* ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಲು ಮುಂದಾದ ನಟ ಧನುಷ್ ಹಾಗು ಐಶ್ವರ್ಯ.
* ಟ್ವಿಟರ್ ಅಕೌಂಟ್ ನಲ್ಲಿ ಹೇಳಿಕೆ ಬಿಡುಗಡೆ ಮಾಡಿದ ನಟ ಧನುಷ್..
* ಸೂಪರ್ ಸ್ಟಾರ್ ರಜನಿಕಾಂತ್ ರ ಮೊದಲ ಪುತ್ರಿ ಐಶ್ವರ್ಯ.
*ರಜನೀಕಾಂತ್ ಹಿರಿಯ ಮಗಳು ಐಶ್ವರ್ಯಾ ಮತ್ತು ನಟ ಧನುಶ್ ಮದುವೆಯಾಗಿ 18 ವರ್ಷವಾಗಿದೆ
ಚೆನ್ನೈ(ಜ. 17) ಸಮಂತಾ ಮತ್ತು ನಾಗಚೈತನ್ಯ ಬೇರೆ ಬೇರೆಯಾಗಿದ್ದ ಸುದ್ದಿಯನ್ನೇ ಅಭಿಮಾನಿಗಳು ಅರಗಿಸಿಕೊಂಡಿರಲಿಲ್ಲ. ಇದೀಗ ಧನುಷ್ (Dhanush) ಮತ್ತು ಐಶ್ವರ್ಯಾ (Aishwarya ) ಅಧಿಕೃತವಾಗಿ (Divorce) ದೂರದೂರವಾಗಿದ್ದಾರೆ. ರಜನೀಕಾಂತ್ (Rajinikanth) ಪುತ್ರಿಯನ್ನು ಮದುವೆ ಮಾಡಿಕೊಂಡಿದ್ದ ಧನುಷ್ ದೂರವಾಗುತ್ತಿರುವ ವಿಚಾರವನ್ನು ಸೋಶಿಯಲ್ ಮೀಡಿಯಾ (Social Media) ಮೂಲಕ ತಿಳಿಸಿದ್ದಾರೆ.
ದಂಪತಿಗೆ ಇಬ್ಬರಿಗೂ ಎರಡು ಗಂಡು ಮಕ್ಕಳಿದ್ದಾರೆ. ಪ್ರೀತಿಸಿ ಮದುವೆ ಆಗಿದ್ದ ನಟ ಧನುಷ್ ಹಾಗು ಐಶ್ವರ್ಯ 18 ವರ್ಷ ದ ದಾಂಪತ್ಯ ಪೂರೈಸಿದ್ದರು.
Naga Chaitanya With New Girl: ಸಮಂತಾ ಬಿಟ್ಟ ಮೇಲೆ ಆಗಲೇ ಹುಡುಗಿ ಹುಡುಕಿ ಕೊಂಡ್ರಾ ನಾಗಚೈತನ್ಯ?
18 ವರ್ಷದಿಂದ ಇಬ್ಬರು ಅನ್ಯೂನ್ಯವಾಗಿದ್ದೇವು. . ಒಬ್ಬರಿಗೊಬ್ಬ ಅರ್ಥ ಮಾಡಿಕೊಂಡು ಕಷ್ಟ ಸುಖದಲ್ಲಿ ಭಾಗಿ ಆಗಿದ್ವಿ. ಸ್ನೇಹಿತರಾಗಿ, ದಂಪತಿಗಳಾಗಿ ಪೋಷಕರಾಗಿ ಜೀವನ ನಡೆಸಿದ್ವಿ. ಈಗ ನಾವು ದೂರಾಗಲು ನಿರ್ಧರಿಸಿದ್ದೇವೆ ಎಂದು ಧನುಷ್ ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.
2021 ಡಿವೋರ್ಸ್ ವರ್ಷ: ಇಡೀ ದೇಶವೇ ಕೊರೋನಾ ಸೋಂಕಿನ (Covid19) ಬಗ್ಗೆ ಚಿಂತಿಸುತ್ತಿದ್ದರೆ, ಇತ್ತ ಚಿತ್ರರಂಗದ ತಾರೆಯರ ಜೀವನದಲ್ಲಿ ಸಣ್ಣ ಸಣ್ಣ ಬಿರುಕು ದೊಡ್ಡದಾಗಿ ವಿಚ್ಛೇದನ (Divorce) ಹಂತ ತಲುಪಿದೆ. ಈ ವರ್ಷ ಸಮಂತಾ (Samantha)- ನಾಗಚೈತನ್ಯ, ಹನಿ ಸಿಂಗ್ (Honey Singh) ಮತ್ತು ಶಾಲಿನಿ ಸಿಂಗ್, ಆಮೀರ್ ಖಾನ್ (Aamir Khan) ಮತ್ತು ಕಿರಣ್, ಕೀರ್ತಿ ಮತ್ತು ಸಾಹಿಲ್ ಕಳೆದ ವರ್ಷ ದೂರವಾಗಿದ್ದರು. ಸಮಂತಾ ಮತ್ತು ನಾಗಚೈತನ್ಯ ವಿಚಾರ ದೊಡ್ಡ ಮಟ್ಟದಲ್ಲಿಯೇ ಚರ್ಚೆಯಾಗಿತ್ತು.
ಸಮಂತಾ-ನಾಗಚೈತನ್ಯ ಸ್ಟೋರಿ:
ಟಾಲಿವುಡ್ ಕ್ಯೂಟ್ ಕಪಲ್ ಎಂದೇ ಜನಪ್ರಿಯತೆ ಪಡೆದಿದ್ದ ಸಮಂತಾ ಮತ್ತು ನಾಗಚೈತನ್ಯ ವೈಯಕ್ತಿಕ ಜೀವನದ ಬಗ್ಗೆ ಹಲವು ದಿನಗಳಿಂದೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಭವಿಷ್ಯ ನಡಿಯುತ್ತಿದ್ದರು. ವಿವಾಹ ವಾರ್ಷಿಕೋತ್ಸವಕ್ಕೂ ಮುನ್ನವೇ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ವಿಚ್ಛೇದನದ ಬಗ್ಗೆ ಬರೆದುಕೊಂಡಿದ್ದರು.
'ನಮ್ಮೆಲ್ಲಾ ಹಿತೈಷಿಗಳಿಗೆ. ಸಾಕಷ್ಟು ಚರ್ಚೆಗಳ ನಂತರ ಚೈತನ್ಯ ಹಾಗೂ ನಾನು ಗಂಡ- ಹೆಂಡತಿಯಾಗಿ ದೂರವಾಗುತ್ತಿದ್ದೀವಿ, ನಮ್ಮದೇ ಮಾರ್ಗದಲ್ಲಿ ಜೀವನ ನಡೆಸಲು ಇಚ್ಛಿಸಿದ್ದೇವೆ. ದಶಕಗಳ ಕಾಲ ನಾವು ಸ್ನೇಹಿತರಾಗಿಲು ಅದೃಷ್ಟವಂತರಾಗಿದ್ದೆವು. ಅದೇ ಸ್ನೇಹ ನಮ್ಮ ಸಂಬಂಧದ ಮೂಲವಾಗಿತ್ತು. ನಮ್ಮ ನಡುವೆ ಯಾವಾಲೂ ಈ ವಿಶೇಷ ಬಾಂಧವ್ಯ ಇರುತ್ತದೆ. ಅಭಿಮಾನಿಗಳು, ಹಿತೈಷಿಗಳು ಹಾಗೂ ಮಾಧ್ಯಮದವರು ನಮ್ಮ ಕಷ್ಟದ ಪರಿಸ್ಥಿತಿಯಲ್ಲಿ ನಮ್ಮ ಜೊತೆಗೆ ನಿಲ್ಲಬೇಕು. ಹಾಗೂ ನಮ್ಮ ಪ್ರೈವೇಸಿ ಗೌರವಿಸಿ ಎಂದು ಕೇಳಿಕೊಳ್ಳುತ್ತೇವೆ,' ಎಂದು ಸಮಂತಾ ಬರೆದುಕೊಂಡಿದ್ದರು.
ಅಕ್ಟೋಬರ್ 7, 2017ರಲ್ಲಿ ಸಮಂತಾ ಮತ್ತು ನಾಗಚೈತನ್ಯ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಮಂತಾ ಮೊದಲ ಸಿನಿಮಾ 'ಯೇ ಮಾಯಾ ಚೆಸವೇ'ದಲ್ಲಿ ನಾಗ ಚೈತನ್ಯಗೆ ಜೋಡಿಯಾಗಿ ನಟಿಸಿದ್ದರು. ಅಂದಿನಿಂದ ಇಬ್ಬರೂ ಆಪ್ತ ಸ್ನೇಹಿತರಾಗಿದ್ದರು. 8 ವರ್ಷಗಳ ಕಾಲ ಇಬ್ಬರೂ ಸ್ನೇಹಿತರಾಗಿದ್ದು, ಪ್ರೀತಿಸಿ ಗುರು ಹಿರಿಯರ ಆಶೀರ್ವಾದ ಪಡೆದುಕೊಂಡು ಮದುವೆ ಆದರು. ಎರಡು ದಿನಗಳ ಕಾಲದ ಡೆಸ್ಟಿನೇಷನ್ ಮದುವೆ ಮಾಡಿಕೊಂಡರು. ಗೋವಾದಲ್ಲಿ ಹಿಂದು ಸಂಪ್ರದಾಯದಂತೆ ಮದುವೆ ಆಗಿದ್ದರು. ಆನಂತರ ಕ್ರಿಶ್ಚಿಯನ್ ಸಂಪ್ರದಾಯವನ್ನೂ ಪಾಲಿಸಿದ್ದರು. 150 ಮಂದಿ ಭಾಗಿಯಾಗಿದ್ದ ಈ ಮದುವೆಗೆ 10 ಕೋಟಿ ರೂ.ಗೂ ಹೆಚ್ಚು ಖರ್ಚು ಮಾಡಿದ್ದರು, ಎನ್ನಲಾಗಿದೆ. ಆಪ್ತ ಸಿನಿ ಸ್ನೇಹಿತರಿಗೆ ಇವರೇ ಸ್ಪೆಷಲ್ ವಿಮಾನ ಬುಕಿಂಗ್ ಕೂಡ ಮಾಡಿದ್ದರು.
ಜನವರಿ 7,2017ರಲ್ಲಿ ಇಬ್ಬರೂ ಎಂಗೇಜ್‌ಮೆಂಟ್ ಮಾಡಿಕೊಳ್ಳುವ ಮೂಲಕ ತಮ್ಮ ಸಂಬಂಧವನ್ನು ಅಧಿಕೃತವಾಗಿ ಘೋಷಿಸಿದ್ದರು. ನಿಶ್ಚಿತಾರ್ಥಕ್ಕೂ ಸಮಂತಾ ಭಾರತದ ಖ್ಯಾತ ಡಿಸೈನರ್ ಬಳಿ Ivory ಬಣ್ಣದ ಡ್ರೆಸ್ ಡಿಸೈನ್ ಮಾಡಿಸಿಕೊಂಡಿದ್ದರು. ಹೈದರಾಬಾದ್‌ನ ಎನ್ ಕನ್‌ವೆನ್ಷನ್ ಸೆಂಟರ್‌ನಲ್ಲಿ ಕಾರ್ಯಕ್ರಮವಿತ್ತು. ಅವರು ಪ್ರೀತಿ ಹೇಗೆ ಶುರುವಾಗಿತ್ತು, ಹೇಗೆಲ್ಲಾ ಲವ್ ಲೈಫ್ ಎಂಜಾಯ್ ಮಾಡಿದರು ಎಂದು ಈ ಸೀರೆ ಮೇಲೆ ಡಿಸೈನ್ ಮಾಡಲಾಗಿತ್ತು. ಆದರೆ ಮದುವೆ ಮುರಿದು ಬಿದ್ದಿತ್ತು.