ಕಿರುತೆರೆಯ ಕಾಮಿಡಿ ಸ್ಟಾರ್ ಕಪಿಲ್ ಶರ್ಮಾ ಮತ್ತು ಗಿನ್ನಿ ಚತ್ರತ್ ಕುಟುಂಬಕ್ಕೆ ಲಿಟಲ್ ಪ್ರಿನ್ಸೆಸ್ ಬಂದಿದ್ದಾಳೆ. ಈ ಸಂತಸದ ವಿಚಾರವನ್ನು ಅಭಿಮಾನಿಗಳೊಂದಿಗೆ ಕಪಿಲ್ ಹಂಚಿಕೊಂಡಿದ್ದಾರೆ.
ಹಿಂದಿ ವಾಹಿನಿಯ ಮಾತಿನ ಮಲ್ಲ, ನಕ್ಕು ನಗಿಸುವ ಜಗಮಲ್ಲ ಒನ್ ಆ್ಯಂಡ್ ಓನ್ಲಿ ಕಾಮಿಡಿ ಕಿಂಗ್ ಕಪಿಲ್ ಶರ್ಮಾ ಡಿಸೆಂಬರ್ 10 ರಂದು ಕುಟುಂಬಕ್ಕೆ 'Baby Girl'ಆಗಮನವಾಗಿದೆ.
'ದೇವರು ನಮಗೆ ಹೆಣ್ಣು ಮಗಳನ್ನು ಕರುಣಿಸಿದ್ದಾನೆ. ನಿಮ್ಮೆಲ್ಲರ ಆಶೀರ್ವಾದ ನಮಗಿರಲಿ. ಜೈ ಮಾತಾ ದಿ' ಎಂದು ಟ್ಟಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಮಗು ಮತ್ತು ತಾಯಿ ಇಬ್ಬರು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಎಲ್ಲಿಯೂ ಪೋಟೋ ರಿವೀಲ್ ಮಾಡಿಲ್ಲ.
'ಕಪಿಲ್ ಶರ್ಮಾ ಶೋ' ನಲ್ಲಿ ಪಂಚಿಂಗ್ ಡೈಲಾಗ್ ಹೊಡ್ದು ನಕ್ಕು ನಗಿಸಿದ ಕಿಚ್ಚ ಸುದೀಪ್
ಕಾಲೇಜು ದಿನಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದು ಕಪಿಲ್ ಮತ್ತು ಗಿನ್ನಿ ಡಿಸೆಂಬರ್ 12,2018ರಲ್ಲಿ ಹಿಂದೂ ಸಂಪ್ರದಾಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಹಿಂದೆ ನ್ಯೂ ಇಯರ್‌ಗೆ ಇಬ್ಬರು ಜೋಡಿಯಾಗಿ ನೀಡಿದ ಸಂದರ್ಶನದಲ್ಲಿ ಪ್ರೀತಿಸುತ್ತಿದ್ದ ದಿನಗಳ ಬಗ್ಗೆ ಮಾತನಾಡಿದ್ದಾರೆ.
Blessed to have a baby girl 🤗 need ur blessings 🙏 love u all ❤️ jai mata di 🙏
— Kapil Sharma (@KapilSharmaK9)'ಸಂಪ್ರದಾಯಸ್ಥ ಕುಟುಂಬದವರು ನಾವು. ಎಲ್ಲರಂತೆ ಸುತ್ತಾಡಲು ಆಗುತ್ತಿರಲಿಲ್ಲ. ನನ್ನ ಜೀವನದ ಕೆಟ್ಟ ಸಮಯಗಳನ್ನು ಎದುರಿಸಬೇಕಾದಾಗ ನನ್ನ ಜೊತೆ ಇದ್ದವಳು. ಅಂದೇ ನನಗೆ ತಿಳಿದಿತ್ತು ಈಕೆಯೇ ನನ್ನ ಲೈಫ್ ಪಾರ್ಟನರ್ ಎಂದು'ಎಂದು ಮಾತನಾಡಿದ್ದಾರೆ.
ಇನ್ನು ತಂದೆಯಾದ ಕ್ಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 'ಈ ಸಮಯದಲ್ಲಿ ಅವಳಿಗೆ ನನ್ನ ಅಗತ್ಯ ತುಂಬಾ ಇತ್ತು ಎಲ್ಲಾ ಕೆಲಸಗಳನ್ನು ಬದಿಗಿಟ್ಟು ಆಕೆಯೊಂದಿಗೆ ಇದ್ದೆ' ಎಂದು ಸಂತಸವನ್ನು ಹಂಚಿಕೊಂಡಿದ್ದಾರೆ.