ಸದಾ ಝಡ್ ಪ್ಲಸ್ ಸೆಕ್ಯುರಿಟಿಯಲ್ಲೇ ಇರುವ ಈ ವಿವಿಐಪಿ ಒಮ್ಮೆ ಶಾರುಖ್ ಖಾನ್ ಅವರ ಲಿಮೋಸೀನ್ ವಾಹನವನ್ನು ಮೆಚ್ಚಿಕೊಂಡು, ಅದರಲ್ಲಿ ಪ್ರಯಾಣಿಸಿದ್ದರು. ಅವರ್ಯಾರು ಅಂತ ನೋಡಿ.
ಬಾಲಿವುಡ್ (Bollywood) ಸ್ಟಾರ್, ಬಾಲಿವುಡ್ ಬಾದ್‌ಶಾ ಎಂದೇ ಕರೆಯಲ್ಪಡುವ ಶಾರುಖ್ ಖಾನ್ (Sharukh Khan) ಬಳಿ ಒಂದು ಸುಜ್ಜಿತವಾದ ಲಿಮೋಸೀನ್ (Limousine) ಕಾರು ಇದೆ. ತಮ್ಮ ಬಳಿ ಇರುವುದರಲ್ಲೆಲ್ಲ ಅವರಿಗೆ ಅತ್ಯಂತ ಮೆಚ್ಚಿನದಾದ, ದುಬಾರಿ ಮೌಲ್ಯದ ಆಸ್ತಿಯದು. 2014ರಲ್ಲಿ ದುಬೈನಲ್ಲಿ (UAE) ಕಾಣಿಸಿಕೊಂಡಾಗ ಶಾರುಖ್ ಖಾನ್ ಈ ಲಿಮೋ ಮೂಲಕ ಅಲ್ಲಿಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ಆ ಮೂಲಕ ಇಡೀ ಪಟ್ಟಣದ ಚರ್ಚೆಗೆ ವಸ್ತುವಾಗಿದ್ದರು. ಶಾರುಖ್ ತಮ್ಮ ಪತ್ನಿ ಗೌರಿ ಖಾನ್ (Gouri Khan) ಜೊತೆಗೆ ಆ ಅದ್ಧೂರಿ ಲಿಮೋಸಿನ್‌ನಲ್ಲಿ ಕಿಂಗ್-ಸ್ಟೈಲ್ ಪ್ರವೇಶವನ್ನು ಮಾಡಿದ್ದರು. ಅಂಥ ಕಾರು ಅಲ್ಲಿನ ಕಿಂಗ್ ಬಳಿಯೂ ಇರಲಿಲ್ಲ ಎಂಬುದು ಕುತೂಹಲಕಾರಿ ಸಂಗತಿ.
ಇಂಥ ಲಿಮೋದಲ್ಲಿ ಕೂತುಕೊಳ್ಳುವ ಅಧಿಕಾರ, ಹಕ್ಕು ಶಾರುಖ್‌ಗೂ ಅವರ ಹೆಂಡತಿ ಮಕ್ಕಳಿಗೂ ಮಾತ್ರ ಇದೆ. ಐಷಾರಾಮಿ ಕಾರ್ಯಕ್ರಮಗಳಿಗೆ ಹೋಗುವಾಗ, ಅನ್ಯದೇಶಗಳಿಗೆ ಸ್ವಂತ ಜೆಟ್ ಮೂಲಕ ಹೋಗುವಾಗ, ದುಬಾರಿ ಶೂಟಿಂಗ್ ಸ್ಪಾಟ್‌ಗಳಲ್ಲಿ ಕಾಲ ಕಳೆಯಬೇಕಾಗಿ ಬಂದಾಗ ಶಾರುಖ್ ಈ ಲಿಮೋಸೀನ್ ಒಯ್ಯುತ್ತಾರೆ. ಬೇರೆ ಯಾರಿಗೂ ಇದರೊಳಗೆ ಪ್ರವೇಶವಿಲ್ಲ. ಒಳಗೆ ಮಾತ್ರವಲ್ಲ, ಈ ಕಾರಿನ ಹತ್ತಿರ ಹೋದರೂ ಶಾರುಖ್‌ನ ಸೆಕ್ಯುರಿಟಿ ಪಡೆಯವರು ಹಚಾ ಎಂದು ಗದರಿಸಿ ದೂರ ಅಟ್ಟುತ್ತಾರೆ.
Couple Goals: ನಿನ್ನ ಬಿಟ್ಟಿರಲಾರೆ ಅಂತಾರೆ ಕತ್ರೀನಾ, ಗಂಡನ ಜೊತೆ ಶೂಟಿಂಗ್ ಸೆಟ್‌ನಲ್ಲಿ ನಟಿ
ಇಂತ ಕಾರಿನಲ್ಲಿ ಕೂತುಕೊಳ್ಳುವ, ಪ್ರಯಾಣ ಮಾಡುವ ಒಂದು ಅವಕಾಶವನ್ನು ನಮ್ಮ ದೇಶದ ಪ್ರಭಾವಿ ನಾಯಕ, ಅತಿ ಗಣ್ಯ ವಿವಿಐಪಿ ಒಬ್ಬರು ಹೊಂದಿದ್ದರು. ಅವರ್ಯಾರು ಅಂತ ಕೇಳ್ತೀರಾ? ಅವರೇ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi).
2018ರಲ್ಲಿ, ಇಂಗ್ಲೆಂಡ್‌ನಲ್ಲಿ ಕಾಮನ್‌ವೆಲ್ತ್ ದೇಶಗಳ ಶೃಂಗಸಭೆ ನಡೆಯಿತು. ಆಗ ಇಂಗ್ಲೆಂಡ್‌ನಲ್ಲಿ ಶಾರುಖ್ ಅವರ ಯಾವುದೋ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಅವರ ಲಿಮೋ ಅಲ್ಲೇ ಇತ್ತು. ಕಾಮನ್‌ವೆಲ್ತ್ ದೇಶಗಳು ಎಂದರೆ ಹಿಂದೆ ಬ್ರಿಟನ್ ಆಡಳಿತದಲ್ಲಿ ಇದ್ದ ದೇಶಗಳ ಸಭೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ ಅದರಲ್ಲಿ ಭಾಗವಹಿಸುವವರಿದ್ದರು. ಹಾಗೆ ಸಭೆಯ ಸ್ಥಳಕ್ಕೆ ಬರಲು ಮೋದಿ ಅವರು ಆರಿಸಿಕೊಂಡದ್ದು ಇದೇ ಶಾರುಖ್ ಅವರ ಲಿಮೋವನ್ನು. ತಾವು ಉಳಿದುಕೊಂಡು ಹೋಟೆಲಿನಿಂದ ಸಭೆ ನಡೆಯುತ್ತಿದ್ದ ಬಕಿಂಗ್‌ಹ್ಯಾಮ್ ಪ್ಯಾಲೇಸಿಗೆ ಶಾರುಖ್ ಅವರ ಲಿಮೋದಲ್ಲಿ ಕೂತು ಪ್ರಯಾಣಿಸಿ ಆ ವಾಹನದ ಪ್ರಯಾಣದ ಆನಂದವನ್ನು ಮೋದಿ ಅನುಭವಿಸಿದರು.
Janhvi Kapoor : ಜಾಹ್ನವಿಗೆ ಪ್ರತಿ ವೀಕೆಂಡ್ ಹೀಗೆ ಕಳಿಯೋದು ಬಹಳ ಇಷ್ಟವಂತೆ!
ಈ ಲಿಮೋ ಸುಮಾರು 100 ಮೀಟರ್ ಉದ್ದವಾಗಿದೆ. ಇದೊಂದು ಐಷಾರಾಮಿ ಸೆಡಾನ್ ಲಿಮೋಸಿನ್. ಇದರ ಮೇಲೆ ರಾಯಲ್ ಎಸ್ಟೇಟ್ಸ್, ಶಾರುಖ್ ಖಾನ್ ಎಂದು ಬರೆದಿದೆ. ರಾಯಲ್ ಎಸ್ಟೇಟ್ಸ್ ಎಂಬುದು ದುಬೈಯಲ್ಲಿ ಶಾರುಖ್ ಖಾನ್ ಹೊಂದಿರುವ ದುಬಾರಿ ರಿಯಾಲ್ಟಿ ಆಸ್ತಿ ಕಂಪನಿಯ ಹೆಸರು. ಶಾರುಖ್ ದುಬೈಯಲ್ಲಿ ದೊಡ್ಡ ಪ್ರಮಾಣದ ಆಸ್ತಿಪಾಸ್ತಿ ಹೊಂದಿದ್ದಾರೆ. ಸಾಮಾನ್ಯವಾಗಿ ಈ ಕಾರು ದುಬೈನಲ್ಲೇ ಇರುತ್ತದೆ ಹಾಗೂ ಅಲ್ಲಿನ ರಾಜಮನೆತನದ ವ್ಯಕ್ತಿಗಳು ನಡೆಸುವ ಪಾರ್ಟಿಗಳಿಗೆ ಹಾಜರಾಗಲು ಶಾರುಖ್ ದಂಪತಿ ಈ ಲಿಮೋ ಬಳಸುತ್ತಾರೆ. 2014ರಲ್ಲಿ ಶಾರುಖ್ ಖಾನ್ ಅವರು ತಮ್ಮ ಆಸ್ತಿಗೆ ಈ ದುಬಾರಿ ವಾಹನವನ್ನು ಸೇರಿಸಿಕೊಂಡರು. ಅದೇ ವರ್ಷ ಅವರ ದುಬೈ ಕಂಪನಿ ಓಪನ್ ಆಯಿತು.
ಈ ಕಾರು ಬುಲೆಟ್‌ಪ್ರೂಫ್ (Bullet proof) ಆಗಿದೆ ಮಾತ್ರವಲ್ಲ, ಬಾಂಬ್ (Bomb) ಬ್ಲಾಸ್ಟ್ ಅನ್ನೂ ತಡೆದುಕೊಳ್ಳುವ ಶಕ್ತಿ ಹೊಂದಿದೆ. ಇದರ ಒಳಾಂಗನ ಒಂದು ದುಬಾರಿ ಹೋಟೆಲ್ ರೂಮ್‌ನ ಹಾಗೇ ಇದೆ. ಕಿಚನ್‌ನಿಂದ ಹಿಡಿದು ಬೆಡ್‌ರೂಮಿನವರೆಗೆ, ಮೇಕಪ್ ಕಿಟ್‌ನಿಂಧ ಶೂ ಪಾಲಿಶ್‌ವರೆಗೆ ಎಲ್ಲವೂ ಇಲ್ಲಿವೆ. ತಿಂಗಳುಗಳ ಕಾಲ ನೀವು ಹೊರಜಗತ್ತಿನ ಸಂಪರ್ಕವೇ ಇಲ್ಲದೇ ಇದರಲ್ಲಿ ವಾಸವಾಗಿರಬಹುದು. ಸ್ಪೆಶಲ್ ಆಗಿ ತಯಾರಿಸಿಕೊಂಡ ಇದರ ಮೌಲ್ಯ 10 ಕೋಟಿ ರೂಪಾಯಿಗೂ ಅಧಿಕ.