ಈ ಪಾತ್ರ ಮಾಡಿದ್ದಕ್ಕೆ ತುಂಬಾ ನಿಂದನೆ ಎದುರಿಸುತ್ತಿದ್ದೀನಿ: 'ಕೇರಳ ಸ್ಟೋರಿ' ನಟಿ ಸೋನಿಯಾ ಬೇಸರ

By Shruthi KrishnaFirst Published May 20, 2023, 2:57 PM IST
Highlights

ಈ ಪಾತ್ರ ಮಾಡಿದ್ದಕ್ಕೆ ತುಂಬಾ ನಿಂದನೆ ಎದುರಿಸುತ್ತಿದ್ದೀನಿ ಎಂದು 'ಕೇರಳ ಸ್ಟೋರಿ' ನಟಿ ಸೋನಿಯಾ ಬಾಲಾನಿ ಬೇಸರ ಹೊರಹಾಕಿದ್ದಾರೆ. 

ದಿ ಕೇರಳ ಸ್ಟೋರಿ ಸಿನಿಮಾ ವಿವಾದ ಮತ್ತು ಬ್ಯಾನ್‌ಗಳ ನಡುವೆಯೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಬಾಚಿಕೊಂಡಿರುವ ಕೇರಳ ಸ್ಟೋರಿ ಈಗಾಗಲೇ 175 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಮುಗ್ಗುತ್ತಿದೆ. ಈ ವೀಕೆಂಡ್‌ನಲ್ಲಿ ಕಲೆಕ್ಷನ್ 200 ಕೋಟಿ ದಾಟಲಿದೆ. ಸಿನಿಮಾ ರಿಲೀಸ್ ಆಗಿ ಎರಡು ವಾರಗಳಾಗುತ್ತಾ ಬಂದ್ರು ದಿ ಕೇರಳ ಸ್ಟೋರಿ ಸುದ್ದಿ ಮಾಡುತ್ತಲೆ ಇದೆ. ಈ ಸಿನಿಮಾದಲ್ಲಿ ನಟಿಸಿದ್ದ ಸೋನಿಯಾ ಬಾಲಾನಿ ಇವಾಗ ಸುದ್ದಿಯಲ್ಲಿದ್ದಾರೆ. ಈ ಸಿನಿಮಾದಲ್ಲಿ ಮತಾಂತರಿಸುವ ಮುಸ್ಲಿಂ ಹುಡುಗಿಯ ಪಾತ್ರದಲ್ಲಿ ನಿಟಿಸಿದ್ದಕ್ಕೆ ನಿಂದನೆ ಎದುರಿಸುತ್ತಿದ್ದೀನಿ ಎಂದು ಬೇಸರ ಹೊರಹಾಕಿದ್ದಾರೆ. 

ನಟಿ ಸೋನಿಯಾ ಬಾಲಾನಿ ಪ್ರತಿಕ್ರಿಯೆ ನೀಡಿದ್ದು ಜನರ ಭಾವನೆ ನೋಯಿಸುವ ಉದ್ದೇಶ ಇರಲಿಲ್ಲ. 'ನಾವು ಸಿನಿಮಾ ಮಾಡಿದ್ದು ಸಂಪೂರ್ಣವಾದ ನೈಜ ಘಟನೆ ಬಗ್ಗೆ ಇರುವ ಸಿನಿಮಾ' ಎಂದು ಹೇಳಿದ್ದಾರೆ. ನಟಿ ಸೋನಾಲಿ ಮುಸ್ಲಿಂ ಹುಡುಗಿ ಆಸಿಫಾ ಪಾತ್ರದಲ್ಲಿ ನಟಿಸಿದ್ದಾರೆ. ಆಸಿಫಾ ತನ್ನ ರೂಮ್‌ಮೇಟ್‌ಗಳನ್ನು ಇಸ್ಲಾಂಗೆ ಮತಾಂತರಿಸುವ ಯುವತಿಯಾಗಿರುತ್ತಾಳೆ. ಇದು ಅಭಿಮಾನಿಗಳಿಗೆ ಇಷ್ಟವಾಗದ ಕಾರಣ ಸೋನಾಲಿ ಅವರನ್ನು ನಿಂದಿಸುತ್ತಿದ್ದಾರೆ. 

Latest Videos

ಸಂದರ್ಶನದಲ್ಲಿ ಮಾತನಾಡಿದ ನಟಿ ಸೋನಾಲಿ, 'ಸುದೀಪ್ತೋ ಸರ್ ಏಳು ವರ್ಷಗಳಿಂದ ಈ ವಿಷಯದ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಅವರು ನಮಗೆ ಕೆಲವು ಚಿತ್ರಗಳು ಮತ್ತು ವೀಡಿಯೊಗಳನ್ನು ತೋರಿಸಿದರು. ನಾನು ತಕ್ಷಣ ಅದನ್ನು ಮಾಡಲು ಒಪ್ಪಿಕೊಂಡೆ. ಇದು ತುಂಬಾ ನೋವಿನ ಕಥೆ. ನಾನು ಸ್ಕ್ರಿಪ್ಟ್ ಅನ್ನು ಓದಿದಾಗ ಅದು ನನ್ನ ಮೇಲೆ ಪರಿಣಾಮ ಬೀರಿತು, ಚಿತ್ರದ ತಂಡದಿಂದ ಯಾರೂ ಈ ರೀತಿಯ ಪ್ರತಿಕ್ರಿಯೆಯನ್ನು ನಿರೀಕ್ಷಿಸಿರಲಿಲ್ಲ' ಎಂದು ಹೇಳಿದರು. 

'ದಿ ಕೇರಳ ಸ್ಟೋರಿ'ಯಲ್ಲಿ ಶಿವನನ್ನು ಗೇಲಿ ಮಾಡಿದ ಮಹಿಳೆ; ಸದ್ಗುರುವಿನ ಹಳೆಯ ಉತ್ತರ ವೈರಲ್

'ಇದು ಯಾವುದೇ ಸಮುದಾಯ ಅಥವಾ ಧರ್ಮದ ವಿರುದ್ಧ ಇಲ್ಲ. ಎಂದಿಗೂ ಆ ಉದ್ದೇಶವಾಗಿರಲಿಲ್ಲ. ಆ ಹುಡುಗಿಯರು ಏನನ್ನು ಅನುಭವಿಸಿದರು ಎಂಬುದರ ಬಗ್ಗೆ ಜನರು ಅದನ್ನು ನಿಜವಾದ ಕಥೆ ಎಂದು ಗ್ರಹಿಸಿದರೆ ಅವರ ಭಾವನೆಗಳಿಗೆ ಧಕ್ಕೆಯಾಗುವುದಿಲ್ಲ' ಎಂದು ಹೇಳಿದರು.

The Kerala Story: ಕೇವಲ ಸಿನಿಮಾವಲ್ಲ ಇದೊಂದು ಚಳುವಳಿ- ನಟಿ ಅದಾ ಶರ್ಮಾ ಬೋಲ್ಡ್ ಹೇಳಿಕೆ

'ಸಿನಿಮಾದಲ್ಲಿ ನಾನು ಎಲ್ಲಾ ದೇವರುಗಳ ಬಗ್ಗೆ ಬಲವಾದ ಸಾಲುಗಳನ್ನು ಹೇಳಿರುವುದರಿಂದ ನನಗೆ ನಿಂದನೀಯ ಸಂದೇಶಗಳು ಬರುತ್ತಿವೆ. ಆದರೆ ಅದು ನಿಜವಾದ ಕಥೆ ಎಂದು ಅವರು ಅರಿತುಕೊಂಡರೆ ಮತ್ತು ಆ ಭಯೋತ್ಪಾದಕ ಗುಂಪುಗಳ ಬಗ್ಗೆ ಜಾಗೃತಿ ಮೂಡಿಸುವುದು ಮಾತ್ರ ಉದ್ದೇಶವಾಗಿದೆ, ಆಗ ಅವರು ಅದರ ಬಗ್ಗೆ ಸಕಾರಾತ್ಮಕ ಭಾವನೆ ಹೊಂದುತ್ತಾರೆ ಎಂದು ನಾನು ಭಾವಿಸುತ್ತೇನೆ. ನಾನು ಟ್ರೋಲಿಂಗ್ ಮತ್ತು ಬ್ಯಾನ್ ಬದಲಿಗೆ ಧನಾತ್ಮಕವಾಗಿ ಕೇಂದ್ರೀಕರಿಸಲು ಪ್ರಯತ್ನಿಸುತ್ತಿದ್ದೇನೆ' ಎಂದು ಹೇಳಿದ್ದಾರೆ. 

click me!