ಮದ್ವೆಯಾಗಿದ್ದು ಕಸಿನ್‌ನನ್ನು ಎಂದಿದ್ದ ಪ್ರಕಾಶ್ ಪಡುಕೋಣೆ, ಹಳೇ ವೀಡಿಯೋ ಈಗ ಟ್ರಾಲ್

By Suvarna NewsFirst Published Mar 25, 2023, 1:02 PM IST
Highlights

ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಅವರ ತಂದೆ ಪ್ರಕಾಶ್​ ಪಡುಕೋಣೆ ಮತ್ತು ತಾಯಿ ಉಜ್ವಲಾ ಅವರ ಮೇಲೆ ಟ್ರೋಲಿಗರ ಕಣ್ಣು ಬಿದ್ದಿದೆ. ಯಾಕೆ ಗೊತ್ತಾ? 
 

ಬಾಲಿವುಡ್​ನಲ್ಲಿ ಮಾತ್ರವಲ್ಲದೇ ಹಾಲಿವುಡ್​ನಲ್ಲೂ ಮಿಂಚಿರೋ ಬೆಡಗಿ ಕನ್ನಡತಿ ದೀಪಿಕಾ ಪಡುಕೋಣೆ  (Deepika Padukone). ಪಠಾಣ್​ ಚಿತ್ರ ಹಲವು ದಾಖಲೆಗಳನ್ನು ಮುರಿದು ಮಕಾಡೆ ಮಲಗಿದ್ದ ಬಾಲಿವುಡ್​ ಇಂಡಸ್ಟ್ರಿಗೆ ಮರುಜೀವ ನೀಡುತ್ತಿದ್ದಂತೆಯೇ, ದೀಪಿಕಾ ಅವರ ವರ್ಚಸ್ಸು ಹೆಚ್ಚುತ್ತಿದೆ. ಈ ಚಿತ್ರದಲ್ಲಿ ಈಕೆ ಮಾಡಿರುವ ಸಾಹಸಮಯ ದೃಶ್ಯಗಳಿಗೆ ಅಭಿಮಾನಿಗಳು ಮನಸೋತಿದ್ದಾರೆ. ಇದರ ಬೆನ್ನಲ್ಲೇ ಅಮೆರಿಕದ ಲಾಸ್ ಏಂಜಲೀಸ್‍ನ ಡಾಲ್ಬಿ ಥಿಯೇಟರ್​ನಲ್ಲಿ ನಡೆದಿದ್ದ ಈ ಬಾರಿಯ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ದೀಪಿಕಾ ಪಡುಕೋಣೆ ಮಿಂಚಿದ್ದರು. ಆಸ್ಕರ್ ಕಾರ್ಯಕ್ರಮಕ್ಕೆ ದೀಪಿಕಾ ಪಡುಕೋಣೆ ಕ್ಲಾಸಿ ಬ್ಲ್ಯಾಕ್ ಗೌನ್‍ನಲ್ಲಿ ಮಿಂಚಿದ್ದರು.  ಇದೇ ಮೊದಲ ಬಾರಿಗೆ ದೀಪಿಕಾ ಪಡುಕೋಣೆ ಅವರು ಅಕಾಡೆಮಿ ಅವಾಡ್ರ್ಸ್ ಶಾಂಪೇನ್ ಕಾರ್ಪೆಟ್ ಮೇಲೆ ನಡೆದು ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ್ದರು.  ವಜ್ರದ ನೆಕ್ಲೇಸ್, ಬಳೆ ಮತ್ತು ವೆಲ್ವೆಟ್, ಕ್ಲಾಸಿ ಕಪ್ಪು ಗೌನ್‍ನಲ್ಲಿ ಮನಮೋಹಕವಾಗಿ ಕಾಣುತ್ತಿದ್ದ ನಟಿ,  ಆರ್‌ಆರ್‌ಆರ್‌ನ 'ನಾಟು ನಾಟು' ಪ್ರದರ್ಶನವನ್ನು ಘೋಷಿಸಲು ಆಸ್ಕರ್ (Oscar) ವೇದಿಕೆಯನ್ನು ಅಲಂಕರಿಸಿದಾಗ  ಹರ್ಷೋದ್ಗಾರಗಳ ಸುರಿಮಳೆಯೇ ಆಗಿತ್ತು. ಇಷ್ಟೆಲ್ಲಾ ಉತ್ತುಂಗಕ್ಕೇರಿರುವ ನಟಿ ಪಠಾಣ್​ (Pathaan) ಚಿತ್ರದ ಬೇಷರಂ ರಂಗ್​ ಹಾಡು ಸೇರಿದಂತೆ ಹಲವಾರು ಬಾರಿ ವಿವಾದಕ್ಕೆ ಸಿಲುಕಿರುವುದು ಇದ್ದೇ ಇದೆ.  ಅತ್ಯಂತ ಕಡಿಮೆ ಬಟ್ಟೆ ಧರಿಸಿ ಬೇಷರಂ ರಂಗ್​ ಹಾಡಿಗೆ ಕೇಸರಿ ಬಟ್ಟೆ ತೊಟ್ಟು ಮೈಚಳಿ ಬಿಟ್ಟು ನಟಿಸಿ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದರೂ ನಟಿ ಅದಕ್ಕೆ ತಲೆ ಕೆಡಿಸಿಕೊಂಡವರಲ್ಲ. ಅದೇ ಇನ್ನೊಂದೆಡೆ ಪಠಾಣ್​ ಯಶಸ್ಸಿನಂತೆಯೇ   ನಟ ರಣ್‌ವೀರ್ ಸಿಂಗ್‌ ಅವರ ಜೊತೆ ಮದುವೆಯಾಗಿಯೂ ಸುಖೀ ಸಂಸಾರ ನಡೆಸುತ್ತಿದ್ದಾರೆ ದೀಪಿಕಾ ಪಡುಕೋಣೆ. 2018ರಲ್ಲಿ  ದೀಪಿಕಾ ಮದುವೆ ರಣಬೀರ್​ ಜೊತೆ  ದಕ್ಷಿಣ ಭಾರತ ಶೈಲಿಯಲ್ಲಿ ನೆರವೇರಿತ್ತು.  ಮದುವೆಗೆ 200 ಜನರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಇವರದ್ದೀಗ ಸುಖಿ ಸಂಸಾರ.  ವಿವಾಹದ ನಂತರವೂ ಚಿತ್ರರಂಗದಲ್ಲಿ ಮುಂದುವರೆದಿದ್ದಾರೆ ದೀಪಿಕಾ.

ಆದರೆ ಈ ವಿಷಯ ಇರುವುದು ದೀಪಿಕಾ ದೀಪಿಕಾ ಪಡುಕೋಣೆಯವರ ತಂದೆಯ ಕುರಿತು. ಎಲ್ಲರಿಗೂ ತಿಳಿದಿರುವಂತೆ ದೀಪಿಕಾ ಅವರ ತಂದೆ ಪ್ರಕಾಶ್ ಪಡುಕೋಣೆ ಪ್ರಕಾಶ್ ಪಡುಕೋಣೆ (Prakash Padukone) ಭಾರತ ಕಂಡ ಅತ್ಯುತ್ತಮ ಬ್ಯಾಡ್ಮಿಂಟನ್ ಆಟಗಾರರಲ್ಲೊಬ್ಬರು. ತಾಯಿಯ ಹೆಸರು  ಉಜ್ಜಲಾ ಪಡುಕೋಣೆ. ಇವರ ಮದುವೆಯ ಬಗ್ಗೆ ಇದೀಗ ಭಾರಿ ವಿವಾದ ಎದ್ದಿದೆ. ಇದಕ್ಕೆ ಕಾರಣ, ಇವರಿಬ್ಬರೂ  ಸೋದರ ಸಂಬಂಧಿಗಳು ಎಂದು. ಇದೇ ಕಾರಣಕ್ಕೆ ಇದೀಗ  ದೀಪಿಕಾ ಪಡುಕೋಣೆಯನ್ನು ಅವರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಒಂದೊಮ್ಮೆ ಪ್ರಕಾಶ್ ಅವರು ಸಂದರ್ಶನವೊಂದರಲ್ಲಿ ತಮ್ಮ ವಿವಾಹದ ಕುರಿತು ಮಾತನಾಡುತ್ತಾ ನಾನು ಹಾಗೂ ಉಜ್ಜಲಾ (Ujjwala) ಕಸಿನ್ಸ್ ಎಂಬುದನ್ನು ಬಹಿರಂಗಪಡಿಸಿದ್ದರು. ಆದರೆ ಆಗ ಸುಮ್ಮನಿದ್ದ ನೆಟ್ಟಿಗರು ಈಗ ಕ್ಯಾತೆ ತೆಗೆಯುತ್ತಿದ್ದಾರೆ. 

Latest Videos

Deepika Padukone: ಆಸ್ಕರ್​ ವೇದಿಕೆಯಿಂದ ತವರಿಗೆ ನಟಿ: ಕ್ವೀನ್​ ಈಸ್​ ಬ್ಯಾಕ್​ ಟ್ರೆಂಡ್​

1980 ರಲ್ಲಿ ವಿಶ್ವದ ನಂಬರ್ 1 ಶ್ರೇಯಾಂಕಿತ ಆಟಗಾರ ಎಂದು ಎನಿಸಿಕೊಂಡಿದ್ದ ಪ್ರಕಾಶ್ ಅವರು ಉಜ್ಜಲಾರ ಕುರಿತು ಹೇಳಿಕೊಂಡಿದ್ದರು. ತಾವಿಬ್ಬರೂ  ಅತಿಯಾಗಿ ಪ್ರೀತಿಸುತ್ತಿದ್ದುದಾಗಿ ಹೇಳಿದ್ದರು. ನಾನು ನನ್ನ ಎರಡನೆಯ ಕಸಿನ್ ಉಜ್ಜಲಾರನ್ನು ವಿವಾಹವಾದೆ ಹಾಗೂ ಕೂಡಲೇ ಕೋಪರ್‌ಹೇಗನ್‌ಗೆ ಹೋದೆವು ಎಂದು ಹೇಳಿದ್ದರು. ಅಲ್ಲಿ ನಾನು ಉದ್ಯೋಗ ಗಿಟ್ಟಿಸಿಕೊಂಡೆ ಹಾಗೂ ಅಲ್ಲಿಯೇ ದೀಪಿಕಾ ಹುಟ್ಟುವವರೆಗೆ 1986 ರವರೆಗೆ ವಾಸಿಸಿದ್ದೆವು. ನಾನು 1989 ರಲ್ಲಿ ನಿವೃತ್ತನಾದೆ ಎಂದು ಪ್ರಕಾಶ್ ತಿಳಿಸಿದ್ದರು. ಇದೀಗ ಈ ಸಂದರ್ಶನದ ವಿಡಿಯೋ ಮತ್ತೊಮ್ಮೆ ವೈರಲ್​ ಆಗುತ್ತಿದ್ದು, ಪ್ರಕಾಶ್​ ಅವರಿ ಟ್ರೋಲಿಗರ ಆಹಾರವಾಗಿದ್ದಾರೆ.  ಅಸಲಿಗೆ ಕಸಿನ್​ ಸಂಬಂಧ ಎಂದರೆ ಸಹೋದರ- ಸಹೋದರಿಯೆಂದಾಗುತ್ತದೆ. ಹಿಂದೂಗಳಲ್ಲಿ ಈ ಮದುವೆ ನಿಷಿದ್ಧ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಆದ್ದರಿಂದ ಪ್ರಕಾಶ್​ ಅವರು ಸಹೋದರಿಯನ್ನೇ ಮದುವೆಯಾಗಿದ್ದಾರೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. 

ಇಷ್ಟು ಸಾಲದು ಎಂದು, ಕೆಲವೊಂದು ಬಳಕೆದಾರರು ಗೇಮ್ ಆಫ್ ಥ್ರೋನ್ಸ್‌ನ ಪಾತ್ರಗಳಿಗೆ ಪ್ರಕಾಶ್​  ಮತ್ತು ಉಜ್ವಲಾ ಅವರ ಜೋಡಿಯನ್ನು  ಹೋಲಿಸಿ ಕಮೆಂಟ್ ಮಾಡುತ್ತಿದ್ದಾರೆ.  ಗೇಮ್ ಆಫ್ ಥ್ರೋನ್ಸ್‌ನಲ್ಲಿ ಬರುವ ತರ್ಗಾಯೆನ್ಸ್ ಪಾತ್ರವು, ರಕ್ತ ಸಂಬಂಧವನ್ನು ಉಳಿಸಿಕೊಳ್ಳುವುದಕ್ಕಾಗಿ ತನ್ನದೇ ಸ್ವಂತ ಸಹೋದರಿಯರನ್ನು ವಿವಾಹವಾಗುವ ಕಥಾಪಾತ್ರವಾಗಿದೆ. ದಕ್ಷಿಣದ ಕಡೆಗಳಲ್ಲಿ ಇಂತಹ ಪದ್ಧತಿಗಳನ್ನು ಸಾಮಾನ್ಯವಾಗಿ ಅನುಸರಿಸಲಾಗುತ್ತದೆ, ಇದೇನೂ ಹೊಸ ವಿಷಯವಲ್ಲ ಎಂದು ದೀಪಿಕಾ ಹಾಗೂ ಪ್ರಕಾಶ್​ ಅವರ ಫ್ಯಾನ್ಸ್​ ಸಮಾಜಾಯಿಷಿಯನ್ನೂ ನೀಡುತ್ತಿದ್ದಾರೆ. ಇನ್ನೂ ಕೆಲವರು ಕಸಿನ್ಸ್​ ಅರ್ಥವನ್ನೂ ನೀಡಿದ್ದು, ಇಂಥ ಮದುವೆ ಸ್ವೀಕಾರ್ಹ ಎಂದಿದ್ದಾರೆ. ಎಲ್ಲಾ ಸೋದರ ಸಂಬಂಧಿಗಳು ವಿವಾಹವಾಗುವಂತಿಲ್ಲ. ಬೇರೆ ಬೇರೆ ಕುಟುಂಬದ ಕಸಿನ್ಸ್ (Cousins) ವಿವಾಹವಾಗಬಹುದು. ಅಣ್ಣ-ತಂಗಿಯ ಮಕ್ಕಳು ವಿವಾಹ ಮಾಡಿಕೊಳ್ಳಬಹುದು ಆದರೆ ಇಬ್ಬರು ಸಹೋದರರ ಮಕ್ಕಳು ಹಾಗೂ ಇಬ್ಬರು ಸಹೋದರಿಯರ ಮಕ್ಕಳು ಪರಸ್ಪರ ವಿವಾಹವಾಗುವಂತಿಲ್ಲ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ನಟಿಯನ್ನು ಬಿಟ್ಟು ಅವರಪ್ಪ ಟ್ರೋಲಿಗರ ಆಹಾರವಾಗಿದ್ದಾರೆ. 

ಪಠಾಣ್​ ಚಿತ್ರಕ್ಕೆ ಶಾರುಖ್ ಇಷ್ಟು ಸಂಭಾವನೆ ಪಡೆದ್ರಾ? ದೀಪಿಕಾ, ಜಾನ್​ಗೆ ಸಿಕ್ಕಿದ್ದೆಷ್ಟು?

click me!