ಸಮಂತಾಗೆ ತಾಯಿಯಾಗುವ ಬಯಕೆ ನನಗೆ; ರಶ್ಮಿಕಾ ಮಂದಣ್ಣ ಹೇಳಿಕೆಗೆ ಕಂಗಾಲಾದ್ರಾ ಸ್ಯಾಮ್?

By Shriram Bhat  |  First Published Apr 21, 2024, 1:40 PM IST

ನಟಿ ರಶ್ಮಿಕಾ ಮಂದಣ್ಣ ಅವರು ಈಗಾಗಲೇ ಕನ್ನಡ ಸೇರಿದಂತೆ, ತೆಲುಗು, ಮಲಯಾಳಂ, ತಮಿಳು ಹಾಗು ಹಿಂದಿ ಚಿತ್ರರಂಗಗಳಲ್ಲಿ ಸಖತ್ ಮಿಂಚುತ್ತಿದ್ದಾರೆ. ಇತ್ತೀಚೆಗೆ ರಶ್ಮಿಕಾ ಹೆಚ್ಚಾಗಿ ತೆಲುಗು ಹಾಗು ಹಿಂದಿ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.


ನಟಿ ಸಮಂತಾ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ಸಂದರ್ಶನವೊಂದರಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ರಶ್ಮಿಕಾ 'ಸ್ಯಾಮಿ ಅವ್ರು ತುಂಬಾ ವಂಡರ್‌ಫುಲ್ ಲೇಡಿ, ಅವ್ರು ಗ್ರೇಸ್‌ಫುಲ್' ಎಂದಿದ್ದಾರೆ. ಅಷ್ಟಕ್ಕೇ ನಿಲ್ಲದ ರಶ್ಮಿಕಾ ಮಂದಣ್ಣ 'ಅವ್ರು ಒಳ್ಳೆಯ ಹಾರ್ಟ್ ಹೊಂದಿದ್ದಾರೆ. ಅಂದ್ರೆ, ಅವರು ಒಳ್ಳೆಯ ಭಾವನೆಯಿಂದ ತುಂಬಿ ಹೋಗಿದ್ದಾರೆ. ನಾನು ಅವರನ್ನು ಪ್ರೊಟೆಕ್ಟ್ ಮಾಡಲು ಇಷ್ಟಪಡುತ್ತೇನೆ. ಅವರ ಸದ್ಗುಣಗಳನ್ನು ಹೇಳುತ್ತ ಹೋದರೆ ಅದೇ ಒಂದು ದೊಡ್ಡ ಚೀಲದ ಮೂಟೆಯಾಗುತ್ತದೆ. ಸಮಂತಾ ಬಗ್ಗೆ ಹೇಳಬೇಕೆಂದರೆ, ನಾನು ಅವರನ್ನು ರಕ್ಷಿಸುವ ತಾಯಿಯಂತಿರಲು ಬಯಸುತ್ತೇನೆ' ಎಂದಿದ್ದಾರೆ. 

ನಟಿ ಸಮಂತಾ ಬಗ್ಗೆ ಬಹಳಷ್ಟು ಹೊಗಳಿ ಮಾತನಾಡಿದ್ದಾರೆ ರಶ್ಮಿಕಾ ಮಂದಣ್ಣ. ಅಲ್ಲು ಅರ್ಜುನ್ ನಟನೆಯ 'ಪುಷ್ಪಾ' ಸಿನಿಮಾದಲ್ಲಿ ಸಮಂತಾ ಅವರು 'ಹೂ ಅಂಟಾವಾ ಮಾವಾ ಊಹೂಂ ಅಂಟಾವಾ.. ' ಅನ್ನೋ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿ ಂಟರ್‌ನ್ಯಾಷನಲ್ ಮಟ್ಟದಲ್ಲಿ ಮಿಂಚಿದ್ದಾರೆ. ಅದೇ ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು ನಾಯಕಿಯಾಗಿ ಅಮೋಘ ಅಭಿನಯದಿಂದ ಗಮನಸೆಳೆದಿದ್ದಾರೆ. ಪುಷ್ಪಾ ಸಿನಿಮಾ ಬ್ಲಾಕ್‌ ಬಸ್ಟರ್ ಹಿಟ್ ಎನಿಸಿಕೊಂಡು ನಟ ಅಲ್ಲು ಅರ್ಜುನ್ 'ಪ್ಯಾನ್ ಇಂಡಿಯಾ' ಮಟ್ಟದ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.

Tap to resize

Latest Videos

ಕೇರಳದಲ್ಲಿ 'ವಡಕ್ಕನ್'ಎಂದ ಕನ್ನಡ ನಟ ಕಿಶೋರ್; ಮಲಬಾರ್ ಥ್ರಿಲ್ಲರ್‌ಗೆ ಬಂತು ಭಾರೀ ಜೈ ಹೋ !

ನಟಿ ರಶ್ಮಿಕಾ ಮಂದಣ್ಣ ಅವರು ಈಗಾಗಲೇ ಕನ್ನಡ ಸೇರಿದಂತೆ, ತೆಲುಗು, ಮಲಯಾಳಂ, ತಮಿಳು ಹಾಗು ಹಿಂದಿ ಚಿತ್ರರಂಗಗಳಲ್ಲಿ ಸಖತ್ ಮಿಂಚುತ್ತಿದ್ದಾರೆ. ಇತ್ತೀಚೆಗೆ ರಶ್ಮಿಕಾ ಹೆಚ್ಚಾಗಿ ತೆಲುಗು ಹಾಗು ಹಿಂದಿ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅಥವಾ, ಅವರಿಗೆ ಅಲ್ಲಿಂದಲೇ ಹೆಚ್ಚು ಆಫರ್‌ಗಳು ಹುಡುಕಿಕೊಂಡು ಬರುತ್ತಿವೆ. ಯಾಕೆ ಎಂಬ ಪ್ರಶ್ನೆಗೆ ಬೇರೆಯವರು ಉತ್ತರಿಸುವುದು ಕಷ್ಟ, ಆ ಬಗ್ಗೆ ಸ್ವತಃ ರಶ್ಮಿಕಾ ಮಂದಣ್ಣ ಮಾತ್ರ ಕ್ಲಾರಿಫಿಕೇಶನ್ ಕೊಡಬಲ್ಲರು ಎನ್ನಬಹುದು. 

ಇಂಥ ನೋವಿನ ಘಳಿಗೆಯಲ್ಲೂ ಅಪರಾಧಿ ಹಿಂದುವೋ, ಮುಸ್ಲಿಂಮನೋ ಎಂಬ ಭೇದ ಸರಿಯಲ್ಲ; ನಟ ಕಿಶೋರ್

ಒಟ್ಟಿನಲ್ಲಿ, ನಟಿ ರಶ್ಮಿಕಾ ಮಂದಣ್ಣ ಅವರು ನಟಿ ಸಮಂತಾ ಬಗ್ಗೆ ತುಂಬಾ ಒಳ್ಳೆಯ ಅಭಿಪ್ರಾಯ ಇಟ್ಟುಕೊಂಡಿದ್ದಾರೆ ಮತ್ತು ಅದನ್ನೇ ಹೊರಹಾಕಿದ್ದಾರೆ. ಒಂದೇ ಚಿತ್ರದಲ್ಲಿ ಈ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದರೂ ಪರಸ್ಪರ ಗೌರವಾದರ ಹೊಂದಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಬಾಲಿವುಡ್ ನಟ ರಣಬೀರ್ ಕಪೂರ್ ಜತೆ ನಟಿಸಿರುವ 'ಅನಿಮಲ್' ಚಿತ್ರವು ಸೂಪರ್ ಹಿಟ್ ದಾಖಲಿಸಿದೆ.

'ರಿಲೇಶನ್‌ಶಿಪ್‌'ನಲ್ಲಿ ಇದೀನಿ, ಒಪ್ಪಿಕೊಂಡ ನಟ ವಿಜಯ್ ದೇವರಕೊಂಡ; ಫ್ಯಾನ್ಸ್ ಫುಲ್ ಶಾಕ್!

ಆ ಮೂಲಕ ರಶ್ಮಿಕಾ ಮಂದಣ್ಣ ಬಾಲಿವುಡ್ ಅಂಗಳದಲ್ಲಿ ಕೂಡ ಸಖತ್ ಮಿಂಚುತ್ತಿದ್ದಾರೆ. ಕನ್ನಡ ಮೂಲದ ನಟಿ ರಶ್ಮಿಕಾ ಮಂದಣ್ಣ ಇಡೀ ಭಾರತವನ್ನು ಸದ್ಯ ತಮ್ಮ ಚೆಲುವು ಹಾಗೂ ಸ್ಟಾರ್‌ಗಿರಿಯಿಂದ  ಸೆಳೆದಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಈಗ ರಶ್ಮಿಕಾ ಮಂದಣ್ಣ ಹಾಗು ಅಲ್ಲು ಅರ್ಜುನ್ ಜೋಡಿಯ ಪುಷ್ಪಾ ಸಿನಿಮಾದ ಸೀಕ್ವೆಲ್ 'ಪುಷ್ಪಾ 2' ಶೂಟಿಂಗ್ ಹಂತದಲ್ಲಿದೆ. 

ಪ್ರೇಕ್ಷಕರಿಗೆ ಮೋಸ ಮಾಡ್ಬಿಟ್ಟೆ, 'ಆಫ್ರಿಕಾದಲ್ಲಿ ಶೀಲಾ'ನ ಬಂಡೀಪುರಕ್ಕೂ ತಂದ್ಬಿಟ್ಟೆ ಅಂದಿದ್ಯಾಕೆ ದ್ವಾರಕೀಶ್!

click me!