ಆಸ್ಕರ್ ವೇದಿಕೆಯಲ್ಲಿ ದೀಪಿಕಾ ಪಡುಕೋಣೆ ಮಾಡಿದ ಭಾಷಣ ರ್ಯಾಪ್ ಸಾಂಗ್ ಆಗಿ ಬದಲಾಗಿದೆ.
'ಆಸ್ಕರ್ 2023' ಭಾರತೀಯರಿಗೆ ತುಂಬಾ ವಿಶೇಷವಾಗಿತ್ತು. 95ನೇ ಅಕಾಡೆಮಿ ಅವಾರ್ಡ್ ಸಮಾರಂಭದಸಲ್ಲಿ ಭಾರತ ಎರಡು ಆಸ್ಕರ್ ಪ್ರಶಸ್ತಿ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ರೆ, ನಟಿ ದೀಪಿಕಾ ಪಡುಕೋಣೆ ವಿಶೇಷ ನಿರೂಪಣೆ ಮೂಲಕ ಅಭಿಮಾನಿಗಳ ಹೃದಯ ಗೆದ್ದರು. ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆರ್ ಆರ್ ಆರ್ ಸಿನಿಮಾಗೆ ಪ್ರಶಸ್ತಿ ಘೋಷಿಸುತ್ತಿದ್ದಂತೆ ನಟಿ ದೀಪಿಕಾ ಪಡುಕೋಣೆ ಭಾವುಕರಾಗಿದ್ದರು. ದೀಪಿಕಾ ಕಣ್ಣಂಚಲ್ಲಿ ನೀರು ತುಂಬಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಆಸ್ಕರ್ ಘೋಷಣೆಗೂ ಮೊದಲು ದೀಪಿಕಾ ವೇದಿಕೆಯಲ್ಲಿ ಮಾಡಿದ ಭಾಷಣ ಅಭಿಮಾನಿಗಳ ಹೃದಯ ಗೆದ್ದಿತ್ತು. ನಾಟು ನಾಟು ಹಾಡಿನ ಪ್ರದರ್ಶನಕ್ಕೂ ಮೊದಲು ದೀಪಿಕಾ ಪಡುಕೋಣೆ ಆರ್ ಆರ್ ಆರ್ ಸಿನಿಮಾದ ಬಗ್ಗೆ ವಿವರಿಸಿದರು. ದೀಪಿಕಾ ವಿವರಣೆ ಭಾರತೀಯರ ಹೃದಯ ಗೆದ್ದಿದೆ, ದೀಪಿಕಾ ಮಾತು ಸಿಕ್ಕಾಪಟ್ಟೆ ವೈರಲ್ ಆಗಿದೆ. ಆರ್ ಆರ್ ಆರ್ ಬಗ್ಗೆ ವಿವರಣೆ ನೀಡಿದ ದೀಪಿಕಾ ಮಾತು ಈಗ ರ್ಯಾಂಪ್ ಸಾಂಗ್ ಆಗಿ ಬದಲಾಗಿದೆ. ಹೌದು, ಕೆನಡಾದ ಡಿಜೆ ದೀಪಿಕಾ ಅವರ ಮಾತನ್ನೇ ಇಟ್ಟುಕೊಂಡು ರ್ಯಾಪ್ ಸಾಂಗ್ ಮಾಡಿದ್ದಾರೆ.
SickKick ಎಂದೇ ಖ್ಯಾತಿಗಳಿಸಿರುವ ಡಿಜೆ, ಆಸ್ಕರ್ ವೇದಿಕೆಯಲ್ಲಿ ದೀಪಿಕಾ ಹೇಳಿದ್ದ 'ಟೊಟಲ್ ಬ್ಯಾಂಗರ್' ಪದವನ್ನು ಬಳಸಿ ರಿಮೀಕ್ಸ್ ಮಾಡಿದ್ದಾರೆ. ಈ ರ್ಯಾಪ್ ಅನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ವಿಡಿಯೋ ಶೇರ್ ಮಾಡಿ, 'ನಾನು ಆಸ್ಕರ್ ಪ್ರಶಸ್ತಿ ಸಮಾರಂಭವನ್ನು ವೀಕ್ಷಿಸುತ್ತಿದ್ದೆ. ದೀಪಿಕಾ ಪಡುಕೋಣೆ ಅವವರ ಅದ್ಭುತ ಮಾತು ಈ ಚಿಕ್ಕ ಸಂಗೀತ ತುಣುಕನ್ನು ರಚಿಸಲು ನಿಜವಾಗಿಯೂ ಸ್ಫೂರ್ತಿ ಸಿಕ್ಕಿತು. ಟೊಟಲ್ ಬ್ಯಾಂಗರ್' ಎಂದು ಬರೆದುಕೊಂಡಿದ್ದಾರೆ.
Deepika Padukone: ಆಸ್ಕರ್ ವೇದಿಕೆಯಿಂದ ತವರಿಗೆ ನಟಿ: ಕ್ವೀನ್ ಈಸ್ ಬ್ಯಾಕ್ ಟ್ರೆಂಡ್
ಖ್ಯಾತ ರ್ಯಾಪರ್ ಈ ಹಾಡನ್ನು ರಿಲೀಸ್ ಮಾಡುತ್ತಿದ್ದಂತೆ ಅಭಿಮಾನಿಗಳು ಮೆಚ್ಚಿಕೊಂಡರು. ಅಲ್ಲದೇ ಸಂಪೂರ್ಣ ಹಾಡನ್ನು ಮಾಡಿ ರಿಲೀಸ್ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೇ ಸ್ವತಃ ದೀಪಿಕಾ ಕೂಡ ಇಷ್ಟ ಪಟ್ಟಿದ್ದಾರೆ. ರ್ಯಾಪ್ ಸಾಂಗ್ ಶೇರ್ ಮಾಡಿ ಟೋಟಲ್ ಬ್ಯಾಂಗರ್ ಎಂದು ಹೇಳಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರಿಸ್ ನಲ್ಲಿ ಹಾಡನ್ನು ಶೇರ್ ಮಾಡಿ ಸಂತಸ ಪಟ್ಟಿದ್ದಾರೆ.
Oscar 2023: ದೀಪಿಕಾ ಬದಲು ಕ್ಯಾಮಿಲಾ! ವಿದೇಶಿ ಮಾಧ್ಯಮಗಳ ರೇಸಿಸಂ ಎಂದ ನೆಟ್ಟಿಗರು
ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾದ ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್‌ಗೆ ಮುತ್ತಿಟ್ಟಿದೆ. ಎಂ ಎಂ ಕೀರವಾಣಿ ಸಂಗೀತ ಸಂಯೋಜನೆ ಮಾಡಿರುವ ಈ ಹಾಡಿಗೆ ಚಂದ್ರಬೋಷ್ ಅವರ ಸಾಹಿತ್ಯವಿದೆ. ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲಾ ಭೈರವ್ ಈ ಹಾಡಿಗೆ ಧ್ವನಿಯಾಗಿದ್ದಾರೆ. ವರ್ಲ್ಡ್ ಸೆನ್ಸೇಷನ್ ನಾಟು ನಾಟು ಹಾಡಿಗೆ ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಹೆಜ್ಜೆಹಾಕಿದ್ದಾರೆ.