ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾರ್ಟಿಯಲ್ಲಿ ಡ್ಯಾನ್ಸ್ ಮಾಡಿದ್ರಾ ನಟ ಅಕ್ಷಯ್ ಕುಮಾರ್ ಪತ್ನಿ?

Published : Apr 21, 2024, 05:28 PM ISTUpdated : Apr 23, 2024, 11:27 AM IST
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾರ್ಟಿಯಲ್ಲಿ ಡ್ಯಾನ್ಸ್ ಮಾಡಿದ್ರಾ ನಟ ಅಕ್ಷಯ್ ಕುಮಾರ್ ಪತ್ನಿ?

ಸಾರಾಂಶ

ಬಾಲಿವುಡ್‌ನ ಖ್ಯಾತ ನಟ ಅಕ್ಷಯ್‌ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ..ಯಾವಾಗ್ಲೂ ತಮ್ಮ ಬೋಲ್ಡ್ ಸ್ಟೇಟ್‌ಮೆಂಟ್‌ನಿಂದಾಗಿ ಸುದ್ದಿಯಲ್ಲಿರುತ್ತಾರ. ಇತ್ತೀಚಿಗೆ ಅವರು ದಾವೂದ್‌ ಇಬ್ರಾಹಿಂ ಪಾರ್ಟಿಗಳಲ್ಲಿ ಡ್ಯಾನ್ಸ್ ಮಾಡಿರುವ ಕುರಿತಾಗಿ ಮಾತನಾಡಿದ್ದಾರೆ.

ಬಾಲಿವುಡ್‌ನ ಖ್ಯಾತ ನಟ ಅಕ್ಷಯ್‌ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ..ಯಾವಾಗ್ಲೂ ತಮ್ಮ ಬೋಲ್ಡ್ ಸ್ಟೇಟ್‌ಮೆಂಟ್‌ನಿಂದಾಗಿ ಸುದ್ದಿಯಲ್ಲಿರುತ್ತಾರೆ. ಬಾಲಿವುಡ್ ನಟಿ, ಬರೆಹಗಾರ್ತಿಯಾಗಿರುವ ಟ್ವಿಂಕಲ್ ಖನ್ನಾ ಯಾವಾಗಲೂ ತಮ್ಮ ಮನದಾಳದ ಮಾತನ್ನು ಹೇಳುತ್ತಿರುತ್ತಾರೆ. ಟ್ವಿಂಕಲ್ ತನ್ನ ವಿಫಲ ನಟನಾ ವೃತ್ತಿಜೀವನದ ಬಗ್ಗೆ ಮಾತನಾಡುವುದರಿಂದ ಹಿಡಿದು 47ನೇ ವಯಸ್ಸಿನಲ್ಲಿ ತನ್ನ ಮಾಸ್ಟರ್ಸ್ ಅನ್ನು ಪೂರ್ಣಗೊಳಿಸುವರೆಗಿನ ಕಥೆಗಳನ್ನು ಇಲ್ಲಿಯ ವರೆಗೆ ಹೇಳಿಕೊಂಡಿದ್ದಾರೆ. ಮಾತ್ರವಲ್ಲ 2010ರಲ್ಲಿ ದುಬೈನಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂಗಾಗಿ ಟ್ವಿಂಕಲ್ ಖನ್ನಾ ಡ್ಯಾನ್ಸ್ ಮಾಡಿದ್ದರು ಎಂಬ ವರದಿಗಳು ಬಂದಿದ್ದವು. ಬಹಳ ವರ್ಷಗಳ ನಂತರ, ಟ್ವಿಂಕಲ್ ಖನ್ನಾ ಆ ಬಗ್ಗೆ ಮಾತನಾಡಿದ್ದಾರೆ.

ಟ್ವಿಂಕಲ್ ಖನ್ನಾ ದುಬೈನಲ್ಲಿ ದಾವೂದ್ ಇಬ್ರಾಹಿಂ ಪಾರ್ಟಿಗಳಲ್ಲಿ ನೃತ್ಯ ಮಾಡಿದ ವರದಿಗಳನ್ನು ನೆನಪಿಸಿಕೊಂಡಿದ್ದಾರೆ. ಮಾಧ್ಯಮದ ಕಥೆಗಳ ಕಟ್ಟುಕಥೆಯ ಬಗ್ಗೆ ಚರ್ಚಿಸಿದ್ದಾರೆ. ಆಯ್ದ ಭಾಗಗಳಲ್ಲಿ ಒಂದರಲ್ಲಿ, ದಾವೂದ್ ಇಬ್ರಾಹಿಂನ ಪಾರ್ಟಿಗಳಿಗೆ ನಾನು ಹಾಜರಾಗುವ ಬಗ್ಗೆ ಮಾಧ್ಯಮಗಳು ಬರೆದಿದ್ದವು. ಮತ್ತು ದಾವೂದ್‌ಗಾಗಿ ಹಾಡುಗಳ ಸಂಯೋಜನೆಯನ್ನು ಮಾಡಿದ್ದೇನೆ ಎಂದು ಅದರಲ್ಲಿ ಬರೆದಿತ್ತು. ಆದರೆ ಇದು ಯಾವುದೂ ನಿಜವಲ್ಲ ಎಂದಿದ್ದಾರೆ.

ನನ್​ ಮಕ್ಕಳು ಓಡೋಗಿ ಮದ್ವೆಯಾಗ್ಲಪ್ಪಾ ಎಂದ ನಟಿ ಟ್ವಿಂಕಲ್​ ಖನ್ನಾ! ಇದರ ಹಿಂದಿದೆ ಇಂಟರೆಸ್ಟಿಂಗ್​ ಕಾರಣ...

ಬ್ಲಾಗ್‌ನಲ್ಲಿ ಟ್ವಿಂಕಲ್ ಖನ್ನಾ, 'ದಾವೂದ್ ತನಗಿಂತ ಹೆಚ್ಚು ನುರಿತ ಪ್ರದರ್ಶಕನಿಗೆ ಆದ್ಯತೆ ನೀಡುತ್ತಿದ್ದರು. ಹೀಗಾಗಿ ನಾನು ಅಲ್ಲಿ ಡ್ಯಾನ್ಸ್ ಮಾಡುತ್ತಿದ್ದೆ ಎಂಬುದು ನಿಜವಲ್ಲ' ಎಂದು ತಿಳಿಸಿದ್ದಾರೆ. ದಾವೂದ್ ಇಬ್ರಾಹಿಂ ಪಾರ್ಟಿಯಲ್ಲಿ ಟ್ವಿಂಕಲ್ ಖನ್ನಾ ನೃತ್ಯ ಮಾಡುವ ವರದಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದಾಗ ಅಕ್ಷಯ್ ಕುಮಾರ್ ಈ ಬಗ್ಗೆ ಮಾತನಾಡಿದ್ದರು. 2010ರಲ್ಲಿ, ಪತ್ರಿಕಾಗೋಷ್ಠಿಯಲ್ಲಿ, ಅಕ್ಷಯ್ ಕುಮಾರ್ ಇದು ಸುಳ್ಳು ಸುದ್ದಿ ಎಂದು ಸ್ಪಷ್ಟವಾಗಿ ಹೇಳಿದ್ದರು, ಇದು ಕೇವಲ ಒಂದು ದಿನ ಪ್ರಸಾರವಾಗಿತ್ತು. ದಾವೂದ್ ಇಬ್ರಾಹಿಂ ಜೊತೆಗಿನ ಸಂಪರ್ಕವನ್ನು ಪರಿಶೀಲಿಸಲು ಸಿಬಿಐ ತಂಡದಿಂದ ಯಾರೂ ಅವರ ಮನೆಗೆ ಬಂದಿಲ್ಲ ಎಂದು ತಿಳಿಸಿದ್ದರು.

ಟ್ವಿಂಕಲ್‌ ಖನ್ನಾ, ಬಾಲಿವುಡ್ ನಟರಾದ ಡಿಂಪಲ್ ಕಪಾಡಿಯಾ ರಾಜೇಶ್ ಖನ್ನಾ ಪುತ್ರಿ.  ಬಾಲಿವುಡ್‌ನ ಮೇಳಾ, ಬಾದ್‌ಶಾ, ಜಾನ್, ಬರಾಸತ್, ಜಬ್ ಪ್ಯಾರ್ ಕಿಸಿಸೆ ಹೋತಾ ಹೈ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದು, ನಂತರ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡು ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು.  ತಮ್ಮ ಬರವಣಿಗೆಯಿಂದ ಫನ್ನಿಬೋನ್ಸ್ ಎಂದು ಹೆಸರಾಗಿರುವ ಟ್ವಿಂಕಲ್ ಬಾಲಿವುಡ್ ನಟ ಅಕ್ಷಯ್ ಕುಮಾರ್‌ ಅವರನ್ನು ಮದುವೆಯಾಗಿ ಅರವ್ ಹಾಗೂ ನಿತಾರಾ ಎಂಬ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.

 ಶ್ರೀಮಂತ ನಟನ ಮದುವೆಯಾಗಿ ನಟನೆಗೆ ಗುಡ್‌ಬೈ ಹೇಳಿದ ಸ್ಟಾರ್‌ ಕಿಡ್‌, ಅತ್ಯುತ್ತಮ ಲೇಖಕಿಯಾದ ನಟಿ!

ಇತ್ತೀಚೆಗೆ ಅವರು ಗಂಡಸರನ್ನು ಸಿಹಿ ತಿನಿಸಿಗೆ ಹೋಲಿಸಿದ್ದರು. ಈ ಹೇಳಿಕೆ ಈಗ ವಿವಾದಕ್ಕೀಡಾಗಿದೆ. ಸ್ತ್ರೀವಾದ ಹಾಗೂ ಪಿತೃ ಪ್ರಧಾನತ್ವಕ್ಕೆ ಸಂಬಂಧಿಸಿದಂತೆ ಟ್ವಿಂಕಲ್ ಹೇಳಿಕೆಗಳು ಆಗಾಗ ವಿವಾದಕ್ಕೀಡಾಗುತ್ತಿರುತ್ತವೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
ಶಾರುಖ್ ಜೊತೆ ಡಾನ್ಸ್ ನಿರಾಕರಿಸಿದ ವಧು, ಅಸಮಾಧಾನಗೊಂಡ ಫ್ಯಾನ್ಸ್