ಎಕಾನಮಿ ಕ್ಲಾಸ್‌ ವಿಮಾನದಲ್ಲಿ ಪ್ರಯಾಣ ಮಾಡಿದ ದೀಪಿಕಾ ಪಡುಕೋಣೆ: ವಿಡಿಯೋ ವೈರಲ್‌..!

Published : Feb 16, 2023, 08:31 PM IST
ಎಕಾನಮಿ ಕ್ಲಾಸ್‌ ವಿಮಾನದಲ್ಲಿ ಪ್ರಯಾಣ ಮಾಡಿದ ದೀಪಿಕಾ ಪಡುಕೋಣೆ: ವಿಡಿಯೋ ವೈರಲ್‌..!

ಸಾರಾಂಶ

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ವಿಮಾನದಲ್ಲಿ ಸಾಮಾನ್ಯ ದರ್ಜೆ ಅಥವಾ ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣ ಮಾಡಿದ್ದು, ಅದೇ ವಿಮಾನದಲ್ಲಿ ಪ್ರಯಾಣಿಸಿದ್ದ ವ್ಯಕ್ತಿಯೊಬ್ಬರು ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ.

ನವದೆಹಲಿ (ಫೆಬ್ರವರಿ 16, 2023): ಪಠಾಣ್‌ ಸಿನಿಮಾ ಬಿಡುಗಡೆಗೂ ಮುಂಚೆಯಿಂದಲೂ ಬಾಲಿವುಡ್‌ ಖ್ಯಾತ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದಾರೆ. ಒಂದು ಕಡೆ ಪಠಾಣ್‌ ಸಿನಿಮಾದ ಸಕ್ಸಸ್‌ ಖುಷಿಯಲ್ಲಿದ್ದರೆ, ಮತ್ತೊಂದು ಕಾರಣದಿಂದಲೂ ಇದೀಗ ಹೆಚ್ಚು ಟ್ರೆಂಡಿಂಗ್ ಆಗುತ್ತಿದ್ದಾರೆ. ಇದಕ್ಕೆ ಕಾರಣ, ನಟಿ ಇತ್ತೀಚೆಗೆ ಎಕಾನಮಿ ಕ್ಲಾಸ್ ವಿಮಾನದಲ್ಲಿ ಪ್ರಯಾಣ ಮಾಡಿದ್ದಾರೆ. 

ಹೌದು, ಬಾಲಿವುಡ್‌ (Bollywood) ನಟಿ (Actress) ದೀಪಿಕಾ ಪಡುಕೋಣೆ (Deepika Padukone) ವಿಮಾನದಲ್ಲಿ (Flight) ಸಾಮಾನ್ಯ ದರ್ಜೆ ಅಥವಾ ಎಕಾನಮಿ ಕ್ಲಾಸ್‌ನಲ್ಲಿ (Economy Class) ಪ್ರಯಾಣ ಮಾಡಿದ್ದು, ಅದೇ ವಿಮಾನದಲ್ಲಿ ಪ್ರಯಾಣಿಸಿದ್ದ ವ್ಯಕ್ತಿಯೊಬ್ಬರು ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ. ಕಿತ್ತಳೆ ಬಣ್ಣದ ಉಡುಪು ಧರಿಸಿದ್ದ ನಟಿ, ಜತೆಗೆ ಡ್ರೆಸ್‌ಗೆ ಮ್ಯಾಚ್‌ ಆಗೋ ಕ್ಯಾಫ್‌ ಹಾಗೂ ಸನ್‌ಗ್ಲಾಸ್‌ ಅನ್ನೂ ಸಹ ಧರಿಸಿದ್ದರು. ಆ ವಿಮಾನದಲ್ಲಿ ಪ್ರಯಾಣಿಸಿದ್ದ ವ್ಯಕ್ತಿಯೊಬ್ಬರು ತೆಗೆದ ಈ ವಿಡಿಯೋ ವೈರಲ್‌ ಆಗಿದೆ. 

ಇದನ್ನು ಓದಿ: Pathaan: ಮುಖ ಮುಚ್ಕೊಂಡು ಹೋಗಿ ಸಿನಿಮಾ ವೀಕ್ಷಿಸಿದ ನಟಿ ದೀಪಿಕಾ ಪಡುಕೋಣೆ

ಅಲ್ಲದೆ, ಎಕಾನಮಿ ಕ್ಲಾಸ್‌ನಲ್ಲಿ ದೀಪಿಕಾ ಪಡುಕೋಣೆಯನ್ನು ನೋಡಿದ ಆ ವಿಮಾನ ಪ್ರಯಾಣಿಕರು ಬೆರಗಾಗುವುದನ್ನು ಸಹ ನಾವು ಕಾಣಬಹುದು. ಅಲ್ಲದೆ, ಅಭಿಮಾನಿಯೊಬ್ಬರು "ಹಾಯ್ ದೀಪಿಕಾ" ಎಂದು ಹೇಳುವುದನ್ನು ಸಹ ಈ ವಿಡಿಯೋದಲ್ಲಿ ಕೇಳಬಹುದು. ಆದರೆ ನಟಿ ಅದನ್ನು ನಿರ್ಲಕ್ಷಿಸಿದಂತೆ ಕಂಡಿದ್ದು, ಯಾವುದೇ ಉತ್ತರ ನೀಡದೆ ಹಾಗೇ ಮುಂದೆ ಹೋಗಿದ್ದಾರೆ. 

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅವರ ಫ್ಯಾನ್‌ ಪೇಜ್‌ವೊಂದು ಈ ವಿಡಿಯೋವನ್ನು ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿದ್ದು, "ಅಭಿಮಾನಿ ದೀಪಿಕಾ ಪಡುಕೋಣೆ ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿರುವುದನ್ನು ಸೆರೆಹಿಡಿದಿದ್ದಾರೆ, ಹೆಚ್ಚಿನ ತಾರೆಯರು ಸಹ ಎಕಾನಮಿ (ಕ್ಲಾಸ್‌ನಲ್ಲಿ) ಪ್ರಯಾಣಿಸಬೇಕೆಂದು ನೀವು ಭಾವಿಸುತ್ತೀರಾ?" ಎಂದು ಅವರು ಟ್ವೀಟ್‌ ಮಾಡಿದ್ದಾರೆ. 

ಇದನ್ನೂ ಓದಿ: ಶಾರುಖ್ ಜತೆ ಕೆಲಸ ಮಾಡುವುದರ ಬಗ್ಗೆ ದೀಪಿಕಾ ಪಡುಕೋಣೆ ಏನ್ ಹೇಳಿದ್ರು ನೋಡಿ

ಕೆಳಗಿನ ವೈರಲ್ ವಿಡಿಯೋ ನೋಡಿ:

ಫೆಬ್ರವರಿ 16, 2023 ರ ಬೆಳಗ್ಗೆ ಈ ವಿಡಿಯೋವನ್ನು ಶೇರ್‌ ಮಾಡಲಾಗಿದ್ದು, ಈ ವಿಡಿಯೋವನ್ನು 2,000 ಕ್ಕೂ ಹೆಚ್ಚು ನೆಟ್ಟಿಗರು ವೀಕ್ಷಿಸಿದ್ದಾರೆ. ಇನ್ನು, ಈ ವಿಡಿಯೋಗೆ ಹಲವರು ಕಮೆಂಟ್‌ ಅನ್ನೂ ಮಾಡಿದ್ದು, ಹಲವರು ನಾನಾ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಇನ್ನು, ನಟರೊಬ್ಬರು ವಿಮಾನದ ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿರುವುದು ಇದೇ ಮೊದಲಲ್ಲ ಬಿಡಿ. ಈ ಹಿಂದೆ, ಕತ್ರೀನಾ ಕೈಫ್ ಮತ್ತು ಪತಿ ಹಾಗೂ ನಟ ವಿಕ್ಕಿ ಕೌಶಲ್ ಅವರು ಸಹ ಎಕಾನಮಿ ಕ್ಲಾಸ್‌ನಲ್ಲಿ ಒಟ್ಟಿಗೆ ಪ್ರಯಾಣಿಸುತ್ತಿರುವ ವಿಮಾನದ ವಿಡಿಯೋ ವೈರಲ್ ಆದ ನಂತರ ಇಂಟರ್ನೆಟ್‌ನಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು.

ಅದೇ ರೀತಿ, ನಟ ಕಾರ್ತಿಕ್ ಆರ್ಯನ್ ಕೂಡ ಎಕಾನಮಿ ಕ್ಲಾಸ್ ವಿಮಾನದಲ್ಲಿ ಪ್ರಯಾಣಿಸಿ ಸುದ್ದಿಯಾಗಿದ್ದರು. ನಟ ಆ ವಿಮಾನದ ಪ್ರಯಾಣಿಕರ ಜತೆ ಮಾತನಾಡಿದ್ದು, ಸಂತೋಷದಿಂದ ಸೆಲ್ಫಿಗೆ ಸಹ ಪೋಸ್ ನೀಡಿದ್ದರು.

ಇದನ್ನೂ ಓದಿ: ಶಾರುಖ್‌ ಖಾನ್‌ ನನಗೆ ಮಧ್ಯರಾತ್ರಿ 2 ಗಂಟೆಗೆ ಕರೆ ಮಾಡಿದ್ರು ಎಂದ ಅಸ್ಸಾಂ ಸಿಎಂ..!

ಈ ಮಧ್ಯೆ, ಖ್ಯಾತ ನಟಿ ದೀಪಿಕಾ ಪಡುಕೋಣೆ, ಪ್ರಸ್ತುತ ಶಾರುಖ್ ಖಾನ್ ಮತ್ತು ಜಾನ್ ಅಬ್ರಹಾಂ ಸಹ-ನಟರಾಗಿ ಇತ್ತೀಚೆಗೆ ಬಿಡುಗಡೆಯಾದ ಪಠಾನ್ ಚಿತ್ರದ ಯಶಸ್ಸಿನಲ್ಲಿ ಮುಳುಗಿದ್ದಾರೆ. ಚಿತ್ರದ ಹಿಂದಿ ಆವೃತ್ತಿಯು 500 ಕೋಟಿ ರೂ. ಗಡಿ ದಾಟಲು ಸಿದ್ಧವಾಗಿದೆ ಎಂದು ಸಿನಿಮಾದ ಖ್ಯಾತ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್‌ ಮಾಡಿದ್ದಾರೆ. "#Pathaan ವಾರದ ದಿನಗಳಲ್ಲಿ ಸಹ ತುಂಬಾ ಉತ್ತಮವಾಗಿ ಓಡುತ್ತಿದೆ. [3ನೇ ವಾರ] ಶುಕ್ರವಾರ 5.75 ಕೋಟಿ, ಶನಿವಾರ 11 ಕೋಟಿ, ಭಾನುವಾರ 12.60 ಕೋಟಿ, ಸೋಮವಾರ 4.10 ಕೋಟಿ, ಮಂಗಳವಾರ 5.40 ಕೋಟಿ, ಬುಧವಾರ 3.50 ಕೋಟಿ. ಒಟ್ಟು: ₹ 484.85 ಕೋಟಿ. #Hindi. # #India biz.ಇನ್ನು, [#ಹಿಂದಿ + #ತಮಿಳು + #ತೆಲುಗು] ಒಟ್ಟಾರೆ ವ್ಯವಹಾರ 500 ಕೋಟಿ ರೂ. ದಾಟಿದೆ… 500 ಕೋಟಿ ರೂ. ಮೀರಲಿರುವ ಮೊದಲ #Hindi ಚಿತ್ರ ಆಗಲಿದೆ’ ಎಂದು ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.

ಸದ್ಯ, ದೀಪಿಕಾ ಪಡುಕೋಣೆ ಪ್ರಭಾಸ್ ಮತ್ತು ಅಮಿತಾಬ್ ಬಚ್ಚನ್ ಅವರೊಂದಿಗೆ ಪ್ರಾಜೆಕ್ಟ್ ಕೆ ನಲ್ಲಿ ಕಾಣಿಸಿಕೊಳ್ಳಲಿದ್ದು, ಹೃತಿಕ್ ರೋಷನ್ ಜೊತೆ ಫೈಟರ್ ಚಿತ್ರದಲ್ಲೂ ನಟಿಸಲಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?