
ವಯಸ್ಸು ಎಪ್ಪತ್ತು ದಾಡ್ತಿದ್ದಂತೆ ಜನರು ವಿಶ್ರಾಂತಿ ಮೂಡ್ ಗೆ ಹೋಗ್ತಾರೆ. ಈ ವಯಸ್ಸಿನಲ್ಲಿ ಎಲ್ಲ ಕೆಲಸಕ್ಕೆ ನಿವೃತ್ತಿ ಪಡೆಯುವ ಅನೇಕರು ಮನೆಯಲ್ಲಿ ಹಾಯಾಗಿದ್ರೆ ಮತ್ತೆ ಬಹುತೇಕರು ಅನಾರೋಗ್ಯದಿಂದ ಹಾಸಿಗೆ ಹಿಡ್ದಿರ್ತಾರೆ. ಆದ್ರೆ ಬೆರಳೆಣಿಕೆಯಷ್ಟು ಜನರು ತಮ್ಮ ಆರೋಗ್ಯ ಹಾಗೂ ಕೆಲಸವನ್ನು ಇಳಿ ವಯಸ್ಸಿನಲ್ಲೂ ಪ್ರೀತಿಸ್ತಾರೆ. ಸ್ವತಃ ಫಿಟ್ ಆಗಿರುವ ಜೊತೆಗೆ ಯುವಕರಿಗೆ ಮಾದರಿಯಾಗ್ತಾರೆ. ಅದ್ರಲ್ಲಿ ಬಾಲಿವುಡ್ ಲೆಜೆಂಡರಿ ಆಕ್ಟರ್ ಧರ್ಮೇಂದ್ರ (Bollywood legendary actor Dharmendra) ಕೂಡ ಒಬ್ಬರು. 89 ವರ್ಷದಲ್ಲೂ ಫಿಟ್ ಆಂಡ್ ಫೈನ್ ಆಗಿದ್ದಾರೆ. ಈ ವಯಸ್ಸಿನಲ್ಲೂ ಜಿಮ್, ಸ್ವಿಮ್ಮಿಂಗ್ ಪೂಲ್ (Swimming fool) ಅಂತ ವರ್ಕ್ ಔಟ್ ಮಾಡುವ ಧರ್ಮೇಂದ್ರ, ಯುವಕರು ಹುಬ್ಬೇರಿಸುವಂತೆ ಮಾಡ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಧರ್ಮೇಂದ್ರ ಸಾಕಷ್ಟು ಫೋಟೋ, ವಿಡಿಯೋಗಳನ್ನು ಹಂಚಿಕೊಳ್ತಿರುತ್ತಾರೆ. ಈ ಬಾರಿ ಹೊಸ ವಿಡಿಯೋ ಜೊತೆ ಬಂದಿದ್ದಾರೆ. ವಿಡಿಯೋದಲ್ಲಿ ಧರ್ಮೇಂದ್ರ ಸ್ವಿಮ್ಮಿಂಗ್ ಫೂಲ್ ನಲ್ಲಿರೋದನ್ನು ನಾವು ಕಾಣ್ಬುಹುದು.
ಧರ್ಮೇಂದ್ರ ಸ್ವಿಮ್ಮಿಂಗ್ ಪೂಲ್ ನಲ್ಲಿದ್ದು, ಸಿಂಪಲ್ ಟಿ-ಶರ್ಟ್ ಧರಿಸಿದ್ದು, ಟೋಪಿ ಹಾಕಿಕೊಂಡಿದ್ದಾರೆ. ಟ್ಯೂಬ್ ಸಹಾಯದಿಂದ ನೀರಿನಲ್ಕಿ ತೇಲುತ್ತಿರೋದನ್ನು ನೀವು ಕಾಣ್ಬಹುದು. ಧರ್ಮೇಂದ್ರ ಒಬ್ಬರೇ ಸ್ವಿಮಿಂಗ್ ಫೂಲ್ ನಲ್ಲಿ ಇಲ್ಲ. ಅವರ ತರಬೇತುದಾರ ಕೂಡ ಇದ್ದು, ಧರ್ಮೇಂದ್ರ ಅವರಿಗೆ ಟ್ರೈನರ್ ಸಹಾಯ ಮಾಡ್ತಿದ್ದಾರೆ. ಒಂದು ವಿಡಿಯೋದಲ್ಲಿ ತರಬೇತುದಾರನ ಸಹಾಯದಿಂದ ಈಜುತ್ತಿದ್ದರೆ ಇನ್ನೊಂದು ವಿಡಿಯೋದಲ್ಲಿ ಧರ್ಮೇಂದ್ರ, ನೀರಿನಲ್ಲಿ ನಿಂತಿದ್ದು, ಬಾಲ್ ಸಹಾಯದಿಂದ ವರ್ಕ್ ಔಟ್ ಮಾಡ್ತಿದ್ದಾರೆ.
ಹೀರೋಯಿನ್ ಆಗಲು ಪರ್ಫೆಕ್ಟ್... ಆದ್ರೆ ಸಿನಿಮಾ ಯಾಕೆ ಸಿಕ್ತಿಲ್ಲ ಈ ಬ್ಯೂಟಿಗೆ
ಧರ್ಮೇಂದ್ರ ವಿಡಿಯೋಕ್ಕೆ ಅನೇಕರು ಕಮೆಂಟ್ ಮಾಡಿದ್ದಾರೆ. ಮಗ ಬಾಬಿ ಡಿಯೋಲ್ ಹಾರ್ಟ್ ಮತ್ತು ನಮಸ್ಕಾರದ ಎಮೋಜಿ ಹಾಕಿದ್ದಾರೆ. ಇಶಾ ಡಿಯೋಲ್ ಕೂಡ ಅಪ್ಪನ ವಿಡಿಯೋಕ್ಕೆ ಕಮೆಂಟ್ ಮಾಡಿದ್ದಾರೆ. ಹಾರ್ಟ್ ಮತ್ತು ದೃಷ್ಟಿ ಎಮೋಜಿ ಹಾಕಿದ್ದಾರೆ. ಬಳಕೆದಾರರೊಬ್ಬರು ಕಳೆದು ಹೋಗಿದ್ದು ಮತ್ತೆ ಬರುವುದಿಲ್ಲ ಎಂದು ಬರೆದಿದ್ದಾರೆ. ನೀವು ನಮಗೆಲ್ಲರಿಗೂ ಸ್ಫೂರ್ತಿ, ನಿಮ್ಮ ಆತ್ಮವಿಶ್ವಾಸ ಮತ್ತು ಜೀವನಶೈಲಿ ಅನುಕರಣೀಯ. ನಿಮ್ಮ ವ್ಯಕ್ತಿತ್ವಕ್ಕೆ ನಮಸ್ಕಾರ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಈ ವಯಸ್ಸಿನಲ್ಲಿ ಮನೆಯಿಂದ ಹೊರಗೆ ಬರೋದೇ ಕಷ್ಟ. ಹಾಗಿರುವಾಗ ಇಷ್ಟೊಂದು ವರ್ಕ್ ಔಟ್ ಅಂತ ಅನೇಕರು ಕಮೆಂಟ್ ಮಾಡಿದ್ದಾರೆ.
ಧರ್ಮೇಂದ್ರ ಕೊನೆಯ ಬಾರಿ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದಲ್ಲಿ ರಣವೀರ್ ಸಿಂಗ್ ಅವರ ಅಜ್ಜನ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರದಲ್ಲಿ ಧರ್ಮೇಂದ್ರ ಅವರ ಕಿಸ್ಸಿಂಗ್ ದೃಶ್ಯ ಬಹಳಷ್ಟು ಸುದ್ದಿ ಮಾಡಿತ್ತು. ಧರ್ಮೇಂದ್ರ ಅವರಿಗೆ ಆರೋಗ್ಯ ಸಮಸ್ಯೆ ಇಲ್ಲ ಎಂದಲ್ಲ. ಅವರು ಕೆಲ ದಿನಗಳ ಹಿಂದೆ ಕಣ್ಣಿನ ಚಿಕಿತ್ಸೆಗೆ ಒಳಗಾಗಿದ್ದಾರೆ. ವಯೋ ಸಹಜ ಅನಾರೋಗ್ಯವಿದ್ರೂ ಧರ್ಮೇಂದ್ರ ಫಿಟ್.
ಯೂಟ್ಯೂಬರ್ ರಣವೀರ್ ಅಲಹಬಾದಿಯಾಗೆ ಬಿಗ್ ರಿಲೀಫ್
ಸಿನಿಮಾದಲ್ಲಿ ಕಾಣಿಸಿಕೊಳ್ಳೋದು ಅಪರೂಪವಾದ್ರೂ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಟಚ್ ನಲ್ಲಿದ್ದಾರೆ ಧರ್ಮೇಂದ್ರ. ಶನಿವಾರ ತಮಗೆ ಇಷ್ಟವಾದ ಒಂದು ಫೋಟೋವನ್ನು ಅವರು ಪೋಸ್ಟ್ ಮಾಡಿದ್ರು. ಅವರು ಪೋಸ್ಟ್ ಮಾಡಿದ ಹಳೆಯ ಫೋಟೋದಲ್ಲಿ ಮಗ ಸನ್ನಿ ಡಿಯೋಲ್ ಮತ್ತು ಹಿರಿಯ ನಟ ದಿಲೀಪ್ ಕುಮಾರ್ ಅವ್ರನ್ನು ಕಾಣ್ಬಹುದು. ಬಾಲಿವುಡ್ ಐಕಾನ್ ದಿಲೀಪ್ ಕುಮಾರ್ ನನ್ನ ಮಗ ಸನ್ನಿ ಡಿಯೋಲ್ ಅವರ ಚೊಚ್ಚಲ ಚಿತ್ರದ ಮುಹೂರ್ತ ಸಮಾರಂಭಕ್ಕೆ ಹೇಗೆ ಬಂದಿದ್ದರು ಅಂತ ಶೀರ್ಷಿಕೆ ಹಾಕಿದ್ದರು.1935, ಡಿಸೆಂಬರ್ 8ರಂದು ಜನಿಸಿರುವ ಧರ್ಮೇಂದ್ರ ಬಾಲಿವುಡ್ ಆಳಿದ ನಟ. ಶೋಲೆ, ಆಂಕೇನ್ ಸೇರಿದಂತೆ ಅನೇಕ ಹಿಟ್ ಚಿತ್ರಗಳನ್ನು ಧರ್ಮೇಂದ್ರ ನೀಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.