ಲವ್ ಜಿಹಾದ್ ಎಂದು ಕಾಲೆಳೆದ ನೆಟ್ಟಿಗರಿಗೆ ನಟಿ ದೇವೊಲೀನಾ ಭಟ್ಟಾಚಾರ್ಯ ಖಡಕ್ ಪ್ರತಿಕ್ರಿಯೆ

Published : May 20, 2023, 05:06 PM IST
ಲವ್ ಜಿಹಾದ್ ಎಂದು ಕಾಲೆಳೆದ ನೆಟ್ಟಿಗರಿಗೆ ನಟಿ ದೇವೊಲೀನಾ ಭಟ್ಟಾಚಾರ್ಯ ಖಡಕ್ ಪ್ರತಿಕ್ರಿಯೆ

ಸಾರಾಂಶ

ಲವ್ ಜಿಹಾದ್ ಎಂದು ಕಾಲೆಳೆದ ನೆಟ್ಟಿಗರಿಗೆ ನಟಿ ದೇವೊಲೀನಾ ಭಟ್ಟಾಚಾರ್ಯ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. 

ಹಿಂದಿ ಕಿರುತೆರೆಯ ಖ್ಯಾತ ನಟಿ ದೇವೊಲೀನಾ ಭಟ್ಟಾಚಾರ್ಯ ದಿ ಕೇರಳ ಸ್ಟೋರಿ ಸಿನಿಮಾ ಬಗ್ಗೆ ಪ್ರತಿಕ್ರಿಯೆ ನೀಡಿ ಸುದ್ದಿಯಾಗಿದ್ದಾರೆ. ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿರುವ ನಟಿ ದೇವೊಲೀನಾ ಭಟ್ಟಾಚಾರ್ಯ ದಿ ಕೇರಳ ಸ್ಟೋರಿ ಬಗ್ಗೆ ಪ್ರತಿಕ್ರಿಯೆ ನೀಡಿ ಮತ್ತೆ ಟ್ರೋಲ್ ಆಗುತ್ತಿದ್ದಾರೆ. ಕೇರಳ ಸ್ಟೋರಿ ಸಿನಿಮಾ ನೋಡಿದ ನಟಿ ಪತಿ ಜೊತೆ ಸಿನಿಮಾ ನೋಡಿದೆ ಸಿನಿಮಾ ಮೆಚ್ಚಿಕೊಂಡರು, ಪತಿ ನಿಜವಾದ ಭಾರತೀಯ ಮುಸ್ಲಿಂ ಎಂದು ಹೇಳಿದ್ದಾರೆ. ದೇವೊಲೀನಾ ಪ್ರತಿಕ್ರಿಯೆ ನೀಡುತ್ತಿದ್ದಂತೆ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಲವ್ ಜಿಹಾದ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದಕ್ಕೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. 

ಲವ್ ಜಿಹಾದ್ ಎಂದು ಕಾಮೆಂಟ್ ಮಾಡಿದವರಿಗೆ ನಟಿ ದೇವೊಲೀನಾ ತನ್ನ ಪತಿ ನಿಜವಾದ ಭಾರತೀಯ ಮುಸ್ಲಿಂ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ. ದೇವೊಲೀನಾ ಪ್ರತಿಕ್ರಿಯೆ ಹೀಗಿದೆ, 'ನಾನು ಮತ್ತು ನನ್ನ ಪತಿ ಈಗಾಗಲೇ ಸಿನಿಮಾ ನೋಡಿ ನಾವಿಬ್ಬರೂ ಅದನ್ನು ತುಂಬಾ ಇಷ್ಟಪಟ್ಟಿದ್ದರಿಂದ ಚಲನಚಿತ್ರ ಪ್ರದರ್ಶನಕ್ಕೆ ನನ್ನನ್ನು ಆಹ್ವಾನಿಸುವ ಅಗತ್ಯವಿಲ್ಲ. ನಿಜವಾದ ಭಾರತೀಯ ಮುಸಲ್ಮಾನರ ಬಗ್ಗೆ ಕೇಳಿದ್ದೀರಾ? ನನ್ನ ಪತಿ ತಪ್ಪು ವಿಷಯಗಳ ವಿರುದ್ಧ ನಿಲುವು ತೆಗೆದುಕೊಳ್ಳುವವರಲ್ಲಿ ಒಬ್ಬರು ಮತ್ತು ನಾವಿಬ್ಬರೂ ಒಂದೇ ಧೈರ್ಯವನ್ನು ಹೊಂದಿದ್ದೇವೆ' ಎಂದು ಹೇಳಿದ್ದಾರೆ. 

'ಯಾವಾಗಲೂ ಹಾಗಾಗಲ್ಲ. ನನ್ನ ಪತಿ ಮುಸ್ಲಿಂ ಮತ್ತು ಚಲನಚಿತ್ರವನ್ನು ವೀಕ್ಷಿಸಲು ನನ್ನೊಂದಿಗೆ ಬಂದರು. ಅಷ್ಟೆಯಲ್ಲ ಅವರು ಸಿನಿಮಾ ಮೆಚ್ಚಿದರು. ಅದನ್ನು ಅಪರಾಧವೆಂದು ಪರಿಗಣಿಸಲಿಲ್ಲ ಅಥವಾ ಅದು ಅವರ ಧರ್ಮಕ್ಕೆ ವಿರುದ್ಧವಾಗಿದೆ ಎಂದು ಅವರು ಭಾವಿಸಿಲ್ಲ. ಮತ್ತು ಪ್ರತಿಯೊಬ್ಬ ಭಾರತೀಯನು ಹೀಗಿರಬೇಕು ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದ್ದರು. ಈ ಹೇಳಿಕೆ ಬಳಿಕ ದೇವೊಲೀನಾ ಮತ್ತಷ್ಟು ಟ್ರೋಲ್ ಆಗಿದ್ದರು. ಲವ್ ಜಿಹಾದ್ ಎಂದು ಕಾಮೆಂಟ್ ಮಾಡಿದ್ದರು. ಲವ್ ಜಿಹಾದ್ ಕಾಮೆಂಟ್‌ಗೆ ನಟಿ ಪ್ರತಿಕ್ರಿಯೆ ನೀಡುವ ಮೂಲಕ ತಿರುಗೇಟು ನೀಡಿದ್ದಾರೆ.   

The Kerala Story ನೋಡಿದ ಮುಸ್ಲಿಂ ಪತಿ ರಿಯಾಕ್ಷನ್​ ಹೀಗಿತ್ತು ಎಂದ ನಟಿ ದೇವೋಲೀನಾ

ದೇವೊಲೀನಾ 2022 ಡಿಸೆಂಬರ್ ನಲ್ಲಿ ವಿವಾಹವಾದರೂ. ತಮ್ಮ ಜಿಮ್ ತರಬೇತುದಾರ ಶಾನವಾಜ್ ಶೇಖ್ ಅವರ ಜೊತೆ ದಾಂಪತ್ಯಕ್ಕೆ ಕಾಲಿಟ್ಟರು. ನಟಿ ದೇವೊಲೀನಾ 2012-17 ರ ಸಾಥ್ ನಿಭಾನ ಸಾಥಿಯಾದಲ್ಲಿ ಗೋಪಿ ಪಾತ್ರದ ಮೂಲಕ ಸಿಕ್ಕಾಪಟ್ಟೆ ಖ್ಯಾತಿ ಗಳಿಸಿದ್ದರು.

ಮುಸ್ಲಿಂ ವ್ಯಕ್ತಿ ಮದುವೆಯಾದ ದೆವೊಲೀನಾ ಸಖತ್ ಟ್ರೋಲ್; ಮಕ್ಕಳ ಧರ್ಮ ಪ್ರಶ್ನಿಸಿದವರಿಗೆ ನಟಿ ಖಡಕ್ ತಿರುಗೇಟು

ದಿ ಕೇರಳ ಸ್ಟೋರಿ 

ದಿ ಕೇರಳ ಸ್ಟೋರಿ ಸುದೀಪ್ತೋ ಸೇನ್ ಸಾರಥ್ಯದಲ್ಲಿ ಮೂಡಿ ಬಂದಿದೆ. ಅದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಯುವತಿಯನ್ನು ಬ್ರೈನ್ ವಾಶ್ ಮಾಡಿ ಮತಾಂತರ ಮಾಡುವ ಬಗ್ಗೆ ಈ ಸಿನಿಮಾದಲ್ಲಿ ತೋರಿಸಲಾಗಿದೆ. ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಕೆಲವು ರಾಜ್ಯಗಳಲ್ಲಿ ಬ್ಯಾನ್ ಮಾಡಲಾಗಿತ್ತು. ವಿರೋಧ ಬ್ಯಾನ್ ನಡುವೆಯೂ ಉತ್ತಮ ಕಲೆಕ್ಷನ್ ಮಾಡಿದೆ. ಈಗಾಗಲೇ 175 ಕೋಟಿ ರೂಪಾಯಿ ದಾಟಿದೆ. ಈ ವೀಕೆಂಡ್‌ನಲ್ಲಿ ಕಲೆಕ್ಷನ್ 200 ಕೋಟಿ ರೂಪಾಯಿ ದಾಟಲಿದೆ ಎಂದು ಅಂದಾಜಿಸಲಾಗಿದೆ. 
  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹಾವು-ಮುಂಗುಸಿಯಂತಿದ್ದ ನಯನತಾರಾ-ತ್ರಿಷಾ ಕೃಷ್ಣನ್ ಬೀಚ್‌ನಲ್ಲಿ ಸುತ್ತಾಟ.. ಈ ಶತ್ರುಗಳು ಸ್ನೇಹಿತರಾಗಿದ್ದು ಹೇಗೆ?
ಶ್ರೀ ರಾಮನವಮಿ ದಿನವೇ ರಿಲೀಸ್ ಆಗುತ್ತಾ ರಾಜಮೌಳಿ-ಮಹೇಶ್ ಬಾಬು ಜೋಡಿಯ 'ವಾರಣಾಸಿ' ಸಿನಿಮಾ?