
ನವದೆಹಲಿ: ಬಾಲಿವುಡ್ ನಿರ್ದೇಶಕಿ ಫರ್ಹಾ ಖಾನ್ ಸೋದರ ಸ್ವತಃ ನಿರ್ದೇಶಕನೂ ಆಗಿರುವ ಸಾಜೀದ್ ಖಾನ್ ವಿರುದ್ಧ ಸೀರಿಯಲ್ ನಟಿಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಯೇ ಹೈ ಮೊಹಬ್ಬತೇನ್, ಕುಂಕುಮ್ ಭಾಗ್ಯ, ಸಪ್ನಾ ಬಾಬುಲ್ ಕಾ... ಬಿದಾಯಿ, ಯಹಾ ಮೈಂ ಘರ್ ಘರ್ ಖೇಲಿ ಮತ್ತು ತೇರೆ ಇಷ್ಕ್ ಮೇ ಘಾಯಲ್, ತಾರಕ್ ಮೆಹ್ತಾ ಕಾ ಉಲ್ಟಾ ಚಸ್ಮಾ ಮುಂತಾದ ಹಿಂದಿಯ ಪ್ರಸಿದ್ಧ ಸೀರಿಯಲ್‌ಗಳಲ್ಲಿ ನಟಿಸಿ ಮನೆ ಮಾತಾಗಿರುವ ನಟಿ ನವೀನಾ ಬೋಲೆ ಅವರು ಸಾಜೀದ್ ಖಾನ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.
ಒಂದು ದಿನ ನಟಿ ನವೀನಾ ಬೋಲೆಯನ್ನು ತನ್ನ ಮನೆಗೆ ಕರೆದ ಸಾಜೀದ್ ಖಾನ್ ಆಕೆಯ ಬಳಿ ಬಟ್ಟೆ ಬಿಚ್ಚುವಂತೆ ಒತ್ತಾಯಿಸಿದ್ದರು ಎಂದು ನಟಿ ನವೀನಾ ದೂರಿದ್ದಾರೆ. 2018 ರಲ್ಲಿ ಚಿತ್ರರಂಗದ ಹಲವರ ವಿರುದ್ಧ (ನಟಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ) ಮೀಟೂ ಆರೋಪ (#MeToo) ಕೇಳಿ ಬಂದ ಸಂದರ್ಭದಲ್ಲಿಯೂ ಟಿವಿ ನಿರೂಪಕನೂ ಆಗಿರುವ ಸಾಜಿದ್ ಖಾನ್ ವಿರುದ್ಧವೂ ಹಲವು ನಟಿಯರು ಆರೋಪ ಮಾಡಿದ್ದರು. ಸಲೋನಿ ಚೋಪ್ರಾ, ಶೆರ್ಲಿನ್ ಚೋಪ್ರಾ, ಅಹಾನಾ ಕುಮ್ರಾ ಮತ್ತು ಮಂದನಾ ಕರಿಮಿ ಸೇರಿದಂತೆ ಉದ್ಯಮದ ಸುಮಾರು ಒಂಬತ್ತು ಮಹಿಳೆಯರು ಸಾಜಿದ್ ಖಾನ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಿದ್ದರು.
ಇದನ್ನೂ ಓದಿ:ಸ್ಯಾಂಡಲ್‌ವುಡ್‌ನಲ್ಲಿ ಶೋಷಣೆ ಇಲ್ಲವೆನ್ನುವುದು ಪ್ರಪಂಚದಲ್ಲಿ ಕಳ್ಳತನವಿಲ್ಲ ಎಂದಂತೆ: ನಟಿ ಚೈತ್ರಾ ಆಚಾರ್
ಟಾಕ್ ಸೋ ನಡೆಸಿಕೊಡುವ ಸುಭೋಜಿತ್ ಘೋಷ್ ಅವರೊಂದಿಗಿನ ಸಂದರ್ಶನದಲ್ಲಿ ನಟಿ ನವೀನಾ ಬೋಲೆ ಅವರು ನನ್ನ ಜೀವನದಲ್ಲಿ ನಾನು ಎಂದಿಗೂ ಭೇಟಿಯಾಗಲು ಬಯಸದ ಒಬ್ಬ ಭಯಾನಕ ತುಂಬಾ ಭಯಾನಕ ವ್ಯಕ್ತಿ ಸಾಜಿದ್ ಖಾನ್ ಎಂದು ಆರೋಪಿಸಿದ್ದಾರೆ. ಅವರು ಮಹಿಳೆಯರನ್ನು ಅಗೌರವಿಸುವ ವಿಷಯಕ್ಕೆ ಬಂದಾಗ ಎಲ್ಲಾ ಮಿತಿಗಳನ್ನು ಮೀರಿ ತುಂಬಾ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎಂದು ನವೀನಾ ಬೋಲೆ ಆರೋಪಿಸಿದ್ದಾರೆ.
ದಶಕದ ಹಿಂದಿನ ಘಟನೆಯನ್ನು ನಡೆದ ನವೀನಾ ಬೋಲೆ, ಅದು ಆತ ಮನೆಗೆ ಕರೆದಾಗ ನಾನು ತುಂಬಾ ಉತ್ಸಾಹಿತಳಾಗಿದ್ದು, ಖುಷಿಯಾಗಿದ್ದೆ. ಆದರೆ ಅಲ್ಲಿಗೆ ಹೋದಾಗ ಆತ ನನ್ನನ್ನು ಬಟ್ಟೆ ಬಿಚ್ಚಿ ಬರೀ ಒಳ ಉಡುಪಿನಲ್ಲಿ ಕುಳಿತುಕೊಳ್ಳುವಂತೆ ಹೇಳಿದ. ಅಲ್ಲದೇ ನೀನು ಹೀಗೆ ಎಷ್ಟು ಆರಾಮವಾಗಿರುತ್ತಿಯಾ ಎಂದು ನಾನು ನೋಡಬೇಕು ಎಂದು ಹೇಳಿದ ಎಂದು ನವೀನಾ ಬೋಲೆ ಆರೋಪಿಸಿದ್ದಾರೆ. ನಾನು ಗ್ಲಾಡ್ರಾಗ್ಸ್(ಗ್ಲಾಡ್ರಾಗ್ಸ್ ಎಂದರೆ ವಿಶೇಷ ಸಂದರ್ಭಗಳಿಗಾಗಿ ತಯಾರಿಸಿದ್ದ ಉಡುಪು) ಮಾಡಿದ್ದ 2004 ಮತ್ತು 2006 ರ ಸಮಯದಲ್ಲಿ ನಡೆದ ಘಟನೆಯ ಬಗ್ಗೆ ನಾನು ಮಾತನಾಡುತ್ತಿದ್ದೇನೆ ಎಂದು ನವೀನಾ ಬೋಲೆ ಹೇಳಿದ್ದಾರೆ.
ಸಾಜಿದ್ ಖಾನ್ ಅವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಲಾಗಲಿಲ್ಲ ಏಕೆಂದರೆ ಮನೆಯಲ್ಲೇ ಕಚೇರಿ ಇತ್ತು. ಆದರೆ ಕೆಳಗೆ ಯಾರೋ ಒಬ್ಬರು ತನಗಾಗಿ ಇಡೀ ಸಮಯ ಕಾಯುತ್ತಿದ್ದರಿಂದ ಆ ಸಮಯದಲ್ಲೂ ನಾಣನು ಸ್ವಲ್ಪ ನಿರಾಳತೆಯನ್ನು ಅನುಭವಿಸಿದೆ ಎಂದು ಅವರು ಹೇಳಿದ್ದಾರೆ.
ನೀನು ಏಕೆ ಸ್ಟೇಜ್ ಮೇಲೆ ಬಿಕಿನಿ ಧರಿಸುವೆ ಏನು ಸಮಸ್ಯೆ ಇದೆಲ್ಲವೂ ಡ್ಯಾಶ್ ಡ್ಯಾದ ಎಂದು ಆತನ ಭಾಷೆ ಬಳಸಿದ. ನೀವು ಶಾಂತವಾಗಿ ಇಲ್ಲಿ ಆರಾಮವಾಗಿ ಕುಳಿತುಕೊಳ್ಳಬಹುದು ಮತ್ತು ಇಲ್ಲಿನೀವು ನೀವಾಗಿ ಕುಳಿತುಕೊಳ್ಳಬಹುದು. ಆತನ ಮಾತಿಗೆ ನನಗೆ ಏನು ಹೇಳಬೇಕೆಂದು ತೋಚಲಿಲ್ಲ ನಾನು ಹೇಳಿದೆ. 'ಕೇಳಿ, ನೀವು ನಿಜವಾಗಿಯೂ ನೋಡಲು ಬಯಸಿದರೆ ನಾನು ನಿಜವಾಗಿಯೂ ಮನೆಗೆ ಹೋಗಿ ಬಿಕಿನಿ ಹಾಕಿಕೊಳ್ಳಬೇಕು ಆದರೆ ನಾನು ಈಗ ಇಲ್ಲಿ ಕುಳಿತು ಬಟ್ಟೆ ಬಿಚ್ಚಲು ಸಾಧ್ಯವಿಲ್ಲ ಎಂದು ಹೇಳಿದೆ ಎಂದು ನಟಿ ಹೇಳಿದ್ದಾರೆ.
ಇದನ್ನೂ ಓದಿ: ಆತ್ಮಹತ್ಯೆಗೆ ಯತ್ನಿಸಿಲ್ಲವಷ್ಟೇ ಬಾಲಿವುಡ್ ಮಾಫಿಯಾದಿಂದ ತೀವ್ರ ಕಿರುಕುಳ
ಅದ್ಹೇಗೋ ನಾನು ಅಲ್ಲಿಂದ ಹೊರಬರುವಲ್ಲಿ ಯಶಸ್ವಿಯಾಗಿದೆ. ನಂತರ ಆತ ಯಾಕೆ ನೀನು ಬರುತ್ತಿಲ್ಲ, ನೀನು ಎಲ್ಲಿಗೆ ತಲುಪಿದೆ ಎಂದು ಕೇಳಿಕೊಂಡು ಕನಿಷ್ಠ ನನಗೆ 50 ಸಲ ಕರೆ ಮಾಡಿದ್ದ. ಇದಾಗಿ ಒಂದು ವರ್ಷದ ನಂತರ ಮಿಸ್ ಇಂಡಿಯಾಗೆ ಭಾಗವಹಿಸಲು ಸಿದ್ಧಗೊಳ್ಳುತ್ತಿದ್ದಾಗ ಆತ ಮತ್ತೆ ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದ ಎಂದು ನವೀನಾ ಹೇಳಿದ್ದಾರೆ.
ಆತ ಸಾಜಿದ್ ಖಾನ್ ನನಗೆ ಮತ್ತೆ ಕರೆ ಮಾಡಿ, ನೀವು ಏನು ಮಾಡುತ್ತೀರಿ, ಒಂದು ಪಾತ್ರಕ್ಕಾಗಿ ನನ್ನನ್ನು ನೋಡಲು ನೀವು ಬರಬೇಕು ಎಂದು ಕೇಳಿದ್ದರು. ಮತ್ತು ನಾನು ಹೇಳಿದ್ದೇನೆಂದರೆ ಈ ವ್ಯಕ್ತಿ ತುಂಬಾ ಮಹಿಳೆಯರ ಜೊತೆ ಈ ರೀತಿ ವರ್ತಿಸಿರಬೇಕು ಇದೇ ಕಾರಣಕ್ಕೆ ಆತನಿಗೆ ಒಂದು ವರ್ಷದ ಹಿಂದೆ ಅವನು ನನ್ನನ್ನು ಅವನ ಸ್ಥಳಕ್ಕೆ ಕರೆಸಿ ಕೆಟ್ಟದಾಗಿ ವರ್ತಿಸಿದ್ದ ಬಗ್ಗೆ ಆತನಿಗೆ ನೆನಪಿಲ್ಲ ಎಂದು ನವೀನಾ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.