Awareness Through Pushpa Poster: ಪುಷ್ಪಾ ಫಿಲ್ಮ್ ಪೋಸ್ಟರ್ ಬಳಸಿ ಹೆಲ್ಮೆಟ್ ಜಾಗೃತಿ

Published : Jan 17, 2022, 04:25 PM ISTUpdated : Jan 17, 2022, 04:30 PM IST
Awareness Through Pushpa Poster: ಪುಷ್ಪಾ ಫಿಲ್ಮ್ ಪೋಸ್ಟರ್ ಬಳಸಿ ಹೆಲ್ಮೆಟ್ ಜಾಗೃತಿ

ಸಾರಾಂಶ

ಪುಷ್ಪಾ ಸಿನಿಮಾದ ಪೋಸ್ಟರ್ ಬಳಸಿಕ ಹೆಲ್ಮೆಟ್ ಜಾಗೃತಿ ಮೂಡಿಸಿದ ಅಧಿಕಾರಿಗಳು  ಪುಷ್ಪಾ ಫಿಲ್ಮ್ ಪೋಸ್ಟರ್ ಬಳಸಿ ಟ್ರಾಫಿಕ್ ಪೊಲೀಸರಿಂದ ಹೆಲ್ಮೆಟ್ ಜಾಗೃತಿ

ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿರುವ ಪುಷ್ಪಾ: ದಿ ರೈಸ್(Pushpa) ಸಿನಿಮಾ ಮೋಡಿಗೆ ಒಳಗಾಗದವರು ಯಾರೂ ಇಲ್ಲ. ಭಾಷೆಯ ಗಡಿಯನ್ನು ಮೀರಿ ಈ ಸಿನಿಮಾ ದೇಶಾದ್ಯಂತ ಅಭಿಮಾನಿಗಳನ್ನು ಗಳಿಸಿದೆ. 5 ಭಾಷೆಗಳಲ್ಲಿ ಬಿಡುಗಡೆಯಾದ ಸಿನಿಮಾಗೆ ಸೌತ್ ಚಿತ್ರರಂಗವೇ ಫಿದಾ ಆಗಿದ್ದು, ಸೀಕ್ವೆಲ್ ಕುರಿತು ಕುತೂಹಲ ಹೆಚ್ಚಾಗಿದೆ. ಜನ ಪುಷ್ಪಾ ಮೋಡಿಯಲ್ಲೇ ಇದ್ದಾರೆ. ಕೊರೋನಾ ಮಧ್ಯೆಯೂ ಜನರು ಚಿತ್ರಮಂದಿರಗಳಿಗೆ ಬಂದಿದ್ದು ಸಿನಿಮಾಗೆ ಪ್ರೀತಿ ಕೊಟ್ಟಿದ್ದಾರೆ. ಹಾಗಾಗಿಯೇ ಸಿನಿಮಾ ಸಕ್ಸಸ್‌ಫುಲ್(Successful) ಆಗಿ ರನ್ ಆಗುತ್ತಿದೆ. ಹಿಂದಿಯಲ್ಲಿ ರಣವೀರ್-ದೀಪಿಕಾ ಅಭಿನಯದ 83ಯಂತಹ ಸಿನಿಮಾಗಿಂತಲೂ ಟಾಪ್ ಕಲೆಕ್ಷನ್ ಮಾಡಿರುವ ಪುಷ್ಪಾ ಯಾವುದೇ ಪ್ರಚಾರವಿಲ್ಲದೆ ಬರೋಬ್ಬರಿ 85 ಕೋಟಿ ಕೆಲಕ್ಷನ್‌ನತ್ತ ದಾಪುಗಾಲಿಡುತ್ತಿದೆ.

ಹೈದರಾಬಾದ್(Hyderbad) ಟ್ರಾಫಿಕ್ ಪೊಲೀಸರು(Traffic Police) ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಸವಾರಿ ಮಾಡುವ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಅವರು ಇತ್ತೀಚೆಗೆ ಬಿಡುಗಡೆಯಾದ ಪುಷ್ಪ: ದಿ ರೈಸ್‌ನಲ್ಲಿ ಅಲ್ಲು ಅರ್ಜುನ್ ಅವರ ಫೊಟೋವನ್ನು ಬಳಸಿದ್ದಾರೆ. ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಇತ್ತೀಚೆಗೆ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಾಯಿತು ಮತ್ತು ವೀಕ್ಷಕರಿಂದ ಪ್ರಶಂಸೆ ಪಡೆಯುತ್ತಿದೆ.

ಅಮುಲ್ ಬೇಬಿಯ ಪುಷ್ಪಾ-ಶ್ರೀವಲ್ಲಿ ವರ್ಷನ್

ಹೈದರಾಬಾದ್ ಟ್ರಾಫಿಕ್ ಪೊಲೀಸರು ತನ್ನ ಟ್ವಿಟರ್ ಖಾತೆಯಲ್ಲಿ ಇತ್ತೀಚಿನ ಚಿತ್ರ ಪುಷ್ಪ: ದಿ ರೈಸ್ ಮೂಲಕ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ನಿರ್ಧರಿಸಿದ್ದಾರೆ. ಪೋಸ್ಟರ್‌ನಲ್ಲಿ ಅಲ್ಲು ಅರ್ಜುನ್ ಚೆಕ್ಡ್ ಶರ್ಟ್ ಧರಿಸಿ ಹೆಲ್ಮೆಟ್ ಹಾಕಿಕೊಂಡು ಬೈಕ್ ಓಡಿಸುತ್ತಿದ್ದಾರಂತೆ. ಹೆಲ್ಮೆಟ್ ಜೀವವನ್ನು ಹೇಗೆ ಉಳಿಸುತ್ತದೆ ಎಂಬುದರ ಕುರಿತು ಪೋಸ್ಟ್ ಒತ್ತಿಹೇಳಿದೆ. ದ್ವಿಚಕ್ರ ವಾಹನಗಳನ್ನು ಓಡಿಸುವಾಗ ಅದನ್ನು ಧರಿಸುವಂತೆ ನಾಗರಿಕರನ್ನು ಒತ್ತಾಯಿದ್ದಾರೆ ಪೊಲೀಸರು.

ಅಲ್ಲು ಅರ್ಜುನ್ ಅಭಿನಯದ ಚಿತ್ರವು ಇತ್ತೀಚೆಗೆ ಬಾಕ್ಸ್ ಆಫೀಸ್‌ನಲ್ಲಿ 300 ಕೋಟಿ ರೂಪಾಯಿಗಳ ಗಡಿ ದಾಟಿತು. 300 ಕೋಟಿ ಕ್ಲಬ್‌ಗೆ ಪ್ರವೇಶಿಸಿದ ನಾಲ್ಕನೇ ತೆಲುಗು ಚಿತ್ರವಾಗಿದೆ ಪುಷ್ಪಾ. ಚಿತ್ರವು ಡಿಸೆಂಬರ್ 17, 2021 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಬಿಡುಗಡೆಯಾದ 29 ದಿನಗಳ ನಂತರ ನಿರೀಕ್ಷಿತ ಲಾಭಮಟ್ಟವನ್ನೂ ದಾಡಿ ಲಾಭ ಗಳಿಸುತ್ತಲೇ ಇದೆ. ಇದು ಅಲ್ಲು ಅರ್ಜುನ್ ಅವರ ವೃತ್ತಿಜೀವನದಲ್ಲಿ ಅವರ ಮೈಲಿಗಲ್ಲನ್ನು ತಲುಪಿದ ಮೊದಲ ಸಿನಿಮಾ.

ಈ ಸಿನಿಮಾದಲ್ಲಿ ಶ್ರೀಗಂಧದ ಮರ ಕಳ್ಳಸಾಗಣೆಯ ಅಕ್ರಮ ವ್ಯವಹಾರದ ಕಿಂಗ್‌ಪಿನ್ ಆಗಲು ಕೆಲಸ ಮಾಡುವ ಅಲ್ಲು ಅರ್ಜುನ್ ಅವರ ಪುಷ್ಪಾ ರಾಜ್ ಪಾತ್ರದ ಕಥೆ ಇದೆ. ಚಿತ್ರವು ಅವರ ಜೀವನದ ಮೇಲೆ ಕೇಂದ್ರೀಕರಿಸುತ್ತದೆ. ರಶ್ಮಿಕಾ ಮಂದಣ್ಣ ಅವರು ಶ್ರೀ ವಲ್ಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಪುಷ್ಪರಾಜ್ ಜೊತೆಗಿನ ಅವರ ಪ್ರಣಯವನ್ನು ತೋರಿಸುತ್ತದೆ. ಚಿತ್ರದಲ್ಲಿ ಫಹದ್ ಫಾಸಿಲ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಅವರು ಪುಷ್ಪಾ ರಾಜ್ ಅವರ ಶತ್ರು, ಐಪಿಎಸ್ ಅಧಿಕಾರಿ ಭನ್ವರ್ ಸಿಂಗ್ ಶೇಖಾವತ್ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ಪ್ರಕಾಶ್ ರಾಜ್, ಜಗಪತಿ ಬಾಬು, ವೆನ್ನೆಲಾ ಕಿಶೋರ್, ಅನಸೂಯಾ ಭಾರದ್ವಾಜ್ ಮತ್ತು ಹರೀಶ್ ಉತ್ತಮನ್ ಕೂಡ ಇದ್ದಾರೆ. ಈ ಸಿನಿಮಾವನ್ನು ಕೇರಳದಲ್ಲಿ ವೇಳಾಪಟ್ಟಿಯೊಂದಿಗೆ ಆಂಧ್ರಪ್ರದೇಶದ ರಂಪಚೋಡವರಂ ಮತ್ತು ಮರೆಡುಮಿಲ್ಲಿಯಲ್ಲಿ ಪ್ರಮುಖವಾಗಿ ಚಿತ್ರೀಕರಣ ಮಾಡಲಾಗಿದೆ. ಅಭಿಮಾನಿಗಳು ಈಗ ಚಿತ್ರದ ಸೀಕ್ವೆಲ್‌ಗಾಗಿ ಕಾಯುತ್ತಿದ್ದಾರೆ. ಈ ಬಿಗ್‌ ಸಕ್ಸಸ್ ಬಗ್ಗೆ ಬಹಳಷ್ಟು ಸಿನಿ ಗಣ್ಯರು ಪ್ರತಿಕ್ರಿಯಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶಾರುಖ್ ಜೊತೆ ಡಾನ್ಸ್ ನಿರಾಕರಿಸಿದ ವಧು, ಅಸಮಾಧಾನಗೊಂಡ ಫ್ಯಾನ್ಸ್
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!