ಡಿವೋರ್ಸ್​, ಮಯೋಸೈಟಿಸ್‌ ಕಾಯಿಲೆ ಬಗ್ಗೆ ಮನಬಿಚ್ಚಿ ಮಾತನಾಡಿದ ನಟಿ ಸಮಂತಾ ರುತ್​ ಪ್ರಭು

Published : Feb 20, 2024, 02:40 PM ISTUpdated : Feb 20, 2024, 03:08 PM IST
ಡಿವೋರ್ಸ್​, ಮಯೋಸೈಟಿಸ್‌ ಕಾಯಿಲೆ ಬಗ್ಗೆ ಮನಬಿಚ್ಚಿ ಮಾತನಾಡಿದ ನಟಿ ಸಮಂತಾ ರುತ್​ ಪ್ರಭು

ಸಾರಾಂಶ

ಡಿವೋರ್ಸ್​, ಮಯೋಸೈಟಿಸ್‌ ಕಾಯಿಲೆ ಬಗ್ಗೆ ಮನಬಿಚ್ಚಿ ಮಾತನಾಡಿರುವ ನಟಿ ಸಮಂತಾ ರುತ್​ ಪ್ರಭು ಹೇಳಿದ್ದೇನು?   

ಸಿನಿ ಕ್ಷೇತ್ರದ ಕ್ಯೂಟ್‌ ಜೋಡಿ ಎಂದೇ ಬಿಂಬಿತವಾಗಿದ್ದ  ನಾಗ ಚೈತನ್ಯ ಮತ್ತು  ಸಮಂತಾ ರುತ್ ಪ್ರಭು ಅವರ ಮದುವೆ ಮರಿದು ಬಿದ್ದು ವರ್ಷಗಳೇ ಆಗಿವೆ. ಹಲವು ವರ್ಷಗಳ ಕಾಲ ಪ್ರೀತಿ ಮಾಡಿ, ಆನಂತರ ಕುಟುಂಬಸ್ಥರ ಒಪ್ಪಿಗೆ ಮೇರೆಗೆ 2017ರಲ್ಲಿ ಮದುವೆ ಆಗಿದ್ದರು. ಆದರೆ ಆ ಮದುವೆ ಬಹಳ ಕಾಲ ಇರಲಿಲ್ಲ. 2021ರಲ್ಲಿ ಈ ಜೋಡಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಂಡಿತು. ಇಬ್ಬರು ಕೂಡ ಈಗ ತಮ್ಮದೇ ಕೆಲಸಗಳಲ್ಲಿ ಮಗ್ನರಾಗಿದ್ದಾರೆ. ಈ ಮಧ್ಯೆ ನಟ ನಾಗ ಚೈತನ್ಯ ಅವರು ಎರಡನೇ ಮದುವೆ ಆಗುವುದಕ್ಕೆ ರೆಡಿ ಆಗುತ್ತಿದ್ದಾರೆ ಎಂಬ ಗಾಸಿಪ್ ಇದ್ದು, ನಟಿ ಸಮಂತಾ ಮಯೋಸೈಟಿಸ್‌ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದು, ಅದರ ನಡುವೆಯೇ ಚಿತ್ರಗಳಲ್ಲಿಯೂ ಬಿಜಿಯಾಗಿದ್ದಾರೆ. ಇವರಿಬ್ಬರ  ವಿಚ್ಛೇದನಕ್ಕೆ ಹಲವಾರು ಮಂದಿ ತಮ್ಮದೇ ಆದ ಕಾರಣಗಳನ್ನು ನೀಡುತ್ತಲೇ ಬಂದಿದ್ದಾರೆ. ಇವರ ಡಿವೋರ್ಸ್‌ ವಿಷಯ ಸದಾ  ಚರ್ಚೆಯಲ್ಲಿದೆ.

ಇದೀಗ ತಮ್ಮ ಮಯೋಸೈಟಿಸ್‌ ಕಾಯಿಲೆ ಹಾಗೂ ತಾವು ಅನುಭವಿಸಿದ ತೊಂದರೆ ಕುರಿತು ಸಮಂತಾ ಇದೇ ವೇಳೆ ಮಾತನಾಡಿದ್ದಾರೆ.   ಮಯೋಸೈಟಿಸ್ ಸಮಸ್ಯೆ ಎದುರಿಸುವುದು ನನಗೆ   ಅತ್ಯಂತ ಕಷ್ಟಕರವಾಗಿತ್ತು. ಪ್ರತಿ ವರ್ಷವೂ ಹಿಂಸೆ ಅನುಭವಿಸಿದ್ದೇನೆ.  ನನ್ನ ಮ್ಯಾನೇಜರ್ ಹಿಮಾಂಕ್ ಮತ್ತು ನಾನು ಮುಂಬೈನಿಂದ ಹಿಂತಿರುಗುತ್ತಿದ್ದ ದಿನ ಅದು. ನನಗೆ ಬಹಳ ಸಮಯದಿಂದ ಶಾಂತಿ ಎಂಬುದೇ ಇರಲಿಲ್ಲ. ಅಂತಿಮವಾಗಿ ನಾನು ಹಾಯಾಗಿ ನಿದ್ರೆ ಮಾಡಬಹುದು ಎಂದು ನನಗೆ ಅನಿಸಿತ್ತು. ಹೀಗೆ ಎಂದುಕೊಳ್ಳುವಾಗಲೇ ನನಗೆ ಮಯೋಸೈಟಿಸ್ ಕಾಣಿಸಿಕೊಂಡಿತು ಎಂದು ಸಮಂತಾ ಹೇಳಿದ್ದಾರೆ.  

ಇನ್ನೇನು 50 ಆಗ್ತಿದೆ, ಈಗ ಸುಂದರಿಯ ವರಿಸಿದ ಮತ್ತೊಬ್ಬ ಖಾನ್ ನಟ, ಯುವಕರಲ್ಲಿ ತಲ್ಲಣ!

ಕೆಲ ದಿನಗಳ ಹಿಂದೆ ಡಿವೋರ್ಸ್‌ ಕುರಿತಾಗಿ ಸಮಂತಾ ಮಾತನಾಡಿದ್ದರು. ಚಿಕಿತ್ಸೆಗಾಗಿ ಮೊದಲು ಅಮೆರಿಕಕ್ಕೆ ಹೋಗಿದ್ದ ಅವರು  ಭೂತಾನ್‌ಗೆ ಹೋಗಿದ್ದ ಸಂದರ್ಭದಲ್ಲಿ  ನಾಗ ಚೈತನ್ಯ ಜೊತೆ ವಿಚ್ಛೇದನದ ಬಗ್ಗೆ ಮಾಹಿತಿ ನೀಡಿದ್ದರು.  ನೀವು ನಿಮ್ಮ ತಮ್ಮ ಯಶಸ್ಸು ಮತ್ತು ವೈಫಲ್ಯಗಳನ್ನು ಪ್ರಜ್ಞಾಪೂರ್ವಕವಾಗಿ ಸ್ವೀಕರಿಸುತ್ತೀರಾ ಎಂಬ ಪ್ರಶ್ನೆ ನಟಿಗೆ ಎದುರಾಗಿತ್ತು. ಅದಕ್ಕೆ ನಟಿ,  ನನ್ನದು ವಿಫಲ ಮದುವೆ. ಇದು ನನ್ನ ಆರೋಗ್ಯ ಹಾಗೂ ಕೆಲಸದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಕಳೆದ ಎರಡು ವರ್ಷಗಳಿಂದ ನಾನು ಎಲ್ಲಿಲ್ಲದ ನೋವನ್ನು ಅನುಭವಿಸಿದ್ದೇನೆ. ಆ ಸಮಯದಲ್ಲಿ, ನಾನು ಹೆಚ್ಚು ಜೀವನದಲ್ಲಿ ನೋವಿಗೊಳಗಾದವರ ಬಗ್ಗೆ ಓದಿದ್ದೇನೆ. ಮತ್ತು ಅವರ ಕಥೆಗಳನ್ನು ಓದುವುದು ನನಗೆ ನನ್ನ ನೋವಿನಿಂದ ಹೊರಬರಲು ಸಹಾಯ ಮಾಡಿತು ಎಂದಿದ್ದರು. ಇದರ ಬೆನ್ನಲ್ಲೇ ಸಮಂತಾ ಎರಡನೆಯ ಮದ್ವೆಯಾಗುತ್ತಾರೆ ಎಂದೂ ಸುದ್ದಿ ಹರಿದಾಡುತ್ತಿದೆ.
 
ಇದರ ನಡುವೆಯೇ, ಸೋಷಿಯಲ್​ ಮೀಡಿಯಾದಲ್ಲಿ ಆಗಾಗ್ಗೆ ಜನರ ಜೊತೆ ಸಂವಾದ ನಡೆಸುತ್ತಿದ್ದಾರೆ. ಫ್ಯಾನ್ಸ್​ ಕೇಳೋ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ.  ಸಂಡೇ ಸ್ಪೇಷಲ್‌ ಎನ್ನುವ ಹಾಗೇ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪ್ರಶ್ನೆಗಳನ್ನು ಕೇಳಿದರೆ, ಅದಕ್ಕೆ ಉತ್ತರಿಸುತ್ತೇನೆ ಎಂದು ಬರೆದುಕೊಂಡಿದ್ದರು. ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬರು ಎರಡನೆಯ ಮದ್ವೆಯ ಕುರಿತು ಮಾತನಾಡಿದ್ದಾರೆ. ಅದಕ್ಕೆ ನಟಿ, ಅಂಕಿ ಅಂಶಗಳ ಮೂಲಕವೇ ಈ ಪ್ರಶ್ನೆಗೆ ಉತ್ತರ ಕೊಟ್ಟಿದ್ದು ಮದ್ವೆಯ ವಿಷ್ಯಕ್ಕೆ ಸದ್ಯ ತೆರೆ ಎಳೆದಿದ್ದಾರೆ. ನಗು ಮೊಗದ ಎಮೋಜಿ ಹಾಕಿ, ಎರಡನೇ ಮತ್ತು ಮೂರನೇ ಮದುವೆಗಳ ವಿಚ್ಛೇದನ ಜ ಅಂಕಿಅಂಶಗಳನ್ನು ಹಂಚಿಕೊಂಡು  ಮತ್ತೆ ಮದ್ವೆಯಾಗುವುದಿಲ್ಲ ಎಂದು ಪರೋಕ್ಷವಾಗಿಯೇ  ಹೇಳಿದ್ದಾರೆ. ‘ಅಂಕಿ ಅಂಶಗಳ ಪ್ರಕಾರ ಇದೊಂದು ಕೆಟ್ಟ ಹೂಡಿಕೆ’  ‘ಮೊದಲ ಮದುವೆಯಲ್ಲಿ ವಿಚ್ಛೇದನದ ಸಾಧ್ಯತೆ ಶೇ.50 ಇರುತ್ತದೆ. ಎರಡು ಹಾಗೂ ಮೂರನೇ ಮದುವೆಯಲ್ಲಿ ಈ ಪ್ರಮಾಣ ಅನುಕ್ರಮವಾಗಿ ಶೇ. 67 ಹಾಗೂ ಶೇ.73 ಇರುತ್ತದೆ’ ಎಂದಿದ್ದರು.

ಸಿನಿಮಾದಲ್ಲಿ ಚಾನ್ಸ್​ ಕೊಡಿಸುವುದಾಗಿ ಲೈಂಗಿಕ ದೌರ್ಜನ್ಯ: ಸ್ಯಾಂಡಲ್​ವುಡ್​ ನಟನ ವಿರುದ್ಧ ಯುವತಿ ದೂರು
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಪವನ್ ಕಲ್ಯಾಣ್, ಅಲ್ಲು ಅರ್ಜುನ್ ಜೊತೆ ರಾಜಮೌಳಿ ಯಾಕೆ ಸಿನಿಮಾ ಮಾಡಿಲ್ಲ? ಕಾರಣ ಕೇಳಿದ್ರೆ ಆಶ್ಚರ್ಯಪಡ್ತೀರಾ!
ನನಗೆ ಈಗಾಗಲೇ 120ಕ್ಕೂ ಹೆಚ್ಚು ಬಾರಿ ಮದುವೆಯಾಗಿದೆ; ನಟ ಸಿಂಬು ಉತ್ತರಕ್ಕೆ ಆಂಕರ್ ಏನಂದ್ರು?