ಮತ್ತೊಮ್ಮೆ ರಶ್ಮಿಕಾ ಡೀಪ್​ಫೇಕ್​ ವಿಡಿಯೋ: ವಿರೋಧಿಸೋ ಬದ್ಲು ನೆಟ್ಟಿಗರು ಹೀಗೆಲ್ಲಾ ಹೇಳೋದಾ?

By Suvarna News  |  First Published Mar 12, 2024, 3:40 PM IST

ರಶ್ಮಿಕಾ ಮಂದಣ್ಣ ಅವರ ಇನ್ನೊಂದು ಡೀಪ್​ಫೇಕ್​ ವಿಡಿಯೋ  ವೈರಲ್​ ಆಗಿದೆ. ನೆಟ್ಟಿಗರು ಇದನ್ನು ನೋಡಿ ವಿರೋಧಿಸೋ ಬದ್ಲು ಏನೆಲ್ಲಾ ಹೇಳ್ತಿದ್ದಾರೆ ನೋಡಿ...
 


ಕೆಲ ತಿಂಗಳ ಹಿಂದೆ, ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್​ ಫೇಕ್​ ವಿಡಿಯೋ ದೇಶಾದ್ಯಂತ ಭಾರಿ ಹಲ್​ಚಲ್​ ಸೃಷ್ಟಿಸಿತ್ತು. ಯಾರದ್ದೋ ದೇಹಕ್ಕೆ ಇನ್ನಾದರೋ ಮುಖ ಹಾಕಿ ಮೀಮ್ಸ್​ ಮಾಡುವುದು ಮಾಮೂಲು. ಆದರೆ, ಅಶ್ಲೀಲ ಎನ್ನುವ ವಿಡಿಯೋ ಒಂದಕ್ಕೆ ಇನ್ನೊಬ್ಬರ ಮುಖವನ್ನು ಹಾಕಿ ವಿಡಿಯೋ ಮಾಡುವ ಭಯಾನಕ ತಂತ್ರ ಈ ಡೀಪ್​ ಫೇಕ್​. ಇದಾಗಲೇ ಕೆಲವರಿಗೆ ಈ ಕೆಟ್ಟ ಅನುಭವವಾಗಿದ್ದರೂ, ನಟಿ ರಶ್ಮಿಕಾ ಮಂದಣ್ಣ ಅವರ ಪ್ರಕರಣದಿಂದಾಗಿ ಇದು ಭಾರಿ ಸುದ್ದಿಗೆ ಗ್ರಾಸವಾಯಿತು.   ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (AI) ಬಳಸಿ ಇದನ್ನುಮಾಡಲಾಗಿದೆ.  ಕಪ್ಪು ಬಟ್ಟೆ ಧರಿಸಿದ ಮಹಿಳೆಯೊಬ್ಬರು ಲಿಫ್ಟ್‌ಗೆ ಪ್ರವೇಶಿಸುತ್ತಿರುವ ದೃಶ್ಯ ವೈರಲ್ ಆಗಿದೆ. ಮಹಿಳೆಯ ಮುಖವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದು ನಟಿ ರಶ್ಮಿಕಾ ಮಂದನಾ ಅವರ ಮುಖವನ್ನು ಹೋಲುತ್ತದೆ. ವೀಡಿಯೋ ಆನ್‌ಲೈನ್‌ನಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ. ನಟಿಯೊಬ್ಬಳು ಈ ರೀತಿ ಡ್ರೆಸ್​ ಹಾಕಿದರೆ ಅದೇನು ದೊಡ್ಡ ವಿಷಯವೇ ಅಲ್ಲ. ಈ ರೀತಿ ದೇಹ ಪ್ರದರ್ಶನ ಮಾಡುವುದು ಸರ್ವೇ ಸಾಮಾನ್ಯ ಎನಿಸಿದೆ. ಆದರೆ ಸಾಮಾನ್ಯ ಮಹಿಳೆಯರ ವಿಷಯದಲ್ಲಿಯೂ ಹೀಗೆಯೇ ಆದರೆ ಮಾನ ಮರ್ಯಾದೆಗೆ ಅಂಜುವವರು ಯಾವ ಹಂತಕ್ಕಾದರೂ ಹೋಗಬಹುದು ಎಂಬ ಬಗ್ಗೆ ಈ ವಿಷಯ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರೂ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.  

ಬ್ರಿಟಿಷ್ ಇಂಡಿಯನ್ ಮತ್ತು ಇನ್‌ಸ್ಟಾಗ್ರಾಮ್ ಪ್ರಭಾವಿ ಜಾರಾ ಪಟೇಲ್ ಎಂಬಾತ ಮೂಲ ವೀಡಿಯೊವನ್ನು ರಶ್ಮಿಕಾ ಅವರ ಮುಖದೊಂದಿಗೆ ಮಾರ್ಫ್ ಮಾಡಲಾಗಿತ್ತು. ಇದಾಗಲೇ ಜಾರಾ ಅವರು ಇದರಲ್ಲಿ ತಮ್ಮ ಕೈವಾಡ ಏನೂ ಇಲ್ಲ ಎಂದು ಹೇಳಿಕೆ ಕೊಟ್ಟಿದ್ದರು. ಜೊತೆಗೆ ಈ ರೀತಿಯಾದುದಕ್ಕೆ ಅವರು ವಿಷಾದ ಕೂಡ ವ್ಯಕ್ತಪಡಿಸಿದ್ದರು.  ಈ ವಿಡಿಯೋದ ಮಾರ್ಫಿಂಗ್‌ನಲ್ಲಿ ತಾವು ಭಾಗಿಯಾಗಿಲ್ಲ ಎಂದು Instagram ಕೂಡ ಹೇಳಿತ್ತು. ನಂತರ ಆರೋಪಿಯೊಬ್ಬನನ್ನು ಅರೆಸ್ಟ್​ ಮಾಡಿದ್ರೂ ಇದುವರೆಗೆ ಆ ವಿಷಯದ ಅಪ್​ಡೇಟ್​ ಬಂದಿಲ್ಲ.

Tap to resize

Latest Videos

​ಕಿರಿಕ್​ ಬ್ಯೂಟಿ ರಶ್ಮಿಕಾ ಜೊತೆ ವಿಜಯ್​ ದೇವರಕೊಂಡ ಮದ್ವೆ ಫಿಕ್ಸ್​? ನಟ ಕೊಟ್ಟ ಹಿಂಟ್​ ಏನು?

ರಶ್ಮಿಕಾ ಮಂದಣ್ಣ ಬಳಿಕ ಬಾಲಿವುಡ್​ ನಟಿಯರಾದ ಕಾಜೋಲ್​, ಆಲಿಯಾ ಸೇರಿದಂತೆ ಕೆಲವರ ಇದೇ ರೀತಿಯ ವಿಡಿಯೋಗಳು ವೈರಲ್​ ಆದವು.  ಇಂಥ ವಿಡಿಯೋ ಹರಿಬಿಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡರೆ, ಮುಂದೆ ಈ ರೀತಿ ಮಾಡಲು ಜನರು ಹೆದರುತ್ತಾರೆ ಎನ್ನುವ ಕಾರಣಕ್ಕೆ ಪೊಲೀಸರು ಕೂಡ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದರು.  ಆದರೆ ಇದೀಗ ಪೊಲೀಸರು ಕಾರ್ಯಾಚರಣೆ ನಡೆಸುತ್ತಿರುವ ನಡುವೆಯೇ, ರಶ್ಮಿಕಾ ಮಂದಣ್ಣ ಅವರ ಮತ್ತೊಂದು ಡೀಪ್​ಫೇಕ್​ ವಿಡಿಯೋ ವೈರಲ್​ ಆಗಿದೆ. ಬೇರೆಯವರ ದೇಹಕ್ಕೆ ರಶ್ಮಿಕಾ ಮಂದಣ್ಣ ಮುಖವನ್ನು ಜೋಡಿಸಿರುವ ಕಿಡಿಗೇಡಿಗಳು ಅಶ್ಲೀಲವಾಗಿ ಬಿಂಬಿಸುವ ಯತ್ನ ಮಾಡಿದ್ದಾರೆ. 

ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಡೀಪ್​ಫೇಕ್​ ಕುರಿತು ತಲ್ಲಣ ಸೃಷ್ಟಿಯಾಗುತ್ತಿದ್ದರೂ, ರಶ್ಮಿಕಾ ವಿಷಯದಲ್ಲಿ ಯಾಕೋ ಫ್ಯಾನ್ಸ್​ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ.  ಅನಿಮಲ್​ ಚಿತ್ರದ ಬಳಿಕ ಈ ವಿಡಿಯೋ ನೋಡಿದ ಹಲವರು ಇದೇನೂ ವಿಶೇಷವಲ್ಲ ಬಿಡಿ ಎನ್ನುತ್ತಿದ್ದಾರೆ. ಹಲವರು ನಿಮಗಿಂತ ಇದರಲ್ಲಿ ಹಾಟ್​ ಆಗಿ ಕಾಣಿಸುತ್ತಿದ್ದೀರಿ ಎನ್ನುತ್ತಿದ್ದಾರೆ. ನಿಮ್ಮ ಚಿತ್ರಗಳ ಹಸಿಬಿಸಿ ದೃಶ್ಯ ನೋಡಿದ ಮೇಲೆ ಇದರಲ್ಲಿ ಆತಂಕ ಪಡುವ ವಿಷಯವೇನಿಲ್ಲ ಬಿಡಿ ಎಂದೇ ಹಲವರು ಹೇಳುತ್ತಿದ್ದಾರೆ. ನೀವು ಪ್ಲಾಸ್ಟಿಕ್​ ಸರ್ಜರಿ ಮೊರೆ ಹೋದ್ರಾ ಎಂದು ಮತ್ತೆ ಕೆಲವರು ನಟಿಯ ಕಾಲೆಳೆಯುತ್ತಿದ್ದರೆ, ಈ ವಿಡಿಯೋ ನೋಡಿದ್ರೆ ನೀವಲ್ಲ ಎಂದು ಎಂಥವರಿಗೂ ಗೊತ್ತಾಗತ್ತೆ ಬಿಡಿ ಎನ್ನುತ್ತಿದ್ದಾರೆ ಮತ್ತೆ ಕೆಲವರು. 

ಮೇಕಪ್​ ಮಾಡಿ ನೋಡಬೇಕು ಒಬ್ಬಳೇ ಬಾ ಅಂತ ಕರೆದ್ರು... ಆಮೇಲೆ... ಕರಾಳ ಘಟನೆ ಬಿಚ್ಚಿಟ್ಟ ನಟಿ ಅಮಾನಿ

click me!