ಮದ್ವೆ ಆದ್ಮೇಲೆ ಹೀಗಾಗುತ್ತೆ; ಪ್ಯಾಂಟ್‌ನ ಟ್ಯಾಗ್ ತೆಗೆಯದೆ ಏರ್ಪೋರ್ಟ್‌ಗೆ ಬಂದ ಸಿದ್ಧಾರ್ಥ್ ಸಖತ್ ಟ್ರೋಲ್

Published : Mar 20, 2023, 04:09 PM IST
ಮದ್ವೆ ಆದ್ಮೇಲೆ ಹೀಗಾಗುತ್ತೆ; ಪ್ಯಾಂಟ್‌ನ ಟ್ಯಾಗ್ ತೆಗೆಯದೆ ಏರ್ಪೋರ್ಟ್‌ಗೆ ಬಂದ ಸಿದ್ಧಾರ್ಥ್ ಸಖತ್ ಟ್ರೋಲ್

ಸಾರಾಂಶ

ಪ್ಯಾಂಟ್‌ನ ಟ್ಯಾಗ್ ತೆಗೆಯುವುದನ್ನು ಮರೆತು ಏರ್ಪೋರ್ಟ್‌ಗೆ ಬಂದ ಸಿದ್ಧಾರ್ಥ್ ಸಖತ್ ಟ್ರೋಲ್ ಆಗುತ್ತಿದ್ದಾರೆ. ಮದ್ವೆ ಆದ್ಮೇಲೆ ಹೀಗಾಗುತ್ತೆ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. 

ಬಾಲಿವುಡ್ ಸ್ಟಾರ್ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾನಿ ಮದುವೆಯಾಗಿ ಸುಂದರ ಜೀವನ ನಡೆಸುತ್ತಿದ್ದಾರೆ. ಫೆಬ್ರವರಿ 7 ರಂದು ಕಿಯಾರಾ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಹಸೆಮಣೆ ಏರಿದ್ದರು. ಜೈಪುರದ ಜೈಸಲ್ಮೇರ್‌ನಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ಬಳಿಕ ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕಿಯಾರಾ ಜೋಡಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಅದ್ದೂರಿಯಾಗಿ ನಡೆದ ಮದುವೆ ಸಮಾರಂಭದಲ್ಲಿ ಬಾಲಿವುಡ್ ನ ಕೆಲವು ಗಣ್ಯರು, ಕುಟುಂಬದವರು ಮತ್ತು ಸ್ನೇಹಿತರು ಭಾಗಿಯಾಗಿದ್ದರು. ಸದ್ಯ ಸಿದ್ಧಾರ್ಥ್ ಮತ್ತು ಕಿಯಾರಾ ಇಬ್ಬರೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 

ನಟ ಸಿದ್ಧಾರ್ಥ್ ಇತ್ತೀಚಿಗಷ್ಟೆ ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದರು. ಕ್ಯಾಶುಯಲ್‌ನಲ್ಲಿ ಕೂಲ್ ಆಗಿಯೇ ಮುಂಬೈ ವಿಮಾನ ನಿಲ್ದಾಣಕ್ಕೆ ಎಂಟ್ರಿ ಕೊಟ್ಟ ಸಿದ್ಧಾರ್ಥ್ ಕ್ಯಾಮರಾ ಕಡೆ ನೋಡಿ ಹಾಯ್ ಹೇಳಿ ಹೊರಟರು. ಸಿದ್ಧಾರ್ಥ್ ವಿಮಾನ ನಿಲ್ದಾಣ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಟ್ರೋಲ್ ಮಾಡಲು ಪ್ರಾರಂಭಿಸಿದರು. ಸಿದ್ಧಾರ್ಥ್ ಧರಿಸಿದ್ದ ಪ್ಯಾಂಟ್‌ನಲ್ಲಿ ಟ್ಯಾಗ್ ಹಾಗೆ ಇತ್ತು. ಅದನ್ನು ಗಮನಿಸಿದ ನೆಟ್ಟಿಗರು ಇದು ಮದ್ವೆ ಎಫೆಕ್ಟ್ ಎಂದು ಕಾಲೆಳೆಯುತ್ತಿದ್ದಾರೆ. 

ಕಿಯಾರಾ,ಸಿದ್ಧಾರ್ಥ್ ಮದುವೆ ನಂತರ ಮೊದಲ ಹೋಳಿ ಆಚರಿಸಿದ್ದು ಹೀಗೆ

 ಸಿದ್ಧಾರ್ಥ್ ಯೋಧ ಚಿತ್ರೀಕರಣಕ್ಕಾಗಿ ದೆಹಲಿಗೆ ತೆರಳಿದ್ದರು. ಬಳಿ ಶರ್ಟ್ ಮತ್ತು ಡೆನಿಮ್ ಪ್ಯಾಂಟ್ ಧರಿಸಿದ್ದರು. ಡೆನಿಮ್‌ಗೆ ಲಗತ್ತಿಸಿದ್ದ ಟ್ಯಾಗ್ ಹಾಗೆ ಇದ್ದಿದ್ದು ನೋಡಿ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. 'ಇದು ಶಾದಿಯ ಸೈಡ್ ಎಫೆಕ್ಟ್' ಎಂದು ಒಬ್ಬ ಕಾಮೆಂಟ್ ಮಾಡಿದ್ರೆ, ಮತ್ತೋರ್ವ ಕಾಮೆಂಟ್ ಮಾಡಿ, 'ಸಿದ್ಧಾರ್ಥ್ ಸಮಯವನ್ನು ಕಿಯಾರಾ ತೆಗೆದುಕೊಂಡಿದ್ದಾರೆ' ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು 'ಪ್ಯಾಂಟ್ ವಾಪಾಸ್ ಮಾಡಬೇಕು ಅನಿಸುತ್ತೆ ಹಾಗಾಗಿ ಟ್ಯಾಗ್ ತೆಗೆದಿಲ್ಲ' ಎಂದು ಹೇಳುತ್ತಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ 'ಮದ್ವೆ ಬಳಿಕ ಹೀಗಾಗುತ್ತೆ' ಎಂದು ಹೇಳಿದ್ದಾರೆ.   

98 ಸಾವಿರ ಹರಳು, 166 ದಿನ; ಸಂಗೀತ ಸಮಾರಂಭಕ್ಕೆ ಕಿಯಾರಾಗಾಗಿ ತಯಾರಿಸಲಾಗಿತ್ತು ವಿಶೇಷ ಲೆಹಂಗಾ

ಸಿದ್ಧಾರ್ಥ್ ಮಲ್ಹೋತ್ರಾ ಕೊನೆಯದಾಗಿ ಮಿಷನ್ ಮಜ್ನು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದರು. ಈ ಸಿನಿಮಾ ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಈ ಸಿನಿಮಾದಲ್ಲಿ ಸಿದ್ಧಾರ್ಥ್‌ಗೆ ಜೋಡಿಯಾಗಿ ರಶ್ಮಿಕಾ ಕಾಣಿಸಿಕೊಂಡಿದ್ದರು. ಇದು ರಶ್ಮಿಕಾ ಸಹಿ ಮಾಡಿದ ಮೊದಲ ಹಿಂದಿ ಸಿನಿಮಾ ವಾಗಿತ್ತು. ಆದರೆ ಹೇಳಿಕೊಳ್ಳುವಂತ ಸಕ್ಸಸ್ ಈ ಸಿನಿಮಾ ಕಂಡಿಲ್ಲ. ಸದ್ಯ ಸಿದ್ಧಾರ್ಥ್ ಯೋಧ ಸಿನಿಮಾ ಮತ್ತ ಇಂಡಿಯನ್ ಪೊಲೀಸ್ ಫೋರ್ಸ್ ವೆಬ್ ಸರಣಿಯಲ್ಲಿ ಬ್ಯುಸಿಯಾಗಿದ್ದಾರೆ. ಎರಡು ಚಿತ್ರೀಕರಣ ನಡೆಯುತ್ತಿದ್ದು ಸಿದ್ದಾರ್ಥ್ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ. ಇನ್ನೂ ಪತ್ನಿ ಕಿಯಾರಾ ಕೂಡ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಕಿಯಾರಾ ರಾಮ್ ಚರಣ್ ಮತ್ತು ಶಂಕರ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಹೊಸ ಸಿನಿಮಾದಲ್ಲಿ ನಿರತರಾಗಿದ್ದಾರೆ. ಇನ್ನೂ ಈ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿಲ್ಲ. ಸದ್ಯದಲ್ಲೇ ಈ ಸಿನಿಮಾದ ಬಗ್ಗೆ  ಅಪ್ ಡೇಟ್ ಸಿಗುವ ಸಾಧ್ಯತೆ ಇದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?