ದೀಪಿಕಾ ಪಡುಕೋಣೆ ಬಹುನಿರೀಕ್ಷಿತ 'ಚಪಕ್' ಸಿನಿಮಾದ ಟ್ರೇಲರ್ ಔಟ್ | Acid ಸಂತ್ರಸ್ತೆ ಮಾಲತಿಯಾಗಿ ದೀಪಿಕಾ ನಟನೆ ಸಿಂಪ್ಲಿ ಸೂಪರ್ |
ಪೋಸ್ಟರ್‌ನಿಂದಲೇ ಗಮನ ಸೆಳೆದಿದ್ದ ದೀಪಿಕಾ ಪಡುಕೋಣೆ ಬಹುನಿರೀಕ್ಷಿತ 'ಚಪಕ್' ಚಿತ್ರದ ಟ್ರೇಲರ್ ರಿಲೀಸ್ ಆಗಿದೆ.
ಆ್ಯಸಿಡ್ ಸಂತ್ರಸ್ತೆ ಲಕ್ಷ್ಮೀ ಅಗರ್‌ವಾಲ್ ಪಾತ್ರವನ್ನು ದೀಪಿಕಾ ಪಡುಕೋಣೆ ಮಾಡಿದ್ದಾರೆ. ಆ್ಯಸಿಡ್ ದಾಳಿಯ ನಂತರ ಮೊದಲ ಬಾರಿಗೆ ಕನ್ನಡಿಯಲ್ಲಿ ಮುಖ ನೋಡಿದಾಗ ಶಾಕ್ ಆಗುತ್ತಾಳೆ. ನಿಧಾನಕ್ಕೆ ರಿಯಾಲಿಟಿಯನ್ನು ಒಪ್ಪಿಕೊಳ್ಳಲು ಶುರು ಮಾಡುತ್ತಾರೆ. ಇಡೀ ಟ್ರೇಲರ್‌ನಲ್ಲಿ ಮಾಲತಿಯ (ಲಕ್ಷ್ಮಿ ಅಗರ್‌ವಾಲ್) ಹೊಸ ಜರ್ನಿಯನ್ನು ತೋರಿಸಿದ್ದಾರೆ. ಈ ಜರ್ನಿಗೆ ಅಮೋಲ್ ಸಾಥ್ ನೀಡುತ್ತಾರೆ. ಅಲ್ಲಿಂದ ಅವರಿಬ್ಬರ ನಡುವೆ ಒಂದು ಆತ್ಮೀಯತೆ ಶುರುವಾಗುತ್ತದೆ. ದೀಪಿಕಾ ಅಭಿನಯ ಮನೋಜ್ಞವಾಗಿದೆ.
ವೇದಿಕೆ ಮೇಲೆ ಪತ್ನಿಯ ಸೆರಗು ಹಿಡಿದ ಬಾಲಿವುಡ್ 'ಜೆಂಟಲ್‌ಮ್ಯಾನ್'!
ಕೇವಲ 15 ವರ್ಷದವಳಾಗಿದ್ದಾಗ 2005 ರಲ್ಲಿ ಲಕ್ಷ್ಮೀ ಅಗರ್‌ವಾಲ್ ಮೇಲೆ ಆ್ಯಸಿಡ್ ಅಟ್ಯಾಕ್ ನಡೆಯುತ್ತದೆ. ಅದಾದ ನಂತರ ಆಘಾತಕ್ಕೊಳಗಾಗುತ್ತಾರೆ. ನಂತರ ನಿಧಾನವಾಗಿ ರಿಯಾಲಿಟಿಯನ್ನು ಒಪ್ಪಿಕೊಳ್ಳುತ್ತಾ, ಹೊಸ ಆಂದೋಲನವನ್ನು ಶುರು ಮಾಡುತ್ತಾರೆ. ದೇಶದಾದ್ಯಂತ ಆ್ಯಸಿಡ್ ಮಾರಾಟವನ್ನು ನಿಷೇಧಿಸುವಂತೆ ಹೋರಾಟ ಶುರು ಮಾಡುತ್ತಾರೆ. ಅಲ್ಲಿಂದ ಅವರ ಹೊಸ ಜರ್ನಿ ಶುರುವಾಗುತ್ತದೆ.
ಕ್ರಿಕೆಟ್ ಬಿಟ್ಟು ಸಿನಿಮಾ ಕಿರುತೆರೆ ಪ್ರಾಜೆಕ್ಟ್‌ಗೆ ಕೈ ಹಾಕಿದ ಧೋನಿ!
ಪಾತ್ರದ ಬಗ್ಗೆ ದೀಪಿಕಾ ಮಾತನಾಡುತ್ತಾ, 'ನಾನು ಇದುವರೆಗೂ ಮಾಡಿರುವ ಸಿನಿಮಾಗಳಲ್ಲಿ ಇದು ಕಷ್ಟವಾಗಿದ್ದ ಸಿನಿಮಾ. ನನಗೆ ತಾಳ್ಮೆ ಜಾಸ್ತಿ. ಸತತ 42 ದಿನಗಳ ಕಾಲ ಈ ಪಾತ್ರಕ್ಕೆ ಮಾಡಿಕೊಳ್ಳುತ್ತಿದ್ದ ತಯಾರಿಯೇ ಒಂದು ಟಾಸ್ಕ್ ಆಗಿತ್ತು. ಅದನ್ನು ನಿಭಾಯಿಸಿರುವ ಖುಷಿಯಿದೆ' ಎಂದು ಹೇಳಿದ್ದಾರೆ.