
ಧನಬಾದ್(ಏ.21) ಬಾಲಿವುಡ್‌ನಲ್ಲಿ ತಮ್ಮ ಅದ್ಭುತ ನಟನೆ ಮೂಲಕ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ನಟ ಪಂಕಜ್ ತ್ರಿಪಾಠಿ ಯಶಸ್ಸು ಕುಟುಂಬದ ಸಂಭ್ರಮ ಇಮ್ಮಡಿಗೊಳಿಸಿತ್ತು. ಆದರೆ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಆಘಾತ ಎದುರಾಗಿದೆ. ಪಂಕಜ್ ತ್ರಿಪಾಠಿ ಸಹದೋರಿ ಸರಿತಾ ತಿವಾರಿ ಹಾಗೂ ಆಕೆಯ ಪತಿ ರಾಜೇಶ್ ತಿವಾರಿ ಸಂಚರಿಸುತ್ತಿದ್ದ ಕಾರು ಭೀಕರವಾಗಿ ಅಪಘಾತಕ್ಕೀಡಾಗಿದೆ. ಬಿಹಾರದ ಕಮಲಪುರದಿಂದ ಪಶ್ಚಿಮ ಬಂಗಾಳದ ಚಿತ್ತರಂಜನ್‌ಗೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಈ ಅಪಘಾತದಲ್ಲಿ ಪಂಕಜ್ ತ್ರಿಪಾಠಿ ಸಹದೋರಿ ಸರಿತಾ ಪತಿ ರಾಜೇಶ್ ತಿವಾರಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಇನ್ನು ಸರಿತಾ ತಿವಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ನಿಸ್ರಾ ಬಳಿಯ ಜಿಟಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ಕಾರು ಇದ್ದಕ್ಕಿದ್ದಂತೆ ನಿಯಂತ್ರ ಕಳೆದುಕೊಂಡಿದೆ. ವೇಗವಾಗಿ ಸಾಗಿ ರಸ್ತೆಯ ಡಿವೈಡರ್‌ಗೆ ಡಿಕ್ಕಿ ಹೊಡದು ಪಲ್ಟಿಯಾಗಿದೆ. ನಿಸ್ರಾ ಮಾರುಕಟ್ಟೆ ಬಳಿ ಇರುವ ಚೌಕ್ ಬಳಿ ಕಾರು ಡಿಕ್ಕಿಯಾಗಿದೆ. ತಕ್ಷಣವೇ ಸ್ಥಳೀಯರು ಗಾಯಗೊಂಡ ಇಬ್ಬರನ್ನು ಧನಬಾದ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದರೆ.
ಬಿಡುಗಡೆಗೆ ರೆಡಿ ಆಯ್ತು 'ಮೇ ಅಟಲ್ ಹೂ' : ಮದುವೆ ಆಗದೇ ಉಳಿದಿದ್ದೇಕೆ ಅಟಲ್‌ಜೀ
ರಾಜೇಶ್ ತಿವಾರಿ ಸ್ಥಳದಲ್ಲೆಮೃತ ಪಟ್ಟಿರುವುದಾಗಿ ವೈದ್ಯರು ಹೇಳಿದ್ದರೆ, ಗಂಭೀರವಾಗಿ ಗಾಯಗೊಂಡಿರುವ ಸರಿತಾ ತಿವಾರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರ ತಂಡ ಸರಿತಾ ಆರೋಗ್ಯ ಕುರಿತು ನಿಘಾವಹಿಸಿದೆ. ಘಟನೆಯಿಂದ ಆಘಾತಗೊಂಡಿರುವ ಪಂಕಜ್ ತ್ರಿಪಾಠಿ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಭಾರತೀಯ ರೈಲ್ವೇ ಉದ್ಯೋಗಿಯಾಗಿರುವ ರಾಜೇಶ್ ತಿವಾರಿ, ಚಿತ್ತರಂಜನ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ತವರಿಗೆ ತೆರಳಿದ್ದ ರಾಜೇಶ್ ತಿವಾರಿ ಹಾಗೂ ಸರಿತಾ ತಿವಾರಿ ಮರಳಿ ಚಿತ್ತರಂಜನ್‌ಗೆ ಬರುತ್ತಿರುವ ವೇಳೆ ಅಪಘಾತ ಸಂಭವಿಸಿದೆ.
ಪಂಕಜ್ ತ್ರಿಪಾಠಿ ಬಾಲಿವುಡ್‌ನಲ್ಲಿ ಯಶಸ್ಸು ಗಳಿಸುತ್ತಿರುವ ಬೆನ್ನಲ್ಲೇ ಕುಟುಂಬಕ್ಕೆ ಆಘಾತ ಎದುರಾಗಿದೆ. ಮೇ ಹೂ ಅಟಲ್ ಚಿತ್ರದ ಮೂಲಕ ಅದ್ಭುತ ಅಭಿಯನ ಪ್ರದರ್ಶಿಸಿದ್ದ ಪಂಕಜ್ ತ್ರಿಪಾಠಿ, ಆಗಸ್ಟ್ 2023ರಲ್ಲಿ ತಂದೆಯನ್ನು ಕಳೆದುಕೊಂಡಿದ್ದರು. ತಂದೆಯ ನಿಧನದ ಬಳಿಕ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ಪಂಕಜ್ ತ್ರಿಪಾಠಿ ಭಾವುಕ ಪೋಸ್ಟ್ ಮಾಡಿದ್ದರು. ರಾಷ್ಟ್ರೀಯ ಪ್ರಶಸ್ತಿ ಗೆದ್ದಾಗ, ಪ್ರಶಸ್ತಿಯನ್ನು ತಂದೆ ಅರ್ಪಿಸಿದ್ದರು. ಇಷ್ಟೇ ಅಲ್ಲ ತಂದೆಯ ಹೆಸರಲ್ಲಿ ಪಂಕಜ್ ತ್ರಿಪಾಠಿ ಗ್ರಾಮದ ಹೈಸ್ಕೂಲ್‌ನಲ್ಲಿ ಗ್ರಂಥಾಲಯ ತೆರೆದಿದ್ದಾರೆ.
ಸೌತ್ ಸಿನಿಮಾಗಳ ಆಫರ್ ರಿಜೆಕ್ಟ್ ಮಾಡಿದ ಬಾಲಿವುಡ್ ಖ್ಯಾತ ನಟ ಪಂಕಜ್ ತ್ರಿಪಾಠಿ: ಕಾರಣವೇನು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.