ಕನ್ನಡ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ನಟಿ ತ್ರಿಷಾ ಕೃಷ್ಣನ್ ಅವರು ಬಾಹುಬಲಿ ನಟ ರಾಣಾ ದುಗ್ಗುಬಾಟಿ ಅವರ ಜೊತೆಗಿರುವ ಖಾಸಗಿ ಫೋಟೋಗಳು ಲೀಕ್ ಆಗಿವೆ. ಏನಿದು ಸಮಾಚಾರ?
ತಮಿಳು, ತೆಲಗು ಸೇರಿದಂತೆ ಕನ್ನಡದಲ್ಲಿಯೂ ಮಿಂಚಿರುವ ನಟಿ ತ್ರಿಷಾ ಕೃಷ್ಣನ್ ( Trisha Krishnan). ಪ್ರಮುಖವಾಗಿ ತಮಿಳು ಮತ್ತು ತೆಲಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಇವರು ಕನ್ನಡದಲ್ಲಿ ಪುನೀತ್ ರಾಜಕುಮಾರ್ ಪವರ್ ಚಿತ್ರದಲ್ಲಿ ನಟಿಸಿದ್ದಾರೆ. 1983 ಮೇ 4 ರಂದು ಚೆನ್ನೈನಲ್ಲಿ ಜನಿಸಿದ ತ್ರಿಶಾ, ತಮ್ಮ ವಿಧ್ಯಾಭ್ಯಾಸವನ್ನೆಲ್ಲಾ ಅಲ್ಲಿಯೇ ಮುಗಿಸಿದರು. ತಂದೆ ಕೃಷ್ಣನ್ ಮತ್ತು ತಾಯಿ ಉಮಾ. ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡ ತ್ರಿಷಾ 1999 ರಲ್ಲಿ ಮಿಸ್ ಮದ್ರಾಸ್ ಪ್ರಶಸ್ತಿಗೆ ಭಾಜನರಾದರು. ಅವರು 1999 ರಲ್ಲಿ 'ಜೋಡಿ' ಚಿತ್ರದೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 2003 ರಲ್ಲಿ ವಿಕ್ರಮ್ ಅವರ 'ಸಾಮಿ' ಸಿನಿಮಾ ತ್ರಿಶಾ ಕೆರಿಯರ್ನಲ್ಲಿ ಅವರನ್ನು ಸ್ಟಾರ್ ನಟಿಯಾಗಿ ಬದಲಾಯಿಸಿತು. ಅವರು 'ಗಿಲ್ಲಿ' ಮತ್ತು 'ಆರು' ನಂತಹ ಕೆಲವು ಬ್ಲಾಕ್ಬಸ್ಟರ್ ಚಿತ್ರಗಳಲ್ಲಿ ಕಾಣಿಸಿಕೊಂಡರು. ತಮಿಳಿನಲ್ಲಿ ಬಂದ ಗಿಲ್ಲಿ , ಸಾಮಿಯಂತೆಯೇ ತೆಲುಗುವಿನಲ್ಲಿ ಬಂದ `ವರ್ಷಂ' (Varsham) ತ್ರಿಶಾ ಕಾಲಿವುಡ್ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು. ಆದರೆ ಅವರ ಹೆಸರು ಅನೇಕ ಬಾರಿ ವಿವಾದಗಳಲ್ಲಿ ಸಿಕ್ಕಿ ಹಾಕಿಕೊಂಡಿದೆ.
2015ರಲ್ಲಿ ಚೆನ್ನೈ ಮೂಲದ ಉದ್ಯಮಿ ಮತ್ತು ಚಲನಚಿತ್ರ ನಿರ್ಮಾಪಕ ವರುಣ್ ಮಣಿಯನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡದರೂ ಅದೇ ವರ್ಷವೇ ನಿಶ್ಚಿತಾರ್ಥವನ್ನು ಕೊನೆಗೊಳಿಸಿ ಭಾರಿ ಸುದ್ದಿಯಾಗಿದ್ದರು. ಅವರ ಮುರಿದ ನಿಶ್ಚಿತಾರ್ಥದ ಬಗ್ಗೆ ಅನೇಕ ಊಹಾಪೋಹಗಳು ಎದ್ದಿದ್ದವು. ನಟಿಯನ್ನು ಮದುವೆಯಾಗುವ ಬಗ್ಗೆ ವರುಣ್ ಕುಟುಂಬದವರಿಗೆ ಇಷ್ಟವಿರಲಿಲ್ಲ ಎನ್ನಲಾಗುತ್ತಿತ್ತು, ಮದುವೆಯಾದ ಬಳಿಕ ನಟನೆಯನ್ನು ಬಿಡುವಂತೆ ವರುಣ್ ಅವರು ತ್ರಿಷಾರಿಗೆ ಕಂಡೀಷನ್ ಹಾಕಿದ್ದರು ಎನ್ನಲಾಗಿದೆ. ಆದರೆ ಇದೇ ಸಮಯದಲ್ಲಿ ಇನ್ನೊಂದು ಕಾರಣವನ್ನೂ ನೀಡಲಾಗುತ್ತಿದೆ. ಅದೇನೆಂದರೆ ಅವರ ನಿಶ್ಚಿತಾರ್ಥದ (Engagement) ಸಮಯದಲ್ಲಿ ನಟ ಧನುಷ್ (Dhanush) ಅವರು ಉಪಸ್ಥಿತರಿದ್ದುದು ವರುಣ್ ಅವರ ಆಕ್ರೋಶಕ್ಕೆ ಕಾರಣವಾಗಿತ್ತು ಎನ್ನಲಾಗಿದೆ. ಏಕೆಂದರೆ, ಧನುಷ್ ಮತ್ತು ತ್ರಿಷಾ ನಡುವಿನ ಸಂಬಂಧದ ಕುರಿತು ಬಹಳ ಗುಲ್ಲೆದಿದ್ದರಿಂದ ನಿಶ್ಚಿತಾರ್ಥದ ಸಮಯದಲ್ಲಿ ವರುಣ್ ಸಹನೆ ಕಳೆದುಕೊಂಡು ಜಗಳವಾಡಿದ್ದರು ಎಂದೂ ವರದಿಯಾಗಿದೆ.
ವಿರಾಟ್ ಕೊಹ್ಲಿಜೀ... ಪ್ಲೀಸ್ ಹೆಂಡ್ತಿಗೆ ಒಂದು ಚಡ್ಡಿ ಕೊಡಿಸಿ ಅಂತಿದ್ದಾರೆ ನೆಟ್ಟಿಗರು!
ಇದೀಗ ತ್ರಿಶಾ ಸುದ್ದಿ ಮತ್ತೆ ಪ್ರಚಲಿತದಲ್ಲಿ ಬರಲು, ಕಾರಣ ಅವರ ಪೊನ್ನಿಯಿನ್ ಸೆಲ್ವನ್ 2 ಸಿನಿಮಾ. ಈ ಸಿನಿಮಾ ಸೂಪರ್ ಹಿಟ್ ಆಗಿದೆ. ಕುಂದವೈ ಪಾತ್ರವನ್ನು ಮಾಡಿರುವ ತ್ರಿಶಾ ಅವರ ಅಭಿನಯವನ್ನು ಫ್ಯಾನ್ಸ್ ಮೆಚ್ಚಿದ್ದಾರೆ. ಸಿನಿಮಾ ಸೂಪರ್ ಹಿಟ್ ಆಗಿ ತ್ರಿಶಾ ಹೆಸರು ಟ್ರೆಂಡ್ ಆಗುತ್ತಿದ್ದಂತೆ ಈಗ ಅವರ ಹಿನ್ನೆಲೆಯಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ಬಹುತೇಕ ಎಲ್ಲ ನಟ ನಟಿಯರ ಸುತ್ತ ವಿವಾದ ಹಬ್ಬಿರುವಂತೆ ಅದು ನಟಿ ತ್ರಿಶಾ ಅವರನ್ನೂ ಬಿಟ್ಟಿಲ್ಲ. ಇವರ ಹೆಸರು ಕೇಳಿಬಂದದ್ದು ಸೂಪರ್ ಸ್ಟಾರ್, ಬಾಹುಬಲಿ (Bahubali) ಖ್ಯಾತಿಯ ರಾಣಾ ದಗ್ಗುಬಾಟಿ ಅವರ ಜೊತೆ.
ರಾಣಾ ಅವರಿಗೆ ಮದುವೆಯಾಗುವ ಮುಂಚಿನ ಸುದ್ದಿ ಇದು. ಈ ಸಮಯದಲ್ಲಿ ಅವರು ಕೆಲವು ವರ್ಷಗಳ ಹಿಂದೆ ತ್ರಿಶಾ ಜೊತೆ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಈ ವರದಿಯನ್ನು ತ್ರಿಶಾ ನಿರಾಕರಿಸಿದ್ದರೂ, ತ್ರಿಶಾ ಜೊತೆ ಸಂಬಂಧ ಹೊಂದಿರುವುದಾಗಿ ರಾಣಾ ಒಪ್ಪಿಕೊಂಡಿದ್ದರು. ಅವರು ಒಪ್ಪಿಕೊಳ್ಳದೇ ಬೇರೆ ವಿಧಿಯಿರಲಿಲ್ಲ. ಏಕೆಂದರೆ ಅದಾಗಲೇ ಈ ಜೋಡಿಯ ಕೆಲವು ಖಾಸಗಿ ಫೋಟೋಗಳು ಸಹ ಲೀಕ್ ಆಗಿದ್ದವು. ಅದೂ ಅಂತಿಂಥ ಫೋಟೋ (Photo) ಅಲ್ಲ, ಬದಲಿಗೆ ಇವರಿಬ್ಬರೂ ಬೆಡ್ ಮೇಲಿದ್ದ ಫೋಟೋಗಳು ಅವು. ಅದೀಗ ಪುನಃ ವೈರಲ್ ಆಗುತ್ತಿವೆ. ನಂತರ ರಾಣಾ ಅವರ ಮದುವೆ ಐಶ್ವರ್ಯಾ ಜೊತೆ ನಡೆದರೂ, ಅದ್ಯಾಕೋ ಇಬ್ಬರೂ ಬೇರ್ಪಟ್ಟರು. ಇದನ್ನು ಅಧಿಕೃತವಾಗಿ ಅನೌನ್ಸ್ ಮಾಡದಿದ್ದರೂ ಈಗ ದಂಪತಿ ಒಟ್ಟಿಗೆ ವಾಸಿಸುತ್ತಿಲ್ಲ.
The Kerala story ಚಿತ್ರದ ಅಸಲಿಯತ್ತು ಬಿಚ್ಚಿಟ್ಟ ನಟಿ ಅದಾ ಶರ್ಮಾ
ನಟಿಯ ಹೆಸರು ವಿಜಯ್ ಜೊತೆ ಲಿಂಕ್ ಆಗಿದೆ. ವಿಜಯ್ ಕಾರಣಕ್ಕಾಗಿಯೇ ತ್ರಿಶಾ ವರುಣ್ ಮಣಿಯನ್ ಜೊತೆಗಿನ ನಿಶ್ಚಿತಾರ್ಥವನ್ನು ಮುರಿದುಕೊಂಡಿದ್ದಾರೆ ಎಂದು ಹೇಳಲಾಗುತ್ತದೆ. ಇವರು ಜೊತೆಯಾಗಿ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದು ತಮಿಳು ಚಿತ್ರರಂಗದ ಫೇಮಸ್ ಆನ್ಸ್ಕ್ರೀನ್ ಜೋಡಿ.ತ್ರಿಶಾ ದಕ್ಷಿಣ ಭಾರತದ ಪೆಟಾದ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಜಲ್ಲಿಕಟ್ಟು ವಿರುದ್ಧದ ವಿರೋಧ ಉತ್ತುಂಗದಲ್ಲಿದ್ದಾಗ ಜನರು ತಮ್ಮ ಸಂಸ್ಕೃತಿ ಮತ್ತು ಪೇಟಾ ವಿರುದ್ಧ ಹೋರಾಡುತ್ತಿದ್ದ ವರ್ಷದ ಆ ಸಮಯದಲ್ಲಿ ತ್ರಿಶಾ ಪೇಟಾಗೆ ಬೆಂಬಲ ವ್ಯಕ್ತಪಡಿಸಿದರು. ಆ ಸಂದರ್ಭ ತಮಿಳು ಜನ ನಟಿಯನ್ನು ತೀವ್ರವಾಗಿ ವಿರೋಧಿಸಿದ್ದರು.