನ ದೃಶ್ಯ ಉದ್ದೇಶಪೂರ್ವಕವಾಗಿ ತುರುಕಿದ್ದು ಯಾಕೆ ಎಂಬ ಬಗ್ಗೆ ನಿರ್ದೇಶಕರು ಸ್ಪಷ್ಟನೆ ಕೊಟ್ಟಿಲ್ಲ. 

click me!