Instagram ಡಿಪಿ ಬದಲಿಸಿದ ದೀಪಿಕಾ: ಫ್ಯಾನ್ಸ್​ ಅಸಮಾಧಾನ- ಏನಪ್ಪಾ ಇದೆ ಅದ್ರಲ್ಲಿ?

By Contributor AsianetFirst Published May 4, 2023, 3:23 PM IST
Highlights

ನಟಿ ದೀಪಿಕಾ ಪಡುಕೋಣೆ ತಮ್ಮ ಇನ್​ಸ್ಟಾಗ್ರಾಮ್​ ಡಿಪಿಯನ್ನು ಬದಲಾಯಿಸಿದ್ದು, ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಆಗಿದ್ದೇನು?
 

ನಟಿ ದೀಪಿಕಾ ಪಡುಕೋಣೆ (Deepika Padukone) ಪಠಾಣ್​ ಚಿತ್ರದ ಯಶಸ್ಸಿನ ಬಳಿಕ ಎಲ್ಲರ ಕಣ್ಣು ಕುಕ್ಕಿಸುತ್ತಿದ್ದಾರೆ. ಇದಕ್ಕೂ ಮೊದಲು ಹಲವಾರು ಹಿಟ್​ ಚಿತ್ರಗಳನ್ನು ನೀಡಿದ್ದರೂ ಪಠಾಣ್​ ಯಶಸ್ಸಿನ ಬಳಿಕ ಈಕೆಯ ಫಾಲೋವರ್ಸ್​ ಸಂಖ್ಯೆ ಕೂಡ ಹೆಚ್ಚಾಗಿದೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಎಂದರೆ ಅವರ ಸಾಮಾಜಿಕ ಜಾಲತಾಣದ ಖಾತೆಯ ಮೇಲೆ ಕಣ್ಣು ನೆಟ್ಟಿರುತ್ತದೆ. ಅವರು ಏನು ಮಾಡುತ್ತಾರೆ, ಯಾವ ಬಟ್ಟೆ ಧರಿಸುತ್ತಾರೆ, ಏನು ಪೋಸ್ಟ್​ ಹಾಕುತ್ತಾರೆ ಇತ್ಯಾದಿಯಾಗಿ ಗಮನ ಹರಿಸುತ್ತಲೇ ಇರುತ್ತಾರೆ. ಇದೀಗ ಸರದಿ ದೀಪಿಕಾ ಪಡುಕೋಣೆ ಅವರದ್ದು. ಪಠಾಣ್​ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ತಮ್ಮ ಫಾಲೋವರ್ಸ್​ ಸಂಖ್ಯೆಯನ್ನು ಹೆಚ್ಚು ಮಾಡಿಕೊಂಡಿರುವ ನಟಿ ದೀಪಿಕಾ, ಇಂದು  ದೇಶದ ದೊಡ್ಡ ಸೂಪರ್​ಸ್ಟಾರ್ಸ್​ಗಳಲ್ಲಿ  ಒಬ್ಬರು ಎನಿಸಿದ್ದಾರೆ. ಇದೀಗ ಅವರು  ತಮ್ಮ ಇನ್‌ಸ್ಟಾಗ್ರಾಮ್ ಡಿಸ್ಪ್ಲೇ ಚಿತ್ರವನ್ನು (ಡಿಪಿ) ಬದಲಾಯಿಸುವ ಮೂಲಕ ಚರ್ಚೆಯಲ್ಲಿ ಇದ್ದಾರೆ.

ಅಷ್ಟಕ್ಕೂ ಅವರು ತಮ್ಮ ಡಿಪಿಯನ್ನು ಬದಲಾಯಿಸಿದ್ದು, ಅವರ ಫ್ಯಾನ್ಸ್​ಗೆ (Fans) ಹಿಡಿಸಲಿಲ್ಲ. ಈ ರೀತಿ ಮಾಡಿದ್ದು ಸರಿಯಲ್ಲ ಎಂದೇ ಹಲವರು ಹೇಳುತ್ತಲಿದ್ದಾರೆ. ಅಷ್ಟಕ್ಕೂ ಅವರು ತಮ್ಮ ಡಿಪಿ ಬದಲಾಯಿಸಿದರೆ ಅಭಿಮಾನಿಗಳಿಗೆ ಇಷ್ಟೆಲ್ಲಾ ಸಮಸ್ಯೆ ಏಕೆ ಆಯಿತು ಎಂದು ಅನಿಸಿರಬೇಕಲ್ಲವೆ? ಬಹುತೇಕ ಸಾಮಾನ್ಯರು ಕೂಡ ತಮ್ಮ ಡಿಪಿಯಲ್ಲಿ ತಮ್ಮ ಫೋಟೋಗಳನ್ನೇ ಬಳಸುತ್ತಾರೆ. ಅದನ್ನು ಬದಲಾಯಿಸಿದರೂ ತಮ್ಮದು ಅಥವಾ ಫ್ಯಾಮಿಲಿ ಫೋಟೋ ಇರುತ್ತದೆ.ಕೆಲವೊಮ್ಮೆ ಮಾತ್ರ ಹೂವು, ಹಣ್ಣು, ಪರಿಸರ ಇತ್ಯಾದಿಗಳ ಫೋಟೋ ಹಾಕುತ್ತಾರೆ. ಇದೇನೋ ಸಾಮಾನ್ಯ ಜನರಿಗೆ ಓಕೆ.  ಆದರೆ ಸೆಲೆಬ್ರಿಟಿಗಳು ಹೀಗೆ ಮಾಡಿದರೆ ಅವರ ಅಭಿಮಾನಿಗಳನ್ನು ಅದನ್ನು ಸಹಿಸಿಕೊಳ್ಳುವುದಿಲ್ಲವಲ್ಲ. ಇಲ್ಲಿ ಆದದ್ದೂ ಅದೇ.

Latest Videos

Deepika Padukone: 'ಪಠಾಣ್'​ ನಾಯಕಿ ಗರ್ಭಿಣಿ? ಏನಿದು ಬಿಸಿಬಿಸಿ ಸುದ್ದಿ?

ನಟಿ ದೀಪಿಕಾ ಪಡುಕೋಣೆ ನೀಲಿ ಆಕಾಶದ (Blue sky) ಫೋಟೋ ಹಾಕಿದ್ದಾರೆ. ತಮ್ಮ ಇನ್​ಸ್ಟಾಗ್ರಾಮ್​  ಖಾತೆಯಲ್ಲಿ ಇದ್ದ ತಮ್ಮ ಫೋಟೋ ಬದಲಿಸಿ ಆಗಸದ ಫೋಟೋ ಹಾಕಿರುವುದು ಫ್ಯಾನ್ಸ್​ಗೆ ನಿರಾಸೆ ತಂದಿದೆ. ಈ ಚಿತ್ರವನ್ನು ತಾವು ಖುದ್ದು  ಕ್ಲಿಕ್ ಮಾಡಿರುವುದಾಗಿ ಹೇಳಿಕೊಂಡಿರುವ ನಟಿ, ಯಾರ್ಯಾರಿಗೆ  ಮೋಡದ ರಚನೆಗಳ ಚಿತ್ರಗಳನ್ನು ತೆಗೆಯುವ ಗೀಳು ಇದೆ ಎಂದು ಪ್ರಶ್ನಿಸಿದ್ದಾರೆ.  ಆಕೆಯ ಶೀರ್ಷಿಕೆಗೆ ಪ್ರತಿಕ್ರಿಯೆಯಾಗಿ, ಕೆಲವು ಫ್ಯಾನ್ಸ್​ ತಮಗೂ ಈ ರೀತಿ ಚಿತ್ರ ತೆಗೆಯುವ ಹವ್ಯಾಸ ಇದೆ ಎಂದು ಹೇಳಿದರೆ, ಹಲವರು ದೀಪಿಕಾ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನೀವು ಬೇಕಿದ್ದರೆ ತೆಗೆದ ಚಿತ್ರವನ್ನು ಬೇರೆ ಕಡೆ ಶೇರ್​ ಮಾಡಿ, ಆದರೆ ಡಿಪಿ ಬದಲಿಸುವುದು ಸರಿಯಲ್ಲ ಎಂದು ನೋವು ತೋಡಿಕೊಂಡಿದ್ದಾರೆ.  ಓರ್ವ ಅಭಿಮಾನಿ (Fans), 'ಓ ದೇವರೇ, ಈ ನಡವಳಿಕೆ ಏನು+ ನಿಮ್ಮ ಪ್ರೊಫೈಲ್‌ನಲ್ಲಿ ಮೋಡಗಳ ಚಿತ್ರಗಳನ್ನು ಏಕೆ ಹಾಕಿದ್ದೀರಿ' ಎಂದು ಬರೆದರೆ, ನಮಗೆ ದಿನವೂ ನಿಮ್ಮ ಸುಂದರ ಮುಖವನ್ನು ನೋಡುವ ಅಭ್ಯಾಸ, ಪ್ಲೀಸ್​ ನಿಮ್ಮದೇ ಫೋಟೋ ಹಾಕಿ ಎಂದು ಇನ್ನು ಹಲವರು ಬರೆದಿದ್ದಾರೆ.  ನಾನು ನನ್ನ ಡಿಪಿಯನ್ನು ಎಂದಿಗೂ ಬದಲಾಯಿಸುವುದಿಲ್ಲ. ಹಾಗಿದ್ದ ಮೇಲೆ ನೀವು ಏಕೆ ಬದಲಾಯಿಸಿದ್ದೀರಿ ಎಂದು ಎಂದು ಇನ್ನೋರ್ವ ಅಭಿಮಾನಿ ಪ್ರಶ್ನಿಸಿದ್ದಾರೆ. ಕೆಲವರು ಡಿಪ್ಸ್​ ಮೇಲೆ ಮುನಿಸು ತೋರಿಸಿ, ನೀವು ಏನು ಮಾಡಿದರೂ ಫ್ಯಾನ್ಸ್​ ಒಪ್ಪಿಕೊಳ್ಳುತ್ತಾರೆ ಅಂದುಕೊಳ್ಳಬೇಡಿ. ಇಂಥ ನಡೆ ಖಂಡನೀಯ ಎಂದಿದ್ದಾರೆ.  

Deepika Padukone: ಹಾಲಿವುಡ್ಡಲ್ಲೂ ಮಿಂಚುತ್ತಿರೋ ನಟಿ ಕಲಿತದ್ದೆಷ್ಟು ಗೊತ್ತಾ? ಹೌಹಾರಿದ ಫ್ಯಾನ್ಸ್​!

ಸದ್ಯ ದೀಪಿಕಾ ಅವರ ಕೆಲಸದ ವಿಚಾರಕ್ಕೆ ಬರುವುದಾದರೆ ಅವರು ಬ್ಲಾಕ್​ಬ್ಲಸ್ಟರ್​ ಚಲನಚಿತ್ರ 'ಪಠಾಣ್' ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಅವರ ಮುಂಬರುವ ಚಿತ್ರಗಳ ಬಗ್ಗೆ ಮಾತನಾಡುವುದಾದರೆ,  ಅವರು ಶೀಘ್ರದಲ್ಲೇ ಹೃತಿಕ್ ರೋಷನ್ ಜೊತೆಗೆ 'ಫೈಟರ್' (Fighter) ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಅವರು 'ದಿ ಇಂಟರ್ನ್' ಮತ್ತು 'ಪ್ರಾಜೆಕ್ಟ್ ಕೆ' ನ ಭಾಗವಾಗಿದ್ದಾರೆ.

click me!