'ಮೆಗಾ' ಕುಟುಂಬದಲ್ಲಿ ಮತ್ತೊಂದು ವಿಚ್ಛೇದನ ವದಂತಿ; ಪತಿಯನ್ನು ಅನ್‌ಫಾಲೋ ಮಾಡಿ ಫೋಟೋ ಡಿಲೀಟ್ ಮಾಡಿದ ನಿಹಾರಿಕಾ

Published : Mar 20, 2023, 03:09 PM ISTUpdated : Mar 20, 2023, 03:32 PM IST
'ಮೆಗಾ' ಕುಟುಂಬದಲ್ಲಿ ಮತ್ತೊಂದು ವಿಚ್ಛೇದನ ವದಂತಿ; ಪತಿಯನ್ನು ಅನ್‌ಫಾಲೋ ಮಾಡಿ ಫೋಟೋ ಡಿಲೀಟ್ ಮಾಡಿದ ನಿಹಾರಿಕಾ

ಸಾರಾಂಶ

'ಮೆಗಾ' ಕುಟುಂಬದಲ್ಲಿ ಮತ್ತೊಂದು ವಿಚ್ಛೇದನ ವದಂತಿ ವೈರಲ್ ಆಗಿದೆ. ಇನ್ಸ್ಟಾಗ್ರಾಮ್ ನಲ್ಲಿ ಪತಿಯನ್ನು ಅನ್‌ಫಾಲೋ ಮಾಡಿ ಅನೇಕ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ ನಟಿ ನಿಹಾರಿಕಾ.  

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಸಹೋದರನ ಮಗಳು ನಿಹಾರಿಕಾ ಮದುವೆಯಾಗಿ 2 ವರ್ಷಗಳಾಗಿದೆ ಅಷ್ಟೆ. ಆದರೆ ಆಗಲೇ ಪತಿಯಿಂದ ದೂರ ಆಗುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. 2020 ಡಿಸೆಂಬರ್ ನಲ್ಲಿ ನಿಹಾರಿಕಾ, ಚೈತನ್ಯ ಜೊನ್ನಲಗಡ್ಡ ಜೊತೆ ಅದ್ದೂರಿಯಾಗಿ ಮದುವೆಯಾದರು. ಉದಯಪುರದಲ್ಲಿ ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ಇಬ್ಬರೂ ದಾಂಪತ್ಯಕ್ಕೆ ಕಾಲಿಟ್ಟರು. ಆದರೀಗ ಎರಡು ವರ್ಷ ಆಗುತ್ತಿದ್ದಂತೆ ಇಬ್ಬರೂ ವಿಚ್ಚೇದನ ಪಡೆಯುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಚೈತನ್ಯ ಮತ್ತು ನಿಹಾರಿಕಾ ದಾಂಪತ್ಯದಲ್ಲಿ ಯಾವುದು ಸರಿ ಇಲ್ಲ, ಇಬ್ಬರೂ ಆಗಲೇ ದೂರ ದೂರ ಆಗಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಅಂದಹಾಗೆ ಇಬ್ಬರ ವೈಮನಸ್ಸಿನ ಬಗ್ಗೆ ಕಳೆದ ಕೆಲವು ತಿಂಗಳ ಹಿಂದೆಯೇ ಸುದ್ದಿಯಾಗಿತ್ತು. ಆದರೀಗ ಮತ್ತೆ ವೈರಲ್ ಆಗಲು ಕಾರಣ ನಿಹಾರಿಕಾ ಪತಿ ಚೈತನ್ಯ ಅವರನ್ನು ಇನ್ಸ್ಟಾಗ್ರಾಮ್ ನಲ್ಲಿ ಅನ್‌ಫಾಲೋ ಮಾಡುವ ಮೂಲಕ ವದಂತಿಗೆ ಮತ್ತಷ್ಟು ಪುಷ್ಠಿ ನೀಡಿದ್ದಾರೆ. 

ಇನ್ಸ್ಟಾಗ್ರಾಮ್ ನಲ್ಲಿ ಒ್ಬಬರಿಗೊಬ್ಬರು ಅನ್‌ಫಾಲೋ ಮಾಡಿದ್ದಲ್ಲದೇ ಅನೇಕ ಫೋಟೋಗಳನ್ನು ಸಹ ಡಿಲೀಟ್ ಮಾಡಿದ್ದಾರೆ. ಈ ಬೆಳವಣಿಗೆ ಇಬ್ಬರ ವಿಚ್ಛೇದನ ವದಂತಿಯನ್ನು ಮತ್ತಷ್ಟು ಬಲವಾಗುವಂತೆ ಮಾಡಿದೆ. ನಿಹಾರಿಕಾ ಅವರ ಈ ನಡೆಯಿಂದ ಇಬ್ಬರ ನಡುವೆ ಯಾವುದು ಸರಿ ಇಲ್ಲ, ಮದುವೆ ಮುರಿದು ಬಿದ್ದಿದೆ ಎನ್ನುವ ಸುದ್ದಿ ವೈರಲ್ ಆಗಿದೆ. ಆದರೆ ಈ ಬಗ್ಗೆ ನಿಹಾರಿಕಾ ಅಥವಾ ಅವರ ಕುಟುಂಬದ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದ ನಿಹಾರಿಕಾ ಇತ್ತೀಚೆಗೆ ಯಾವುದೋ ಪೋಸ್ಟ್ ಶೇರ್ ಮಾಡಿಲ್ಲ. ಡಿಸೆಂಬರ್ ತಿಂಗಳಲ್ಲಿ ಕೊನೆಯದಾಗಿ ಪೋಸ್ಟ್ ಹಂಚಿಕೊಂಡಿರುವ ನಿಹಾರಿಕಾ ಮತ್ತೆ ಯಾವುದೇ ಫೋಟೋ ಹಂಚಿಕೊಂಡಿಲ್ಲ. 

ರೇವ್ ಪಾರ್ಟಿ ಮೇಲೆ ದಾಳಿ; ಚಿರಂಜೀವಿ ಸಹೋದರನ ಮಗಳು ನಿಹಾರಿಕಾ ಪೊಲೀಸ್ ವಶಕ್ಕೆ

ಅದ್ದೂರಿ ಮದುವೆ

ನಿಹಾರಿಕಾ ಮತ್ತು ಚೈತನ್ಯ ಮದುವೆ ರಾಜಾಸ್ಥಾನದ ಉದಯ್‌ಪುರದಲ್ಲಿ ಅದ್ದೂರಿಯಾಗಿ ನೆರವೇರಿತ್ತು. ಇಡೀ ಮೆಗಾ ಕುಟುಂಬ ಮದುವೆಯಲ್ಲಿ ಭಾಗಿಯಾಗಿತ್ತು. ಚಿರಂಜೀವಿ, ಪವನ್ ಕಲ್ಯಾಣ್, ಅಲ್ಲು ಅರ್ಜುನ್ ಕುಟುಂಬ ಸೇರಿದಂತೆ ಸಂಪೂರ್ಣ ಕುಟುಂಬ ಹಾಜರಿತ್ತು. ಅದ್ದೂರಿಯಾಗಿ ನಿಹಾರಿಕಾ ಮದುವೆ ನೆರವೇರಿತ್ತು. ಮದುವೆ ಫೋಟೋಗಳು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 

ನಿಹಾರಿಕಾ- ಚೈತನ್ಯ ಮದುವೆ ಫೋಟೋ; ಹೇಗಿತ್ತು 'ಮೆಗಾ' ಸಂಭ್ರಮ?

ರೇವ್ ಪಾರ್ಟಿ ದಾಳಿಯಲ್ಲಿ ಪೊಲೀಸ್ ವಶಕ್ಕೆ ನಿಹಾರಿಕಾ 

2022ರಲ್ಲಿ ಹೈದರಾಬಾದ್ ​ನ ಬಂಜಾರಾ ಹಿಲ್ಸ್ ನಲ್ಲಿ ಮಧ್ಯರಾತ್ರಿ ನಡೆಯುತ್ತಿದ್ದ ರೇವ್​ ಪಾರ್ಟಿಮೇಲೆ ಪೊಲೀಸರು ನಡೆಸಿದ್ದ ದಾಳಿಯಲ್ಲಿ ನಿಹಾರಿಕಾ ಅವರನ್ನು ಪೊಲೀಸರು ಬಂಧಿಸಿದ್ದರು. ನಿಹಾರಿಕಾ ಪೊಲೀಸ್ ವಶಕ್ಕೆ ಪಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆಗಲೂ ಕೂಡ ನಿಹಾರಿಕಾ ಮತ್ತು ಚೈತನ್ಯ ನಡುವೆ ಯಾವುದೂ ಸರಿ ಇಲ್ಲ ಎನ್ನುವ ಸುದ್ದಿ ಕೇಳಿ ಬಂದಿತ್ತು. ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಪತಿಯನ್ನು ಅನ್ ಫಾಲೋ ಮಾಡಿ ಫೋಟೋವನ್ನು ಡಿಲೀಟ್ ಮಾಡುವ ಮೂಲಕ ಇಬ್ಬರೂ ಬೇರೆ ಬೇರೆ ಆಗಿದ್ದಾರೆ ಎನ್ನುವ ವದಂತಿಗೆ ಪುಷ್ಠಿ ನೀಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?