ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರ ಮತ್ತೆ ಮದುವೆ ಟೀಸರ್ ಬಿಡುಗಡೆಯಾಗಿದ್ದು, ಡೇಟ್ ಕೂಡ ಅನೌನ್ಸ್ ಆಗಿದೆ. ಚಿತ್ರದ ಬಗ್ಗೆ ಹೊಸ ಅಪ್ಡೇಟ್ ಏನು?
ತೆಲುಗು ನಟ ಕಮ್ ನಿರ್ದೇಶಕ ನರೇಶ್ (Naresh) ಮತ್ತು ಬಹುಭಾಷಾ ನಟಿ ಪವಿತ್ರಾ ಲೋಕೇಶ್ ವೈಯಕ್ತಿಕ ಜೀವನದಲ್ಲಿ ಕಳೆದೊಂದು ವರ್ಷದಿಂದ ಅಲ್ಲೋಕ ಕಲ್ಲೋಲವೇ ಸೃಷ್ಟಿಯಾಗಿದೆ. ಇವರ ಸಂಬಂಧ, ಮದುವೆಯ ಕುರಿತು ಇದಾಗಲೇ ಸಾಕಷ್ಟು ಚರ್ಚೆಯಾಗಿರುವ ನಡುವೆಯೇ, ಕೆಲವು ದಿನಗಳ ಹಿಂದೆ ಮದುವೆ ಮಾಡಿಕೊಂಡಿದ್ದ ಸುದ್ದಿ ಬಹಳ ಸದ್ದು ಮಾಡಿತ್ತು. ನಂತರ ದುಬೈನಲ್ಲಿ ಹನಿಮೂನ್‌ಗೆ ಹೋಗಿದ್ದರು ಎಂಬ ಕುರಿತು ಸಾಕಷ್ಟು ಫೋಟೋಗಳೂ ವೈರಲ್ ಆಗಿದ್ದವು. ಆದರೆ ನಂತರ ಅವರು ಮತ್ತೆ ಮದುವೆ ಎನ್ನುವ ಚಿತ್ರದ ಸೀನ್ಗಳಷ್ಟೇ ಎಂದು ಸಮಜಾಯಿಷಿಯನ್ನೂ ಕೊಟ್ಟಿತ್ತು ಜೋಡಿ. ‘ಮತ್ತೆ ಮದುವೆ’ ಎನ್ನುವ ಚಿತ್ರ ಇದಾಗಿರುವುದಾಗಿ ಹೊಸ ಪೋಸ್ಟರ್ ಬೇರೆ ರಿಲೀಸ್ ಮಾಡಿದ್ದರು. ಇದರ ಫಸ್ಟ್ ಲುಕ್ ಬಿಡುಗಡೆಯಾಗಿತ್ತು. ನರೇಶ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಎಂ. ಎಸ್. ರಾಜು ನಿರ್ದೇಶಕರು. ಈ ಸಿನಿಮಾ ಏಕಕಾಲದಲ್ಲಿ ತೆಲುಗು ಹಾಗೂ ಕನ್ನಡದಲ್ಲಿ ನಿರ್ಮಾಣವಾಗಿದೆ.
ಇದೀಗ ತೆಲುಗು ಚಿತ್ರದ ಟೀಸರ್ (Teaser) ಕೂಡ ಬಿಡುಗಡೆ ಮಾಡಲಾಗಿದೆ. ಹಿರಿಯ ನಟರೂ ಆಗಿರುವ ನರೇಶ್ ಅವರು ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿದ್ದಾರೆ ಮತ್ತು ವಿಜಯ ಕೃಷ್ಣ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಿರುವ ತಮ್ಮ ಸುವರ್ಣ ಮಹೋತ್ಸವದ ಯೋಜನೆಯಾದ "ಮಲ್ಲಿ ಪೆಲ್ಲಿ" (ಮತ್ತೆ ಮದುವೆ- Matte Maduve) ಅನ್ನು ಘೋಷಿಸಿದ್ದಾರೆ. ಈ ಫ್ಯಾಮಿಲಿ ಎಂಟರ್‌ಟೈನರ್ ಅನ್ನು ಎಂಎಸ್ ರಾಜು ನಿರ್ದೇಶಿಸಿದ್ದಾರೆ ಮತ್ತು ಪವಿತ್ರಾ ಲೋಕೇಶ್ ನಾಯಕಿಯಾಗಿ ನಟಿಸಿದ್ದಾರೆ. ಕನ್ನಡ ಮತ್ತು ತೆಲುಗುವಿನಲ್ಲಿ ಬಿಡುಗಡೆಯಾಗಿದ್ದ ಫಸ್ಟ್ ಲುಕ್ನಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ನರೇಶ್ ಕಾಣಿಸಿಕೊಂಡಿದ್ದರೆ, ಪವಿತ್ರಾ ಲೋಕೇಶ್ (Pavitra Lokesh) ಅವರ ಸುಂದರ ಮನೆಯ ಮುಂದೆ ರಂಗೋಲಿ ಹಾಕುವುದನ್ನು ಆನಂದಿಸುತ್ತಿದ್ದರು. ಚಿತ್ರದಲ್ಲಿ ಜಯಸುಧಾ, ಶರತ್‌ಬಾಬು, ವನಿತಾ ವಿಜಯಕುಮಾರ್, ಅನನ್ಯ ನಾಗೆಲ್ಲ ಮತ್ತು ರೋಷನ್ ಕೂಡ ಇದ್ದಾರೆ.
ನರೇಶ್- ಪವಿತ್ರಾ ಲೋಕೇಶ್ 'ಮತ್ತೆ ಮದುವೆ'; ಗಿಮಿಕ್ ಎಂದು ನೆಟ್ಟಿಗರು ಗರಂ
ಇದೀಗ ತೆಲುಗಿನ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನೋಡಿದ ಜನರಿಗೆ ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರ ಮತ್ತೆ ಮದುವೆ ಕ್ಲೈಮ್ಯಾಕ್ಸ್ ಬಗ್ಗೆ ಕುತೂಹಲ ಹೆಚ್ಚಾಗಿದೆ. ನರೇಶ್ ಜೀವನದಲ್ಲಿ ನಡೆದ ಮತ್ತು ನಡೆಯುತ್ತಿರುವ ಘಟನೆಗಳನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ ಎಂಬುದು ಟೀಸರ್ನಲ್ಲಿ ಸ್ಪಷ್ಟವಾಗಿದೆ. ಚಿತ್ರದ ಟೀಸರ್ (Teaser) ಈಗಾಗಲೇ ರಿಲೀಸ್ ಆಗಿದ್ದು, ಟೀಸರ್ ನಲ್ಲಿ ಹಲವು ವಿಷಯಗಳನ್ನು ಬಿಚ್ಚಿಡಲಾಗಿದೆ. ತೆಲುಗು ಇಂಡಸ್ಟ್ರೀಯವರು ಕನ್ನಡದ ಮೇಲೆ ಕಣ್ಣು ಹಾಕ್ತಿದ್ದಾರೆ ಎಂಬ ಪಂಚಿಂಗ್ ಡೈಲಾಗ್ ಮೂಲಕ ಶುರುವಾಗುವ ಟೀಸರ್ ಥೇಟ್ ನರೇಶ್ ಪವಿತ್ರಾ ರಿಯಲ್ ಕಥೆಯಂತಿದೆ (Real story). ನರೇಶ್ ಮೂರನೇ ಪತ್ನಿ ನಡೆಸಿದ ಬೀದಿ ರದ್ದಾಂತ, ಮೈಸೂರಿನ ಹೋಟೆಲ್ ನಲ್ಲಿ ನಡೆದ ಘಟನೆ, ನರೇಶ್ ಬಾಳಲ್ಲಿ ಪವಿತ್ರಾ ಲೋಕೇಶ್ ಎಂಟ್ರಿ ಎಲ್ಲವೂ ಟೀಸರ್ ನಲ್ಲಿ ಬಿಚ್ಚಿಡಲಾಗಿದೆ, ಇದು ರಿಯಲ್ ಲೈಫ್ ಕಥೆಯಂತೆ ಭಾಸವಾಗಿದೆ.
ಇದರ ನಡುವೆಯೇ, ಸಿನಿಮಾ ತಂಡ ಇದೀಗ ಹೊಸ ಅಪ್ಡೇಟ್ ನೀಡಿದೆ. ಈ ಸಿನಿಮಾ ಬಿಡುಗಡೆ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದೆ. ನಿರ್ಮಾಪಕ, ನಟ ನರೇಶ್ ಇದೀಗ ಮತ್ತೆ ಮದುವೆ ಚಿತ್ರವನ್ನು ಇದೇ ತಿಂಗಳು ರಿಲೀಸ್ ಮಾಡುವುದಾಗಿ ಘೋಷಿಸಿದ್ದರು. ಇದೀಗ ಅವರು ಇದೇ ಮೇ 26 ರಂದು ಮತ್ತೆ ಮದುವೆ ಸಿನಿಮಾ ಥಿಯೇಟರ್ನಲ್ಲಿ ರಿಲೀಸ್ ಆಗಲಿದೆ ಎಂದಿದ್ದಾರೆ. ಈ ಸಿನಿಮಾಗಾಗಿ ಇಬ್ಬರು ಲಿಪ್ ಕಿಸ್ ನೀಡಿದ ವಿಡಿಯೋವನ್ನು ಟೀಸರ್ನಲ್ಲಿ ನೋಡಬಹುದಾಗಿದ್ದು, ಇದೀಗ ವೈರಲ್ ಆಗಿದೆ. ಇದೀಗ ಸಿನಿಮಾ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. ನರೇಶ್-ಪವಿತ್ರಾ, ಮತ್ತೆ ಮದುವೆ ಎಷ್ಟರಮಟ್ಟಿಗೆ ಜನರಿಗೆ ಕನೆಕ್ಟ್ ಆಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.
Bahubali ನಟ ರಾಣಾ ದುಗ್ಗುಬಾಟಿ ಜೊತೆ ನಟಿ ತ್ರಿಶಾ ಬೆಡ್ರೂಂ ಫೋಟೋ ಲೀಕ್