ದೇಹ ಪ್ರದರ್ಶಿಸುತ್ತಾ ಎಕ್ಸ್ಪೋಸ್ ಮಾಡೋದು ಈಸಿ ಅಂದ್ಕೊಂಡ್ರಾ ಎಂದು ನೆಟ್ಟಿಗರ ವಿರುದ್ಧ ಕಿಡಿ ಕಾರಿದ 'ಪುಷ್ಪ' ನಟಿ ಅನಸೂಯಾ ಭಾರಧ್ವಾಜ ಕಿಡಿ ಕಾರಿದ್ದೇಕೆ?
‘ಪುಷ್ಪ: ದಿ ರೈಸ್’ ಚಿತ್ರದ ಮೂಲಕ ಸಕತ್ ಫೇಮಸ್ ಆಗಿದ್ದಾರೆ ತೆಲುಗಿನ ಖ್ಯಾತ ನಟಿ ಅನಸೂಯಾ ಭಾರದ್ವಾಜ್. ಖ್ಯಾತ ನಿರೂಪಕಿ ಎಂದೂ ಹೆಸರು ಪಡೆದಿರುವ ಇವರು, ‘ರಂಗಸ್ಥಳಂ’ ಹಾಗೂ ‘ಪುಷ್ಪ: ದಿ ರೈಸ್’ ಚಿತ್ರಗಳ ಮೂಲಕ ಜನಪ್ರಿಯತೆ ಗಳಿಸಿದವರು. ಸಾಮಾಜಿಕ ಜಾಲತಾಣದಲ್ಲಿಯೂ ನಟಿ ಅಷ್ಟೇ ಆ್ಯಕ್ಟೀವ್ ಆಗಿದ್ದಾರೆ. ಆಗಾಗ್ಗೆ ಕೆಲವೊಂದು ವಿಷಯಗಳ ಬಗ್ಗೆ ಚರ್ಚಿಸುತ್ತಿರುತ್ತಾರೆ, ಬೋಲ್ಡ್, ಕ್ಯೂಟ್, ಹಾಟ್ ಫೋಟೋಶೂಟ್ ಮಾಡಿಸಿಕೊಂಡು ಅದರ ವಿಡಿಯೋ ಶೇರ್ ಮಾಡುತ್ತಿರುತ್ತಾರೆ. ಮೊನ್ನೆ ದಸರಾ ಸಂದರ್ಭದಲ್ಲಿಯೂ ಆಕರ್ಷಕವಾದ ಗುಲಾಬಿ ಬಣ್ಣದ ಸೀರೆ ಉಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟು ಚೆಲುವೆಯಾಗಿ ಮಿಂಚಿದ್ದರು.
ಇದೀಗ ನೆಟ್ಟಿಗರ ವಿರುದ್ಧ ಅನುಸೂಯಾ ಗರಂ ಗರಂ ಆಗಿದ್ದಾರೆ. ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ತನಗೊಂದು ವಿಶೇಷ ಇಮೇಜ್ ಕ್ರಿಯೇಟ್ ಮಾಡಿಕೊಂಡಿರುವ ಅನುಸೂಯಾ ಅವರು ತಮ್ಮ ಡ್ರೆಸ್ಗಳಿಂದ ಟ್ರೋಲ್ಗೆ ಒಳಗಾಗುತ್ತಿರುವುದು ಸಾಮಾನ್ಯವಾಗಿದೆ. ಆದರೆ ನೇರಾನೇರ ಮುಖದ ಮೇಲೆ ಹೊಡೆಯುವಂತೆ ರಿಪ್ಲೈ ಮಾಡುವುದರಲ್ಲಿಯೂ ಈಕೆ ಫೇಮಸ್. ಇದೀಗ ಹಾಗೆಯೇ ಆಗಿದೆ. ಅಷ್ಟಕ್ಕೂ ಆಗಿರೋದು ಏನೆಂದರೆ, ಕೆಲ ದಿನಗಳ ಹಿಂದೆ ಅವರು ಬ್ಲ್ಯಾಕ್ ಆ್ಯಂಡ್ ವೈಟ್ ಕಾಲದ ಹಿರಿಯ ನಟಿ ಸಾವಿತ್ರಿ ಅವರ ಹಾಡುಗಳನ್ನು ಮರುಸೃಷ್ಟಿಸಿದ್ದರು. ಅವರದ್ದೇ ರೀತಿಯಲ್ಲಿ ಸಂಪ್ರದಾಯವಾದ ಗೆಟಪ್‌ನಲ್ಲಿ ಕಂಡುಬಂದು, ಸಾವಿತ್ರಿ ಅವರ ಹಾಡುಗಳನ್ನು ಮರುಸೃಷ್ಟಿಸಿದ್ದರು. ಇದು ಸಾಕಷ್ಟು ಟ್ರೋಲ್ಗೆ ಕಾರಣವಾಗಿತ್ತು.
Tiger-3 ಯಾವ ನಟಿಯ ಟವಲ್ ಮೊದಲು ಬಿಚ್ಚಿ ಹೋಗತ್ತೆ? ಜಾಲತಾಣದಲ್ಲಿ ಓಪನ್ ಚಾಲೆಂಜ್!
ಇದನ್ನು ಗಮನಿಸಿದ ಕೆಲ ನೆಟ್ಟಿದರು, ಅನಸೂಯಾ ಅವರನ್ನು ಮಾತಿನಿಂದ ತಿವಿದಿದ್ದರು. ಸಾವಿತ್ರಿಯಂತೆ ನಟಿಸುವುದು ನೀವು ಎಕ್ಸ್ ಪೋಸಿಂಗ್ ಮಾಡುವಷ್ಟು ಸುಲಭವಲ್ಲ ಎಂದಿದ್ದರು. ಇದು ಅನಸೂಯಾ ಅವರ ಕೋಪಕ್ಕೆ ಕಾರಣವಾಗಿದೆ. ಅದಕ್ಕೆ ಅವರು ದಿಟ್ಟ ಉತ್ತರ ನೀಡಿದ್ದು, ನೀವು ಸರಿಯಾಗಿ ಹೇಳಿದ್ದೀರಿ. ಸಾವಿತ್ರಿಯವರಂತೆ ಹಳೆಯ ಕಾಲದ ನಟಿಯರಂತೆ ನಟಿಸುವುದು ಯಾರಿಗೂ ಸಾಧ್ಯವಿಲ್ಲ. ಹಾಗೆಂದು ಎಕ್ಸ್ಪೋಸ್ ಮಾಡುವುದು ಸುಲಭ ಅಂದುಕೊಂಡ್ರಾ? ಎಕ್ಸ್ ಪೋಸ್ ಮಾಡುವುದು ಕೂಡ ಅಷ್ಟು ಸುಲಭವಲ್ಲ. ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ನಿಮ್ಮನ್ನು ಸಿದ್ಧಪಡಿಸಿಕೊಳ್ಳಬೇಕು. ನಾವು ಯಾವುದೇ ಪಾತ್ರ ಮಾಡಿದರೂ, ಯಾವುದೇ ಉಡುಗೆ ತೊಟ್ಟರೂ ದೃಢ ಸಂಕಲ್ಪದಿಂದ ಕೆಲಸ ಮಾಡಬೇಕು ಎಂದಿದ್ದಾರೆ.
ಇನ್ನು ಅನಸೂಯಾ ಅವರ ಸಿನಿ ವಿಷಯದ ಕುರಿತು ಹೇಳುವುದಾದರೆ, ಇವರು ಇತ್ತೀಚೆಗೆ ಶ್ರೀಕಾಂತ್ ಅಡ್ಡಾಳ ಅವರ ಪೆದ್ದ ಕಾಪು 1 ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಅವರು ಅಲ್ಲು ಅರ್ಜುನ್ ಮತ್ತು ಸುಕುಮಾರ್ ಅವರ ಮುಂಬರುವ ಚಿತ್ರ ಮತ್ತು ಬಹು ನಿರೀಕ್ಷಿತ ಸೀಕ್ವೆಲ್ ಪುಷ್ಪಾ ದಿ ರೂಲ್‌ನ ಭಾಗವಾಗಲಿದ್ದಾರೆ ಎಂದು ತಿಳಿದುಬಂದಿದೆ.
Birthday Girl Kriti: ಸಲ್ಮಾನ್ ತಂಗಿ ಗಂಡನಿಗೆ ಹೃದಯದ ಜತೆ ಪಾಕೆಟ್ ಮನಿನೂ ಕೊಟ್ಟು ಸೋತ ಗೂಗ್ಲಿ ನಟಿ!
Correct ga chepparandi.. saavithramma la act cheyatam evari taram kadu.. nenu tribute ichanante 🙏🏻 alage exposing cheyatam kuda easy kadu.. physically and emotionally chala prepare avvali..to be confident in whatever one is trying to potray.. in whatever one is wearing 😌 https://t.co/JnciM744Te
— Anasuya Bharadwaj (@anusuyakhasba)