ವೆಬ್‌ ಸೀರಿಸ್‌ಗಾಗಿ ಟಾಪ್‌ಲೆಸ್ ಆದ್ರ ತಮನ್ನಾ: 18 ವರ್ಷದ 'ಮುತ್ತಿನ ನಿಯಮ' ಮುರಿದ ಮಿಲ್ಕಿ ಬ್ಯೂಟಿ

Published : Jun 16, 2023, 11:08 AM ISTUpdated : Jun 16, 2023, 11:09 AM IST
ವೆಬ್‌ ಸೀರಿಸ್‌ಗಾಗಿ ಟಾಪ್‌ಲೆಸ್ ಆದ್ರ ತಮನ್ನಾ: 18 ವರ್ಷದ 'ಮುತ್ತಿನ ನಿಯಮ' ಮುರಿದ ಮಿಲ್ಕಿ ಬ್ಯೂಟಿ

ಸಾರಾಂಶ

ಸಿನಿಮಾಗಳಲ್ಲಿ ನಟಿಸುವಾಗಲೂ ತಮ್ಮದೇ ಮಡಿತನ ಕಾಯ್ದುಕೊಂಡಿದ್ದ ತಮನ್ನಾ ವೆಬ್‌ ಸೀರೀಸ್‌ಗಾಗಿ ತಾವೇ ಪಾಲಿಸಿಕೊಂಡು ಬಂದಿದ್ದ ಕೆಲ ನಿಯಮಗಳನ್ನು ಮೀರಿದ್ದು, ಇದು ಅವರ ಅಭಿಮಾನಿಗಳಿಗೆ ಇರಿಸುಮುರಿಸು ಉಂಟು ಮಾಡಿದೆ. 

ನವದೆಹಲಿ: ಹಲವು ತೆಲಗು ತಮಿಳು ಸಿನಿಮಾಗಳಲ್ಲಿ ನಟಿಸುವ ಮೂಲಕ ಬಹುತೇಕ ದಕ್ಷಿಣ ಭಾರತೀಯ ಸಿನಿಮಾ ರಂಗದ ಖ್ಯಾತ ತಾರೆ ಎನಿಸಿಕೊಂಡಿರುವ ನಟಿ ತಮನ್ನಾ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಇದೇ ಮೊದಲ ಬಾರಿಗೆ ವೆಬ್‌ ಸೀರಿಸ್‌ನಲ್ಲಿ ನಟಿಸಿದ್ದು, ಇದಕ್ಕಾಗಿ ಅವರು ಟಾಪ್‌ಲೆಸ್ ಆಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸಿನಿಮಾಗಳಲ್ಲಿ ನಟಿಸುವಾಗಲೂ ತಮ್ಮದೇ ಮಡಿತನ ಕಾಯ್ದುಕೊಂಡಿದ್ದ ತಮನ್ನಾ ವೆಬ್‌ ಸೀರೀಸ್‌ಗಾಗಿ ತಾವೇ ಪಾಲಿಸಿಕೊಂಡು ಬಂದಿದ್ದ ಕೆಲ ನಿಯಮಗಳನ್ನು ಮೀರಿದ್ದು, ಇದು ಅವರ ಅಭಿಮಾನಿಗಳಿಗೆ ಇರಿಸುಮುರಿಸು ಉಂಟು ಮಾಡಿದೆ. 

 ನಟಿ ತಮನ್ನಾ ಭಾಟಿಯಾ 'ಜೀ ಕರ್ದಾ' ಎಂಬ ವೆಬ್‌ ಸಿರೀಸ್‌ನಲ್ಲಿ ಟಾಪ್‌ಲೆಸ್‌ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದು ವಿವಾದ ಸೃಷ್ಟಿಸಿದೆ. ಇದಕ್ಕಾಗಿ ತಮನ್ನಾ ತಮ್ಮ  18 ವರ್ಷದ ವೃತ್ತಿ ಜೀವನದಲ್ಲಿ ಒಮ್ಮೆಯೂ ಸಹ ಮುತ್ತಿಟ್ಟಿರದ ತಾವೇ ಪಾಲಿಸಿಕೊಂಡು ಬಂದಂತಹ ನಿಯಮವನ್ನು ಮುರಿದಿದ್ದಾರೆ. ಕರ್ದಾ ಚಿತ್ರದಲ್ಲಿ ತಮನ್ನಾ ಬೋಲ್ಡ್‌ ಆಗಿ ನಟಿಸಿರುವ ದೃಶ್ಯದ ವಿಡಿಯೋ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ಇದನ್ನು ಟೀಕಿಸಿರುವ ನೆಟ್ಟಿಗರು 'ತಮನ್ನಾ ಲೈಂಗಿಕ ವೆಬ್‌ಸಿರೀಸ್‌ನಲ್ಲಿ ನಟಿಸಿದ್ದಾರೆ. ಇಂಥ ಅಸಹ್ಯಕರ ಪಾತ್ರ ಆಯ್ಕೆ ಮಾಡಿರುವ ಅವರಿಗೆ ನಾಚಿಕೆಯಾಗಬೇಕು' ಎಂದು ಟೀಕಿಸಿದ್ದಾರೆ.

ಅವರು ನನ್ನ ಖುಷಿಯ ಖಜಾನೆ: ವಿಜಯ್ ವರ್ಮಾ ಜೊತೆಗಿನ ಪ್ರೀತಿ ಒಪ್ಪಿಕೊಂಡ ನಟಿ ತಮನ್ನಾ

ಮಿಲ್ಕಿ ಬ್ಯೂಟಿ ಸದ್ಯ ಎರಡು ಸಿರೀಸ್ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈಗಾಗಲೇ ಟೀಸರ್ ಮತ್ತು ಟ್ರೈಲರ್ ರಿಲೀಸ್ ಆಗಿದ್ದು ತಮನ್ನಾ ನೋಡಿ ಅಭಿಮಾನಿಗಳು ದಂಗಾಗಿದ್ದಾರೆ. ತಮನ್ನಾ ಸದ್ಯ ಲಸ್ಟ್ ಸ್ಟೋರಿ 2 ಮತ್ತು ಜೀ ಕರ್ದಾ ಸೀರಿಸ್‌ನಲ್ಲಿ ನಟಿಸಿದ್ದು ರಿಲೀಸ್‌ಗೆ ರೆಡಿಯಾಗಿವೆ. 
ಈ ಎರಡು ಸೀರಿಸ್‌ಗಳಲ್ಲಿ ತಮನ್ನಾ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಲಸ್ಟ್ ಸ್ಟೋರಿ 2 ಸೀರಿಸ್‌ನಲ್ಲಿ ತಮನ್ನಾ ರೂಮರ್ ಬಾಯ್ ಫ್ರೆಂಡ್ ವಿಜಯ್ ವರ್ಮಾ ಜೊತೆ ಕಾಣಿಸಿಕೊಂಡಿದ್ದಾರೆ. ನೀನಾ ಗುಪ್ತಾ, ಕಾಜೋಲ್, ಮೃಣಾಲ್ ಸೇರಿದಂತೆ ದೊಡ್ಡ ತಾರಾಬಳಗವೇ ಈ ಸಿನಿಮಾದಲ್ಲಿದೆ. ತಮನ್ನಾ ವಿಜಯ್ ವರ್ಮಾ ಜೊತೆ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ವಿಜಯ್ ವರ್ಮಾ ಜೊತೆ ಕಿಸ್ಸಿಂಗ್ ದೃಶ್ಯಗಲ್ಲಿ ಸೆರೆಯಾಗಿದ್ದಾರೆ. ತಮನ್ನಾ ಫೋಟೋಗಳು ಮತ್ತು ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. 

ಲಸ್ಟ್ ಸ್ಟೋರಿ-2 ಜೊತೆಗೆ ತಮನ್ನಾ ಜೀ ಕರ್ದ ಸೀರಿಸ್ ಕೂಡ ಸಿಕ್ಕಾಪಟ್ಟೆ ಹಾಟ್ ಆಗಿದೆ. ಸುಹೇಲ್ ನಯ್ಯರ್ ಅವರಿಗೆ ಜೋಡಿಯಾಗಿ ತಮನ್ನಾ ನಟಿಸಿದ್ದಾರೆ. ಇದರಲ್ಲಿ ಲಸ್ಟ್ ಸ್ಟೋರಿ-2 ಸೀರಿಸ್‌ಗಿಂತ ತಮನ್ನಾ ಮತ್ತಷ್ಟು ಹಾಟ್ ಆಗಿ ಕಾಣಸಿಕೊಂಡಿದ್ದಾರೆ. ತಮನ್ನಾ ಹಸಿಬಿಸಿ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿದೆ. ಇದು ನಿಜಕ್ಕೂ ತಮನ್ನಾನೆನಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಅನೇಕರು ಇದು ಓವರ್ ಆಯ್ತು ಎಂದು ಹೇಳುತ್ತಿದ್ದಾರೆ. 

ಹಲ್‌ಚಲ್ ಎಬ್ಬಿಸಿದ ತಮನ್ನಾ ಹಸಿಬಿಸಿ ದೃಶ್ಯ: ನೋ ಕಿಸ್ಸಿಂಗ್ ಎಂದಿದ್ದ ಮಿಲ್ಕಿ ಬ್ಯೂಟಿ ನೋಡಿ ಫ್ಯಾನ್ಸ್ ಶಾಕ್

ತಮನ್ನಾ ಹಸಿಬಿಸಿ ಫೋಟೋಗಳನ್ನು ಶೇರ್ ಮಾಡಿ, ಅಂದು ನೋ ಕಿಸ್ಸಿಂಗ್ ದೃಶ್ಯ ಎಂದು ತಮನ್ನಾ ಹೇಳಿದ್ದರು. ಆದರೆ ಇಂದು ಈ ರೀತಿಯ ಪಾತ್ರಗಳು ತಮನ್ನಾ ಅವರಿಗೆ ಬೇಡವಾಗಿತ್ತು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಅಂದಹಾಗೆ ಲಸ್ಟ್ ಸ್ಟೋರಿ 2 ಸೀರಿಸ್ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗುತ್ತಿದೆ. ಜೀ ಕರ್ದ ಸೀರಿಸ್ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಉಸಿರು ಬಿಗಿದಿಟ್ಟುಕೊಂಡು ನೋಡುವಂತಹ Serial Killer ಚಿತ್ರಗಳು Don't Miss It
ಬಾಲಿವುಡ್‌ಗೆ ಕಾಲಿಡಲಿರೋ 'ಬೀರ್‌ಬಲ್' ಚತುರೆ.. 'ಕಾಂತಾರ 'ಕನಕವತಿ' ಹಿಂದಿ ಸಿನಿಮಾ ಯಾವುದು?