Latest Videos

ಬೆತ್ತಲಾಗಿ ಕೇಸ್​ ದಾಖಲಿಸಿಕೊಂಡ ಬೆನ್ನಲ್ಲೇ ನಟಿ ದೀಪಿಕಾ ಗುಡ್​ ನ್ಯೂಸ್​? ಮಗುವಿನ ನಿರೀಕ್ಷೆಯಲ್ಲಿ ಸ್ಟಾರ್​ ದಂಪತಿ?

By Suvarna NewsFirst Published Feb 20, 2024, 3:48 PM IST
Highlights

ದೇಶಪ್ರೇಮ ಮೆರೆವ ಫೈಟರ್​ ಚಿತ್ರದಲ್ಲಿ ಅಶ್ಲೀಲವಾಗಿ ಕಾಣಿಸಿಕೊಂಡು ಕೇಸ್​ ದಾಖಲಿಸಿಕೊಂಡಿರುವ ದೀಪಿಕಾ ಅಮ್ಮನಾಗ್ತಿದ್ದಾರೆ ಎನ್ನುವ ಸುದ್ದಿ ಹರಡಿದೆ. ಏನಿದು ಸುದ್ದಿ?
 

 ಅನಿಮಲ್​ ಚಿತ್ರದಲ್ಲಿ ರಶ್ಮಿಕಾ ಮಂದಣ್ಣನವರ ಅರೆ ಬೆತ್ತಲೆ, ನಟಿ ತೃಪ್ತಿ ಡಿಮ್ರಿಯ ಪೂರ್ಣ ಬೆತ್ತಲೆಯ ವಿಷಯ ಇನ್ನು ಚರ್ಚೆಗೆ ಗ್ರಾಸವಾಗುತ್ತಿರುವ ನಡುವೆಯೇ, ದೀಪಿಕಾ ಪಡುಕೋಣೆ ಮತ್ತು ಹೃತಿಕ್​ ರೋಷನ್​ ಅಭಿನಯದ ಫೈಟರ್​ ಚಿತ್ರವೂ ಕಳೆದ ಜನವರಿ 25ರಂದು  ರಿಲೀಸ್​ ಆಗಿದೆ.  ನಟಿಯರು ಬೆತ್ತಲಾದರೆ ಮಾತ್ರ ಚಿತ್ರ ಓಡುತ್ತದೆ ಎನ್ನುವಂತೆ,  ಈ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಪಠಾಣ್​ಗಿಂತಲೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಬೋಲ್ಡ್​ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.  ಹೃತಿಕ್ ರೋಷನ್​ ಮತ್ತು ದೀಪಿಕಾ ಪಡುಕೋಣೆ ಇಬ್ಬರೂ ಏರ್‌ಫೋರ್ಸ್ ಆಫೀಸರ್‌ ಪಾತ್ರಗಳಲ್ಲಿ ನಟಿಸಿದ್ದಾರೆ. ಏರ್​ಫೋರ್ಸ್​ ಆಫೀಸರ್​ ಆಗಿರುವ ದೀಪಿಕಾಳ ಬಹುತೇಕ ಬೆತ್ತಲೆ ವೇಷಕ್ಕೆ ಹಲವರು ಛೀಮಾರಿ ಹಾಕುತ್ತಿದ್ದಾರೆ.   ಇದೇ ಕಾರಣಕ್ಕೆ, ಬಾಲಾಕೋಟ್‌ ದಾಳಿಯ ಕಥಾಹಂದರ ಹೊಂದಿರುವ ‘ಫೈಟರ್‌’ ಚಿತ್ರದ ಇದೀಗ ವಿವಾದಕ್ಕೆ ಸಿಕ್ಕಿಹಾಕಿಕೊಂಡಿದೆ. ಚಿತ್ರದಲ್ಲಿ ಹೃತಿಕ್‌, ದೀಪಿಕಾ ತುಟಿಗೆ ಮುತ್ತಿಕ್ಕಿರುವ ದೃಶ್ಯ ಸೇರ್ಪಡೆ ಮಾಡಿರುವುದನ್ನು ವಿರೋಧಿಸಿ ವಾಯುಪಡೆ ವಿಂಗ್‌ ಕಮಾಂಡರ್‌ರೊಬ್ಬರು ನೋಟಿಸ್‌ ನೀಡಿದ್ದಾರೆ. ಚಿತ್ರದಲ್ಲಿ ವಾಯುಪಡೆಯ ಸಮವಸ್ತ್ರವನ್ನು ಧರಿಸಿ ಲಿಪ್‌ಕಿಸ್‌ ಮಾಡುತ್ತಿರುವುದು ವಾಯುಪಡೆಗೆ ಅವಮಾನ ಮಾಡಿದೆ. ಜೊತೆಗೆ ವಾಯುಪಡೆಯ ಘನತೆಗೆ ಧಕ್ಕೆ ತಂದಿದೆ. ಪಡೆಯ ಅಸಂಖ್ಯಾತ ಅಧಿಕಾರಿಗಳಿಗೆ ಅವಮಾನವಾಗಿದೆ’ ಎಂದು ಲೀಗಲ್ ನೋಟಿಸ್‌ ನೀಡಿದ್ದಾರೆ.

 ಇಷ್ಟಾದರೂ ಚಿತ್ರ ಫ್ಲಾಪ್​ ಆಗಿದೆ. ಬೆತ್ತಲಾಗಿ ಬಿಟ್ಟರೆ ಚಿತ್ರ ಸಕ್ಸಸ್​ ಆಗಬಹುದು ಎಂದುಕೊಂಡ ನಿರ್ದೇಶಕರಿಗೆ ಭಾರಿ ನಿರಾಸೆಯಾಗಿದೆ. ಪಠಾಣ್​ ಚಿತ್ರದಲ್ಲಿ ಭರ್ಜರಿ ಯಶಸ್ಸು ಕಂಡಿದ್ದ ನಿರ್ದೇಶಕ ಸಿದ್ಧಾರ್ಥ್ ಆನಂದ್‌ (Siddharth Anand) ಈಗ ತಾವು ಅಂದುಕೊಂಡ ರೀತಿಯಲ್ಲಿ ಫೈಟರ್​ ಯಶಸ್ಸು ಕಾಣದೇ ಇರುವುದಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅನಿಮಲ್​ ಚಿತ್ರದಲ್ಲಿನ ಬೆತ್ತಲೆ ದೃಶ್ಯ ನೋಡಿ ಅದನ್ನು ಜನರು ಬ್ಲಾಕ್​ಬಸ್ಟರ್ ಮಾಡಿದಂತೆ ತಮ್ಮ ಚಿತ್ರವೂ ಆಗುತ್ತದೆ ಎಂದು ನಿರೀಕ್ಷೆಯಲ್ಲಿದ್ದ ಸಿದ್ಧಾರ್ಥ್​ ಆನಂದ್​ ಅವರಿಗೆ ಈಗ ನಿರಾಸೆ ಕಾಡಿದೆ.  

ದೀಪಿಕಾ ಬೆತ್ತಲಾದರೂ ಓಡಲಿಲ್ಲವೇಕೆ 'ಫೈಟರ್'​ ಚಿತ್ರ? ನಿರ್ದೇಶಕ ಕೊಟ್ಟ ಉತ್ತರ ಕೇಳಿ...

ಇದರ ನಡುವೆಯೇ, ಇದೀಗ, ನಟಿ ದೀಪಿಕಾ ಗರ್ಭಿಣಿಯಾಗಿದ್ದು, ದೀಪಿಕಾ ಮತ್ತು ರಣವೀರ್​ ಸಿಂಗ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗುತ್ತಿದೆ.  ದೀಪಿಕಾ ಗರ್ಭಿಣಿ ಎಂದು ಬಾಲಿವುಡ್​ ಲೈಫ್ ವರದಿ ಮಾಡಿದೆ.  ಅಂದಹಾಗೆ ದೀಪಿಕಾ ಮತ್ತು ರಣವೀರ್​ ಸಿಂಗ್​ ಅಪ್ಪ-ಅಮ್ಮ ಆಗುತ್ತಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ನಟಿ ಗರ್ಭಿಣಿ ಎನ್ನುವುದಕ್ಕೆ ಸದ್ಯ ಯಾವುದೇ ಮುನ್ಸೂಚನೆ ಇಲ್ಲ. ಅವರಿಗೆ ಎರಡು ತಿಂಗಳು ಎನ್ನಲಾಗುತ್ತಿದೆ. ಎರಡು ತಿಂಗಳಿಗೆ ಬೇಬಿ ಬಂಪ್ ತಿಳಿಯುವುದಿಲ್ಲ. ಹಾಗಾಗಿ ಅದನ್ನು ಪರಿಗಣಿಸಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ. ಈ ಸುದ್ದಿಯ ಸತ್ಯಾಸತ್ಯತೆ ಇನ್ನೂ ಗೊತ್ತಿಲ್ಲ. ಆದರೆ ವಿಷಯ ತಿಳಿಯುತ್ತಲೇ ಅಭಿಮಾನಿಗಳು ಸಂತಸದಿಂದ ಕುಣಿದಾಡುತ್ತಿದ್ದಾರೆ. 

ಅಂದಹಾಗೆ ಈ ಜೋಡಿ,  25 ಜುಲೈ 2019 ರಂದು ಇಟಲಿಯ ಲೇಕ್ ಕೊಮೊದಲ್ಲಿ ವಿವಾಹವಾಗಿತ್ತು.  ಮದುವೆಯಾಗಿ ಸುಮಾರು 5 ವರ್ಷಗಳಾದರೂ ಈ ಜೋಡಿ ಮಗುವಿನ ಬಗ್ಗೆ ಮಾತನಾಡಿರಲಿಲ್ಲ. ದೀಪಿಕಾ ಅವರ ಕೈಯಲ್ಲಿ ಭರ್ಜರಿ ಆಫರ್​ ಇರುವ ಕಾರಣ, ಮಗುವಿನ ಬಗ್ಗೆ ಯೋಚನೆ ಮಾಡಿರಲಿಲ್ಲ. ಅವರು ತಮ್ಮ ಕೆರಿಯರ್ ಮೇಲೆ ಫೋಕಸ್ ಮಾಡಿದ್ದರು.ನಟಿ ದೀಪಿಕಾ ಅವರು ಪ್ರೆಗ್ನೆನ್ಸಿ ಮುಂದೂಡಿದರೂ ಕೂಡಾ ಕೆಲವೊಂದು ಪ್ರಮುಖ ಪ್ರಾಜೆಕ್ಟ್ ಮಾಡಿ ಸೈ ಎನಿಸಿಕೊಂಡರು.  ಪಠಾಣ್, ಜವಾನ್, ಫೈಟರ್ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಪಠಾಣ್​, ಜವಾನ್​ ಸಕ್ಸಸ್​ ಆದರೆ ಫೈಟರ್​ನಲ್ಲಿ ಅಶ್ಲೀಲ ಎಂಬಂತೆ ಕಾಣಿಸಿಕೊಂಡು ದೂರು ದಾಖಲಿಸಿಕೊಂಡಿದ್ದಾರೆ. 

ಡಿವೋರ್ಸ್​, ಮಯೋಸೈಟಿಸ್‌ ಕಾಯಿಲೆ ಬಗ್ಗೆ ಮನಬಿಚ್ಚಿ ಮಾತನಾಡಿದ ನಟಿ ಸಮಂತಾ ರುತ್​ ಪ್ರಭು

click me!