ದೀಪಿಕಾ ಪಡುಕೋಣೆ ಹೊಸ ರೀಲ್ಸ್ ಹಾಕಿದ್ದು, ಅದನ್ನು ನೋಡಿ ಪ್ಲೀಸ್ ಆಸ್ಪತ್ರೆಗೆ ಹೋಗಿ ಅಂತಿದ್ದಾರೆ ಫ್ಯಾನ್ಸ್. ಅಷ್ಟಕ್ಕೂ ಆಗಿರೋದೇನು?
ಸದ್ಯ ಬಾಲಿವುಡ್ ಜೋಡಿಯಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಬಹಳ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಈ ಜೋಡಿ ಕಾಫಿ ವಿತ್ ಕರಣ್ ಷೋನಲ್ಲಿ ಕಾಣಿಸಿಕೊಂಡಿದ್ದು. ಈ ಸಮಯದಲ್ಲಿ ದೀಪಿಕಾ ತೀರಾ ವೈಯಕ್ತಿಕ ವಿಷಯ ಮಾತನಾಡಿದ್ದು, ಅದು ರಣವೀರ್ ಅವರಿಗೆ ಸಿಟ್ಟು ತರಿಸಿದ ಬಳಿಕ ಈ ಜೋಡಿಯ ವಿಷಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗುತ್ತಿದೆ. ಈ ಜೋಡಿ ಮದುವೆಯಾಗಿ ಬರುವ ನವೆಂಬರ್ 14ಕ್ಕೆ ಐದು ವರ್ಷಗಳು ಕಳೆಯಲಿವೆ. ಮೊನ್ನೆ ಕಾಫಿ ವಿತ್ ಕರಣ್ ಷೋನಲ್ಲಿ ಇದೇ ಮೊದಲ ಬಾರಿಗೆ, ಮದುವೆಯಾಗಿ ಐದು ವರ್ಷಗಳ ಬಳಿಕ ಮದುವೆಯ ವಿಡಿಯೋ ರಿಲೀಸ್ ಮಾಡಿದ್ದರು.
ಈ ಸಮಯದಲ್ಲಿ ಈ ಜೋಡಿ ಕೆಲವೊಂದು ಇಂಟರೆಸ್ಟಿಂಗ್ ವಿಷಯಗಳನ್ನು ಶೇರ್ ಮಾಡಿಕೊಂಡಿತ್ತು. ಪತಿ ರಣವೀರ್ ಎದುರೇ ಪ್ರಿಯಾಂಕಾ ಪರಪುರುಷರ ಬಗ್ಗೆ ಡೇಟಿಂಗ್ ಕುರಿತು ಪ್ರಿಯಾಂಕಾ ಮಾತನಾಡಿದ್ದು, ಇದು ಸಕತ್ ಟ್ರೋಲ್ಗೂ ಕಾರಣವಾಯಿತು ಮಾತ್ರವಲ್ಲದೇ ಹಲವರು ಹಲವು ವಿಧದಲ್ಲಿ ದೀಪಿಕಾ ಮಾತನ್ನು ಅರ್ಥೈಸತೊಡಗಿದ್ದಾರೆ. ಒಂದು ಹಂತದಲ್ಲಿ ದೀಪಿಕಾ ಮಾತನಾಡಿದ್ದು ಷೋನಲ್ಲಿ ಪತಿ ರಣವೀರ್ ಕೋಪಕ್ಕೆ ಕಾರಣವಾಗಿತ್ತು. ‘ಇಬ್ಬರೂ ರಿಲೇಶನ್ಶಿಪ್ನಲ್ಲಿ ಇದ್ದೀರಿ ಎಂದು ಯಾವಾಗ ಗೊತ್ತಾಯಿತು’ ಎಂದು ಜೋಡಿಗೆ ಕರಣ್ ಜೋಹರ್ ಕೇಳಿದ್ರು. ಇದಕ್ಕೆ ದೀಪಿಕಾ ಉತ್ತರಿಸುತ್ತಾ, ‘ಕೆಲವು ಕಾಂಪ್ಲಿಕೇಟೆಡ್ ರಿಲೇಶನ್ಷಿಪ್ನಿಂದ ಆಗತಾನೇ ಹೊರಬಂದಿದ್ದೆ. ಹಾಗಾಗಿ ಯಾರ ಉಸಾಬರಿಯೂ ಬೇಡ ಅನ್ನಿಸಿತ್ತು. ಸಿಂಗಲ್ ಆಗಿರೋಕೆ ಇಷ್ಟವಾಗಿತ್ತು. ಆ ಸಮಯದಲ್ಲಿ ರಣವೀರ್ ಸಿಕ್ಕರು. ನಮ್ಮಿಬ್ಬರ ಮಧ್ಯೆ ನಿಜವಾದ ಕಮಿಟ್ಮೆಂಟ್ ಇರ್ಲೇ ಇಲ್ಲ. ಅದಾಗಲೇ ಹಲವಾರು ಪುರುಷರ ಜೊತೆ ಹೋಗಿದ್ದೆ. ಸಾಕಷ್ಟು ಜನರನ್ನು ಭೇಟಿ ಮಾಡುತ್ತಿದ್ದೆ. ಆದರೆ, ರಣವೀರ್ ಸಿಂಗ್ ಅಷ್ಟು ಎಗ್ಸೈಟಿಂಗ್ ಎಂದು ಯಾರೂ ಅನಿಸಲಿಲ್ಲ. ರಣವೀರ್ ಪ್ರಪೋಸ್ ಮಾಡುವವರೆಗೂ ನಮ್ಮ ಮಧ್ಯೆ ಕಮಿಟ್ಮೆಂಟ್ ಇರಲಿಲ್ಲ’ ಎಂದಿದ್ದರು.
undefined
ರಣವೀರ್ ಮುಂದೆನೇ ದೀಪಿಕಾ ಪರಪುರುಷರ ಜತೆ ಡೇಟಿಂಗ್ ಬಗ್ಗೆ ಹೀಗ್ ಹೇಳೋದಾ? ಕಿಡಿಕಿಡಿಯಾದ ಪತಿರಾಯ!
ಇದಕ್ಕೆ ಹಲವಾರು ಅರ್ಥ ಕಲ್ಪಿಸಲಾಗುತ್ತಿದೆ. ಕೆಲವರಂತೂ ದೀಪಿಕಾ ದೈಹಿಕ ಸುಖಕ್ಕೆ ಪರಪುರಷರ ಬಳಿ ಹೋಗುತ್ತಾರೆ, ಮಾನಸಿಕವಾಗಿ ಮಾತ್ರ ಪತಿ ರಣವೀರ್ ಬಳಿ ಇದ್ದಾರೆ ಎನ್ನುವಂಥ ಕೀಳು ಮಟ್ಟದ ಅರ್ಥವನ್ನೂ ಕಲ್ಪಿಸುತ್ತಿದ್ದಾರೆ. ಇಂಥ ಅಸಂಬಂಧ ಮಾತುಗಳನ್ನಾಡಬೇಡಿ ಎಂದು ಖುದ್ದು ಕರಣ್ ಜೋಹರ್ ಅವರು ಜನರ ವಿರುದ್ಧ ಕಿಡಿ ಕಾರಿದ್ದೂ ಆಗಿದೆ.
ಇದರ ನಡುವೆಯೇ ದೀಪಿಕಾ ಇದೀಗ ಕೆಲವೇ ಸೆಕೆಂಡ್ಗಳ ರೀಲ್ಸ್ ಶೇರ್ ಮಾಡಿದ್ದಾರೆ. ಅದರಲ್ಲಿ ಸೋ ಎಲಿಗೆಂಟ್, ಸೋ ಬ್ಯೂಟಿಫುಲ್, ಜಸ್ಟ್ ಲುಕಿಂಗ್ ಲೈಕ್ ವ್ಹಾವ್ ಎಂದಷ್ಟೇ ಹೇಳಿದ್ದಾರೆ. ಇನ್ನೇನೂ ಈ ವಿಡಿಯೋದಲ್ಲಿ ಇಲ್ಲ. ಇದನ್ನು ನೋಡಿ ಫ್ಯಾನ್ಸ್ ಶಾಕ್ ಆಗಿದ್ದು, ಕಾಫಿ ವಿತ್ ಕರಣ್ನಲ್ಲಿ ನಡೆದ ಗಲಾಟೆ ಬಳಿಕ ದೀಪಿಕಾ ಮಾನಸಿಕ ಅಸ್ವಸ್ಥಳಾಗಿದ್ದಾಳೆ ಎನ್ನುತ್ತಿದ್ದಾರೆ. ಇನ್ನು ಕೆಲವರು ನಿಜಕ್ಕೂ ಈಕೆಗೆ ಹುಚ್ಚು ಹಿಡಿದಂತೆ ಕಾಣುತ್ತಿದೆ, ದಯವಿಟ್ಟು ಚಿಕಿತ್ಸೆ ಪಡೆದುಕೊಳ್ಳಿ ಎನ್ನುತ್ತಿದ್ದರೆ, ಇನ್ನು ಕೆಲವರು ಗಂಡ ರಣವೀರ್ ಕಥೆ ಏನು ಎಂದು ಪ್ರಶ್ನಿಸುತ್ತಿದ್ದಾರೆ. ನಿಮಗೆ ನಿಜಕ್ಕೂ ಮಾನಸಿಕ ಆಘಾತವಾಗಿದೆ, ಆಸ್ಪತ್ರೆಗೆ ಹೋಗಿ ಎಂದು ಹಲವರು ಹೇಳುತ್ತಿದ್ದಾರೆ. ಕೆಲವರು ಮಾತ್ರ ನಟಿಯ ಸೌಂದರ್ಯಕ್ಕೆ ವ್ಹಾವ್ ಎನ್ನುತ್ತಿದ್ದರೆ ಹಲವರು ಈ ರೀತಿ ವಿಚಿತ್ರವಾಗಿ ಹಿಂದು ಮುಂದು ಇಲ್ಲದೇ ನಟಿ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸುತ್ತಿದ್ದಾರೆ.
ನನ್ನ ನೋಡಿ ದೀಪಿಕಾ ಅಮ್ಮಾ ಛೇ ಯಾರಿವ್ನು ಅಂದಿದ್ರು: ಮದ್ವೆ ವಿಡಿಯೋ ರಿಲೀಸ್ ಮಾಡಿ ರಣವೀರ್ ಮಾತು!